2025ರಲ್ಲಿ ಕ್ರೆಡಿಟ್‌ ಕಾರ್ಡ್‌ ರಿವಾರ್ಡ್‌ ಹೆಚ್ಚು ಮಾಡೋ ಸ್ಮಾರ್ಟ್‌ ಟ್ರಿಕ್ಸ್ ಇಲ್ಲಿದೆ

Published : Mar 08, 2025, 03:51 PM ISTUpdated : Mar 08, 2025, 06:52 PM IST
2025ರಲ್ಲಿ ಕ್ರೆಡಿಟ್‌ ಕಾರ್ಡ್‌ ರಿವಾರ್ಡ್‌ ಹೆಚ್ಚು ಮಾಡೋ ಸ್ಮಾರ್ಟ್‌ ಟ್ರಿಕ್ಸ್ ಇಲ್ಲಿದೆ

ಸಾರಾಂಶ

ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಖರ್ಚುಗಳನ್ನು ಗಮನಿಸಿ, ಜೀವನಶೈಲಿ ಆಧಾರಿತ ಕಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಯಾಣ, ಶಾಪಿಂಗ್‌ಗೆ ಅನುಗುಣವಾಗಿ ರಿಯಾಯಿತಿ, ಕ್ಯಾಶ್‌ಬ್ಯಾಕ್ ಪಡೆಯಬಹುದು. ಶ್ರೇಣಿ ಆಧಾರಿತ ಕಾರ್ಡ್‌ಗಳು ಊಟ, ದಿನಸಿಗಳಿಗೆ ಹೆಚ್ಚು ರಿವಾರ್ಡ್ ನೀಡುತ್ತವೆ. ಗಿಫ್ಟ್ ವೋಚರ್‌ಗಳು, ರಿವಾರ್ಡ್ ಪಾಯಿಂಟ್‌ಗಳನ್ನು ಸಕಾಲದಲ್ಲಿ ಬಳಸಿಕೊಳ್ಳಿ. ನಿಯಮಿತ ಪಾವತಿ ಮಾಡಿದರೆ ನವೀಕರಣ ಶುಲ್ಕ ಮನ್ನಾ ಆಗಬಹುದು ಎಂದು ಎಸ್ಬಿಐ ಸಲಹೆ ನೀಡಿದೆ.

ಸೂಪರ್ ಮಾರ್ಕೆಟ್ ಗೆ ಹೋಗ್ಲಿ, ಪೆಟ್ರೋಲ್ ಬಂಕ್ ಗೆ ಹೋಗ್ಲಿ ಜನರು ಕ್ರೆಡಿಟ್ ಕಾರ್ಡ್ (Credit card) ಉಜ್ಜುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾಲ್ಕೈದು ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಹಿಡಿದು ಓಡಾಡುವವರ  ಸಂಖ್ಯೆ ಹೆಚ್ಚಾಗಿದೆ. ನಿಮ್ಮ ಬಳಿ ಇರುವ ಎರಡು - ಮೂರು ಕ್ರೆಡಿಟ್ ಕಾರ್ಡ್ ಲಾಭಕ್ಕಿಂತ ನಷ್ಟವನ್ನು ಹೆಚ್ಚು ಮಾಡುತ್ತದೆ. ಯಾಕೆಂದ್ರೆ ನಾಲ್ಕೈದು ಕ್ರೆಡಿಟ್ ಕಾರ್ಡ್ ಕೈನಲ್ಲಿದ್ರೆ ಆಗ್ಲಿಲ್ಲ, ಅದ್ರ ಸ್ಕೋರ್ (Score) ಚೆನ್ನಾಗಿರಬೇಕು. ನಿಮ್ಮ ಕ್ರೆಡಿಟ್ ಕಾರ್ಡ್ ಸ್ಕೋರ್ ಉತ್ತಮವಾಗಿದ್ರೆ ಮಾತ್ರ ಸಾಲ ಪಡೆಯೋಕೆ ಆಗೋದು. ಕೆಲ ಕಂಪನಿ ಜಾಬ್ ನೀಡೋಕೂ ನಿಮ್ಮ ಕ್ರೆಡಿಟ್ ಸ್ಕೋರ್ ನೋಡುತ್ವೆ. ಕ್ರೆಡಿಟ್ ಕಾರ್ಡ್ ಬಳಸುವಾಗ ನೀವು ಬುದ್ದಿವಂತಿಕೆ ಉಪಯೋಗಿಸಿದ್ರೆ ಅದ್ರಿಂದ ಹೆಚ್ಚಿನ ಲಾಭ ಪಡೆಯಬಹುದು. ರಿಯಾಯಿತಿ, ಪ್ರವಾಸ, ಕ್ಯಾಶ್ ಬ್ಯಾಕ್ (cash back) ನಂತಹ ಸೌಲಭ್ಯ ಸಿಗ್ಬೇಕು ಅಂದ್ರೆ ಯಾವೆಲ್ಲ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡ್ಬೇಕು, ಹೇಗೆಲ್ಲ ಬಳಕೆ ಮಾಡ್ಬೇಕು ಎಂಬುದನ್ನು ತಿಳಿದಿಟ್ಟುಕೊಳ್ಳಿ. ಕ್ರೆಡಿಟ್ ಕಾರ್ಡ್ ರಿವಾರ್ಡ್‌ಗಳನ್ನು ಗರಿಷ್ಠಗೊಳಿಸಲು ಏನು ಮಾಡ್ಬೇಕು ಎನ್ನುವ ಬಗ್ಗೆ ಎಸ್ ಬಿಐ ಸಲಹೆ ನೀಡಿದೆ. 

ಲೈಫ್ ಸ್ಟೈಲ್ ಆಧಾರಿತ ಖರ್ಚು : ನೀವು ಯಾವ ಕ್ಷೇತ್ರದಲ್ಲಿ ಹೆಚ್ಚು ಖರ್ಚು ಮಾಡ್ತಿರಿ ಎಂಬುದನ್ನು ಮೊದಲು ಗಮನಿಸಿ. ನೀವು ಪ್ರವಾಸಕ್ಕೆ ಹೆಚ್ಚು ಹೋಗ್ತೀರಿ ಎಂದಾದ್ರೆ ಸಿಂಗಾಪುರ್ ಏರ್‌ಲೈನ್ಸ್‌ನ ಸಹಭಾಗಿತ್ವದಲ್ಲಿ ಕ್ರಿಸ್‌ಫ್ಲೈಯರ್ ಎಸ್‌ಬಿಐ ಕಾರ್ಡ್‌ನಂತಹ ಕಾರ್ಡ್ ಆಯ್ಕೆ ಮಾಡಿಕೊಳ್ಳಿ. ಆಗಾಗ್ಗ ಪ್ರಯಾಣ ಮಾಡುವವರು ನೀವಾಗಿದ್ದರೆ ಇಂಧನ ವೆಚ್ಚದ ಮೇಲೆ ಅಥವಾ ಪ್ರಯಾಣ ವೆಚ್ಚಗಳ ಮೇಲೆ ಕ್ಯಾಶ್‌ಬ್ಯಾಕ್ ನೀಡುವ ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.  ನೀವು ಹೆಚ್ಚು ಶಾಪಿಂಗ್ ಮಾಡ್ತೀರಿ ಎಂದಾದ್ರೆ ಕ್ಯಾಶ್ ಬ್ಯಾಕ್ ನೀಡುವ ಅಥವಾ ಆನ್ಲೈನ್ ಶಾಪಿಂಗ್ ಮೇಲೆ ಹೆಚ್ಚು ಅಂಕ ನೀಡುವ ಕ್ರೆಡಿಟ್ ಕಾರ್ಡ್ ನಿಮಗೆ ಉತ್ತಮ.

ಒಳ್ಳೆ ಕೆಲ್ಸ ಸಿಗ್ಬೇಕು ಅಂದ್ರೆ ಉತ್ತಮ ಕ್ರೆಡಿಟ್ ಸ್ಕೋರ್ ಇರ್ಬೇಕು, ಹೊಸ ರೂಲ್ಸ್ ಫಾಲೋ ಮಾಡ್ತಿವೆ ಕಂಪನಿಗಳು

ಶ್ರೇಣಿ ಆಧಾರಿತ ಕ್ರೆಡಿಟ್ ಕಾರ್ಡ್ : ಊಟ, ದಿನಸಿ, ಮನರಂಜನೆ ಸೇರಿದಂತೆ ಶ್ರೇಣಿ ಆಧಾರಿತವಾಗಿ ಕೆಲ ಕ್ರೆಡಿಟ್ ಕಾರ್ಡ್ ಹೆಚ್ಚು ರಿವಾರ್ಡ್ ನೀಡುತ್ತವೆ. ನೀವು ಯಾವುದಕ್ಕೆ ಹೆಚ್ಚು ಖರ್ಚು ಮಾಡ್ತೀರಿ ಎಂಬುದನ್ನು ಗಮನಿಸಿ ಆ ವಿಭಾಗಕ್ಕೆ ಆಧ್ಯತೆ ನೀಡಿ. ಸಿಂಪ್ಲಿಕ್ಲಿಕ್ ಎಸ್‌ಬಿಐ ಕಾರ್ಡ್‌ನಂತಹ ಕೆಲವು ಕ್ರೆಡಿಟ್ ಕಾರ್ಡ್‌ಗಳು ವಿಶೇಷ  ಪಾರ್ಟನರ್ ಜೊತೆ ಆನ್‌ಲೈನ್ ಖರ್ಚುಗಳಿಗೆ 10 ಪಟ್ಟು ಹೆಚ್ಚು ರಿವಾರ್ಡ್ ನೀಡುತ್ತವೆ. 

ಗಿಫ್ಟ್ ವೋಚರ್ ಲಾಭ ಪಡೆಯಿರಿ : ಕೆಲ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಗಳು ಕೆಲ ತಿಂಗಳಲ್ಲಿ ನಿರ್ದಿಷ್ಟ ಮಿತಿಯನ್ನು ಪೂರ್ಣಗೊಳಿಸಿದ ಗ್ರಾಹಕರಿಗೆ ವೆಲ್ ಕಂ ಉಡುಗೊರೆಯಾಗಿ ರಿವಾರ್ಡ್ ಪಾಯಿಂಟ್ ನೀಡುತ್ತದೆ. ಸೂಪರ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್, ಆರಮ್ ಕಾರ್ಡ್‌ದಾರರಿಗೆ ವೆಲ್ ಕಂ ಗಿಫ್ಟ್ ಆಗಿ 40,000 ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ. ಈ ಪಾಯಿಂಟ್ ಬಳಸಿಕೊಂಡು ನೀವು ಮನೆಗೆ ಅಗತ್ಯವಿರುವ ದೊಡ್ಡ ವಸ್ತುಗಳನ್ನು ಖರೀದಿ ಮಾಡಬಹುದು. 

 ಕ್ರೆಡಿಟ್ ಸ್ಕೋರ್, ಸಾಲ ಪಡೆಯುವಾಗ ಏಕಿದನ್ನು ಗಮನಿಸಬೇಕು?

ರಿಡೀಮ್ ಮರೆಯದಿರಿ : ಕ್ರೆಡಿಟ್ ಕಾರ್ಡ್ನಲ್ಲಿ ಸಿಗುವ ರಿವಾರ್ಡ್‌ಗಳನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಬೇಕು. ಅದನ್ನು ರಿಡೀಮ್ ಮಾಡದೆ ಹೋದ್ರೆ ಅದು ಮೌಲ್ಯ ಕಳೆದುಕೊಳ್ಳುತ್ತದೆ. ರಿವಾರ್ಡ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು, ಕ್ರೆಡಿಟ್ ಕಾರ್ಡ್ ವಿತರಕರು ನೀಡುವ ಮೊಬೈಲ್ ಅಪ್ಲಿಕೇಷನ್ ಬಳಸಿ ಇಲ್ಲವೆ ಆನ್ಲೈನ್ ಸಹಾಯ ಪಡೆಯಿರಿ.  

ಈ ಬಗ್ಗೆ ಗಮನ ಇರಲಿ : ನೀವು ಕ್ರೆಡಿಟ್ ಕಾರ್ಡ್ ನಿಂದ ಸಿಗುವ ರಿವಾರ್ಡ್, ಕ್ಯಾಶ್ ಬ್ಯಾಕ್ ಮಾತ್ರ ಪಡೆಯುವುದಲ್ಲ, ಪಾವತಿ ಬಗ್ಗೆಯೂ ಗಮನ ಹರಿಸಬೇಕು. ಸರಿಯಾದ ಸಮಯಕ್ಕೆ ಶುಲ್ಕ ಪಾವತಿ ಪೂರ್ಣಗೊಳಿಸಿದರೆ ಮತ್ತು ಕಂಪನಿ ನಿಯಮವನ್ನು ಪಾಲಿಸಿದ್ರೆ ಅನೇಕ ಕಂಪನಿಗಳು ಕ್ರೆಡಿಟ್ ಕಾರ್ಡ್ ನವೀಕರಣ ಶುಲ್ಕವನ್ನು ಮನ್ನ ಮಾಡುತ್ತವೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!