ಅನಂತ್ ಅಂಬಾನಿ ಕೈಲಿದ್ದ 18 ಕೋಟಿಯ ದುಬಾರಿ ವಾಚ್‌ಗೆ ಮನಸೋತ ಮಾರ್ಕ್ ಜುಕರ್‌ಬರ್ಗ್ ಪತ್ನಿ

Published : Mar 03, 2024, 04:11 PM ISTUpdated : Mar 03, 2024, 04:15 PM IST
ಅನಂತ್ ಅಂಬಾನಿ ಕೈಲಿದ್ದ 18 ಕೋಟಿಯ ದುಬಾರಿ ವಾಚ್‌ಗೆ ಮನಸೋತ ಮಾರ್ಕ್ ಜುಕರ್‌ಬರ್ಗ್ ಪತ್ನಿ

ಸಾರಾಂಶ

 ಅನಂತ್ ಅಂಬಾನಿ ಬಳಿ ವಿಶ್ವದ ಅತೀ ದುಬಾರಿ ವಾಚ್‌ ಎನಿಸಿರುವ ಸುಮಾರು 18 ಕೋಟಿ ರೂಪಾಯಿಗಳ ಪ್ಯಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚಿಮ್ ವಾಚ್ ಇದ್ದು, ಇದನ್ನು ನೋಡಿ ಫೇಸ್‌ಬುಕ್ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಪತ್ನಿ ಪೆಸ್ಸಿಲ್ಲಾ ಬೆರಗಾದ ದೃಶ್ಯ ಈಗ ವೈರಲ್ ಆಗುತ್ತಿದೆ. 1

ಜಾಮ್‌ನಗರ್: ಗುಜರಾತ್‌ನ ಜಾಮ್‌ನಗರದಲ್ಲಿ ಭಾರತದ ಅತ್ಯಂತ ಅದ್ದೂರಿ ವಿವಾಹ ಪೂರ್ವ ಮದ್ವೆ ಸಮಾರಂಭವೊಂದು ನಡೆಯುತ್ತಿದೆ. ಅಂಬಾನಿ ಕುಟುಂಬದ ಕಾರ್ಯಕ್ರಮ ಇದು ಎಂದು ಹೇಳೂವುದೇ ಬೇಕಾಗಿಲ್ಲ, ಏಕೆಂದರೆ ಕಳೆದೆರಡು ಮೂರು ದಿನಗಳಿಂದ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರು ಕಾಣಿಸುವುದು ಅಂಬಾನಿ ಕುಟುಂಬ ಆಯೋಜಿಸಿದ ಈ ಐಷಾರಾಮಿ ಮದ್ವೆ ಪೂರ್ವ ಕಾರ್ಯಕ್ರಮದ ಅದ್ದೂರಿತನ, ಚಿನ್ನದ ಸ್ಪೂನ್ ಬಾಯಲ್ಲಿಕೊಂಡೇ ಹುಟ್ಟಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರು ಜುಲೈ ತಿಂಗಳಲ್ಲಿ ಮದುವೆಯಾಗುತ್ತಿದ್ದು, ಇವರಿಬ್ಬರ ವಿವಾಹ ಪೂರ್ವ ಕಾರ್ಯಕ್ರಮಗಳು ಹಲವು ಅದ್ದೂರಿತನಕ್ಕೆ ಸಾಕ್ಷಿಯಾಗಿದೆ. ಜಗತ್ತಿನೆಲ್ಲೆಡೆಯ ಉದ್ಯಮಿಗಳು, ಕ್ರಿಕೆಟ್ ತಾರೆಯರು, ಪಾಪ್‌ಸ್ಟಾರ್‌ಗಳು, ಬಾಲಿವುಡ್‌ನ ನಟ ನಟಿಯರು, ಸೇರಿದಂತೆ ಪ್ರತಿಯೊಬ್ಬರಿಗೂ ಆಹ್ವಾನ ನೀಡಲಾಗಿದ್ದು, ಬಹುತೇಕರು ಈ ವಿವಾಹ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಜೊತೆಗೆ ಜಾಮ್‌ನಗರದ 50 ಸಾವಿರಕ್ಕೂ ಹೆಚ್ಚು ಜನರಿಗೆ ವಿಶೇಷ ಊಟದ ವ್ಯವಸ್ಥೆಯನ್ನು ಅಂಬಾನಿ ಕುಟುಂಬ ಕೆಲ ದಿನಗಳ ಹಿಂದೆ ಆಯೋಜಿಸಿದ್ದು, ಗೊತ್ತೆ ಇದೆ. 

ಉದ್ಯಮ ಲೋಕದ ತಾರೆಯರಾದ ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ಗೌತಮ್ ಅದಾನಿ, ಆನಂದ್ ಮಹೀಂದ್ರಾ ಸೇರಿದಂತೆ ಅನೇಕ ಗಣ್ಯರು ಈ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗಿಯಾಗಿದ್ದು, ಅಂಬಾನಿ ಕುಟುಂಬದ ವೈಭವೋಪೇತ ಸಮಾರಂಭವನ್ನು ಕಣ್ತುಂಬಿಕೊಂಡಿದ್ದಾರೆ. ಈ ಮಧ್ಯೆ ಈ ವಿವಾಹ ಪೂರ್ವ ಸಮಾರಂಭದ ವೀಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. 

ಜಾಮ್‌ನಗರದ ತಾಪ ಹೆಚ್ಚಿಸಿದ ರಿಹಾನ್ನಾ ಡಾನ್ಸ್‌: ಇವಳೇನು ಚಡ್ಡಿ ಹಾಕಿಲ್ವಾ ಎಂದ ನೆಟ್ಟಿಜೆನ್ಸ್

ಹೇಳಿ ಕೇಳಿ ಅಂಬಾನಿ ಕುಟುಂಬ ಅತ್ಯಂತ ಶ್ರೀಮಂತಿಕೆ ಹೆಸರಾದವರು. ಯಾರ ಬಳಿಯೂ ಇಲ್ಲದ ಹಲವು ಐಷಾರಾಮಿ ವಸ್ತುಗಳು, ವಾಚ್‌ಗಳು, ಫೋನ್‌ಗಳು, ವಜ್ರಾಭರಣಗಳು, ವಾಹನಗಳು ಈ ಕುಟುಂಬದ ವಾರಸುದಾರಿಕೆಯಲ್ಲಿದೆ. ಅದೇ ರೀತಿ ಅನಂತ್ ಅಂಬಾನಿ ಬಳಿ ವಿಶ್ವದ ಅತೀ ದುಬಾರಿ ವಾಚ್‌ ಎನಿಸಿರುವ ಸುಮಾರು 18 ಕೋಟಿ ರೂಪಾಯಿಗಳ ಪ್ಯಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚಿಮ್ ವಾಚ್ ಇದ್ದು, ಇದನ್ನು ನೋಡಿ ಫೇಸ್‌ಬುಕ್ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಪತ್ನಿ ಪೆಸ್ಸಿಲ್ಲಾ ಬೆರಗಾದ ದೃಶ್ಯ ಈಗ ವೈರಲ್ ಆಗುತ್ತಿದೆ. 18 ಕೋಟಿ ಮೊತ್ತದ ಈ ದುಬಾರಿ ವಾಚ್ ಪ್ರೆಸಿಲ್ಲಾ ಮನಸೆಳೆದಿದ್ದು, ಆಕೆ ಅನಂತ್ ಅಂಬಾನಿ ಕೈ ಹಿಡಿದು ವಾಚ್ ಅನ್ನು ನೋಡುತ್ತಿರುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ.  ವಾಚ್ ಗಮನಿಸಿದ ಆಕೆ ಬೆಲೆ ಎಷ್ಟು ಎಂದು ಕೇಳುತ್ತಿರುವುದಲ್ಲದೇ ವಾವ್ ಎಂದು ಉದ್ಗಾರ ತೆಗೆಯುತ್ತಿರುವ ದೃಶ್ಯವಿದೆ. 

ಪುತ್ರ ಅನಂತ್ ನಲ್ಲಿ ತಂದೆ ಧೀರೂಭಾಯಿ ಅವರನ್ನೇ ಕಾಣುತ್ತಿದ್ದೇನೆ: ಮುಖೇಶ್ ಅಂಬಾನಿ ಭಾವುಕ ಮಾತು

ವೀಡಿಯೋ ನೋಡಿದ ಭಾರತೀಯರು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಭಾರತದವರು ಬಡವರು ಎಂದು ಯಾರು ಹೇಳಿದ್ದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ದೃಶ್ಯ ನೋಡಿ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಅಭದ್ರತೆ ಕಾಡುತ್ತಿದೆ ಅವರು ಆರಾಮದಾಯಕವಾಗಿ ಕಾಣುಸುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಂಬಾನಿ ಬಳಿ ಅಜ್ಜನ ಕಾಲದ ಕಾಸಿದ್ದರೆ ಮಾರ್ಕ್ ಜುಕರ್ ಬಳಿ ಕೇವಲ ಅವರ ಕಾಸು ಮಾತ್ರ ಇರುವುದು ಎಂದು ಕಾಮೆಂಟ್ ಮಾಡಿದ್ದಾರೆ. 

ಅಪ್ಪನ ಕುಟುಂಬದೊಂದಿಗೆ ಅಕ್ಕ ತಮ್ಮನ ಸಖತ್ ಫೋಸ್‌: ಸೈಫ್ ಅಮೃತಾ ನ್ಯೂ ವರ್ಶನ್ ಎಂದ ನೆಟ್ಟಿಜನ್ಸ್

ಈ ವೀಡಿಯೋವನ್ನು ನೀವು ಒಮ್ಮೆ ನೋಡಿ...

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!