Positive Pay:ನೀವು ಈ ಒಂದು ಕೆಲ್ಸ ಮಾಡದಿದ್ರೆ 5ಲಕ್ಷ ರೂ. ಮೇಲ್ಪಟ್ಟ ಚೆಕ್ ಶೀಘ್ರದಲ್ಲೇ ತಿರಸ್ಕರಿಸಲ್ಪಡುತ್ತದೆ, ಎಚ್ಚರ!

Published : Jul 05, 2022, 06:33 PM IST
Positive Pay:ನೀವು ಈ ಒಂದು ಕೆಲ್ಸ ಮಾಡದಿದ್ರೆ 5ಲಕ್ಷ ರೂ. ಮೇಲ್ಪಟ್ಟ ಚೆಕ್  ಶೀಘ್ರದಲ್ಲೇ ತಿರಸ್ಕರಿಸಲ್ಪಡುತ್ತದೆ, ಎಚ್ಚರ!

ಸಾರಾಂಶ

ಕೆಲವು ಬ್ಯಾಂಕುಗಳು ಈಗಾಗಲೇ ಚೆಕ್ ಕ್ಲಿಯರೆನ್ಸ್ ಗೆ ಸಂಬಂಧಿಸಿ ಪಾಸಿಟಿವ್ ಪೇ ವ್ಯವಸ್ಥೆಅಳವಡಿಸಿಕೊಂಡಿದ್ದರೂ ಕೆಲವು ಬ್ಯಾಂಕುಗಳು ಇನ್ನೂ ಮಾಡಿಲ್ಲ.ಆಗಸ್ಟ್ 1ರಿಂದ ಅನೇಕ ಬ್ಯಾಂಕುಗಳು 5ಲಕ್ಷ ರೂ. ಮೇಲ್ಪಟ್ಟ ಚೆಕ್ ಗಳಿಗೆ ಪಾಸಿಟಿವ್ ಪೇ ಕಡ್ಡಾಯಗೊಳಿಸುತ್ತವೆ ಎನ್ನಲಾಗಿದೆ. ಬ್ಯಾಂಕ್ ಆಫ್ ಬರೋಡ (Bank of Baroda) ಈಗಾಗಲೇ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಹಾಗಿದ್ರೆ ಪಾಸಿಟಿವ್ ಪೇ ವ್ಯವಸ್ಥೆ ಅಂದ್ರೇನು? ಇಲ್ಲಿದೆ ಮಾಹಿತಿ. 

ನವದೆಹಲಿ (ಜು.5): 5 ಲಕ್ಷ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಚೆಕ್ ಗಳ (cheques) ವಿತರಣೆಗೆ ಅನೇಕ ಬ್ಯಾಂಕುಗಳು (Banks) ಆಗಸ್ಟ್ 1ರಿಂದ ಪಾಸಿಟಿವ್ ಪೇ ( Positive Pay) ಕಡ್ಡಾಯಗೊಳಿಸಲಿವೆ. ಬ್ಯಾಂಕ್ ಆಫ್ ಬರೋಡ (Bank of Baroda) ಈಗಾಗಲೇ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಒಂದು ವೇಳೆ ನೀವು ಪಾಸಿಟಿವ್ ಪೇ ದೃಢೀಕರಣ (confirmation) ನೀಡದಿದ್ರೆ ಅಂಥ ಚೆಕ್ ಗಳನ್ನು ನಿಮ್ಮ ಬ್ಯಾಂಕ್ ನಿರಾಕರಿಸಲಿದೆ. ಹಾಗಾದ್ರೆ ಪಾಸಿಟಿವ್ ಪೇ ಅಂದ್ರೇನು? ಅದ್ಯಾಕೆ ಮುಖ್ಯ? ಇಲ್ಲಿದೆ ಮಾಹಿತಿ.

ಪಾಸಿಟಿವ್ ಪೇ ಅಂದ್ರೇನು?
ಪಾಸಿಟಿವ್ ಪೇ (Positive Pay) ಚೆಕ್ (Cheque) ಕ್ಲಿಯರಿಂಗ್  (Clearing) ವ್ಯವಸ್ಥೆಯ ಭಾಗವಾಗಿದ್ದು, ಅದರಡಿಯಲ್ಲಿ ಖಾತೆದಾರರು (accountholders) ಚೆಕ್  (Cheque) ವಿತರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಆಧಾರಿಸಿ ಚೆಕ್ ಗಳನ್ನು ಪಾವತಿಗೆ (Payment) ಕಳುಹಿಸುವ ಪ್ರಕ್ರಿಯೆಯನ್ನು ಬ್ಯಾಂಕ್ (Bank) ಮಾಡುತ್ತದೆ. ಈ ವ್ಯವಸ್ಥೆಯಲ್ಲಿ ಚೆಕ್ ಕ್ಲಿಯರ್ (Clear) ಆಗಬೇಕೆಂದ್ರೆ ಅದನ್ನು ನೀಡಿರೋ ವ್ಯಕ್ತಿ ಬ್ಯಾಂಕ್ಗೆ ಈ ಕುರಿತು ಕೆಲವು ಮಾಹಿತಿಗಳನ್ನು ಮುಂಚಿತವಾಗಿ ನೀಡಬೇಕು. ಅಂದ್ರೆ ಚೆಕ್ ಸಂಖ್ಯೆ (Cheque Number), ಚೆಕ್ ದಿನಾಂಕ ( Cheque date), ಪಾವತಿ ಸ್ವೀಕರಿಸುವವರ ಹೆಸರು (Payee name), ಖಾತೆ ಸಂಖ್ಯೆ (Account number), ಮೊತ್ತ (Amount) ಇತ್ಯಾದಿ.  ಇದ್ರಿಂದ ಚೆಕ್ ಪಡೆದ ವ್ಯಕ್ತಿ ಅದನ್ನು ಕ್ಲಿಯರ್ (Clear) ಮಾಡಲು ಆತ ಖಾತೆ ಹೊಂದಿರೋ ಬ್ಯಾಂಕ್ಗೆ ನೀಡಿದಾಗ ಆ ಬ್ಯಾಂಕ್ ಕ್ಲಿಯರೆನ್ಸ್ ಗಾಗಿ ಚೆಕ್ ನೀಡಿರೋ ವ್ಯಕ್ತಿ ಬ್ಯಾಂಕ್ಗೆ ಅದನ್ನು ಕಳುಹಿಸುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್ ಆತ ಈಗಾಗಲೇ  ಚೆಕ್ಗೆ ಸಂಬಂಧಿಸಿ ನೀಡಿದ ಮಾಹಿತಿಯೊಂದಿಗೆ ಚೆಕ್ನಲ್ಲಿರೋ ಮಾಹಿತಿಗಳನ್ನು ತಾಳೆ ಹಾಕಿ ನೋಡುತ್ತದೆ. ಎರಡೂ ಹೊಂದಿಕೆಯಾದ್ರೆ ಚೆಕ್ ಕ್ಲಿಯರ್ ಮಾಡುತ್ತದೆ. ಇಲ್ಲವಾದ್ರೆ ಚೆಕ್ ತಿರಸ್ಕರಿಸಲ್ಪಡುತ್ತದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪಾಸಿಟಿವ್ ಪೇ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. 

Service Charge: ಹೋಟೆಲ್ ನಲ್ಲಿ ಸರ್ವಿಸ್ ಚಾರ್ಜ್ ಕೇಳಿದ್ರೆ ದೂರು ನೀಡಿ; ಹೊಸ ಮಾರ್ಗಸೂಚಿ ಹೊರಡಿಸಿದ ಸಿಸಿಪಿಎ

ನೆಟ್ ಬ್ಯಾಂಕಿಂಗ್ ನಲ್ಲೂ ಪಾಸಿಟಿವ್ ಪೇ 
ಪಾಸಿಟಿವ್ ಪೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬ್ಯಾಂಕಿಗೆ ಭೇಟಿ ನೀಡಬೇಕೆಂದೇನೂ ಇಲ್ಲ. ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಷನ್ ಗೆ ಲಾಗಿ ಇನ್ ಆಗಿ ಕೂಡ ಪಾಸಿಟಿವ್ ಪೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು. ಚೆಕ್ ಸಂಖ್ಯೆ, ಚೆಕ್ ದಿನಾಂಕ, ಯಾರಿಗೆ ಪಾವತಿಸುತ್ತಿದ್ದೀರಾ, ಖಾತೆ ಸಂಖ್ಯೆ, ಮೊತ್ತ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕು. ಚೆಕ್ ಗಳ ತ್ವರಿತ ಕ್ಲಿಯರೆನ್ಸ್ ಗೆ ಪಾಸಿಟಿವ್ ಪೇ ವ್ಯವಸ್ಥೆ ನೆರವು ನೀಡುತ್ತದೆ. ಕೆಲವು ಬ್ಯಾಂಕ್ಗಳು ಗ್ರಾಹಕರಿಗೆ ಎಸ್ಎಂಎಸ್, ಎಟಿಎಂ ಅಥವಾ ಇ-ಮೇಲ್ ಮುಖಾಂತರ ಈ ಮಾಹಿತಿಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿವೆ.ಚೆಕ್ ನಲ್ಲಿನ ಮಾಹಿತಿಗಳ ಮಾರ್ಪಾಡು ಅಥವಾ ತಿದ್ದುಪಡಿ ಮೂಲಕ ನಡೆಯುವ ವಂಚನೆಗಳನ್ನು ತಡೆಯುವ ಉದ್ದೇಶವನ್ನು ಪಾಸಿಟಿವ್ ಪೇ ಹೊಂದಿದೆ. 

ಉಡುಪಿ: ಬಣ್ಣದ ಬಲೆಗಳೇ ಮೀನುಗಾರರಿಗೆ ಮಳೆಗಾಲದ ಬದುಕು..!

ಎಸ್ ಬಿಐ ಖಾತೆದಾರರು ಹೀಗೆ ಮಾಡಬಹುದು
ಒಂದು ವೇಳೆ ನೀವು ಎಸ್ ಬಿಐ ಖಾತೆ ಹೊಂದಿದ್ದರೆ, ಪಾಸಿಟಿವ್ ಪೇ ವ್ಯವಸ್ಥೆಗೆ ನೋಂದಣಿಯಾಗಲು ನಿಗದಿತ ನಮೂನೆಯ ಅರ್ಜಿಯನ್ನು ಎಸ್ ಬಿಐಯ ಯಾವುದೇ ಶಾಖೆಗೆ ಸಲ್ಲಿಕೆ ಮಾಡಿ. ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್ (RINB), ಕಾರ್ಪೋರೇಟ್ ಇಂಟರ್ನೆಟ್ ಬ್ಯಾಂಕಿಂಗ್ (CINB), ಮೊಬೈಲ್ ಬ್ಯಾಂಕಿಂಗ್ (YonoLite) ಹಾಗೂ ಯೋನೋ (Mobile App) ಮೂಲಕ ಕೂಡ ನೋಂದಣಿ ಮಾಡಬಹುದು.

50 ಸಾವಿರ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಮೊತ್ತದ ಚೆಕ್ ಗಳ ವಿತರಣೆಗೆ  2020ರ ಸೆಪ್ಟೆಂಬರ್ ನಲ್ಲಿ  ಎಲ್ಲ ಖಾತೆದಾರರಿಗೆ ಆರ್ ಬಿಐ (RBI) ಪಾಸಿಟಿವ್ ಪೇ ವ್ಯವಸ್ಥೆ ಪರಿಚಯಿಸಿತು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?