Flipkartನಲ್ಲಿ ಮಂಗಳೂರು ವ್ಯಕ್ತಿ ಆರ್ಡರ್‌ ಮಾಡಿದ್ದು ಗೇಮಿಂಗ್ ಲ್ಯಾಪ್‌ಟಾಪ್: ಬಂದಿದ್ದು ದೊಡ್ಡ ಗಾತ್ರದ ಕಲ್ಲು

Published : Oct 27, 2022, 01:32 PM ISTUpdated : Oct 27, 2022, 01:33 PM IST
Flipkartನಲ್ಲಿ ಮಂಗಳೂರು ವ್ಯಕ್ತಿ ಆರ್ಡರ್‌ ಮಾಡಿದ್ದು ಗೇಮಿಂಗ್ ಲ್ಯಾಪ್‌ಟಾಪ್: ಬಂದಿದ್ದು ದೊಡ್ಡ ಗಾತ್ರದ ಕಲ್ಲು

ಸಾರಾಂಶ

ಮಂಗಳೂರಿನ ವ್ಯಕ್ತಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ್ದರು. ಆದರೆ, ಅವರು ದೊಡ್ಡ ಕಲ್ಲನ್ನು ಮತ್ತು ಇ - ತ್ಯಾಜ್ಯವನ್ನು ಪಡೆದುಕೊಂಡಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಚಿನ್ಮಯ ರಮಣ ಎಂಬ ವ್ಯಕ್ತಿ, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿರುವುದಾಗಿ ಸರಣಿ ಟ್ವೀಟ್‌ಗಳಲ್ಲಿ ಹೇಳಿಕೊಂಡಿದ್ದಾರೆ. 

ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್‌ ಮುಕ್ತಾಯಗೊಂಡಿದೆ. ಈ ದೀಪಾವಳಿ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಭರ್ಜರಿ ವ್ಯಾಪಾರವನ್ನು ಕಂಡಿದೆ. ಆದರೆ, ಈ ನಡುವೆ ಮಂಗಳೂರಿನ ವ್ಯಕ್ತಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ್ದರು. ಆದರೆ, ಅವರು ದೊಡ್ಡ ಕಲ್ಲನ್ನು ಮತ್ತು ಇ - ತ್ಯಾಜ್ಯವನ್ನು ಪಡೆದುಕೊಂಡಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಚಿನ್ಮಯ ರಮಣ ಎಂಬ ವ್ಯಕ್ತಿ, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿರುವುದಾಗಿ ಸರಣಿ ಟ್ವೀಟ್‌ಗಳಲ್ಲಿ ಹೇಳಿಕೊಂಡಿದ್ದಾರೆ. 

ಅಲ್ಲದೆ, ಇತರರು ತಮ್ಮಂತೆ "ಅಸಹಾಯಕ" ಭಾವನೆಗೆ ಒಳಗಾಗುವುದರಿಂದ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡದಂತೆ ಒತ್ತಾಯಿಸಿದರು. ಆದರೆ, 1 ದಿನದ ನಂತರ, ಫ್ಲಿಪ್‌ಕಾರ್ಟ್ ತನಗೆ ಹಣವನ್ನು ರೀಫಂಡ್‌ ಮಾಡಿದೆ ಎಂದು ಹೇಳಿದ್ದಾರೆ. ಪೂರ್ಣ ಹಣವನ್ನು ವಾಪಸ್‌ ನೀಡಿದ್ದು, ಈ ಹಿನ್ನೆಲೆ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನೊಂದಿಗೆ ಶಾಪಿಂಗ್ ಮಾಡುವುದನ್ನು ಮುಂದುವರಿಸುತ್ತೇನೆ ಎಂದೂ ಅವರು ಹೇಳಿದರು.

ಇದನ್ನು ಓದಿ: Flipkart Big Billion Daysನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌; ಬಂದಿದ್ದು ಡಿಟರ್ಜೆಂಟ್‌ ಸೋಪ್..!

ತನಗೆ ದೊರೆತ ಕಲ್ಲು ಮತ್ತು ತ್ಯಾಜ್ಯ ವಸ್ತುಗಳ ಫೋಟೋ ಲಗತ್ತಿಸಿದ್ದಲ್ಲದೆ, ಚಿನ್ಮಯ ರಮಣ ಅವರು ಅನ್‌ ಬಾಕ್ಸಿಂಗ್ ವಿಡಿಯೋವನ್ನು ಕೂಡ ಮಾಡಿದ್ದರು.  ಅಲ್ಲದೆ, ಗ್ರಾಹಕರು ತಪ್ಪು ಪ್ಯಾಕೇಜ್‌ಗಳನ್ನು ಸ್ವೀಕರಿಸುವ ಬಗ್ಗೆ ಹಲವಾರು ದೂರುಗಳ ನಂತರ ಫ್ಲಿಪ್‌ಕಾರ್ಟ್ ಆರಂಭಿಸಿದ ಓಪನ್ ಬಾಕ್ಸ್ ಡೆಲಿವರಿ ಸಿಸ್ಟಮ್ ಈ ಉತ್ಪನ್ನಕ್ಕೆ ಲಭ್ಯವಿರಲಿಲ್ಲ ಎಂದೂ ಚಿನ್ಮಯ ರಮಣ ಹೇಳಿಕೊಂಡಿದ್ದಾರೆ. ಪ್ಯಾಕೇಜ್ ಸ್ವೀಕರಿಸಿದ ನಂತರ, ಸರಿಯಾದ ವಸ್ತುಗಳನ್ನು ತಲುಪಿಸಲಾಗಿದೆಯೇ ಎಂದು ಪರಿಶೀಲಿಸಲು ಓಪನ್ ಬಾಕ್ಸ್ ಡೆಲಿವರಿ ಸಿಸ್ಟಮ್ ಗ್ರಾಹಕರಿಗೆ ಸಹಾಯ ಮಾಡುತ್ತದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದಂತೆ ಇಂತಹ ಹಲವಾರು ದೂರುಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಉಟ್ನೂರ್‌ನ ಪಂಜರಿ ಭೀಮಣ್ಣ ಎಂಬ ವ್ಯಕ್ತಿ ಜೂನ್‌ನಲ್ಲಿ ಆನ್‌ಲೈನ್ ಶಾಪಿಂಗ್ ಸೈಟ್‌ನಿಂದ ಸ್ಮಾರ್ಟ್‌ಫೋನ್ ಬದಲಿಗೆ ಡಿಟರ್ಜೆಂಟ್ ಸೋಪ್ ಸ್ವೀಕರಿಸಿ ಆಘಾತಕ್ಕೊಳಗಾಗಿದ್ದರು. ಅವರು ಜನಪ್ರಿಯ ಇ-ಕಾಮರ್ಸ್ ಪೋರ್ಟಲ್ ಮೂಲಕ 6,100 ರೂಪಾಯಿ ಬೆಲೆಯ Vivo Y83 ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಆರ್ಡರ್ ಮಾಡಿದ್ದರು.

ಇದನ್ನೂ ಓದಿ: ಆನ್‌ಲೈನ್‌ ಶಾಪಿಂಗ್ ಮಾಡುವ ಮುನ್ನ ಎಚ್ಚರ: ಏನಿದು ಫ್ಲಿಪ್‌ಕಾರ್ಟ್ ಓಪನ್-ಬಾಕ್ಸ್?

ಇನ್ನೊಂದು ಉದಾಹರಣೆಯಲ್ಲಿ, ಬಿಹಾರದ ವ್ಯಕ್ತಿಯೊಬ್ಬರು ಸೆಪ್ಟೆಂಬರ್‌ನಲ್ಲಿ ತಾನು ಆನ್‌ಲೈನ್‌ನಲ್ಲಿ ಡ್ರೋನ್ ಕ್ಯಾಮೆರಾವನ್ನು ಆರ್ಡರ್ ಮಾಡಿದ್ದೆ. ಆದರೆ, ಒಂದು ಕೆಜಿ ಆಲೂಗಗೆಡ್ಡೆ ಸ್ವೀಕರಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಅನ್‌ಸೀನ್ ಇಂಡಿಯಾ ಹಂಚಿಕೊಂಡಿರುವ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಈ ಘಟನೆ ನಳಂದಾದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವಿತರಣಾ ಕಾರ್ಯನಿರ್ವಾಹಕ ಎಂದು ಹೇಳಲಾದ ವ್ಯಕ್ತಿಯೊಬ್ಬರು ಪ್ಯಾಕೇಜ್ ಅನ್ನು ತೆರೆಯುತ್ತಿರುವುದು ಕಂಡುಬಂದಿದ್ದು, ಆಲೂಗೆಡ್ಡೆ ಇರುವುದು ಕಂಡುಬಂದಿದೆ. ಆನ್‌ಲೈನ್ ಚಿಲ್ಲರೆ ವ್ಯಾಪಾರಿ ವಂಚನೆ ಮಾಡಿದ್ದಾರೆ ಎಂದು ಅವರು ಒಪ್ಪಿಕೊಂಡರು. ಆದರೆ ಉತ್ಪನ್ನವನ್ನು ವಿತರಿಸುವ ಕಂಪನಿಗೆ ಈ ಬಗ್ಗೆ ಅರವಿದೆಯೇ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.

ಹಾಗೂ, ಐಐಎಂ ಪದವೀಧರರೊಬ್ಬರು ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿ ಗಡಿ ಡಿಟರ್ಜೆಂಟ್‌ ಸೋಪ್‌ ಪಡೆದಿರುವ ಬಗ್ಗೆ ಹೇಳಿಕೊಂಡಿದ್ದರು. ನಂತರ, ಫ್ಲಿಪ್‌ಕಾರ್ಟ್‌ ತನ್ನ ತಪ್ಪಿಗೆ ಹಣ ವಾಪಸ್‌ ನೀಡುವುದಾಗಿ ಹೇಳಿಕೊಂಡಿತ್ತು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌