ನೋಯೆಲ್‌ ಟಾಟಾ ಸೊಸೆ ಮಾನಸಿ, ಟಾಟಾ ಮೋಟಾರ್ಸ್‌ನ ಪ್ರಮುಖ ಎದುರಾಳಿ ಕಂಪನಿಯ ಒಡತಿ!

By Santosh Naik  |  First Published Oct 15, 2024, 10:14 PM IST

ರತನ್‌ ಟಾಟಾ ನಿಧನದ ಬಳಿಕ ಟಾಟಾ ಗ್ರೂಪ್‌ಗೆ ನೋಯೆಲ್‌ ಟಾಟಾ ನೂತನ ಚೇರ್ಮನ್‌ ಆಗಿದ್ದಾರೆ. ಹಾಗಂತ ನೋಯೆಲ್‌ ಟಾಟಾ ಕುಟುಂಬವೇನೂ ಸಾಮಾನ್ಯವಲ್ಲ. ಟಾಟಾ ಗ್ರೂಪ್‌ನ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್‌ನ ಎದುರಾಳಿಗಳ ಪೈಕಿ ಒಂದಾಗಿರುವ ಕಂಪನಿಗೆ ಇವರ ಸೊಸೆಯೇ ಒಡತಿಯಾಗಿದ್ದಾರೆ.


ಬೆಂಗಳೂರು (ಅ.15): ರತನ್‌ ಟಾಟಾ ನಿಧನದ ಬಳಿಕ ನಿರೀಕ್ಷೆಯಂತೆಯೇ ಟಾಟಾ ಗ್ರೂಪ್‌ಗೆ ಹೊಸ ಚೇರ್ಮನ್‌ ಆಯ್ಕೆಯಾಗಿದೆ. ರತನ್‌ ಟಾಟಾ ಅವರ ಮಲ ಸಹೋದರ ನೋಯೆಲ್‌ ಟಾಟಾ, ಟಾಟಾ ಗ್ರೂಪ್‌ನ ಮುಂದಿನ ಚೇರ್ಮನ್‌ ಆಗಿದ್ದಾರೆ. ನೋಯೆಲ್‌ ಟಾಟಾ ಅವರ ಪುತ್ರ ನೆವಿಲ್ಲೆ ಟಾಟಾ. ಈ ನೆವಿಲ್ಲೆ ಟಾಟಾಗೆ ಇಬ್ಬರು ಪುತ್ರಿಯರಿದ್ದಾರೆ ಮಾಯಾ ಟಾಟಾ ಮತ್ತು ಲೇಯಾ ಟಾಟಾ. ರತನ್‌ ಟಾಟಾ ನಿಧನದ ದಿನದಂದು ಇವರೆಲ್ಲರಿಂದಲೂ ಶ್ರದ್ಧಾಂಜಲಿ ಪೋಸ್ಟ್‌ಗಳು ಬಂದಿದ್ದವು. ನೆವಿಲ್ಲೆ ಟಾಟಾ ಮದುವೆಯಾಗಿರುವ ಮಹಿಳೆ ಮಾನಸಿ. 2019ರಲ್ಲಿ ನೆವಿಲ್ಲೆ ಹಾಗೂ ಮಾನಸಿ ವಿವಾಹವಾಗಿತ್ತು. ಮಹಾರಾಷ್ಟ್ರದ ಶ್ರೀಮಂತ ಕೈಗಾರಿಕೋದ್ಯಮಿ 'ಕಿರ್ಲೋಸ್ಕರ್' ಕುಟುಂಬದ ಕುಡಿ ಮಾನಸಿ ಕಿರ್ಲೋಸ್ಕರ್‌. ಮುಂಬೈನ ರತನ್ ಟಾಟಾ ಅವರ ನಿವಾಸದಲ್ಲಿತೇ ಇವರ ಮದುವೆ ನಡೆದಿತ್ತು.

ಟೊಯೋಟಾ ಕಂಪನಿ ಭಾರತದಲ್ಲಿ ಟಾಟಾ ಮೋಟಾರ್ಸ್‌ಗೆ ದೊಡ್ಡ ಎದುರಾಳಿಗಳಲ್ಲಿ ಒಂದು. ಜಪಾನ್‌ನ ಟೊಯೋಟಾ ಮೋಟಾರ್‌ ಕಾರ್ಪೋರೇಷನ್‌, ಭಾರತದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಎನ್ನುವ ಹೆಸರಿನಲ್ಲಿ ಕೆಲಸ ಮಾಡುತ್ತಿದೆ. ಈ ಜಂಟಿ ಕಂಪನಿಯಲ್ಲಿ ಟೋಯೋಟಾ ಮೋಟಾರ್‌ ಕಾರ್ಪೋರೇಷನ್‌ ಶೇ. 89ರಷ್ಟು ಪಾಲು ಹೊಂದಿದ್ದರೆ, ಕಿರ್ಲೋಸ್ಕರ್‌ ಗ್ರೂಪ್‌ ಪಾಲು ಶೇ. 11ರಷ್ಟಿದೆ. 27 ವರ್ಷಗಳಿಂದ ಈ ಜಂಟಿ ಭಾಗಿದಾರಿಕೆ ನಡೆಯುತ್ತಿದೆ. ಕರ್ನಾಟಕದ ಬೆಂಗಳೂರಿನ ಬಿಡದಿಯಲ್ಲಿ ಈ ಕಂಪನಿಯ ಪ್ರಮುಖ ಪ್ಲ್ಯಾಂಟ್‌ ಇದೆ.

1990 ಆಗಸ್ಟ್ 7 ರಂದು ಮಾನಸಿ. ವಿಕ್ರಮ್ ಕಿರ್ಲೋಸ್ಕರ್ ಮತ್ತು ಗೀತಾಂಜಲಿ ಕಿರ್ಲೋಸ್ಕರ್ ದಂಪತಿಗೆ ಜನಿಸಿದರು. ಯುನೈಟೆಡ್ ಸ್ಟೇಟ್ಸ್‌ನಿಂದ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‌ನಿಂದ ಫೈನ್ ಆರ್ಟ್ಸ್‌ನಲ್ಲಿ ತಮ್ಮ ಬ್ಯಾಚುಲರ್ ಪದವಿಯನ್ನು ಗಳಿಸಿದ್ದಾರೆ. ಈ ಶಾಲೆಯು ಡೆಬೊರಾ ಬರ್ಕ್, ಡೇವಿಡ್ ಹ್ಯಾನ್ಸನ್‌ರಂಥ ಶ್ರೇಷ್ಠರು ಕಲಿತ ವಿದ್ಯಾಸಂಸ್ಥೆ. ಕಲಾ ಗ್ಯಾಲರಿಗಳಿಗೆ ಭೇಟಿ ನೀಡುವುದಲ್ಲಿ ಖುಷಿ ಕಾಣುವ ಮಾನಸಿ, ಐತಿಹಾಸಿಕ ಸ್ಥಳಗಳಳಿಗೆ ಪ್ರಯಾಣ, ಪ್ರಪಂಚ ಸುತ್ತುವುದರಲ್ಲಿ ಖುಷಿ ಕಾಣುತ್ತಾರೆ. ಕಲೆಯ ಕುರಿತಾಗಿ ಈಕೆಯ ಜ್ಞಾನದ ಬಗ್ಗೆ ಶ್ರೇಷ್ಠ ಕಲಾವಿದ ಎಂಎಫ್‌ ಹುಸೇನ್‌ ಕೂಡ ಮೆಚ್ಚಿದ್ದರು.

Latest Videos

undefined

ಟಾಟಾ ಸಮೂಹಕ್ಕೆ ಹೊಸ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನೋಯೆಲ್ ಟಾಟಾ ಯಾರು? ರತನ್‌ ಗೆ ಮಲ ಸಹೋದರ ಹೇಗೆ?

1888ರಲ್ಲಿ ಲಕ್ಷ್ಮಣ್‌ರಾವ್‌ ಕಿರ್ಲೋಸ್ಕರ್‌ ಅವರಿಂದ ಆರಂಭವಾದ ಕಿರ್ಲೋಸ್ಕರ್‌ ಗ್ರೂಪ್‌, ಅಂದಾಜು 130 ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿದೆ. ಆ ಮೂಲಕ ಭಾರತದ ಅತ್ಯಂತ ಹಳೆಯ ಕೈಗಾರಿಕೋದ್ಯಮಿ ಗ್ರೂಪ್‌ಗಳಲ್ಲಿ ಒಂದಾಗಿದೆ. ವಾಣಿನ್ಯ ಕುಟುಂಬದ ಹಿನ್ನಲೆಯಿಂದ ಬಂದಿರುವ ಮಾನಸಿ ಕಿರ್ಲೋಸ್ಕರ್‌, 2023ರಲ್ಲಿ ತಂದೆಯ ನಿಧನದ ಬಳಿ ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ಮತ್ತು ಟೊಯೋಟಾ ಕಿರ್ಲೋಸ್ಕರ್‌ ಆಟೋ ಪಾರ್ಟ್ಸ್‌ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಅವರು TKM ಮತ್ತು TKAP ನ ಉಪಾಧ್ಯಕ್ಷರಾಗಿ ನಾಮನಿರ್ದೇಶನಗೊಂಡರು. 

Explainer: ಟಾಟಾ ಸನ್ಸ್‌-ಟಾಟಾ ಟ್ರಸ್ಟ್‌ ಏನಿದು ಟಾಟಾ ಸಮೂಹದ ಅಂತರಾಳ, ಅಗಲಿದ ದಿಗ್ಗಜನ ಸ್ಥಾನ ತುಂಬುವವರು ಯಾರು?

ಅದರೊಂದಿಗೆ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್‌ಟೈಲ್ ಪ್ರೈವೇಟ್ ಲಿಮಿಟೆಡ್, ಟೊಯೋಟಾ ಇಂಜಿನ್ ಇಂಡಿಯಾ ಲಿಮಿಟೆಡ್, ಡೆನ್ಸೊ ಕಿರ್ಲೋಸ್ಕರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಟೊಯೋಟಾ ಮೆಟೀರಿಯಲ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಂತಹ ಅವರ ಕಂಪನಿಯ ಇತರ ಶಾಖೆಗಳಲ್ಲಿ ಮುಖ್ಯಸ್ಥರಾಗಿದ್ದಾರೆ. ಆಕೆಗೆ ವಿಶ್ವಸಂಸ್ಥೆಯು ಯಂಗ್ ಬಿಸಿನೆಸ್ ಚಾಂಪಿಯನ್ ಪ್ರಶಸ್ತಿಯನ್ನು ಸಹ ನೀಡಿದೆ.

click me!