Latest Videos

Lucky : ಆತ್ಮದ ಮಾತು ಕೇಳಿ ಕೋಟ್ಯಾಧಿಪತಿಯಾದ ವ್ಯಕ್ತಿ..!

By Roopa HegdeFirst Published Jun 11, 2024, 3:35 PM IST
Highlights

ವ್ಯಕ್ತಿ ದಾರಿಯಲ್ಲಿ ಹೋಗ್ತಿದ್ದ.. ಇವತ್ತು ದುಡ್ಡು ಬರುತ್ತೆ ಅಂತ ಆತನಿಗೆ ಅನ್ನಿಸಿತ್ತು. ಅದೃಷ್ಟ ಪರೀಕ್ಷೆ ಮಾಡೋಕೆ ಆತ ಮುಂದಾಗೇಬಿಟ್ಟ.. ಆತನ ನಿರೀಕ್ಷೆಯಂತೆ ಲಕ್ ಬದಲಾಯ್ತು. ರಾತ್ರೋರಾತ್ರಿ ಆತ ಕೋಟ್ಯಾಧಿಪತಿಯಾದ.

ನಮ್ಮ ಜೀವನದಲ್ಲಿ ಕೆಲವೊಂದು ಅದ್ಭುತಗಳು ನಡೆಯುತ್ವೆ. ನಾವದನ್ನು ಗಂಭೀರವಾಗಿ ತೆಗೆದುಕೊಳ್ಳೋದೇ ಇಲ್ಲ. ಇಂದು ಹೀಗೆ ಆಗ್ಬಹುದು ಅಂತ ಒಳ ಮನಸ್ಸು ಹೇಳ್ತಿದ್ದರೂ ಅದೆಷ್ಟೋ ಬಾರಿ ಅದನ್ನು ನಿರ್ಲಕ್ಷ್ಯ ಮಾಡಿರ್ತೇವೆ. ಅದು ಸಂಭವಿಸಿದ ಮೇಲೆ ನನಗೆ ಯಾಕೋ, ಹೀಗೆ ಆಗುತ್ತೆ ಅನ್ನಿಸಿತ್ತು ಅಂತ ಹೇಳ್ತೆವೆ. ಈ ವ್ಯಕ್ತಿ ಜೀವನದಲ್ಲೂ ಇದೇ ಮ್ಯಾಜಿಕ್ ನಡೆದಿದೆ. ಬದಲಾವಣೆ ಆಗ್ಬಹುದು ಅಂತ ಆತ್ಮ ಹೇಳಿದಾಗ ಅದನ್ನು ಬದಿಗೆ ತಳ್ಳದೆ ಕೆಲಸ ಮಾಡಿದ್ದಕ್ಕೆ ಈಗ ಕೋಟ್ಯಾಧಿಪತಿಯಾಗಿದ್ದಾನೆ. 

ಹಣ (Money) ಯಾರಿಗೆ ಬೇಡ ಹೇಳಿ. ಕಷ್ಟಪಟ್ಟು ದುಡಿದು ಹಣ ಗಳಿಸೋದು ಒಂದು ರೀತಿ ಖುಷಿ ನೀಡಿದ್ರೆ ಸ್ವಲ್ಪವೂ ಕಷ್ಟಪಡದೆ ಆದ್ರೆ ಪ್ರಾಮಾಣಿಕವಾಗಿ ನಮ್ಮ ಕೈಗೆ ಹಣ ಬಂದ್ರೆ ಮತ್ತಷ್ಟು ಖುಷಿಯಾಗುತ್ತದೆ. ಕಲ್ಪನೆಗೆ ಮೀರಿದ ಶ್ರೀಮಂತಿಕೆ (Richness) ಲಭಿಸಿದ್ರೆ ನಮ್ಮನ್ನು ಹಿಡಿಯೋರು ಯಾರೂ ಇರೋದಿಲ್ಲ. ಈಗಿನ ಕಾಲದಲ್ಲಿ ದುಡ್ಡಿದ್ದವನೆ ದೊಡ್ಡಪ್ಪ. ಆದ್ರೆ ಎಲ್ಲರ ಅದೃಷ್ಟ ಒಂದೇ ದಿನದಲ್ಲಿ ಬದಲಾಗೋಕೆ ಸಾಧ್ಯವಿಲ್ಲ. ಈ ಅದೃಷ್ಟ (Good Luck) ಪರೀಕ್ಷೆಗೆ ಹೋಗಿ ಅನೇಕರು ನಿತ್ಯ ಕೈಸುಟ್ಟುಕೊಳ್ತಾರೆ. ಜೂಜಿಗೆ ಹಣ ಹಾಕಿ ನಂತ್ರ ಖಾಲಿ ಕೈನಲ್ಲಿ ಬರ್ತಾರೆ. ಮತ್ತೆ ಕೆಲವರು ಲಾಟರಿ (Lottery) ಖರೀದಿ ಮಾಡಿ, ನಂಬರ್ ಬರೋದನ್ನು ಕಾಯ್ತಿರುತ್ತಾರೆ. ಎಷ್ಟೇ ಬಾರಿ ಲಾಟರಿ ಖರೀದಿಸಿದ್ರೂ ಅದೃಷ್ಟದ ಸಂಖ್ಯೆ ಬರೋದೇ ಇಲ್ಲ. ಆದ್ರೆ ಈತ ಖರೀದಿ ಮಾಡಿದ್ದು ಒಂದೇ ಬಾರಿ. ತನ್ನ ಆತ್ಮದ ಮಾತು ಕೇಳಿ ಲಾಟರಿ ಖರೀದಿ ಮಾಡಿದವನ ಅದೃಷ್ಟ ಬೆಳಗಾಗೋದ್ರಲ್ಲಿ ಬದಲಾಗಿದೆ. 

INVESTMENT PLAN : ದಿನಕ್ಕೆ ಕೇವಲ 6 ರೂ. ಕಟ್ಟಿದ್ರೆ ಸಿಗುತ್ತೆ ಮೂರು ಲಕ್ಷ…! ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಯೋಜನೆ

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ದಕ್ಷಿಣ ಕೆರೊಲಿನಾದ ಬ್ಲಫ್ಟನ್‌ನಲ್ಲಿ ವಾಸಿಸುವ ವ್ಯಕ್ತಿಗೆ ಲಾಟರಿ ಹೊಡೆದಿದೆ. ಸೌತ್ ಕೆರೊಲಿನಾ ಎಜುಕೇಷನಲ್ ಲಾಟರಿಯ ವೆಬ್‌ಸೈಟ್ ಪ್ರಕಾರ, ಆತ ನಿತ್ಯ ಲಾಟರಿ ಖರೀದಿ ಮಾಡ್ತಿರಲಿಲ್ಲ. ಆ ದಿನ ಪೆಟ್ರೋಲ್ ಬಂಕ್ ಗೆ ಹೋಗುವ ಸಂದರ್ಭದಲ್ಲಿ ಮನಸ್ಸು ಲಾಟರಿ ಕಡೆ ಸೆಳೆದಿದೆ. ಅಂತರಾತ್ಮ, ಲಾಟರಿ ಖರೀದಿ ಮಾಡುವಂತೆ ಕೂಗಿ ಹೇಳಿದಂತಾಗಿದೆ. ಅಷ್ಟೇ, ಎರಡನೇ ಯೋಚನೆ ಮಾಡದೆ ಲಾಟರಿಗೆ ಕೈ ಹಾಕಿದ್ದಾನೆ. 

ಸ್ಟಾಕ್ಸ್ ಆಫ್ ಕ್ಯಾಶ್ ಎಂಬ ಸ್ಕ್ರ್ಯಾಚ್ ಆಫ್ ಲಾಟರಿ ಪಡೆದಿದ್ದಾನೆ. ಇದಕ್ಕೆ ವ್ಯಕ್ತಿ ಹೆಚ್ಚಿನ ಹಣವನ್ನು ಖರ್ಚು ಮಾಡಿಲ್ಲ. ಹತ್ತು ಡಾಲರ್ ಅಂದ್ರೆ 835 ರೂಪಾಯಿಗೆ ಈ ಸ್ಕ್ರ್ಯಾಚ್ ಆಫ್ ಲಾಟರಿ ಖರೀದಿ ಮಾಡಿದ್ದಾನೆ. 

ವ್ಯಕ್ತಿಯ ಆತ್ಮ ಸುಳ್ಳು ಹೇಳಲಿಲ್ಲ. ಆತ ಏನು ಅಂದ್ಕೊಂಡಿದ್ನೋ ಅದು ಆಯ್ತು. ಕಲ್ಪನೆಗೆ ಮೀರಿದ ಘಟನೆ ಅವನ ಬಾಳಲ್ಲಿ ಆಯ್ತು. ಈ ಸ್ಕ್ರ್ಯಾಚ್ ಆಫ್ ಲಾಟರಿಯಲ್ಲಿ ವ್ಯಕ್ತಿಗೆ 300,000 ಡಾಲರ್ ಅಂದರೆ 2,50,48,110 ರೂಪಾಯಿ ಸಿಕ್ಕಿದೆ. ಇದನ್ನು ಕೇಳ್ತಿದ್ದಂತೆ ವ್ಯಕ್ತಿ ಗಾಳಿಯಲ್ಲಿ ತೇಲಾಡಿದ್ದಾನೆ. ಖುಷಿ ತಡೆಯಲಾರದೆ ಕಚೇರಿಗೆ ಅರ್ಧ ದಿನ ರಜೆ ಹಾಕಿ ಸುತ್ತಾಡಿದ್ದಾನೆ. ಬಂದ ಹಣದಲ್ಲಿ ಸಾಲ ತೀರಿಸುವ ನಿರ್ಧಾರಕ್ಕೆ ಬಂದಿದ್ದಾನೆ.

ಗ್ರಾಹಕರೇ ಇಲ್ಲಿ ನೋಡಿ, ನಿಮ್ಮ ಎಫ್‌ಡಿಗೆ ಭರ್ಜರಿ ಬಡ್ಡಿ ನೀಡುವ ಬ್ಯಾಂಕುಗಳಿವು!

ಈ ಸ್ಕ್ರ್ಯಾಚ್ ಕಾರ್ಡ್ ಪಡೆದು ಅನೇಕರು ಲಕ್ಷಾಧಿಪತಿಗಳಾಗಿದ್ದಾರೆ. ಈ ವರ್ಷ, ಡೀವ್ಸನ್ ಅಲ್ವೆಸ್ ಮಾರ್ಟಿನ್ಸ್ ಗೆ ಈ ಸ್ಕ್ರ್ಯಾಚ್ ಕಾರ್ಡ್ ನಿಂದ 50 ಸಾವಿರ ರೂಪಾಯಿ ಸಿಕ್ಕಿತ್ತು. ಈ ಹಿಂದೆ ಆತ 50 ಡಾಲರ್ ಅಂದ್ರೆ 40 ಸಾವಿರ ರೂಪಾಯಿ ಮೌಲ್ಯದ ಕಾರ್ಡ್ ಖರೀದಿ ಮಾಡಿದ್ದ. ಆತನಿಗೆ ಅದ್ರಿಂದ 8.24 ಕೋಟಿ ಬಹುಮಾನ ಸಿಕ್ಕಿತ್ತು. ಲಾಟರಿ ಮೂಲಕ ತಮ್ಮ ಹಣೆಬರಹ ಬದಲಿಸಿಕೊಂಡ ಅನೇಕರಿದ್ದಾರೆ. ಹಾಗಂತ ಎಲ್ಲರಿಗೂ ಇದು ಒಲಿಯೋ ಸ್ವತ್ತಲ್ಲ. 

click me!