ರೆಸ್ಟೋರೆಂಟ್‌ನಲ್ಲಿ ತಿಂದ ಬಿಲ್ ಪೇ ಮಾಡಿದ್ದಕ್ಕೆ ಬ್ಯಾಂಕ್ ಅಕೌಂಟೇ ಖಾಲಿ!

By Suvarna NewsFirst Published Dec 1, 2023, 2:55 PM IST
Highlights

ಹೊಟೇಲ್ ಗೆ ಹೋದಾಗ ಮೆನ್ಯುವಿನಲ್ಲಿ ಇರೋದೆಲ್ಲ ಬೇಕು ಅನ್ನಿಸೋದು ಸಹಜ. ಮನಸ್ಸು ಕೇಲ್ತಿದೆ ಅಂತ ಎಲ್ಲ ಆರ್ಡರ್ ಮಾಡಿದ್ರೆ ಪರ್ಸ್ ಖಾಲಿ ಆಗುತ್ತೆ. ಆಮೇಲೆ ಈ ವ್ಯಕ್ತಿಯಂತೆ ತಲೆಮೇಲೆ ಕೈಹೊತ್ತು ಕುಳಿತ್ಕೊಳ್ಬೇಕಾಗುತ್ತದೆ.
 

ಹೊಟೇಲ್‌ಗೆ ಹೋಗಿ ಹೊಟ್ಟೆತುಂಬಾ ತಿಂದು ನಂತ್ರ ಕೊಡೋಕೆ ಹಣವಿಲ್ಲದೆ ಅಡುಗೆ ಮನೆಯಲ್ಲಿ ರುಬ್ಬೋ ಕೆಲಸ ಇಲ್ಲವೆ ಪಾತ್ರೆ ತೊಳೆಯೋ ಕೆಲಸ ಮಾಡುವ ಅನೇಕ ದೃಶ್ಯಗಳನ್ನು ನಾವು ಸಿನಿಮಾದಲ್ಲಿ ನೋಡಿರ್ತೇವೆ. ಅವರ ಸ್ಥಿತಿ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿರ್ತೇವೆ. ಆದ್ರೆ ವಾಸ್ತವದಲ್ಲೂ ಇಂಥ ಘಟನೆ ನಡೆಯೋದಿದೆ. 

ಜಗತ್ತಿನ ಎಲ್ಲ ಹೊಟೇಲ್ (Hotel) ನಲ್ಲಿ ಆಹಾರ ಸೇವನೆ ಮಾಡೋದು ಸಾಮಾನ್ಯ ಜನರಿಗೆ ಸುಲಭವಲ್ಲ. ಕೆಲವೊಂದು ಹೊಟೇಲ್ ಗೆ ಹೋಗ್ಬೇಕು ಅಂದ್ರೆ ಪರ್ಸ್ (Purse) ನಲ್ಲಿ ಸಾವಿರ – ಎರಡು ಸಾವಿರ ಹಣವಿದ್ರೆ ಸಾಲೋದಿಲ್ಲ. ಲಕ್ಷಾಂತರ ರೂಪಾಯಿ ಬಿಲ್ ಪಾವತಿ ಮಾಡ್ಬೇಕಾಗುತ್ತದೆ. ಮೆನ್ಯು ನೋಡದೆ ಫುಡ್ (Food) ಆರ್ಡರ್ ಮಾಡಿದ್ರೆ ಬಿಲ್ ಬಂದ್ಮೇಲೆ ಕಣ್ಣೀರಿಡಬೇಕಾಗುತ್ತದೆ. ದೊಡ್ಡ ದೊಡ್ಡ ಹೊಟೇಲ್ ಗೆ ಹೋದಾಗ ಮೆನ್ಯು ನೋಡದೆ ನೀವು ಫುಡ್ ಆರ್ಡರ್ ಮಾಡೋ ತಪ್ಪಿಗೆ ಹೋಗ್ಬೇಡಿ. ಇಲ್ಲ ಅಂದ್ರೆ ಈ ವ್ಯಕ್ತಿಯಂತೆ ಸಮಸ್ಯೆ ಎದುರಿಸಬೇಕಾಗುತ್ತದೆ.  ಲಂಡನ್‌ನ ಅತ್ಯಂತ ದುಬಾರಿ ರೆಸ್ಟೊರೆಂಟ್‌ನಲ್ಲಿ ಆಹಾರ ಸೇವಿಸಲು ಹೋದ ವ್ಯಕ್ತಿ ಬಿಲ್ ನೋಡಿ ದಂಗಾಗಿದ್ದಾನೆ. ಎರಡು ವರ್ಷಗಳ ಹಿಂದೆ ಈ ಘಟನೆ ನಡೆದ್ರೂ ಜನರು ಈಗ್ಲೂ ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಚರ್ಚೆ ನಡೆಸ್ತಾರೆ.

Latest Videos

ONLINE EARNING : ಒಂದು ಫೋಸ್ಟ್ ಗೆ ಲಕ್ಷಾಂತರ ಹಣ ಗಳಿಸುವ ಈ ಮಾಡೆಲ್ ಅಸಲಿಯತ್ ಏನು ಗೊತ್ತಾ?

ಲಂಡನ್ ಹೊಟೇಲ್ ನಲ್ಲಿ ಘಟನೆ : ಈ ಘಟನೆ ಲಂಡನ್ ಪ್ರಸಿದ್ಧ ನುಸ್ರತ್ ಸ್ಟೀಕ್‌ಹೌಸ್ ರೆಸ್ಟೋರೆಂಟ್‌ ನಲ್ಲಿ ನಡೆದಿದೆ. ಈ ಹೊಟೇಲ್ ಲಂಡನ್‌ನ ನೈಟ್ಸ್‌ಬ್ರಿಡ್ಜ್‌ನಲ್ಲಿದೆ. ಟರ್ಕಿಶ್ ಬಾಣಸಿಗ ಸಾಲ್ಟ್ ಬೇ ಇದನ್ನು ನಡೆಸುತ್ತಿದ್ದಾರೆ. 2021 ರಲ್ಲಿ ಲಂಡನ್ ನಲ್ಲಿ ಇದರ ಶಾಖೆ ಆರಂಭವಾಗಿದೆ. ರೆಸ್ಟೋರೆಂಟ್ ಹೊಸದಾಗಿದ್ದರಿಂದ ಹೆಚ್ಚು ಪ್ರಸಿದ್ಧಿಪಡೆದಿತ್ತು. ಎಲ್ಲರಂತೆ ಜಮಿಲ್ ಅಮೀನ್ ಎಂಬ ವ್ಯಕ್ತಿ ಕೂಡ ರೆಸ್ಟೋರೆಂಟ್ ಗೆ ಹೋಗಿದ್ದಾನೆ. ಬರೀ ಆತ ಮಾತ್ರವಲ್ಲ ಆತನ ಜೊತೆ  7 ಸ್ನೇಹಿತರು ಈ ಹೊಟೇಲ್ ಗೆ ಹೋಗಿದ್ದಾರೆ.  ಮಾತನಾಡ್ತಾ ಸ್ನೇಹಿತರೆಲ್ಲ ಆಹಾರ ಆರ್ಡರ್ ಮಾಡಿದ್ದಾರೆ. ಎಲ್ಲ ಮುಗಿದ ಮೇಲೆ ಬಿಲ್ ಬಂದಿದೆ. ಇದನ್ನು ನೋಡಿದ ಜಮಿಲ್ ಅಮೀನ್ ದಂಗಾಗಿದ್ದಾನೆ.

ರೆಸ್ಟೋರೆಂಟ್ ಮಾಡಿದ ಬಿಲ್ ಎಷ್ಟು ಗೊತ್ತಾ? : ಜಮೀನ್ ಅಮೀನ್ 1,812 ಪೌಂಡ್‌ಗಳು ಅಂದರೆ 1.9 ಲಕ್ಷ ರೂಪಾಯಿ ಬಿಲ್ ನೋಡಿ ಕಂಗಾಲಾಗಿದ್ದಾನೆ. ಯಾಕೆಂದ್ರೆ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲ ಹಣವನ್ನು ಅವರು ಈ ರೆಸ್ಟೋರೆಂಟ್ ಗೆ ನೀಡಬೇಕಾಯ್ತು. ಇವರು ಹೆಚ್ಚಿನ ಆಹಾರವನ್ನೇನೂ ಆರ್ಡರ್ ಮಾಡಿರಲಿಲ್ಲ. ಕೆಲವೇ ಕೆಲವು ಆಹಾರಕ್ಕೆ ಇಷ್ಟೊಂದು ಬಿಲ್ ಬಂದಿರೋದು ಅಚ್ಚರಿ ನೀಡಿತ್ತು. ಕೇವಲ 4 ರೆಡ್ ಬುಲ್ ಗಳಿಗೆ 4 ಸಾವಿರಕ್ಕೂ ಹೆಚ್ಚು ಹಣವನ್ನು ಅವರು ನೀಡಿದ್ದರು.  ಸ್ಟೀಕ್ ಗೆ 66 ಸಾವಿರ ರೂಪಾಯಿ ಪಾವತಿ ಮಾಡಿದ್ದರು. ಇಷ್ಟೆಲ್ಲ ಬಿಲ್ ಹಾಕಿರುವ ಈ ರೆಸ್ಟೋರೆಂಟ್ ವಿಶ್ವದ ದುಬಾರಿ ರೆಸ್ಟೋರೆಂಟ್ ಅಲ್ವೇ ಅಲ್ಲ. 

'ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡಬೇಕು..' ಇನ್ಫ್ರಾ ಸೆಕ್ಟರ್‌ನ ಉದ್ಯೋಗಿಗಳಿಗೆ ನಾರಾಯಣ ಮೂರ್ತಿ ಮಾತು!

ವಿಶ್ವದ ದುಬಾರಿ ರೆಸ್ಟೋರೆಂಟ್ ಯಾವುದು ಗೊತ್ತಾ? : ವಿಶ್ವದ ಅತ್ಯಂತ ದುಬಾರಿ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆಯನ್ನು ಸ್ಪೇನ್‌ನ ಸಬ್ಲಿಮೋಷನ್ ರೆಸ್ಟೋರೆಂಟ್ ಗಳಿಸಿದೆ. ಈ ರೆಸ್ಟೋರೆಂಟ್‌ನಲ್ಲಿ  ಆಹಾರದ ಬೆಲೆ ಲಕ್ಷದ ಮೇಲಿದೆ. ಸಬ್ಲಿಮೋಷನ್ ರೆಸ್ಟೋರೆಂಟನ್ನು ಐಬಿಜಾ ದ್ವೀಪದಲ್ಲಿ ನಿರ್ಮಿಸಲಾಗಿದೆ. ನೀವು ಈ ಹೊಟೇಲ್ ನಲ್ಲಿ ಒಂದು ಊಟವನ್ನು ತೆಗೆದುಕೊಂಡ್ರೆ ಸುಮಾರು 1 ಲಕ್ಷದ 29 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಈ ಬೆಲೆಯಲ್ಲಿ ನಾವು ಕನಿಷ್ಠವೆಂದ್ರೂ ಆರು ತಿಂಗಳು ಮನೆಯಲ್ಲಿ ಊಟ ಮಾಡ್ಬಹುದು. ವಿದೇಶಕ್ಕೆ ಅಥವಾ ಬೇರೆ ಊರಿಗೆ ಹೋದಾಗ ಮೆನ್ಯು ನೋಡಿ ನಿಮ್ಮ ಬಜೆಟ್ ಗೆ ಆಹಾರ ಆರ್ಡರ್ ಮಾಡಿ. ಇಲ್ಲ ಅಂದ್ರೆ ಖಾತೆ ಖಾಲಿಯಾಗಿ ಪರದಾಡ್ಬೇಕಾಗುತ್ತೆ. 
 

click me!