Online Earning : ಒಂದು ಫೋಸ್ಟ್ ಗೆ ಲಕ್ಷಾಂತರ ಹಣ ಗಳಿಸುವ ಈ ಮಾಡೆಲ್ ಅಸಲಿಯತ್ ಏನು ಗೊತ್ತಾ?

By Suvarna News  |  First Published Dec 1, 2023, 12:20 PM IST

ಆನ್ಲೈನ್ ನಲ್ಲಿ ಈಗ ಹಣ ಗಳಿಕೆ ಸಾಮಾನ್ಯ. ಹೆಚ್ಚು ಫಾಲೋವರ್ಸ್ ಪಡೆದು, ಹೆಚ್ಚು ಹೆಚ್ಚು ಹಣ ಸಂಪಾದನೆ ಮಾಡಲು ಜನರು ಸಿಕ್ಕಾಪಟ್ಟೆ ಪ್ರಯತ್ನಪಡ್ತಾರೆ. ಆದ್ರೆ ಈ ಮಾಡೆಲ್ ಕಥೆ ಸ್ವಲ್ಪ ಭಿನ್ನವಾಗಿದೆ. ಲಕ್ಷಾಂತರ ಹಣಗಳಿಸುವ ಈಕೆ ಸ್ಟೋರಿ ಓದಿ.
 


ಅತಿ ಶೀಘ್ರದಲ್ಲಿ ಅತಿ ಹೆಚ್ಚು ಹಣ ಸಂಪಾದನೆ ಮಾಡ್ಬೇಕು, ಪ್ರಸಿದ್ಧಿ ಪಡೆಯಬೇಕೆಂದ್ರೆ ಸೋಶಿಯಲ್ ಮಿಡಿಯಾ ಬಳಕೆ ಮಾಡಿ ಎನ್ನುವ ಮಾತು ಈಗ ಕೇಳಿ ಬರ್ತಿದೆ. ಹಿಂದೆ ಪ್ರೀತಿಪಾತ್ರರನ್ನು ಸಂಪರ್ಕಿಸಲು ಸಾಮಾಜಿಕ ಜಾಲತಾಣದ ಬಳಕೆ ಆಗ್ತಾ ಇತ್ತು. ಅನೇಕರು ತಮ್ಮ ಹಳೆ ಸ್ನೇಹಿತರು, ಸಂಬಂಧಿಕರನ್ನು ಇದ್ರಲ್ಲಿ ಕಂಡುಕೊಂಡಿದ್ದರು. ಆದ್ರೀಗ ಸಾಮಾಜಿಕ ಮಾಧ್ಯಮಗಳು ಗಳಿಕೆಯ ಭಾಗವಾಗಿದೆ. ಇಲ್ಲೀಗ ಜನರು ತಮ್ಮ ಫೋಟೋಗಳನ್ನು, ವಿಡಿಯೋಗಳನ್ನು ಆದಾಯ ಗಳಿಸುವ ದೃಷ್ಟಿಯಲ್ಲಿ ಅಪ್ಲೋಡ್ ಮಾಡ್ತಾರೆ. 

ಸಾಮಾಜಿಕ ಜಾಲತಾಣ (Social Media )ದಲ್ಲಿ ಬರೀ ಒಂದು ಫೋಟೋ (Photo) ಕ್ಕೆ ಕೋಟ್ಯಾಂತರ ರೂಪಾಯಿ ಗಳಿಸುವ ಜನರಿದ್ದಾರೆ. ಭಾರತದಲ್ಲಿ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli), ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಹಣ ಗಳಿಸುವ ಆಟಗಾರ. ಕೊಹ್ಲಿ ಒಂದು ಪೋಸ್ಟ್ ಗೆ 11.45 ಕೋಟಿ ಪಡೆಯುತ್ತಾರೆ. ಬರೀ ಸೆಲೆಬ್ರಿಟಿಗಳು ಮಾತ್ರವಲ್ಲ ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಇದ್ರ ಮೂಲಕ ಹಣ ಸಂಪಾದನೆ ಮಾಡ್ತಿದ್ದಾರೆ. ಬರೀ ಭಾರತ ಮಾತ್ರವಲ್ಲ ವಿದೇಶದ ಸೆಲೆಬ್ರಿಟಿಗಳು ಕೂಡ ಟಿಕ್ ಟಾಕ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಎಕ್ಸ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಪಾದನೆ ಮಾಡ್ತಾರೆ. ಅದ್ರಲ್ಲಿ ಬಾರ್ಸಿಲೋನಿಯಾ ಮಾಡೆಲ್ ಕೂಡ ಸೇರಿದ್ದಾಳೆ. ಆಕೆ ಹಣ ಗಳಿಕೆ ಹಾಗೂ ಆಕೆಯ ಅಸಲಿಯತ್ ಬಗ್ಗೆ ನಾವಿಂದು ನಿಮಗೆ ಹೇಳ್ತೇವೆ.

Tap to resize

Latest Videos

ಗರ್ಭಿಣಿಯಾಗಿದ್ದಾಗ ಆನ್‌ಲೈನ್‌ನಲ್ಲಿ ಬಿಸಿನೆಸ್ ಆರಂಭಿಸಿದ್ದ ಮಹಿಳೆ, ಈಗ ಬರೋಬ್ಬರಿ 9,800 ಕೋಟಿ ರೂ. ಉದ್ಯಮದ ಒಡತಿ!

ಜಾಹೀರಾತಿನ ಮೂಲಕ ಲಕ್ಷಾಂತರ ರೂಪಾಯಿ ಗಳಿಸ್ತಾಳೆ ಈ ಮಾಡೆಲ್: ಬಾರ್ಸಿಲೋನಿಯಾದ ಮಾಡೆಲ್ ತನ್ನ ಗಳಿಕೆ ವಿಷ್ಯಕ್ಕೆ ಈಗ ಸುದ್ದಿಗೆ ಬಂದಿದ್ದಾಳೆ. ಆಕೆ ಹೆಸರು ಏಟ್ನಾ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಒಂದು ಲಕ್ಷದ ಎಪ್ಪತ್ತು ಸಾವಿರ ಫಾಲೋವರ್ಸ್ ಹೊಂದಿದ್ದಾಳೆ ಏಟ್ನಾ. ಈಕೆ ಹಣಗಳಿಸಲು ಹೆಚ್ಚಿನದ್ದೇನೂ ಮಾಡ್ಬೇಕಾಗಿಲ್ಲ. ಕಂಪನಿಗಳು ನೀಡುವ ಬಟ್ಟೆ, ಶೂ ಸೇರಿದಂತೆ ಕಂಪನಿ ಉತ್ಪನ್ನಗಳನ್ನು ಧರಿಸಿ ಫೋಟೋ ಅಥವಾ ವಿಡಿಯೋ ಅಪ್ಲೋಡ್ ಮಾಡ್ಬೇಕು. ಕೆಲ ಕಂಪನಿಗಳು ಏಟ್ನಾಗೆ ಲಕ್ಷಾಂತರ ರೂಪಾಯಿ ಗುತ್ತಿಗೆ ನೀಡುತ್ತವೆ. ಅವರು ನೀಡಿದ ವಸ್ತುಗಳ ಜಾಹೀರಾತು ಮಾಡುವುದೇ ಏಟ್ನಾ ಕೆಲಸ. ಇನ್ಸ್ಟಾಗ್ರಾಮ್ ಗೆ ಬರೀ ಫೋಟೋ ಅಪ್ಲೋಡ್ ಮಾಡುವ ಮೂಲಕವೇ ಏಟ್ನಾ ತಿಂಗಳಿಗೆ ಕಡಿಮೆ ಅಂದ್ರೂ ಹತ್ತು ಲಕ್ಷ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. ಆದ್ರೆ ಈ ಮಾಡೆಲ್ ವಾಸ್ತವ ತಿಳಿದ್ರೆ ನೀವು ದಂಗಾಗ್ತೀರಾ.

ಏಟ್ನಾ ಹಿನ್ನೆಲೆ ಏನು ಗೊತ್ತಾ? : ನಾವು ನೀವೆಲ್ಲ ಅಂದುಕೊಂಡಂತೆ ಏಟ್ನಾ ಮನುಷ್ಯಗಳಲ್ಲ. ಆಕೆಯನ್ನು ಜಾಹೀರಾತು ಕಂಪನಿ ಕ್ರಿಯೇಟ್ ಮಾಡಿದೆ. ದಿ ಕ್ಲೂಲೆಸ್ ಹೆಸರಿನ ಕಂಪನಿ ಏಟ್ನಾಳನ್ನು ಸಿದ್ಧಪಡಿಸಿದೆ. ಏಟ್ನಾ ಪ್ರಸಿದ್ಧಿ ಕಂಪನಿಗೆ ಲಾಭ ತಂದುಕೊಟ್ಟಿದೆ. ಆದ್ರೆ ಅನೇಕ ಮಾಡೆಲ್ ಗಳಿಗೆ ಇದ್ರಿಂದ ನಷ್ಟವಾಗ್ತಿದೆ. ಯಾಕೆಂದ್ರೆ ಏಟ್ನಾ ಪ್ರಸಿದ್ಧಿ ನಂತ್ರ ಈ ಕಂಪನಿ ತನ್ನ ಕೆಲಸಕ್ಕೆ ಮನುಷ್ಯರನ್ನು ನೇಮಿಸಿಕೊಳ್ಳುವ ನಿರ್ಧಾರ ಕೈಬಿಟ್ಟಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನೊಂದಿಗೆ ಕೆಲಸ ಮಾಡೋದು ಬಹಳ ಸುಲಭ ಎನ್ನುತ್ತದೆ ದಿ ಕ್ಲೂಲೆಸ್. ಅಲ್ಲದೆ ಇದು ಸದ್ಯ ಟ್ರೆಂಡಿಂಗ್ ನಲ್ಲಿದ್ದು, ಜನರು ಇದ್ರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಇನ್ಮುಂದೆ ಬರಿ ಎಐ ಮಾದರಿಯ ಮಾಡೆಲ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. 

ಉದ್ದ ಕೂದಲು ಭಾರತೀಯ ಸಂಪ್ರದಾಯ: 7 ಅಡಿ 9 ಇಂಚು ಕೂದಲು ಬಿಟ್ಟು ಗಿನ್ನೆಸ್ ದಾಖಲೆ ಪಡೆದ ಯುಪಿ ಮಹಿಳೆ

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಳಿಸುವ ಸೆಲೆಬ್ರಿಟಿ : ವಿಶ್ವದ ವಿಷ್ಯಕ್ಕೆ ಬಂದ್ರೆ ಕ್ರಿಸ್ಟಿಯಾನೋ ರೊನಾಲ್ಡೊ ಸಾಮಾಜಿಕ ಜಾಲತಾಣದ ಮೂಲಕ ಅತಿ ಹೆಚ್ಚು ಹಣ ಸಂಪಾದನೆ ಮಾಡ್ತಾರೆ. ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ.  
 

click me!