ಕುಡಿದು ಮನೆಯಲ್ಲಿಟ್ಟಿದ್ದ ಖಾಲಿ ಬಿಯರ್ ಬಾಟಲಿ ಮಾರಿಯೇ ಕೋಟ್ಯಾಧಿಪತಿಯಾದ!

By Suvarna News  |  First Published May 9, 2024, 6:50 PM IST

ಬಿಯರ್ ಕುಡಿದು ಬಾಟಲಿಯನ್ನು ಜನರು ಕಸಕ್ಕೆಸೆಯುತ್ತಾರೆ. ಆದ್ರೆ ಈತ ಎಲ್ಲವನ್ನು ಮನೆ ತುಂಬಿಸಿಕೊಂಡಿದ್ದ. ಬಾಟಲಿ ಸಂಖ್ಯೆ ಎಷ್ಟಾಯ್ತು ಅಂದ್ರೆ ಐದು ಬೆಡ್ ರೂಮ್ ಫುಲ್ ಆಯ್ತು. ಗತಿಯಿಲ್ಲದೆ ಮಾರಾಟಕ್ಕೆ ಇಳಿದವ ಈಗ ಲಕ್ಷ ಲಕ್ಷ ಗಳಿಸಿದ್ದಾನೆ.
 


ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದ್ರಿಂದ ರೋಗ ಕಾಣಿಸಿಕೊಳ್ಳುವುದಲ್ಲದೆ ಜೇಬು ಖಾಲಿಯಾಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬಿಯರ್ ಸೇವನೆ ಮಾಡಿ ಒಂದ್ಕಡೆ ಪರ್ಸ್ ಖಾಲಿ ಮಾಡ್ಕೊಂಡಿದ್ರೆ ಮತ್ತೊಂದು ಕಡೆ ಖಾಲಿ ಬಿಯರ್ ಬಾಟಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡಿದ್ದಾನೆ. ಬಿಯರ್ ಸೇವನೆ ಮಾಡ್ತಿದ್ದ ವ್ಯಕ್ತಿ ಒಂದೇ ಒಂದು ಕ್ಯಾನ್ ಹೊರಗೆ ಎಸೆದಿರಲಿಲ್ಲ. ಎಲ್ಲ ಬಿಯರ್ ಕ್ಯಾನ್ ಸಂಗ್ರಹಿಸಿ ಇಟ್ಟುಕೊಂಡಿದ್ದ. ಅದೇ ಈಗ ಆತನನ್ನು ಶ್ರೀಮಂತನನ್ನಾಗಿ ಮಾಡಿದೆ. ನಿವೃತ್ತಿ ನಂತ್ರ ಕೈನಲ್ಲಿ ಹಣ ಇರಲು ಇದೇ ಬಿಯರ್ ಕ್ಯಾನ್ ಕಾರಣವಾಗಿದೆ. 

ಉತ್ತರ ಸೋಮರ್‌ಸೆಟ್‌ (North Somerset) ನಿಂದ ಈ ವರದಿ ಬಂದಿದೆ. ಅಲ್ಲಿನ ನಿವಾಸಿ 65 ವರ್ಷದ ನಿಕ್ ವೆಸ್ಟ್ ಕಳೆದ 42 ವರ್ಷಗಳಿಂದ ಬಿಯರ್ (Beer) ಕ್ಯಾನ್ ಸಂಗ್ರಹಿಸಿದ್ದಾನೆ. 42 ವರ್ಷಗಳಿಂದ ನಿಕ್ ವೆಸ್ಟ್ ಸಂಗ್ರಹಿಸಿದ ಬಿಯರ್ ಕ್ಯಾನ್ ಗಳ ಸಂಖ್ಯೆ ಸಾವಿರದಲ್ಲಿದೆ. ಆತ 10,300 ಬಿಯರ್ ಕ್ಯಾನ್ ಸಂಗ್ರಹಿಸಿದ್ದಾನೆ. ಪ್ರತಿ ವರ್ಷ ನಿಕ್, 150ರಿಂದ 250 ಕ್ಯಾನ್ ಸಂಗ್ರಹಿಸಿದ್ದಾನೆ. ಬಿಯರ್ ಕ್ಯಾನ್ ಸಂಗ್ರಹಿಸುತ್ತದ್ದ ಅವನಿಗೆ ಅದನ್ನು ಇಡಲು ಜಾಗ ಸಾಲಲಿಲ್ಲ. ಹಾಗಾಗಿ ಅದರ ಮಾರಾಟಕ್ಕೆ ಮುಂದಾಗಿದ್ದಾನೆ. ಹಳೆ ಬಿಯರ್ ಕ್ಯಾನ್ ಇಷ್ಟೊಂದು ದರಕ್ಕೆ ಮಾರಾಟವಾಗಿದ್ದನ್ನು ನೋಡಿ ಆತ ಖುಷಿಯಾಗಿದ್ದಾನೆ.

Tap to resize

Latest Videos

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹೆಚ್ಚಿದ ಘೋಸ್ಟ್ ಮಾಲ್; ಕೋಟ್ಯಂತರ ರೂಪಾಯಿ ನಷ್ಟ

ನಿಕ್ ವೆಸ್ಟ್ ಪ್ರಕಾರ ಆತ 16 ವರ್ಷದವನಿದ್ದಾಗ ಈ ಸಂಗ್ರಹಿಸುವ ಹವ್ಯಾಸ ಶುರುವಾಯ್ತು. ಆತ ಮೊದಲು ಅಂಚೆಚೀಟಿಯನ್ನು ಸಂಗ್ರಹಿಸುತ್ತಿದ್ದ. ಈ ಸಮಯದಲ್ಲೇ ಬಿಯರ್ ಕುಡಿಯೋಕೆ ಶುರು ಮಾಡಿದ್ದ ನಿಕ್ ವೆಸ್ಟ್ ಗೆ ಇದನ್ನೂ ಸಂಗ್ರಹಿಸುವ ಬಯಕೆ ಆಯ್ತು. 1976 ರಲ್ಲಿ ಮೊದಲ ಬಾರಿ ಬಿಯರ್ ಕ್ಯಾನ್ ಮನೆ ಮೂಲೆ ಸೇರಿತ್ತು. ಒಂದೇ ಒಂದು ಬಿಯರ್ ಬಾಟಲಿಯನ್ನು ನಿಕ್ ಕಸಕ್ಕೆ ಹಾಕಿರಲಿಲ್ಲ. ಆತನ ಸಂಗ್ರಹ ಎಷ್ಟಾಯಿತೆಂದ್ರೆ ಅದನ್ನು ಇಡಲು ಜಾಗ ಸಾಕಾಗಲಿಲ್ಲ. ಆತ ಮನೆಯ ಹಿಂದೆ ಬಿಯರ್ ಬಾಟಲಿ ಇಡಲು ಒಂದು ಶೆಡ್ ನಿರ್ಮಿಸಿದ್ದ. ಆದ್ರೆ ಆ ಶೆಡ್ ಕೂಡ ಬಿಯರ್ ಬಾಟಲಿಯಿಂದ ತುಂಬಿತ್ತು. ಹಾಗಾಗಿ ನಿಕ್ ವೆಸ್ಟ್, ಐದು ಬೆಡ್ ರೂಮಿನ ಮನೆ ಖರೀದಿ ಮಾಡಿ ಅದರಲ್ಲಿ ಬಿಯರ್ ಬಾಟಲಿ ಇಡಲು ಆರಂಭಿಸಿದ್ದ. 

ನಿಕ್ ವೆಸ್ಟ್ ನಿವೃತ್ತಿ ಹೊಂದಬೇಕಾಯ್ತು. ಆಗ ಆತನ ಕೈನಲ್ಲಿ ಹಣವಿರಲಿಲ್ಲ. ಮನೆಯನ್ನು ಬದಲಿಸುವ ಸ್ಥಿತಿ ಕೂಡ ಬಂತು. ಹಾಗಾಗಿ ಬಿಯರ್ ಬಾಟಲಿಯನ್ನು ಮಾರಾಟ ಮಾಡುವ ಆಲೋಚನೆ ಮಾಡಿದ. ಮೊದಲು ನಿಕ್ ವೆಸ್ಟ್ 6000 ಬಿಯರ್ ಬಾಟಲಿಯನ್ನು ಮಾರಾಟ ಮಾಡಿದ. ಆತನಿಗೆ 13500 ಡಾಲರ್ ಅಂದ್ರೆ ಸುಮಾರು 14 ಲಕ್ಷ ರೂಪಾಯಿ ಸಿಕ್ತು. ಅದಾದ್ಮೇಲೆ ನಿಕ್ ವೆಸ್ಟ್, 1800 ಕ್ಯಾನ್ ಮಾರಾಟ ಮಾಡಿದ್ದಾನೆ. ಇದನ್ನು ಇಟಲಿಯಲ್ಲಿ ಬಿಯರ್ ಕ್ಯಾನ್ ಡೀಲರ್‌ ಖರೀದಿ ಮಾಡಿದ್ದರು. ಇದಲ್ಲದೆ ನಿಕ್ ವೆಸ್ಟ್, ಬ್ರಿಟನ್ ಮ್ಯೂಸಿಯಂಗೆ ಒಂದಿಷ್ಟು ಸುಂದರ ಬಿಯರ್ ಬಾಟಲಿ ಮಾರಾಟ ಮಾಡಿದ್ದಾನೆ. ಇದರಿಂದ 12500 ಡಾಲರ್ ಸಿಕ್ಕಿದೆ.

ಪನೀರ್ ಆರ್ಡರ್ ಮಾಡಿದ್ದೆ, ಚಿಕನ್ನಲ್ಲ; 50 ಲಕ್ಷ ರೂ ಪರಿಹಾರ ಕೇಳಿದ ಮಹಿಳೆ!

ನಿಕ್ ವೆಸ್ಟ್ ಬಳಿ ಇನ್ನೂ 1500 ಬಿಯರ್ ಬಾಟಲಿ ಉಳಿದಿದೆ. ಅವುಗಳಲ್ಲಿ ಮೂರು ಅಪರೂಪವಾಗಿದ್ದು ಎನ್ನುವ ಕಾರಣಕ್ಕೆ ನಿಕ್ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಹೈನೆಕೆನ್ 275 ಮಿಲಿ , 275 ಮಿಲಿ ಹಲ್ ಬ್ರೆವರಿ ನಟ್ ಬ್ರೌನ್ ಎಲ್, 330ml ನಿಕ್ ವೆಸ್ಟ್ ರೂಬಿ ಅಲೆ ಹೆಸರಿನ ಮೂರು ಕ್ಯಾನ್ ಗಳನ್ನು ನಿಕ್ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಮೊದಲ ಬಾಟಲಿಯನ್ನು ನಿಕ್, 1975ರಲ್ಲಿ ಖರೀದಿ ಮಾಡಿದ್ದ. 1936ರ ಅತ್ಯಂತ ಹಳೆಯ ಬಿಯರ್ ಕ್ಯಾನ್ ಕೂಡ ನಿಕ್ ಬಳಿ ಇದೆ.

click me!