ಗಳಿಕೆಗೆ ನಾನಾ ದಾರಿಗಳಿವೆ. ಮನೆಯಲ್ಲಿಯೇ ಕುಳಿತು ಹಣ ಗಳಿಸುವ ಟ್ರೆಂಡ್ ಹೆಚ್ಚಾಗಿದೆ. ನಿಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ನೀವು ಶಿಕ್ಷಕರಾಗಬಹುದು. ಆರಾಮವಾಗಿ ಬಿಡುವಿನ ಸಮಯದಲ್ಲಿ ಕೆಲವೇ ವಸ್ತುಗಳನ್ನು ಬಳಸಿಕೊಂಡು ನೀವು ಹಣ ಗಳಿಸಬಹುದು.
ಮನೆಯಲ್ಲೆ ಕುಳಿತು ಹಣ ಗಳಿಸಲು ಈಗ ಸಾಕಷ್ಟು ಅವಕಾಶವಿದೆ. ಎಲ್ಲರ ಕೈನಲ್ಲೂ ಮೊಬೈಲ್, ಲ್ಯಾಪ್ ಟಾಪ್ ಇದ್ದೇ ಇರುತ್ತೆ. ಇದನ್ನು ಬಳಸಿಕೊಂಡು, ಬಿಡುವಿನ ಸಮಯದಲ್ಲಿ ನೀವು ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಜನರು ಆನ್ಲೈನ್ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಯುಟ್ಯೂಬ್ ನಲ್ಲಿ ನೀವು ಶಿಕ್ಷಣಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನೋಡಬಹುದು. ಅನೇಕರು ಯುಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಣ ಮಾಡ್ತಿದ್ದಾರೆ. ಯುಟ್ಯೂಬ್ ಮೂಲಕ ಹಣ ಗಳಿಸಲು ನೀವು 1000 ಸಬ್ಸ್ಕ್ರೈಬರ್ ಹಾಗೂ 4000 ವೀಕ್ಷಣೆ ಸಮಯ ಹೊಂದಿರಬೇಕು. ಅದಾದ ನಂತ್ರ ನಿಮ್ಮ ಗಳಿಕೆ ಶುರುವಾಗುತ್ತದೆ. ಆದ್ರೆ ಕೆಲ ವೆಬ್ಸೈಟ್ ಗಳು ನೀವು ವಿಡಿಯೋ ಹಾಕಿದಾಗಿನಿಂದಲೇ ನಿಮಗೆ ಹಣ ನೀಡುತ್ತವೆ. ಇದಕ್ಕಾಗಿ ನೀವು ಕಚೇರಿಗೆ ಹೋಗ್ಬೇಕಾಗಿಲ್ಲ. ಇಲ್ಲವೇ ವಿಶೇಷ ಕೌಶಲ್ಯ ಕಲಿಯಬೇಕಾಗಿಲ್ಲ. ನಿಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ನೀವು ಗಳಿಕೆ ಆರಂಭಿಸಬಹುದು.
ನಾವು ಇಂದು ಹೇಳ್ತಿರೋದು ಸ್ಕಿಲ್ ಶೇರ್ (Skillshare) ವೆಬ್ಸೈಟ್ ಬಗ್ಗೆ. ನಿಮಗೆ ಇಲ್ಲಿ ಗಳಿಸಲು ಒಳ್ಳೆಯ ಅವಕಾಶವಿದೆ. ನಿಮಗೆ ಯಾವ ಕೌಶಲ್ಯ ತಿಳಿದಿದೆಯೋ ಅದರ ವಿಡಿಯೋ (Video) ಮಾಡಿ ನೀವು ಅಪ್ಲೋಡ್ ಮಾಡ್ಬೇಕು. ಈ ವೆಬ್ಸೈಟ್ (Website) ನಿಮಗೆ ಎರಡು ರೀತಿಯಲ್ಲಿ ಗಳಿಕೆಗೆ ಅವಕಾಶ ನೀಡುತ್ತದೆ. ನೀವು ಮಾಡಿದ ವಿಡಿಯೋವನ್ನು ವೀಕ್ಷಕರು ಎಷ್ಟು ವೀಕ್ಷಣೆ ಮಾಡಿದ್ದಾರೆ ಎಂಬ ಆಧಾರದ ಮೇಲೆ ಹಣ ನೀಡುತ್ತದೆ. ಇನ್ನೊಂದು ನೀವು ನಿಮ್ಮ ಸ್ನೇಹಿತರಿಗೆ ಲಿಂಕ್ ಶೇಷ್ ಮಾಡಬಹುದು. ಈ ಲಿಂಕ್ ಸ್ನೇಹಿತರು ಓಪನ್ ಮಾಡಿ, ಸೈನ್ ಇನ್ ಮಾಡಿದ ನಂತ್ರ ನಿಮಗೆ ಕಂಪನಿ ಹಣ ನೀಡುತ್ತದೆ.
ಚಿತ್ರಕಲೆ, ಡಾನ್ಸ್, ಸಂಗೀತ, ಕರಕುಶಲ ವಸ್ತು ತಯಾರಿಕೆ ಹೀಗೆ ನೀವು ಯಾವುದರಲ್ಲಿ ನಿಪುಣತೆ ಹೊಂದಿದ್ದೀರಿ ಎಂಬುದರ ಮೇಲೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ವಾರದಲ್ಲಿ ಎರಡು, ವಾರದಲ್ಲಿ ಒಂದು ಅಥವಾ ವಾರ ಪೂರ್ತಿ ನೀವು ವಿಡಿಯೋ ಹಂಚಿಕೊಳ್ಳಬಹುದು. ಇಡೀ ತಿಂಗಳಲ್ಲಿ ನಿಮ್ಮ ವಿಡಿಯೋವನ್ನು 10 ಸಾವಿರ ನಿಮಿಷ ವೀಕ್ಷಿಸಲಾಗಿದೆ ಎಂದಾದ್ರೆ ನೀವು 500 ರಿಂದ 1000 ಡಾಲರ್ ಪಡೆಯುತ್ತೀರಿ. ಅಂದ್ರೆ ಭಾರತೀಯ ರೂಪಾಯಿ ಪ್ರಕಾರ ನಿಮಗೆ 40 ರಿಂದ 80 ಸಾವಿರ ರೂಪಾಯಿ ಸಿಗುತ್ತದೆ. ನಿಮ್ಮ ಖಾತೆ ಆಧಾರದ ಮೇಲೆ ಸ್ನೇಹಿತರು ಖಾತೆ ತೆರೆದಾಗ ನೀವು 10 ಡಾಲರ್ ಪಡೆಯುತ್ತೀರಿ.
ಮಹಿಳೆಯರು ಹೆಚ್ಚು ರಿಸ್ಕ್ ಇಲ್ಲದೇ ಮಾಡೋ ಬ್ಯುಸಿನೆಸ್ ಇದು!
ಇದನ್ನು ಶುರು ಮಾಡಲು ನಿಮ್ಮ ಬಳಿ ಮೊಬೈಲ್ ಅಥವಾ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೌಲಭ್ಯವಿದ್ದರೆ ಸಾಕು. ನೀವು ಯಾವ ಗುಣಮಟ್ಟದ ವಿಡಿಯೋ ಅಪ್ಲೋಡ್ ಮಾಡ್ತೀರಿ ಎಂಬ ಆಧಾರದ ಮೇಲೆ ನಿಮ್ಮ ಗಳಿಕೆ ನಿಂತಿರುತ್ತದೆ.
ನೀವು https://www.skillshare.com/ ಗೆ ಹೋಗಬೇಕಾಗುತ್ತದೆ. ಅದ್ರಲ್ಲಿ ಫ್ರೀಯಾಗಿ ಪ್ರಾರಂಭಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಸೈನ್ ಇನ್ ಮಾಡ್ಬೇಕು. ಅಲ್ಲಿ ನೀವು ಮೂರು ರೀತಿಯಲ್ಲಿ ಖಾತೆಯನ್ನು ರಚಿಸಬಹುದು. ನಿಮ್ಮ ಫೇಸ್‌ಬುಕ್‌ನೊಂದಿಗೆ ನೀವು ಲಾಗಿನ್ ಮಾಡಬಹುದು. ಜಿ-ಮೇಲ್ ಮೂಲಕ ಖಾತೆಯನ್ನು ಲಾಗಿನ್ ಮಾಡಬಹುದು. ಇಲ್ಲವೆ ಲ್ಯಾಪ್‌ಟಾಪ್ ಹೊಂದಿದ್ದರೆ ನೀವು ಅಲ್ಲಿಂದ ಲಾಗಿನ್ ಮಾಡಬಹುದು.
Business Idea : ಹತ್ತು ಸಾವಿರಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಈ ಬ್ಯುಸಿನೆಸ್
ಲಾಗಿನ್ ಆದ ನಂತರ ನೀವು ಹಣ ಪಾವತಿ ಮಾಡಬೇಕಾಗುತ್ತದೆ. ಈ ಸೇವೆಗೆ ನೀವು ಹಣ ನೀಡಬೇಕು. ಆದ್ರೆ ಇದು ಬಹಳ ಕಡಿಮೆ. ಒಂದು ತಿಂಗಳಿಗೆ 150 ರೂಪಾಯಿ. 7 ದಿನ ನಿಮಗೆ ಟ್ರಯಲ್ ಇರುತ್ತದೆ. ಆ ಸೇವೆ ಉಚಿತ. ಹಾಗಾಗಿ ನೀವು 7 ಟ್ರಯಲ್ ನೋಡಿ, ಇಷ್ಟವಾದ್ರೆ ಸೇವೆ ಮುಂದುವರಿಸಬಹುದು. ಒಂದ್ವೇಳೆ ಕೆಲಸ ಮಾಡುವ ಇಚ್ಛೆ ಇಲ್ಲವೆಂದ್ರೆ ನೀವು ನಿಮ್ಮ ಯೋಜನೆಯನ್ನು ರದ್ದುಗೊಳಿಸಬಹುದು.