ಆನಂದ್‌ ಮಹಿಂದ್ರಾ ಚಿಕ್ಕಪ್ಪ, ಮಹೀಂದ್ರಾ ಅಂಡ್‌ ಮಹೀಂದ್ರಾ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಇನ್ನಿಲ್ಲ

Published : Apr 12, 2023, 12:50 PM IST
ಆನಂದ್‌ ಮಹಿಂದ್ರಾ ಚಿಕ್ಕಪ್ಪ, ಮಹೀಂದ್ರಾ ಅಂಡ್‌ ಮಹೀಂದ್ರಾ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಇನ್ನಿಲ್ಲ

ಸಾರಾಂಶ

ಕೇಶುಬ್‌ ಮಹಿಂದ್ರಾ ಅವರು 1948 ರಲ್ಲಿ ಮಹೀಂದ್ರಾ ಹಾಗೂ ಮಹೀಂದ್ರಾ  ಬೋರ್ಡ್‌ಗೆ ಸೇರಿದ್ದರು ಮತ್ತು 1963 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ 48 ವರ್ಷಗಳ ಅಧ್ಯಕ್ಷರ ಅವಧಿಯಲ್ಲಿ, ಮಹೀಂದ್ರಾ ಗ್ರೂಪ್ ಆಟೋಮೊಬೈಲ್ ತಯಾರಕರಾಗಿ ಐಟಿ, ರಿಯಲ್ ಎಸ್ಟೇಟ್, ಹಣಕಾಸು ಸೇವೆಗಳು ಮತ್ತು ಆತಿಥ್ಯ ಮುಂತಾದ ಇತರ ವ್ಯಾಪಾರ ವಿಭಾಗಗಳಿಗೆ ವಿಸ್ತರಿಸಿತು.

ಮುಂಬೈ (ಏಪ್ರಿಲ್ 12, 2023): ಲೆಜೆಂಡರಿ ಹಿರಿಯ ಕೈಗಾರಿಕೋದ್ಯಮಿ ಮತ್ತು ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಬುಧವಾರ ಬೆಳಗ್ಗೆ ಮುಂಬೈನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದ್ದು, ಮಹೀಂದ್ರಾ ಹಾಗೂ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಇತರ ಸಂಬಂಧಿಕರನ್ನು ಅಗಲಿದ್ದಾರೆ.

ಕೇಶುಬ್ ಮಹೀಂದ್ರಾ ಅವರು ಆಗಸ್ಟ್ 2012 ರಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷರಾಗಿ ನಿವೃತ್ತರಾದರು ಮತ್ತು ನಂತರ ಆನಂದ್ ಮಹೀಂದ್ರಾ ಅವರು ಸಂಘಟಿತ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ತಾವು ನಿವೃತ್ತರಾದ ಬಳಿಕ ಮಹೀಂದ್ರಾ ಹಾಗೂ ಮಹೀಂದ್ರಾ ಬೋರ್ಡ್‌ಗೆ ಈ ಬಗ್ಗೆ ಮಾಹಿತಿ ನೀಡಿದ ಕೇಶುಬ್‌ ಮಹಿಂದ್ರಾ, ಆನಂದ್‌ ಮಹೀಂದ್ರಾಗೆ ಅಧಿಕಾರ ನೀಡಿದ್ರು. ಬಳಿಕ, ಕೇಶುಬ್ ಅವರು ನಿವೃತ್ತಿಯ ನಂತರ ಸಂಸ್ಥೆಯ ಛೇರ್‌ಮನ್‌ ಎಮೆರಿಟಸ್‌ ಆದರು. 

ಇದನ್ನು ಓದಿ: ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ

ಇನ್ನು, ಉದ್ಯಮಿ ಕೇಶುಬ್‌ ಮಹೀಂದ್ರಾ ಅವರು ಭಾರತದ ಅತ್ಯಂತ ಹಳೆಯ ಬಿಲಿಯನೇರ್‌ ಎನಿಸಿಕೊಂಡಿದ್ದಾರೆ. ಅವರು 1.2 ಬಿಲಿಯನ್‌ ಡಾಲರ್‌ನಷ್ಟು ಆಸ್ತಿ ಮೌಲ್ಯ ಹೊಂದಿದ್ದರು ಎಂದು ಫೋರ್ಬ್ಸ್‌ ಮಾಹಿತಿ ನೀಡಿದೆ. 

ಕೇಶುಬ್‌ ಮಹಿಂದ್ರಾ ಅವರು 1948 ರಲ್ಲಿ ಮಹೀಂದ್ರಾ ಹಾಗೂ ಮಹೀಂದ್ರಾ  ಬೋರ್ಡ್‌ಗೆ ಸೇರಿದ್ದರು ಮತ್ತು 1963 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ 48 ವರ್ಷಗಳ ಅಧ್ಯಕ್ಷರ ಅವಧಿಯಲ್ಲಿ, ಮಹೀಂದ್ರಾ ಗ್ರೂಪ್ ಆಟೋಮೊಬೈಲ್ ತಯಾರಕರಾಗಿ ಐಟಿ, ರಿಯಲ್ ಎಸ್ಟೇಟ್, ಹಣಕಾಸು ಸೇವೆಗಳು ಮತ್ತು ಆತಿಥ್ಯ ಮುಂತಾದ ಇತರ ವ್ಯಾಪಾರ ವಿಭಾಗಗಳಿಗೆ ವಿಸ್ತರಿಸಿತು.
ಕೇಶುಬ್‌ ಮಹೀಂದ್ರಾ ಅವರು ವಿಲ್ಲಿಸ್ ಕಾರ್ಪೊರೇಷನ್, ಮಿತ್ಸುಬಿಷಿ, ಇಂಟರ್ರ್‌ನ್ಯಾಷನಲ್‌ ಹಾರ್ವೆಸ್ಟರ್, ಯುನೈಟೆಡ್ ಟೆಕ್ನಾಲಜೀಸ್, ಬ್ರಿಟಿಷ್ ಟೆಲಿಕಾಂ ಮತ್ತು ಇತರ ಅನೇಕ ಜಾಗತಿಕ ಮೇಜರ್ಗಳೊಂದಿಗೆ ವ್ಯಾಪಾರ ಮೈತ್ರಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: Viral Video : ಈ ಮಹಿಳೆ ಬಟ್ಟೆ ಮಡಿಸುವ ಟೆಕ್ನಿಕ್ ಗೆ ಆನಂದ್ ಮಹೀಂದ್ರಾ ಫಿದಾ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Rules Change: ಕ್ಯಾಲೆಂಡರ್ ಪೇಜ್ ಮಾತ್ರವಲ್ಲ, ಜುಲೈ 1ರಿಂದ LPG, ಆಧಾರ್‌ ಕಾರ್ಡ್‌ನಲ್ಲಿ ಬದಲಾವಣೆ
Gold ETF: ಗೋಲ್ಡ್ ಇಟಿಎಫ್ ಅಂದ್ರೇನು? ಜನರು ಮುಗಿಬಿದ್ದು ಇದ್ರಲ್ಲಿ ಹೂಡಿಕೆ ಮಾಡ್ತಿರೋದು ಯಾಕೆ?