ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಏ.1ರಿಂದ ಲಭ್ಯ; ಹೂಡಿಕೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Mar 28, 2023, 5:57 PM IST

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲು ಏ.1ರಿಂದ ಅವಕಾಶ ನೀಡಲಾಗುವುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಹಾಗಾದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 


Business Desk:2023ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಘೋಷಿಸಿದ್ದರು. ಇದು ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ಯೋಜನೆ. ಮಹಿಳಾ ಸಮ್ಮಾನ್ ಉಳಿತಾಯ ಪತ್ರದಲ್ಲಿ ಮಹಿಳೆಯರು ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಈ ಬಡ್ಡಿ ದರ ಸ್ಥಿರವಾಗಿದ್ದು, ಬದಲಾವಣೆ ಆಗೋದಿಲ್ಲ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಪರಿಚಯಿಸಲಾಗಿದೆ. ಇದು ಮಹಿಳೆಯರಿಗೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದಾದ ಯೋಜನೆಯಾಗಿದೆ. ಈ ಯೋಜನೆ  2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಭಾಗಶಃ ಹೂಡಿಕೆ ಹಿಂಪಡೆಯುವ ಸೌಲಭ್ಯವನ್ನು ಕೂಡ  ಇದರಲ್ಲಿ ಕಲ್ಪಿಸಲಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಒಂದೇ ಬಾರಿಗೆ ಮಾಡಬಹುದಾದ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ.  ಈ ಪ್ರಮಾಣಪತ್ರ 2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿದೆ. ಮಹಿಳೆ ಅಥವಾ ಹೆಣ್ಣುಮಕ್ಕಳ ಹೆಸರಿನಲ್ಲಿ ಎರಡು ವರ್ಷಗಳ ಅವಧಿಗೆ 2ಲಕ್ಷ ರೂ. ಠೇವಣಿಯಿಡಲು ಈ ಯೋಜನೆ ಅವಕಾಶ ಕಲ್ಪಿಸಿದೆ.

ಏನಿದು ಮಹಿಳಾ ಸಮ್ಮಾನ ಉಳಿತಾಯ ಪತ್ರ?
ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಬಾರಿಗೆ 2ಲಕ್ಷ ರೂ. ಹೂಡಿಕೆ ಮಾಡಬಹುದು. ಇದು ಎರಡು ವರ್ಷಗಳ ಅವಧಿಯ ಯೋಜನೆಯಾಗಿದೆ.

Tap to resize

Latest Videos

ದೇಶದ ಮೊದಲ ಅಗರಬತ್ತಿ ಪಾರ್ಕ್ ಗೆ ಮಹಿಳೆಯರೇ ಸಾರಥಿಗಳು; ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಬಡ್ಡಿದರ ಎಷ್ಟು?
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಮಾಡಿದ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಹಾಗೆಯೇ ಭಾಗಶಃ ವಿತ್ ಡ್ರಾ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸ್ಥಿರ ಠೇವಣಿಗಳಿಗೆ ಪರ್ಯಾಯವಾದ ಉಳಿತಾಯ ಯೋಜನೆಯಾಗಿದೆ. 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸಿಗುವ ರಿಟರ್ನ್ ಬ್ಯಾಂಕ್ ಎಫ್ ಡಿಗಿಂಯ ಹೆಚ್ಚಿದೆ. ಹಾಗೆಯೇ ಭಾಗಶಃ ವಿತ್ ಡ್ರಾಗೆ ಕೂಡ ಅವಕಾಶ ಕಲ್ಪಿಸಲಾಗಿದೆ' ಎಂದು ಬ್ಯಾಂಕ್ ಬಜಾರ್ ಡಾಟ್ ಕಾಮ್ ಸಿಇಒ ಅದಿಲ್ ಶೆಟ್ಟಿ ತಿಳಿಸಿದ್ದಾರೆ. 

ಬಿಡುಗಡೆ ಯಾವಾಗ? 
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ತೆರಿಗೆ ಸ್ವರೂಪ ಇನ್ನಷ್ಟೇ ತಿಳಿಯಬೇಕಿದೆ. ಹಾಗೆಯೇ ಈ ಯೋಜನೆ 2023ರ ಏಪ್ರಿಲ್ 1ರಿಂದ ಲಭ್ಯವಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?
ದೇಶಾದ್ಯಂತ ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಿಸಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳು ವಿಶೇಷ ಆಂದೋಲನ ಹಾಗೂ ಕ್ಯಾಂಪೇನ್ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪ್ರಚುರಪಡಿಸುವಂತೆ ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. 

Social Media Influencers :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?

ಸುಕನ್ಯಾ ಸಮೃದ್ಧಿ ಹಾಗೂ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ
ಸುಕನ್ಯಾ ಸಮೃದ್ಧಿ ಯೋಜನೆ ಭಾರತ ಸರ್ಕಾರದ ಸಣ್ಣ ಠೇವಣಿ ಯೋಜನೆಯಾಗಿದೆ. ಇದು ಹೆಣ್ಣುಮಕ್ಕಳಿಗಾಗಿಯೇ ರೂಪಿಸಲಾಗಿರುವ ಯೋಜನೆಯಾಗಿದೆ. ಹೆಣ್ಣುಮಕ್ಕಳ ಶೈಕ್ಷಣಿಕ ಹಾಗೂ ವಿವಾಹ ವೆಚ್ಚಗಳನ್ನು ಭರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳಲ್ಲಿನ ಠೇವಣಿಗಳಿಗೆ ಪ್ರಸ್ತುತ ವಾರ್ಷಿಕ ಶೇ.7.6 ಬಡ್ಡಿ ನೀಡಲಾಗುತ್ತಿದೆ. 10 ವರ್ಷದ ತನಕದ ಹೆಣ್ಣುಮಗುವಿನ ಹೆಸರಿನಲ್ಲಿ ಖಾತೆ ತೆರೆಯಲು ಅವಕಾಶವಿದೆ. ಈ ಖಾತೆಯಲ್ಲಿ ಠೇವಣಿಯಿಡುವ ಒಟ್ಟು ಮೊತ್ತ ಒಂದು ಆರ್ಥಿಕ ಸಾಲಿನಲ್ಲಿ 1,50,000ರೂ. ಮೀರಬಾರದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗುತ್ತದೆ. 

click me!