Personal Finance : ಮೊದಲ ಉದ್ಯಮ ಕೈಕೊಟ್ರೂ ಕುಗ್ಗದೆ ಯಶಸ್ವಿಯಾದವರು!

Published : Aug 11, 2023, 05:04 PM IST
Personal Finance : ಮೊದಲ ಉದ್ಯಮ ಕೈಕೊಟ್ರೂ ಕುಗ್ಗದೆ ಯಶಸ್ವಿಯಾದವರು!

ಸಾರಾಂಶ

ಉದ್ಯಮದಲ್ಲಿ ಯಶಸ್ವಿಯಾಗಲು ನಿರಂತರ ಪರಿಶ್ರಮ, ಧೈರ್ಯ ಅಗತ್ಯ. ಸೋಲಿಗೆ ಭಯಪಟ್ಟಲ್ಲಿ ಮುಂದಿನ ಹೆಜ್ಜೆ ಇಡಲು ಸಾಧ್ಯವಿಲ್ಲ. ಎಲ್ಲವನ್ನೂ ಮೆಟ್ಟಿ ನಿಲ್ಲುವ ವ್ಯಕ್ತಿ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂಬುದನ್ನು ಇವರು ತೋರಿಸಿದ್ದಾರೆ.  

ತಮ್ಮ ಕಠಿಣ ಪರಿಶ್ರಮದಿಂದ ಯಶಸ್ವಿ ಉದ್ಯಮಿಗಳಾದ ಅನೇಕ ಸಾಧಕರು ನಮ್ಮಲ್ಲಿದ್ದಾರೆ. ಅವರು ನಮ್ಮ ದೇಶದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ್ದಾರೆ. ಕೆಲಸ ಶುರು ಮಾಡಿದ ಆರಂಭದಲ್ಲಿಯೇ ಲಕ್ಷ ಲಕ್ಷ ಸಂಪಾದನೆ ಮಾಡ್ಬೇಕು, ವ್ಯಾಪಾರ ಶುರು ಮಾಡಿದ ವರ್ಷದಲ್ಲೇ ಯಶಸ್ವಿ ಉದ್ಯಮಿ ಆಗ್ಬೇಕು ಅಂದ್ರೆ ಸಾಧ್ಯವಿಲ್ಲ. ನಾವು ಆರಂಭಿಸಿದ ವ್ಯವಹಾರ ಕೆಲವೊಮ್ಮೆ ನಷ್ಟಕ್ಕೆ ಕಾರಣವಾಗಬಹುದು. ಆ ಸಂದರ್ಭದಲ್ಲಿ ಎದೆಗುಂದದೆ ಧೈರ್ಯವಾಗಿ ಮುನ್ನುಗ್ಗಬೇಕಾಗುತ್ತದೆ. ನಾವಿಂದು ವ್ಯವಹಾರ ಶುರು ಮಾಡಿ ಕೈ ಸುಟ್ಟುಕೊಂಡು, ಎಲ್ಲವನ್ನೂ ಕಳೆದುಕೊಂಡು, ಇನ್ನೇನು ಕಥೆ ಮುಗೀತು ಎನ್ನುವ ಹಂತಕ್ಕೆ ಬಂದಾಗ್ಲೂ ಎದೆಗುಂದದೆ, ಹೋರಾಟ ನಡೆಸಿ, ಮತ್ತೊಂದು ವ್ಯಾಪಾರ ಶುರು ಮಾಡಿ ಯಶಸ್ವಿಯಾದ ವ್ಯಕ್ತಿಯನ್ನು ನಿಮಗೆ ಪರಿಚಯಿಸ್ತೇವೆ.

ಯಾರು ಈ ಉದ್ಯಮಿ (Businessman) ? : ನಾವಿಂದು ನಿಮಗೆ ಹೇಳಲು ಹೊರಟಿರುವ ಉದ್ಯಮಿ ಹೆಸರು ದಿಲೀಪ್ ಸೂರ್ಯವಂಶಿ (Dileep Suryavanshi). ನಿರ್ಮಾಣ ಕಂಪನಿ ದಿಲೀಪ್ ಬಿಲ್ಡ್ ಕಾನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ. ಈ ಪ್ರಸಿದ್ಧ ಕಂಪನಿಯು ಮಧ್ಯಪ್ರದೇಶದಲ್ಲಿ ಕೆಲಸ ಮಾಡುತ್ತದೆ. ಭಾರತ (India)ದ ಅನೇಕ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್‌ವೇಗಳು ಸೇರಿದಂತೆ ಅನೇಕ ದೊಡ್ಡ ಯೋಜನೆಗಳನ್ನು ಈ ಕಂಪನಿ ಪೂರ್ಣಗೊಳಿಸಿದೆ. ಕೆಲ ದಿನಗಳ ಹಿಂದಷ್ಟೆ ದಿಲೀಪ್ ಬಿಲ್ಡ್ ಕಾನ್‌ಗೆ ಮಧ್ಯಪ್ರದೇಶ ಸರ್ಕಾರ 700 ಕೋಟಿ ರೂಪಾಯಿಗಳ ಇಂಫ್ರಾ ಪ್ರಾಜೆಕ್ಟ್ ನೀಡಿದೆ. 

ಮುಸ್ಲಿಂ ಯುವಕರಿಗೆ ಮೋದಿಯೇ ಸ್ಪೂರ್ತಿ: ಡಿಪ್ಲೋಮಾ ಓದಿ ಆರಂಭಿಸಿದ ಟೀ ಶಾಪಿಗೆ ಜನರು ಫಿದಾ!

ಮೊದಲ ವ್ಯವಹಾರದಲ್ಲಿ ಭಾರೀ ನಷ್ಟ: ವಿದ್ಯಾಭ್ಯಾಸ ಮುಗಿಸಿದ ನಂತ್ರ ಭೋಪಾಲ್‌ನಲ್ಲಿರುವ ತಮ್ಮ ಸಹೋದರನ ಸೋಯಾಬೀನ್ ಕಾರ್ಖಾನೆಯಲ್ಲಿ ದಿಲೀಪ್ ಕೆಲಸ  ಪ್ರಾರಂಭಿಸಿದ್ದರು. ಆದರೆ ಬರಗಾಲದಿಂದಾಗಿ ಅವರು ಈ ವ್ಯವಹಾರ ನಿಂತು ಹೋಯ್ತು. ಇದ್ರಿಂದ ನೊಂದು ಮೂಲೆಗುಂಪಾಗದ, ಇಲ್ಲವೆ ಸಂಬಳ ಬರುವ ಕೆಲಸ ಹುಡುಕುವ ಬದಲು ದಿಲೀಪ್ ತಮ್ಮದೇ ವ್ಯವಹಾರ ಶುರು ಮಾಡಿದ್ರು. 

ದಿಲೀಪ್ ಬಿಲ್ಡ್ ಕಾನ್ ಶುರುವಾಗಿದ್ದು ಯಾವಾಗ?: ದಿಲೀಪ್ ಸೂರ್ಯವಂಶಿ, ದಿಲೀಪ್ ಬಿಲ್ಡ್ ಕಾನ್  ಕಂಪನಿಯನ್ನು 1987 ರಲ್ಲಿ ಸ್ಥಾಪಿಸಿದರು. ದಿಲೀಪ್, ಜಬಲ್‌ಪುರ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದ್ದಾರೆ. 1979 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ದಿಲೀಪ್ ಅಣ್ಣನ ಕಾರ್ಖಾನೆ ಸೇರಿದ್ದರು. ಅದ್ರಲ್ಲಿ ಹಿನ್ನಡೆಯಾದ್ಮೇಲೆ  ದಿಲೀಪ್ ಸೂರ್ಯವಂಶಿ ಇದಕ್ಕೆ ಕೈ ಹಾಕಿದ್ರು. ಬೇರೆಯವರ ಕೈಕೆಳಗೆ ಕೆಲಸ ಮಾಡು ಆಸಕ್ತಿ ದಿಲೀಪ್ ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಈ ಕ್ಷೇತ್ರದಲ್ಲಿ ದಿಲೀಪ್ ಸುಮಾರು 36 ವರ್ಷಗಳ ಅನುಭವ ಹೊಂದಿದ್ದಾರೆ.  
ಸತತ ಶ್ರಮದ ನಂತ್ರ ದಿಲೀಪ್ ಯಶಸ್ವಿ ಉದ್ಯಮಿಯಾಗಿದ್ದಾರೆ. ಮಾಹಿತಿ ಪ್ರಕಾರ, ಸೂರ್ಯವಂಶಿ ಮಧ್ಯಪ್ರದೇಶ ಬಿಲ್ಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ.

ಕಳೆದ ಆರ್ಥಿಕ ಸಾಲಿನಲ್ಲಿ ಭಾರತದ ಸ್ಟಾರ್ಟ್ ಅಪ್ ಗಳು ಉದ್ಯೋಗಿಗಳ ವೇತನದಲ್ಲಿ ಎಷ್ಟು ಹೆಚ್ಚಳ ಮಾಡಿವೆ ಗೊತ್ತಾ?

ಎಂಜಿನಿಯರ್ ದೇವೆಂದ್ರ ಜೈನ್ ಹಾಗೂ ದಿಲೀಪ್ ಸಂಬಂಧ: ಇಲ್ಲೊಂದು ಆಸಕ್ತಿಕರ ವಿಷ್ಯವಿದೆ. ತಾವು ಬೆಳೆಯುವ ಜೊತೆಗೆ ಇತರರನ್ನು ಬೆಳೆಸುವ ಸ್ವಭಾವವನ್ನು ದಿಲೀಪ್ ಹೊಂದಿದ್ದಾರೆ. 1995ರಲ್ಲಿ ದಿಲೀಪ್ ಅವರು 21 ವರ್ಷದ ಎಂಜಿನಿಯರ್ ದೇವೇಂದ್ರ ಜೈನ್ ಅವರಿಗೆ ತಮ್ಮ ಕಂಪನಿಯಲ್ಲಿ ಕೆಲಸ ನೀಡಿದ್ದರಂತೆ. ದೇವೇಂದ್ರ ಕೆಲಸದಿಂದ ಪ್ರಭಾವಿತರಾಗಿದ್ದ ದಿಲೀಪ್, ತಮ್ಮ ವ್ಯವಹಾರದಲ್ಲಿ ಶೇಕಡಾ 31ರಷ್ಟು ಪಾಲನ್ನು ದೇವೇಂದ್ರಗೆ ನೀಡಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ. ಪ್ರಸ್ತುತ ದೇವೇಂದ್ರ ಜೈನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ (CEO) ಆಗಿದ್ದಾರೆ. ಮಾಹಿತಿ ಪ್ರಕಾರ, ದಿಲೀಪ್ ಸೂರ್ಯವಂಶಿ ಅವರ ಒಟ್ಟು ಆಸ್ತಿ 4100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ದೇವೇಂದ್ರ ಜೈನ್ ಅವರ ಒಟ್ಟು ಆಸ್ತಿ 2300 ಕೋಟಿ ರೂಪಾಯಿಯಾಗಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!