ಈ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ!

By Web DeskFirst Published Aug 5, 2018, 3:30 PM IST
Highlights

ಮೇಕ್ ಇನ್ ಇಂಡಿಯಾಗೆ ಉತ್ತೇಜನ ಹಿನ್ನೆಲೆ! ಐಷಾರಾಮಿ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ! ಟಿವಿ, ವಾಷಿಂಗ್‌ ಮಶೀನ್‌, ರೆಫ್ರಿಜರೇಟರ್‌ ಬೆಲೆ ದುಬಾರಿ?! ಆಮದು ಪ್ರಮಾಣ ತಗ್ಗಿಸಲು ಕೇಂದ್ರದ ಕ್ರಮ 

ನವದೆಹಲಿ(ಆ.5): ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆಆದ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಐಷಾರಾಮಿ ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಸಲಿದೆ.

ಟಿವಿ, ವಾಷಿಂಗ್‌ ಮಶೀನ್‌, ರೆಫ್ರಿಜರೇಟರ್‌ ಮೊದಲಾದ ಐಷಾರಾಮಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಏರಿಸಲಿರುವ ಸರ್ಕಾರ, ಸ್ವದೇಶಿ ಉತ್ಪಾದನೆ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಮುಂದಾಗಿದೆ. ಆಮದು ಪ್ರಮಾಣವನ್ನು ತಗ್ಗಿಸಲು ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹವಾದರೂ, ತಾತ್ಕಾಲಿಕವಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ನಿರೀಕ್ಷೆ ಇದೆ. 

ದೇಶದಲ್ಲಿ ಮೊಬೈಲ್‌ ಉತ್ಪಾದನೆಯನ್ನು ಹೆಚ್ಚಿಸಲು ಇಂಥ ಉಪಕ್ರಮವನ್ನು ತೆಗೆದುಕೊಂಡು ಸರ್ಕಾರ ಯಶಸ್ವಿಯಾಗಿತ್ತು. ಇದೀಗ ಎಲೆಕ್ಟ್ರಾನಿಕ್ಸ್‌ ಮತ್ತು ಟೆಲಿಕಾಂ ವಲಯದ ಉತ್ಪನ್ನಗಳಿಗೂ ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡಲು ಈ ಕ್ರಮ ಅನಿವಾರ್ಯ ಎನ್ನಲಾಗಿದೆ. 

ಪ್ರತಿ ವರ್ಷ 200 ಕೋಟಿ ಡಾಲರ್‌ (13,600 ಕೋಟಿ ರೂ.) ಮೌಲ್ಯದ ವಾಷಿಂಗ್‌ ಮೆಶೀನ್‌, ಎಸಿ, ಟಿವಿ, ರೆಫ್ರಿಜರೇಟರ್‌ ಇತ್ಯಾದಿಗಳು ಆಮದಾಗುತ್ತವೆ. ಸ್ಥಳೀಯ ಕಂಪನಿಗಳು ಶೇ.20ರಷ್ಟು ಆಮದು ಸುಂಕಕ್ಕೆ ಲಾಬಿ ನಡೆಸುತ್ತಿವೆ. 

ಅಮೆರಿಕದಿಂದ ಭಾರತಕ್ಕೆ ಆಮದಾಗುವ 29 ಉತ್ಪನ್ನಗಳ ಮೇಲೆ ಸೆಪ್ಟೆಂಬರ್‌ 18ರಿಂದ ಆಮದು ಸುಂಕ ಹೆಚ್ಚಳವಾಗಲಿದೆ.  ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳಿಗೆ ಅಮೆರಿಕ ಆಮದು ಸುಂಕ ಏರಿಸಿದ್ದಕ್ಕೆ ಪ್ರತಿಯಾಗಿ ಭಾರತ ಈ ಕ್ರಮದ ಮೂಲಕ ತಿರುಗೇಟು ನೀಡಿದೆ.

click me!