ಸಂಕಷ್ಟದಲ್ಲೂ ಲಖನೌ ಏರ್‌ಪೋರ್ಟ್‌ ನವೀಕರಣಕ್ಕೆ 5 ಸಾವಿರ ಕೋಟಿ ಹೂಡಿಕೆ ಮಾಡಲಿರೋ ಅದಾನಿ ಸಮೂಹ..!

By BK Ashwin  |  First Published Mar 2, 2023, 1:39 PM IST

ಉತ್ತರ ಪ್ರದೇಶ ರಾಜಧಾನಿ ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನವೀಕರಿಸಲು ಅದಾನಿ ಗ್ರೂಪ್ 5,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಪ್ಲ್ಯಾನ್‌ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.


ಲಖನೌ (ಮಾರ್ಚ್‌ 2, 2023): ತಿಂಗಳುಗಳ ಹಿಂದಷ್ಟೇ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ವಿಶ್ವದಲ್ಲೇ 3ನೇ ಶ್ರೀಮಂತನಾಗಿದ್ದ ಗೌತಮ್ ಅದಾನಿ ಈಗ ಹತ್ತಾರು ಲಕ್ಷ ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ತಮ್ಮ ಉದ್ಯಮವನ್ನು ಪಾತಾಳದಿಂದ ಚೇತರಿಕೆಯ ಹಾದಿಯತ್ತ ತೆಗೆದುಕೊಂಡು ಹೋಗಲು ಗೌತಮ್ ಅದಾನಿ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗ ದೇಶದ ಏರ್‌ಪೋರ್ಟ್‌ವೊಂದರ ನವೀಕರಣ, ಹೊಸ ಟರ್ಮಿನಲ್‌ ನಿರ್ಮಾಣಕ್ಕೆ  ಅದಾನಿ ಗ್ರೂಪ್ ಮುಂದಾಗಿದ್ದು 5 ಸಾವಿರ ಕೊಟಿ ರೂ. ವರೆಗೆ ಹೂಡಿಕೆ ಮಾಡಲು ಪ್ಲ್ಯಾನ್‌ ಮಾಡಿದೆ ಎಂದು ತಿಳಿದುಬಂದಿದೆ. 

ಉತ್ತರ ಪ್ರದೇಶ (Uttar Pradesh) ರಾಜಧಾನಿ ಲಖನೌನ (Lucknow) ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Chaudhary Charan Singh International Airport) (CCSIA) ನವೀಕರಿಸಲು ಅದಾನಿ ಗ್ರೂಪ್ 5,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಪ್ಲ್ಯಾನ್‌ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಅಸ್ತಿತ್ವದಲ್ಲಿರುವ 2 ಟರ್ಮಿನಲ್‌ಗಳ (Terminal) ಸಂಯೋಜಿತ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವು ವರ್ಷಕ್ಕೆ 43 ಲಕ್ಷ ವಿಮಾನ ಪ್ರಯಾಣಿಕರಾಗಿದ್ದು (Flight Passengers), ಆದರೀಗ ವರ್ಷಕ್ಕೆ 55 ಲಕ್ಷ ಜನ ಏರ್‌ಪೋರ್ಟ್‌ (Airport) ಬಳಸುತ್ತಿದ್ದಾರೆ. ಅಂದರೆ, ನಿರ್ಮಾಣ ಸಾಮರ್ಥ್ಯಕ್ಕಿಂತ 28% ಹೆಚ್ಚು ಬಳಸಲಾಗುತ್ತಿದೆ. 

Tap to resize

Latest Videos

ಇದನ್ನು ಓದಿ: ಮುಚ್ಚಿದ ಲಕೋಟೆಯಲ್ಲಿ ತಜ್ಞರ ಹೆಸರು: ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್‌ ತಿರಸ್ಕಾರ

ಈ ಹಿನ್ನೆಲೆ, ವಿಮಾನದ ಚಲನೆಯನ್ನು ಹೆಚ್ಚಿಸಲು ದೊಡ್ಡ ಇಂಟಿಗ್ರೇಟೆಡ್ ಟರ್ಮಿನಲ್ ಮತ್ತು ಸಂಬಂಧಿತ ಸೌಲಭ್ಯಗಳಿಗೆ ಹಣ ನೀಡಲು ಸುಂಕದ ಹೆಚ್ಚಳವನ್ನು ಲಖನೌ  ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (LIAL) ಕೋರಿದೆ. ಈ ವರ್ಷದ ಅಕ್ಟೋಬರ್‌ನೊಳಗೆ ವಾರ್ಷಿಕ 80 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ 3 (T3) ನ ಹಂತ-1 ರೆಡಿಯಾಗಲಿದೆ ಎಂದು ಹೇಳಲಾಗಿದೆ.

ನಂತರ ಇನ್ನೊಂದು 1-1.5 ವರ್ಷಗಳಲ್ಲಿ, ಮೂರನೇ ಟರ್ಮಿನಲ್‌ನ ಹಂತ-II ವರ್ಷಕ್ಕೆ 50 ಲಕ್ಷ ಪ್ರಯಾಣಿಕರ ಹೆಚ್ಚುವರಿ ಸಾಮರ್ಥ್ಯದೊಂದಿಗೆ ಸಿದ್ಧವಾಗಬೇಕು. ಇದು T3 ನ ಒಟ್ಟು ಸಾಮರ್ಥ್ಯವನ್ನು 1.3 ಕೋಟಿಗೆ ತೆಗೆದುಕೊಂಡು ಹೋಗುತ್ತದೆ ಎಂದು ಮೂಲಗಳು ಹೇಳುತ್ತವೆ. ಅಲ್ಲದೆ, T3 ಮತ್ತು ಹೊಸ T4 ಟರ್ಮಿನಲ್‌ ಬಗ್ಗೆಯೂ ಚಿಂತನೆ ನಡೆದಿದ್ದು, ಮತ್ತಷ್ಟು ವಿಸ್ತರಣೆಗೆ ಅವಕಾಶವಿದೆ. ವಿಮಾನ ಪ್ರಯಾಣಿಕರ ದಟ್ಟಣೆಯ ಬೆಳವಣಿಗೆಗೆ ಅನುಗುಣವಾಗಿ ಆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಸಮರಕ್ಕೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆ ನೇಮಿಸಿಕೊಂಡಿಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ

ಲಖನೌ ಏರ್‌ಪೋರ್ಟ್‌ನ ಮೂರನೇ ಟರ್ಮಿನಲ್‌ನ ಪ್ರಮುಖ ವೈಶಿಷ್ಟ್ಯಗಳು ಇ-ಗೇಟ್‌ಗಳು, ಸ್ವಯಂ-ಬ್ಯಾಗೇಜ್ ಡ್ರಾಪ್ ಕೌಂಟರ್‌ಗಳು ಮತ್ತು ಹೊಸ ಲಾಂಜ್‌ಗಳನ್ನು ಸಹ ಒಳಗೊಂಡಿರುತ್ತದೆ. ಇನ್ನು, ಸೂಪರ್‌ ಅಪ್ಲಿಕೇಷನ್‌ ಮೂಲಕ ಡಿಜಿಟಲ್ ಪ್ರಯಾಣವನ್ನು ಹೆಚ್ಚಿಸಲಾಗುತ್ತದೆ. ಹಾಗೆ, ಟರ್ಮಿನಲ್‌ 3ಗೆ ಮೀಸಲಾದ ಓಲಾ, ಉಬರ್‌ ಮತ್ತು ಟ್ಯಾಕ್ಸಿ ಪಿಕ್-ಅಪ್ ಹಾಗೂ ಡ್ರಾಪ್-ಆಫ್ ವಲಯಗಳನ್ನು ಹೊಂದಿರುತ್ತದೆ ಎಂದೂ ತಿಳಿದುಬಂದಿದೆ.. 

ಸ್ಥಳದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ವರ್ಷಕ್ಕೆ ಸುಮಾರು 4 ಕೋಟಿ ವಿಮಾನ ಪ್ರಯಾಣಿಕರ ಸಾಮರ್ಥ್ಯವನ್ನು ತೆಗೆದುಕೊಳ್ಳಲು ಲಖನೌ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್  ಪರಿಸರ ಅನುಮತಿಯನ್ನು ಹೊಂದಿದೆ. ಯುಪಿ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು 1 ಟ್ರಿಲಿಯನ್ ಡಾಲರ್‌ ಆರ್ಥಿಕತೆಯತ್ತ ಸಾಗುತ್ತಿದೆ. ಈ ಹಿನ್ನೆಲೆ ರಾಜಧಾನಿಯಾಗಿ, ಲಖನೌ ರಾಜ್ಯದ ಎಲ್ಲಾ ವ್ಯಾಪಾರ ಚಟುವಟಿಕೆಗಳಿಗೆ ಕೇಂದ್ರವಾಗಿದೆ ಎಂದು ಎಲ್‌ಐಎಎಲ್‌ ವಕ್ತಾರರು ಹೇಳಿದರು.

ಇದನ್ನೂ ಓದಿ: ಹಿಂಡನ್‌ಬರ್ಗ್‌ ವಿರುದ್ಧ ಅದಾನಿ ಕಾನೂನು ಸಮರ: ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್‌’ ನೇಮಕ

click me!