
ಬೆಂಗಳೂರು (ಮಾ.02): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2023-24ನೇ ಸಾಲಿನಲ್ಲಿ ಬರೋಬ್ಬರಿ 11,157 ಕೋಟಿ ರೂ. ಮೊತ್ತದ ಆಯವ್ಯಯ ಮಂಡನೆ ಮಾಡಿದರು.
ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅತ್ಯಂತ ದೊಡ್ಡದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆಯಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಯಾವೊಬ್ಬ ಜನಪ್ರತಿನಿಧಿಗಳೂ ಇಲ್ಲದೇ ಆಡಳಿತಾಧಿಕಾರಿ ನೇತೃತ್ವದಲ್ಲಿಯೇ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ವರ್ಷವೂ ಕೂಡ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಹಣಕಾಸು ಆಯುಕ್ತ ಜಯರಾಂ ರಾಯಪುರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇನ್ನು ರಾಜಸ್ವ ಸ್ವೀಕೃತಿಗಿಂದ ಕಡಿಮೆ ವೆಚ್ಚದ 11,157 ಕೋಟಿ ರೂ. ಗಾತ್ರದ ಉಳಿತಾಯ ಬಜೆಟ್ ಮಂಡನೆ ಮಾಡಿದ್ದಾರೆ.
ಆರ್ಥಿಕ ಶಿಸ್ತಿಗೆ ಈ ಬಾರಿಯೂ ಬಿಬಿಎಂಪಿ ತಿಲಾಂಜಲಿ..!
ಯಾವುದಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ:
ಬೆಂಗಳೂರಿನ 243 ವಾರ್ಡ್‌ಗಳ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ ರೂ.75 ಲಕ್ಷದಂತೆ ಒಟ್ಟಾರೆ ರೂ.182.25 ಕೋಟಿಗಳು
1. ಪ್ರತಿ ವಾರ್ಡ್ ಗೆ ಹೂಳೆತ್ತುವ ಕಾಮಗಾರಿಗಳಿಗೆ ರೂ.30 ಲಕ್ಷಗಳು
2. ಪ್ರತಿ ವಾರ್ಡ್ ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ರೂ.15 ಲಕ್ಷಗಳು
3. ಪ್ರತಿ ವಾರ್ಡ್ ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ ರೂ.25 ಲಕ್ಷಗಳು
4. ಮಳೆಗಾಲ ನಿರ್ವಹಣೆಗಾಗಿ ರೂ.5 ಲಕ್ಷಗಳು.
ಬೃಹತ್ ಮಳೆನೀರುಗಾಲುವೆಗಳ ನಿರ್ವಹಣೆಗೆ 70.20 ಕೋಟಿ ರೂ. ಮೀಸಲು
ತುರ್ತು ಮಳೆಗಾಲ ಕಾಮಗಾರಿಗಳಿಗಾಗಿ ರೂ.15 ಕೋಟಿ
ಈ ಪೈಕಿ ಹೊಸ ವಲಯಗಳಿಗೆ ತಲಾ 2 ಕೋಟಿ ರೂ. ಹಾಗೂ ಹಳೆ ವಲಯಗಳಿಗೆ ರೂ.1 ಕೋಟಿ ಮೀಸಲು ಇಡಲಾಗಿದೆ.
ಬೆಂಗಳೂರಿನ ಎಲ್ಲ ವಾರ್ಡ್‌ನಲ್ಲೂ ಮರ ಗಣತಿಗೆ ಸಿದ್ಧತೆ
ಬಿಬಿಎಂಪಿ ನಿರ್ವಹಣಾ ಕಾರ್ಯಗಳಿಗೆ ಅನುದಾನ ಹಂಚಿಕೆ:
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.