ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಉಯಿಲು ಸಿದ್ಧವಾಗಿದೆ. ಯಾರಿಗೆ ಹಾಟ್ ಸೀಟ್ ನೀಡ್ಬೇಕೆಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ. 2030ರಲ್ಲಿ ನಿವೃತ್ತಿ ಘೋಷಣೆಗೆ ದೇಶದ ಎರಡನೇ ಶ್ರೀಮಂತ ವ್ಯಕ್ತಿ ಸಿದ್ಧವಾಗಿದ್ದಾರೆ.
ಅದಾನಿ ಗ್ರೂಪ್‌ನ ಅಧ್ಯಕ್ಷ (Adani Group President) ಹಾಗೂ ದೇಶದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ನಂತ್ರ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಗೌತಮ್ ಅದಾನಿ ತಮ್ಮ ಉಯಿಲು ಸಿದ್ಧಪಡಿಸಿದ್ದಾರೆ. ಬ್ಯುಸಿನಸ್‌ನಲ್ಲಿ ಬ್ಯುಸಿಯಾಗಿದ್ದ ಗೌತಮ್ ಅದಾನಿ ಎಲ್ಲ ಜವಾಬ್ದಾರಿಗಳಿಂದ ಹೊರ ಬರಲು ಯತ್ನಿಸುತ್ತಿದ್ದಾರೆ. 2030ರ ವೇಳೆಗೆ ತಮ್ಮೆಲ್ಲ ಜವಾಬ್ದಾರಿಯನ್ನು ಅವರು ಮಕ್ಕಳು ಹಾಗೂ ಸೋದರಳಿಯರಿಗೆ ಹಸ್ತಾಂತರಿಸಿ, ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಬಲವಾಗಿದೆ. ಅದಾನಿ ಇದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. 2018ರಿಂದಲೇ ಇದಕ್ಕೆ ಸಂಬಂಧಿಸಿದ ತಯಾರಿ ನಡೆಯುತ್ತಿದೆ.
ಅದಾನಿ ಗ್ರೂಪ್ (Adani Group) ಮುನ್ನಡೆಸುವ ಜವಾಬ್ದಾರಿ (Responsibility) ಅವರ ಮಕ್ಕಳಾದ ಕರಣ್ ಅದಾನಿ ಮತ್ತು ಜೀತ್ ಅದಾನಿ ಮತ್ತು ಸೋದರಳಿಯರಾದ ಸಾಗರ್ ಅದಾನಿ ಮತ್ತು ಪ್ರಣವ್ ಅದಾನಿ ಹೆಗಲಿಗೆ ಬರಲಿದೆ.
undefined
ಭವಿಷ್ಯದ ಕನಸು ಕಂಡು ಊರು ಬಿಟ್ಟು ಇನ್ಫೋಸಿಸ್ ಸರ್ವಿಸ್ ಬಾಯ್ ಆಗಿ ದುಡಿದಾತ ಇಂದು ಎರಡು ಕಂಪೆನಿ ಒಡೆಯ!
2018ರಲ್ಲೇ ಮಾತುಕತೆ ನಡೆಸಿದ್ದ ಗೌತಮ್ ಅದಾನಿ (Gautham Adani) : ಗೌತಮ್ ಅದಾನಿ ತಮ್ಮ ಮಕ್ಕಳು ಹಾಗೂ ಸೋದರಳಿಯರನ್ನು 2018ರಲ್ಲಿಯೇ ಹೈದ್ರಾಬಾದ್ ಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಅವರ ನಿರ್ಧಾರವನ್ನು ತಿಳಿಯುವ ಉದ್ದೇಶದಿಂದ ಗೌತಮ್ ಅದಾನಿ ಈ ಸಭೆ ನಡೆಸಿದ್ದರು. ನೀವೆಲ್ಲ ಒಟ್ಟಿಗೆ ಕೆಲಸ ಮಾಡ್ತೀರಾ, ಇಲ್ಲ ಪ್ರತ್ಯೇಕವಾಗಿ ಕೆಲಸ ಮಾಡ್ತೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಲು ಮೂರು ತಿಂಗಳ ಅವಕಾಶವನ್ನೂ ನೀಡಲಾಗಿತ್ತು.
ಕುಟುಂಬದಂತೆ ಮುನ್ನಡೆಸುವ ನಿರ್ಧಾರ : ಗೌತಮ್ ಅದಾನಿ ಮಾತಿನ ನಂತ್ರ ಮಕ್ಕಳು ಹಾಗೂ ಸೋದರಳಿಯಂದಿರು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಫ್ಯಾಮಿಲಿಯಾಗಿ ಕೆಲಸ ಮಾಡುವ ಭರವಸೆಯನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಯಾವುದೇ ಬ್ಯುಸಿನೆಸ್ ಆದ್ರೂ ಉತ್ತರಾಧಿಕಾರಿ ಆಯ್ಕೆ ಮಾಡೋದು ಬಹಳ ಮುಖ್ಯ ಎಂದು ಗೌತಮ್ ಅದಾನಿ ಹೇಳಿದ್ದರು. ಕರಣ್, ಜೀತ್, ಪ್ರಣವ್ ಮತ್ತು ಸಾಗರ್ ಒಟ್ಟಾಗಿ ಅದಾನಿ ಗ್ರೂಪ್ ಮುನ್ನಡೆಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಯೊಬ್ಬರಿಗೆ ಜವಾಬ್ದಾರಿ ಹಂಚುವ ಕೆಲಸ ನಡೆಯುತ್ತಿದೆ ಎಂದು ಅದಾನಿ ಹೇಳಿದ್ದಾರೆ. ಕಂಪನಿಯನ್ನು ಬೇರ್ಪಡಿಸುವ ಬದಲು ಒಟ್ಟಿಗೆ ಕೆಲಸ ಮಾಡೋದು ಉತ್ತಮ ಎಂದು ಅವರೆಲ್ಲ ನಂಬಿದ್ದಾರೆಂದು ಅದಾನಿ ಹೇಳಿದ್ದಾರೆ.
ಅಪ್ಪ – ಚಿಕ್ಕಪ್ಪನಂತೆ ಕೆಲಸ ಮಾಡ್ತೇವೆ ಎಂದ ಮಕ್ಕಳು : ಗೌತಮ್ ಅದಾನಿ ಹಾಗೂ ಅವರ ಸಹೋದರ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ಅವರಂತೆ ನಾವೂ ಕುಟುಂಬದ ಬ್ಯುಸಿನೆಸ್ ಮುಂದುವರೆಸುತ್ತೇವೆಂದು ಜೀತ್ ಅದಾನಿ ಹೇಳಿದ್ದಾರೆ. ಎಲ್ಲರೂ ಪ್ರತ್ಯೇಕ ಕೆಲಸ ಮಾಡ್ತಿದ್ದರೂ ನಾವೆಲ್ಲ ಒಂದೆ. ಡಿನ್ನರ್ ಒಟ್ಟಿಗೆ ಮಾಡ್ತೇವೆ, ನಿತ್ಯದ ಕೆಲಸದ ಬಗ್ಗೆ ನಾವು ಚರ್ಚೆ ಮಾಡ್ತೇವೆ ಎಂದ ಕರಣ್ ಅದಾನಿ, ಗೌತಮ್ ಅದಾನಿ ನ ನಿವೃತ್ತಿ ನಂತ್ರ ನಾವೆಲ್ಲ ಸಮಾನ ಷೇರುದಾರರಾಗ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲ ಕಳೆದ 15 ವರ್ಷಗಳಿಂದ ಸಮೂಹ ಕಂಪನಿ ಕೆಲಸವನ್ನು ಸರಳಗೊಳಿಸುವ ಪ್ರಯತ್ನದಲ್ಲಿದ್ದೇವೆ ಎಂದು ಕರಣ್ ಹೇಳಿದ್ದಾರೆ.
ಗೌತಮ್ ಅದಾನಿ ಮಕ್ಕಳಿಗೆ ಅಧ್ಯಕ್ಷ ಸ್ಥಾನವನ್ನು ಮಕ್ಕಳಿಗೆ ನೀಡುವ ಆಲೋಚನೆ ಮಾಡಿದ್ದು, ಇದನ್ನು ಮಕ್ಕಳು ನಿರಾಕರಿಸಿದ್ದಾರೆ. ಗೌತಮ್ ಅದಾನಿ ಕುಟುಂಬದ ಹೆಣ್ಮಕ್ಕಳು ಕೂಡ ಮುಂದಿನ ದಿನಗಳಲ್ಲಿ ಜವಾಬ್ದಾರಿ ಹೊತ್ತುಕೊಳ್ತಾರೆ ಎನ್ನಲಾಗಿದೆ.
ಇಂದಿನ ದಿನದಲ್ಲಿ 25 ಲಕ್ಷದ ಸಂಬಳ ಏನೂ ಅಲ್ಲವಂತೆ... ಟೆಕ್ಕಿಗಳ ಸಂಬಳ ಇದಕ್ಕಿಂತ ಹೆಚ್ಚು!
ಅದಾನಿ ಗ್ರೂಪ್ ಗೆ ಅಡಿಪಾಯ ಹಾಕಿದ್ದ ಮೂವರು ಸಹೋದರರು : ಅದಾನಿ ಗ್ರೂಪ್ ಗೆ 1988ರಲ್ಲಿ ಮೂವರು ಅಡಿಪಾಯ ಹಾಕಿದ್ದರು. ಗೌತಮ್ ಅದಾನಿ, ವಿನೋದ್ ಅದಾನಿ ಮತ್ತು ರಾಜೇಶ್ ಅದಾನಿ, ಅದಾನಿ ಕಂಪನಿಗೆ ಅಡಿಪಾಯ ಹಾಕಿದ್ದರು. ಸರಕು ವ್ಯಾಪಾರ ಕಂಪನಿಯಾಗಿ 1988ರಲ್ಲಿ ತಲೆ ಎತ್ತಿತ್ತು. ಅದಾದ್ಮೇಲೆ ಅದಾನಿ ಗ್ರೂಪ್ ಒಂದೊಂದೇ ಕ್ಷೇತ್ರವನ್ನು ಆವರಿಸಿಕೊಳ್ತಾ ಬಂತು. ಕಲ್ಲಿದ್ದಲು, ವಿಮಾನ ನಿಲ್ದಾಣ, ವಿದ್ಯುತ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಇದು ಕೆಲಸ ಮಾಡ್ತಿದೆ.