ನಿಮ್ ಮನೆಗೆ ಸಿಲಿಂಡರ್ ಬಂದ್ರೆ ಎಷ್ಟು ಕೇ(ಕೀ)ಳ್ತಾರೆ ಸ್ವಾಮಿ?: 1000?

By Web DeskFirst Published Nov 22, 2018, 5:42 PM IST
Highlights

ಗಗನಕ್ಕೇರಿದ ಗ್ಯಾಸ್ ಸಿಲಿಂಡರ್ ಬೆಲೆ! ಕರ್ನಾಟಕದ ಬಹುತೇಕ ನಗರಗಳಲ್ಲಿ ಸಾವಿರ ಗಡಿ ದಾಟಿದ ಬೆಲೆ! ಹೆಚ್ಚುತ್ತಿರುವ ಎಲ್‌ಪಿಜಿ ದರ ಕಂಡು ಕಂಗಾಲಾದ ಜನಸಾಮಾನ್ಯ! ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ಇಂಧನ ಬೆಲೆ ಹೆಚ್ಚಳ ಪರಿಣಾಮ   

ಬೆಂಗಳೂರು(ನ.21): ಅಡುಗೆ ಅನಿಲ ದರ ಹೆಚ್ಚಳ ನಿಜಕ್ಕೂ ಜನಸಾಮಾನ್ಯರ ಜೇಬನ್ನು ಸುಡುತ್ತಿದ್ದು, ನಿರಂತರ ಬೆಲೆ ಏರಿಕೆಯಿಂದ ನಾಗರಿಕರು ಕಂಗಾಲಾಗಿದ್ದಾರೆ. ಅದರಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಸಿಲಿಂಡರ್ ಗ್ಯಾಸ್ ಬೆಲೆ 1000 ರೂ. ಗಡಿ ದಾಟಿದೆ.

ಹೌದು, ರಾಜ್ಯದ ಬಹುತೇಕ ನಗರಗಳಲ್ಲಿ ಸಿಲಿಂಡರ್ ಗ್ಯಾಸ್ ಬೆಲೆ ಗಗನಕ್ಕೇರಿದ್ದು, ವಿವಿಧ ನಗರಗಳಲ್ಲಿ ಬೇರೆ ಬೇರೆ ದರ ನಿಗದಿ ಮಾಡಲಾಗಿದೆ. ಅದರಂತೆ ವಿವಿಧ ನಗರಗಳಲ್ಲಿನ ಪ್ರತೀ ಸಿಲಿಂಡರ್ ಗ್ಯಾಸ್ ದರದತ್ತ ಗಮನಹರಿಸುವುದಾದರೆ..

1. ಬೀದರ್-1015.5 ರೂ.
2. ಬೆಂಗಳೂರು- 941 ರೂ.
3. ಮಂಗಳೂರು-921 ರೂ.
4. ಹುಬ್ಬಳ್ಳಿ-962 ರೂ.
5. ಬೆಳಗಾವಿ-956 ರೂ.

ಇನ್ನು ಇದೇ ತಿಂಗಳ ಏಪ್ರೀಲ್ ನಲ್ಲಿ ಈ ನಗರಗಳಲ್ಲಿ ಇದ್ದ ಪ್ರತಿ ಸಿಲಿಂಡರ್ ಗ್ಯಾಸ್ ದರದತ್ತ ಗಮನಹರಿಸುವುದಾದರೆ..

1. ಬೀದರ್-721 ರೂ.
2. ಬೆಂಗಳೂರು-654 ರೂ.
3. ಮಂಗಳೂರು-630 ರೂ.
4. ಹುಬ್ಬಳ್ಳಿ-670 ರೂ.
5. ಬೆಳಗಾವಿ-666 ರೂ.

 ಇನ್ನು ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ ಇರುವುದು ನಿಜ. ಅದರಂತೆ ಸಬ್ಸಿಡಿ ಇದೀಗ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಕೂಡ ಅಷ್ಟೇ ಸತ್ಯ. ಮೇಲಾಗಿ ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ಇಂಧನದ ಬೆಲೆಯಲ್ಲಿ ಹೆಚ್ಚಾಗಿರುವ ಕಾರಣಕ್ಕೆ ದರ ಏರಿಕೆ ಅನಿವಾರ್ಯ ಹೌದಾದರೂ, ನಿರಂತರ ಎಲ್‌ಪಿಜಿ ದರ ಏರಿಕೆಯ ಬಿಸಿ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದ್ದು ಸುಳ್ಳಲ್ಲ. 

ಗ್ರಾಹಕರಿಗೆ ಶಾಕ್‌ : ಅಡುಗೆ ಅನಿಲ ದರ ಏರಿಕೆ

ಶುಕ್ರವಾರವೇ ‘ಲಕ್ಷ್ಮೀ’ಕಸಿದ ಕೇಂದ್ರ: ಎಲ್‌ಪಿಜಿ ಬೆಲೆ ಏರಿಕೆ!

ರಾಜ್ಯೋತ್ಸವ ಸಂಭ್ರಮಕ್ಕೆ ಬರೆ: ಎಲ್‌ಪಿಜಿ ದರ ಗಗನಕ್ಕೆ!

click me!