ದೀಪಾವಳಿ ಸಂಭ್ರಮದ ನಡುವೆ ಶಾಕ್, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ!

By Chethan Kumar  |  First Published Nov 1, 2024, 10:05 AM IST

ದೀಪಾವಳಿ ಹಬ್ಬದ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಶಾಕ್ ಎದುರಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗುತ್ತಿದೆ. 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಎಷ್ಟು ಏರಿಕೆಯಾಗಿದೆ?


ನವದೆಹಲಿ(ನ.01) ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ ಸದ್ದಿಲ್ಲದೆ ಸತತ 3ನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ 62 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಬೆಲೆ ದುಬಾರಿಯಾಗಿದೆ. ಶೀಘ್ರದಲ್ಲೇ ಹೊಟೆಲ್ ತಿನಿಸು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.14 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬೆಲೆ ಏರಿಕೆ ಮಾಡಿಲ್ಲ.

ಬೆಲೆ ಏರಿಕೆ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1802 ರೂಪಾಯಿಗೆ ಏರಿಕೆಯಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ಇದೀಗ ನವೆಂಬರ್ ಸತತ ಮೂರು ತಿಂಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿ ಏರಿಕೆ ಮಾಡಲಾಗಿತ್ತು.

Tap to resize

Latest Videos

undefined

ಕ್ರೆಡಿಟ್ ಕಾರ್ಡ್, ಎಲ್‌ಪಿಜಿಯಿಂದ ಹಿಡಿದು ರೈಲು ಟಿಕೆಟ್‌ವರೆಗೆ; ನವೆಂಬರ್ 1ರಿಂದ ಬದಲಾಗಲಿದೆ ಈ 6 ನಿಯಮಗಳು

ಕೊಂಚ ಸಮಾಧಾನದ ವಿಷಯ ಎಂದರೆ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಈ ಬಾರಿಯ ದೀಪಾವಳಿಯನ್ನು ನೆಮ್ಮದಿಯಿಂದ ಆಚರಿಸುವಂತಾಗಿದೆ. ಆದರೆ ಹೊಟೆಲ್ ತಿಂಡಿ ಸೇರಿದಂತೆ ವಾಣಿಜ್ಯ ಸಿಲಿಂಡರ್ ಬಳಕೆ ಮಾಡುವ ಸಂಸ್ಥೆಗಳಲ್ಲಿನ ಉತ್ಪನ್ನಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ.

19 ಕೆಜಿ ಎಲ್‌ಪಿಜಿ ಸಿಲಿಂಡರ್ ಪರಿಷ್ಕೃತ ಬೆಲೆ
ಬೆಂಗಳೂರು: 1880 ರೂಪಾಯಿ
ದೆಹಲಿ: 1802 ರೂಪಾಯಿ
ಮುಂಬೈ: 1754.50 ರೂಪಾಯ
ಕೋಲ್ಕತಾ:1911.50 ರೂಪಾಯಿ
ಚೆನ್ನೈ: 1,964 .50 ರೂಪಾಯಿ

ಡೊಮೆಸ್ಟಿಕ್ ಆಯಿಲ್ ಮಾರ್ಕೆಟಿಂಗ್ ಕಂಪನಿ(OMCs) ಬೆಲೆ ಪರಿಷ್ಕರಣೆ ಮಾಡಿದೆ. ಕೇವಲ 10 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮಾತ್ರವಲ್ಲ, ವಿಮಾನಗಳ ಇಂಧನದ ಬೆಲೆಯೂ ಏರಿಕೆ ಮಾಡಲಾಗಿದೆ. ಎವಿಯೇಶನ್ ಟರ್ಬೈನ್ ಫ್ಯೂಯೆಲ್(ATF) ಏರ್‌ಕ್ರಾಫ್ಟ್ ಗ್ಯಾಸ್ ಟರ್ಬೈನ್ ಎಂಜಿನ್‌ಗಳಲ್ಲಿ ಬಳಸುವ ಇಂಧನ ದರ ಇದೀಗ ದುಬಾರಿಯಾಗಿದೆ.  ಇದೀಗ ಜೆಟ್ ಫ್ಯೂಯೆಲ್ ಬೆಲೆ ನವೆಂಬರ್ 1 ರಿಂದ ಮುಂಬೈನಲ್ಲಿ 2,941.5 ಪ್ರತಿ ಕಿಲೋಲೀಟರ್‌ಗೆ.  ಇನ್ನು ದೆಹಲಿಯಲ್ಲಿ ಪ್ರತಿ ಕಿಲೋಲೀಟರ್‌ಗೆ  90,538.72 ರೂಪಾಯಿ, ಕೋಲ್ಕತಾದಲ್ಲಿ ಪ್ರತಿ ಕಿಲೋಲೀಟರ್‌ಗೆ  93,392.79 ರೂಪಾಯಿ, ಮುಂಬೈನಲ್ಲಿ  84,642.91 ರೂಪಾಯಿ ಹಾಗೂ ಚೆನ್ನೈನಲ್ಲಿ 93,957.10 ರೂಪಾಯಿ ಆಗಿದೆ.  

ದೀಪಾವಳಿ ಹಬ್ಬಕ್ಕೆ ಉಚಿತ 3 ಎಲ್‌ಪಿಜಿ ಸಿಲಿಂಡರ್, ಸೌಲಭ್ಯ ಪಡೆಯುವುದು ಹೇಗೆ?

ದೀಪಾವಳಿ ಹಬ್ಬಕ್ಕೆ ಬೆಂಗಳೂರಿನ ಹೊಟೆಲ್‌ಗಳಲ್ಲಿ ಕಾಫಿ, ಟೀ ದರ ಹೆಚ್ಚಳವಾಗಿದೆ. ಕಾಫಿ ಹಾಗೂ ಟೀ ಪುಡಿ ದರದಲ್ಲಿ ಭಾರಿ ಏರಿಕೆಯಾಗಿರುವ ಕಾರಣ ಬೆಲೆ ಏರಿಕೆ ಮಾಡಲಾಗಿದೆ. 2024ರ ಸಾಲಿನಲ್ಲಿ ಮೂರನೇ ಬಾರಿಗೆ ಕಾಫಿ, ಟೀ ದರ ಏರಿಕೆಯಾಗಿದೆ. ಇದರ ನಡುವೆ ವಾಣಿಜ್ಯ ಸಿಲಿಂಡರ್ ಬೆಲೆಯೂ ಏರಿಕೆಯಾಗಿರುವ ಕಾರಣ ಇದೀಗ ಕಾಫಿ ಟೀ ಸೇರಿದಂತೆ ಇತರ ಖಾದ್ಯಗಳು, ಆಹಾರ ಮತ್ತಷ್ಟು ದುಬಾರಿಯಾಗಲಿದೆ. ಬೆಂಗಳೂರಿನಲ್ಲಿ ಸಾಮಾನ್ಯ ಹೊಟೆಲ್‌ಗಳಲ್ಲಿ ಕಾಪಿ, ಟೀ ದರ 15 ರಿಂದ 35 ರೂಪಾಯಿ ಆಗಿದೆ. ಇನ್ನು ಪ್ರತಿಷ್ಠಿತ ಹೊಟೆಲ್‌ಗಳಲ್ಲಿ 100 ರೂಪಾಯಿಗೂ ಮೇಲ್ಪಟ್ಟಿದೆ. 
 

click me!