ಮೊದಲು ಕೇವಲ ಸಣ್ಣ ರಕ್ಷಣಾ ಉತ್ಪನ್ನ ಉತ್ಪಾದಿಸುತ್ತಿದ್ದ ಬಿಪಿಎಲ್ ನಂತರ ತನ್ನ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯತ್ತ, ದೂರಸಂಪರ್ಕ, ಸಾಫ್ಟ್ ಎನರ್ಜಿ, ಮೊಬೈಲ್ ಹಾಗೂ ಇತರ ಕ್ಷೇತ್ರಗಳಿಗೆ ತಮ್ಮ ವ್ಯಾಪ್ತಿ ವಿಸ್ತರಿಸಿದರು.
ಟಿಪಿಜಿ ನಂಬಿಯಾರ್ ಅವರು 1963ರಲ್ಲಿ ಬಿಪಿಎಲ್ ಕಂಪನಿಯನ್ನು ಸ್ಥಾಪಿಸಿ ರಕ್ಷಣಾ ಪಡೆಗಳಿಗೆ ಪ್ಯಾನಲ್ ಮೀಟರ್‌ಗಳನ್ನು ತಯಾರಿಸಲು ಹೊರಟಾಗ, ತಾವು ಎಂದೂ ಭಾರತದ ಟಾಪ್-10 ಕಂಪನಿಯನ್ನು ನಿರ್ಮಾಣ ಮಾಡಲಿದ್ದೇನೆ ಎಂದುಕೊಂಡಿರಲಿಕ್ಕಿಲ್ಲ. ಆದರೆ ಬದಲಾದ ಕಾಲಕ್ಕೆ ತಕ್ಕಂತೆ ಕಂಪನಿಯ ಆದ್ಯತೆಗಳನ್ನೂ ಬದಲಿಸಿ, 60 ವರ್ಷ ಹಿಂದೆಯೇ, ಈಗಿನ ಸರ್ಕಾರಗಳು ಪ್ರತಿಪಾದಿಸುತ್ತಿರುವ ‘ಮೇಕ್ ಇನ್ ಇಂಡಿಯಾ’ ಪ್ರವರ್ತಕರಾಗಿದ್ದು ಸುಳ್ಳಲ್ಲ.
ಮೊದಲು ಕೇವಲ ಸಣ್ಣ ರಕ್ಷಣಾ ಉತ್ಪನ್ನ ಉತ್ಪಾದಿಸುತ್ತಿದ್ದ ಬಿಪಿಎಲ್ ನಂತರ ತನ್ನ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯತ್ತ, ದೂರಸಂಪರ್ಕ, ಸಾಫ್ಟ್ ಎನರ್ಜಿ, ಮೊಬೈಲ್ ಹಾಗೂ ಇತರ ಕ್ಷೇತ್ರಗಳಿಗೆ ತಮ್ಮ ವ್ಯಾಪ್ತಿ ವಿಸ್ತರಿಸಿದರು. ಟೀವಿ ಕ್ಷೇತ್ರದಲ್ಲಿ ದೇಶದ ಅಗ್ರ 10 ಪ್ರಮುಖ ಕಂಪನಿಗಳಲ್ಲಿ ಸ್ಥಾನ ಪಡೆದ ಬಿಪಿಎಕ್, ದೇಶದ ಟೀವಿ ವಲಯದಲ್ಲಿ ಶೇ.15ರಷ್ಟು ಮಾರುಕಟ್ಟೆ ಪಾಲು ಬಾಚಿಕೊಂಡಿತು ಹಾಗೂ 90ರ ದಶಕದಲ್ಲಿ ಕಂಪನಿಯ ಆದಾಯ ವಾರ್ಷಿಕ ಸುಮಾರು 4300 ಕೋಟಿ ರು. ತಲುಪಿತು.
undefined
ಟೀವಿಯನ್ನು ವಿದೇಶಕ್ಕೆ ರಫ್ತು ಮಾಡುವ ಭಾರತದ ಅತಿದೊಡ್ಡ ಕಂಪನಿ ಎಂಬ ಖ್ಯಾತಿ ಪಡೆಯಿತು. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪಾದನೆಗಳನ್ನು ನಂಬಿಯಾರ್ ಉನ್ನತೀಕರಿಸಿದರು ಹಾಗೂ ‘ಭಾರತದಲ್ಲೇ ಉತ್ಪಾದಿಸಿ’ (ಮೇಕ್ ಇನ್ ಇಂಡಿಯಾ) ಪರಿಕಲ್ಪನೆಯನ್ನು 60 ವರ್ಷ ಹಿಂದೆಯೇ ಹುಟ್ಟು ಹಾಕಲು ಶ್ರಮಿಸಿದರು.
ಜ್ಞಾನ, ವಿಜ್ಞಾನದ ಭಾಷೆಯಾಗಿ ಕನ್ನಡ: ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಲೇಖನ
ಬಚ್ಚನ್‌ಗೆ ಮರುಜೀವ ನೀಡಿದ್ದ ಬಿಪಿಎಲ್: 1995ರಲ್ಲಿ ಬಿಪಿಎಲ್, ಖ್ಯಾತ ನಟ ಅಮಿತಾಭ್ ಬಚ್ಚನ್ ಅವರನ್ನು ಬ್ರಾಂಡ್ ರಾಯಭಾರಿಯಾಗಿ ಸೆಳೆಯಿತು. ಇದಕ್ಕಾಗಿ ಅವರಿಗೆ ಅದು 8 ಕೋಟಿ ರು.ಗಳನ್ನೂ ಸಂಭಾವನೆಯಾಗಿ ನೀಡಿತ್ತು. ಆ ದಿನಗಳಲ್ಲಿ ಅಮಿತಾಭ್‌ರಂಥ ಸೆಲೆಬ್ರಿಟಿಯು ಜಾಹೀರಾತಲ್ಲಿ ಕಾಣಿಸಿಕೊಂಡಿದ್ದು ಮಿಂಚಿನ ಸಂಚಲನಕ್ಕೆ ಕಾರಣವಾಗಿತ್ತು. ಏಕೆಂದರೆ ಭಾರತದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾಗಿರುವ ಅವರ ವೃತ್ತಿಜೀವನವು ಇನ್ನೂ ಮುಗಿದಿಲ್ಲ ಎಂಬುದನ್ನು ಬಿಪಿಎಲ್ ಜಾಹೀರಾತು ತೋರಿಸಿತು. ಇದಲ್ಲದೆ ಸೆಲೆಬ್ರಿಟಿಗಳು ಶೇವಿಂಗ್ ಫೋಮ್‌ನಿಂದ ಹಿಡಿದ ಅಡುಗೆ ಎಣ್ಣೆಯವರೆಗಿನ ವಿವಿಧ ರೀತಿಯ ವಸ್ತುಗಳ ಪರ ಜಾಹೀರಾತಿನಲ್ಲಿ ಪ್ರಚಾರ ಮಾಡಲು ಸ್ಫೂರ್ತಿ ನೀಡಿತು.