ಯುಪಿಐ ಪಿನ್ ಮರೆತು ಹೋಯ್ತಾ? ಡೋಂಟ್ ವರಿ, ಬದಲಾಯಿಸಲು ಇಲ್ಲಿದೆ ಸರಳ ವಿಧಾನ

Published : Mar 18, 2024, 05:01 PM IST
ಯುಪಿಐ ಪಿನ್ ಮರೆತು ಹೋಯ್ತಾ?  ಡೋಂಟ್ ವರಿ, ಬದಲಾಯಿಸಲು ಇಲ್ಲಿದೆ ಸರಳ ವಿಧಾನ

ಸಾರಾಂಶ

ಕೆಲವೊಮ್ಮೆ ಯುಪಿಐ ಪಿನ್ ಮರೆತು ಹೋಗಿ ತೊಂದರೆ ಅನುಭವಿಸೋದುಂಟು. ಇಂಥ ಸಂದರ್ಭಗಳಲ್ಲಿ ಯುಪಿಐ ಪಿನ್ ಬದಲಾಯಿಸೋದು ಹೇಗೆ? ಇಲ್ಲಿದೆ ಸರಳ ವಿಧಾನ. 

Business Desk: ಯುಪಿಐ ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಕೈಯಲ್ಲಿ ನಗದಿನ ಅನಿವಾರ್ಯತೆಯಿಲ್ಲದೆ ಬೇಕಾದನ್ನು ಖರೀದಿಸುವ ಸ್ವಾತಂತ್ರ್ಯವನ್ನು ಯುಪಿಐ ನೀಡಿದೆ.  ಮೊಬೈಲ್ ನಲ್ಲಿ ಯುಪಿಐ ಅಪ್ಲಿಕೇಷನ್ ಇದ್ರೆ ಸಾಕು ಹಣ ವರ್ಗಾವಣೆ ಕೆಲಸ ಬಲು ಸರಳ. ಸಣ್ಣ ಮೊತ್ತವೇ ಆಗಿರಬಹುದು ಇಲ್ಲವೇ ದೊಡ್ಡದು, ದೇಶಾದ್ಯಂತ ಯಾವ ಮೂಲೆಯಿಂದ ಬೇಕಾದರೂ ಕೆಲವೇ ಸೆಕೆಂಡ್ ಗಳಲ್ಲಿ ವರ್ಗಾವಣೆ ಮಾಡಬಹುದು. ಈ ಎಲ್ಲ ಕಾರಣದಿಂದಲೇ ಯುಪಿಐ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಬಹುದು. ಯುಪಿಐ ಪಾವತಿ ವ್ಯವಸ್ಥೆ ಬಳಕೆಗೆ ಯುಪಿಐ ಪಿನ್ ಅಗತ್ಯ. ಇದನ್ನು ಯುಪಿಐ ವೈಯಕ್ತಿಕ ಗುರುತು ಸಂಖ್ಯೆ ಎಂದು ಕೂಡ ಕರೆಯುತ್ತಾರೆ. ಇದು ಯುಪಿಐ ನೋಂದಣಿ ಸಂದರ್ಭದಲ್ಲಿ ಬಳಕೆದಾರರು ಸೆಟ್ ಮಾಡಿರುವ ವಿಶಿಷ್ಟ ಕೋಡ್. ಆದರೆ, ನೀವು ಯುಪಿಐ ಪಿನ್ ಮರೆದಿದ್ರೆ ಅಥವಾ ಬದಲಾಯಿಸಬೇಕಾದ ಅಗತ್ಯವಿದ್ರೆ ಏನ್ ಮಾಡೋದು? ಹೇಗೆ ಮಾಡೋದು ಎಂಬ ಸಂಶಯವಿರುತ್ತದೆ. ಇದಕ್ಕೆ ಇಲ್ಲಿದೆ ಉತ್ತರ.

ಯುಪಿಐ ಪಿನ್ ಬದಲಾಯಿಸೋದು ಹೇಗೆ?
*ಯುಪಿಐ ಸೇವೆಗಳನ್ನು ನೀಡುವ ಮೊಬೈಲ್ ಅಪ್ಲಿಕೇಷನ್ ತೆರೆಯಿರಿ.
*ಹೋಮ್ ಸ್ಕ್ರೀನ್ ನಲ್ಲಿರುವ ಪ್ರೊಫೈಲ್ ಆಯ್ಕೆಗೆ ತೆರಳಿ.
*ಯುಪಿಐ ಪಿನ್ ಬದಲಾಯಿಸಲು ನೀವು ಬಯಸುತ್ತಿರೋ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.
*"Change UPI PIN/Reset UPI PIN" ಆಯ್ಕೆ ಮಾಡಿ.
*ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಸೇರಿದಂತೆ ಅಗತ್ಯ ಮಾಹಿತಿಗಳನ್ನು ನೀಡಿ.
*ಈ ಎಲ್ಲ ಮಾಹಿತಿಗಳನ್ನು ಸಲ್ಲಿಕೆ ಮಾಡಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
*ನಿಮ್ಮ ಗುರುತು ದೃಢೀಕರಣಕ್ಕೆ ಒಟಿಪಿ ನಮೂದಿಸಿ.
*ಆಯ್ದ ಖಾತೆಗೆ ಹೊಸ ನಾಲ್ಕು ಅಥವಾ ಆರು ಅಂಕೆಗಳ ಯುಪಿಐ ಪಿನ್ ಆಯ್ಕೆಮಾಡಿ.
*ಹೊಸ ಪಿನ್ ದೃಢೀಕರಿಸಿ. ಈಗ ನೀವು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದಂತಾಗುತ್ತದೆ.

ಯುಪಿಐ ಸೇವೆ ಪ್ರಾರಂಭಿಸಿದ ಫ್ಲಿಪ್ ಕಾರ್ಟ್; ಈ ಆ್ಯಪ್ ಡೌನ್ಲೋಡ್ ಮಾಡೋದು ಹೇಗೆ?

ಅಂದಹಾಗೇ ಕೆಲವು ಪ್ಲಾಟ್ ಫಾರ್ಮ್ ಗಳಲ್ಲಿ ಯುಪಿಐ ಪಿನ್ ಬದಲಾಯಿಸಲು ಹೆಚ್ಚುವರಿ ಬ್ಯಾಂಕ್ ಮಾಹಿತಿಗಳು ಅಗತ್ಯ. ಯುಪಿಐ ಪಿನ್ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದ ಜೊತೆಗೆ ಸಂಪರ್ಕ ಹೊಂದಿರುವ ಕಾರಣ ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸೋದು ಅಗತ್ಯ. ಹೀಗಾಗಿ ಅತ್ಯಂತ ಸುರಕ್ಷಿತ ಹಾಗೂ ನೆನಪಿನಲ್ಲಿಡಬಹುದಾದ ಪಿನ್ ಆಯ್ಕೆ ಮಾಡಿ. ಈ ಮೂಲಕ ಸುರಕ್ಷಿತವಾದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿಮ್ಮದಾಗಿಸಿಕೊಳ್ಳಿ. 

ತಪ್ಪಾದ ಖಾತೆಗೆ ಹಣ ಹೋದ್ರೆ ಏನ್ ಮಾಡೋದು?
ನೀವು ತಪ್ಪು ಖಾತೆಗೆ ಯುಪಿಐ ಮುಖಾಂತರ ಹಣ ವರ್ಗಾವಣೆ ಮಾಡಿದ್ದರೆ ಎನ್ ಪಿಸಿಐ ವೆಬ್ ಸೈಟ್ ನಲ್ಲಿ ದೂರು ದಾಖಲಿಸಬಹುದು. ಅದು ಹೇಗೆ?
*ಮೊದಲಿಗೆ npci.org.in ಭೇಟಿ ನೀಡಿ.
*ಆ ಬಳಿಕ ‘What do we do – UPI’ಆಯ್ಕೆ ಮಾಡಿ.
*‘Dispute Redressal Mechanism’ಆಯ್ಕೆ ಮಾಡಿ. 
*ನಂತರ ದೂರುಗಳು ಹಾಗೂ ಫೀಡ್ ಬ್ಯಾಕ್ ನೀಡಲು ಅರ್ಜಿ ಆಯ್ಕೆ ಮಾಡಿ.
*ನಂತರ ದೂರು ಅರ್ಜಿಯಲ್ಲಿ ‘Transaction’ಆಯ್ಕೆ ಮಾಡಿ. ಆ ಬಳಿಕ ವರ್ಗಾವಣೆ ವಿಧಾನ, ಇಶ್ಯೂ, ವಹಿವಾಟು ಐಡಿ, ಬ್ಯಾಂಕ್ ಹೆಸರು, ಮೊತ್ತ, ವರ್ಗಾವಣೆ ದಿನಾಂಕ, ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ಆಯ್ಕೆ ಮಾಡಿ.
*‘Issue’ವಿಭಾಗದಲ್ಲಿ ಅನೇಕ ಆಯ್ಕೆಗಳಿರುತ್ತವೆ. ಆದರೆ, ನೀವು  ‘incorrectly transferred to another account’ಆಯ್ಕೆ ಮಾಡಬೇಕು. 
*ನೀವು ನಿಮ್ಮ ದೂರಿಗೆ ನಿಮ್ಮ ಹೇಳಿಕೆಗಳನ್ನು ದಾಖಲಿಸಬಹುದು. ಅಲ್ಲದೆ, ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಅಪ್ಲೋಡ್ ಮಾಡಬಹುದು. 
*ನಂತರ submit button ಮೇಲೆ ಕ್ಲಿಕ್ ಮಾಡಿ. 

ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!

ನಿಮ್ಮ ದೂರನ್ನು ಪರಿಶೀಲಿಸಿ ಅದರಲ್ಲಿ ಸತ್ಯಾಂಶವಿದೆ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕ 24 ಗಂಟೆಗಳೊಳಗೆ ಆ ಹಣವನ್ನು ಮರಳಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸ್ಟಾರ್‌ಲಿಂಕ್‌ ಇಂಟರ್ನೆಂಟ್‌ ವೆಬ್‌ಸೈಟ್‌ ಆರಂಭ, 30 ದಿನದ ಫ್ರೀ ಟ್ರಯಲ್‌ ಜೊತೆ ರಿಚಾರ್ಜ್‌ ಘೋಷಿಸಿದ ಮಸ್ಕ್‌ ಕಂಪನಿ!
Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ