ಮೊಮ್ಮಗನಿಗೆ 243 ಕೋಟಿ ಮೌಲ್ಯದ ಇನ್ಫಿ ಷೇರು ಉಡುಗೊರೆ ಕೊಟ್ಟ ನಾರಾಯಣಮೂರ್ತಿ, 4ತಿಂಗಳ ಮಗುವೀಗ ಮಿಲಿಯನೇರ್!

By Suvarna NewsFirst Published Mar 18, 2024, 3:13 PM IST
Highlights

ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತುದಾರರ ಸಹ-ಸಂಸ್ಥಾಪಕರಾದ ಎನ್‌ಆರ್ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಸುಮಾರು ₹243 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬೆಂಗಳೂರು (ಮಾ.18): ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತುದಾರರ ಸಹ-ಸಂಸ್ಥಾಪಕರಾದ ಎನ್‌ಆರ್ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಸುಮಾರು ₹243 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸೋಮವಾರ ಷೇರು ವಿನಿಮಯ ಕೇಂದ್ರದ ಮಾಹಿತಿ ತಿಳಿಸಿದೆ. ಉಡುಗೊರೆಯಾಗಿ ನೀಡಿರುವ  ಷೇರುಗಳು ಇನ್ಫೋಸಿಸ್ ಷೇರು ಬಂಡವಾಳದ 0.04% ನಷ್ಟಿದೆ.

ಈ ಮೂಲಕ ನಾಲ್ಕು ತಿಂಗಳ ಮಗು ಏಕಾಗ್ರಹ ರೋಹನ್ ಮೂರ್ತಿ ಎರಡು ಕಾಲಿನಲ್ಲಿ ನಡೆಯುವುದನ್ನು ಕಲಿಯುವ ಮೊದಲೇ ಮಿಲಿಯನೇರ್ ಆಗಿದ್ದಾನೆ, ಏಕೆಂದರೆ ಅವರ ಅಜ್ಜ ಮತ್ತು ಬಿಲಿಯನೇರ್ ಎನ್‌ಆರ್ ನಾರಾಯಣ ಮೂರ್ತಿ ತಮ್ಮ ಮೊಮ್ಮಗನಿಗೆ 240 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 15 ಲಕ್ಷ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ಫೋಸಿಸ್ ಷೇರಿನ ಲಾಭಾಂಶ ತೆಗೆದುಕೊಂಡು ಬೇರೆಯಾದ ನಾರಾಯಣ ಮೂರ್ತಿ ಮಗ ರೋಹನ್ ಮೂರ್ತಿ!

77 ವರ್ಷ ವಯಸ್ಸಿನ ಮೂರ್ತಿ ಕಳೆದ ಶುಕ್ರವಾರದಂದು ಮಾರುಕಟ್ಟೆಯಿಂದ ಹೊರಗಿರುವ ವಹಿವಾಟಿನಲ್ಲಿ ತನ್ನ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಅಥವಾ 0.04% ಪಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಬೆಂಗಳೂರು ಮೂಲದ ಕಂಪನಿಯಲ್ಲಿ ಮೂರ್ತಿ ಅವರಿಗಿದ್ದ  0.40% ಷೇರಿನಿಂದ ಕಡಿತವಾಗಿ  0.36% ಅನ್ನು ಇನ್ನು ನಾರಾಯಣ ಮೂರ್ತಿ ಅವರ ಬಳಿಯಿದೆ.

ಡಿಸೆಂಬರ್ 2023 ರ ಷೇರುದಾರರ ಮಾದರಿಯ ಪ್ರಕಾರ ಇನ್ಫೋಸಿಸ್ ಸಹ-ಸಂಸ್ಥಾಪಕರು ಕಂಪನಿಯ 0.45% ಪಾಲನ್ನು ಅಥವಾ 16,645,638 ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ವಹಿವಾಟಿನ ವಿಧಾನವು "ಆಫ್-ಮಾರ್ಕೆಟ್" ಆಗಿತ್ತು ಎಂದು ಮಾಹಿತಿ ತಂತ್ರಜ್ಞಾನ ಸೇವೆಗಳ ಕಂಪನಿಯು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ.

ರಿಲಯನ್ಸ್‌ನಲ್ಲಿ ಅತೀ ಹೆಚ್ಚು ಪಾಲುದಾರರು ಯಾರು? ಮುಕೇಶ್ ಅಂಬಾನಿ-ಪತ್ನಿ, ಮಕ್ಕಳು ಅಲ್ಲ!

ಎನ್ ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್ ಕಳೆದ ವರ್ಷ ನವೆಂಬರ್ 10 ರಂದು ಗಂಡು ಮಗುವನ್ನು ಸ್ವಾಗತಿಸಿದರು. ಇನ್ಫೋಸಿಸ್ ಅನ್ನು ನಾರಾಯಣಮೂರ್ತಿ, ನಂದನ್ ನಿಲೇಕಣಿ, ಎಸ್ ಗೋಪಾಲಕೃಷ್ಣನ್, ಎಸ್ ಡಿ ಶಿಬುಲಾಲ್, ಕೆ ದಿನೇಶ್, ಎನ್ ಎಸ್ ರಾಘವನ್ ಮತ್ತು ಅಶೋಕ್ ಅರೋರಾ ಸ್ಥಾಪಿಸಿದ್ದಾರೆ. ಕಂಪನಿಯು 1981 ರಲ್ಲಿ ಪುಣೆಯಲ್ಲಿ ಪ್ರಾರಂಭಿಸಲಾಯ್ತು. ಇಂದಿನ ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಎನ್‌ಎಸ್‌ಇಯಲ್ಲಿ ಇನ್ಫೋಸಿಸ್ ಷೇರುಗಳು 0.75% ಕಡಿಮೆಯಾಗಿ ₹1,621.70 ರಂತೆ ವಹಿವಾಟು ನಡೆಸುತ್ತಿವೆ.

ಇನ್ನು ನಾರಾಯಣ ಮೂರ್ತಿ ಅವರ ಮಗ ರೋಹನ್‌ ಮೂರ್ತಿ ಇನ್ಫೋಸಿಸ್‌ನಲ್ಲಿ  ಕೆಲಸ ಮಾಡದೆ ತನ್ನದೇ ಆದ ಸೊರೊಕೊ ಎಂಬ ಕಂಪೆನಿ ಆರಂಭಿಸಿದ್ದಾರೆ. ಆದರೆ ಷೇರುಗಳ  ಲಾಭಾಂಶದ ಆದಾಯದಲ್ಲಿ (ಶೇಕಡಾ 1.67 ರಷ್ಟು) 106.42 ಕೋಟಿ ರೂ. ಇನ್ಫೋಸಿಸ್‌ ನಿಂದ ಪಡೆಯುತ್ತಾರೆ. 
 

click me!