ಪ್ಯಾನ್ ಕಾರ್ಡ್ ಕಳೆದು ಹೋದ್ರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣಿಯಲ್ಲಿ ಎಫ್ ಐಆರ್ ಫೈಲ್ ಮಾಡಿ. ಹಾಗೆಯೇ ಪ್ಯಾನ್ ಕಾರ್ಡ್ ಪ್ರತಿಗೆ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು.
Business Desk: ಭಾರತದಲ್ಲಿ ಪ್ಯಾನ್ ಕಾರ್ಡ್ ಅತೀಮುಖ್ಯ ದಾಖಲೆಗಳಲ್ಲೊಂದು. ಇದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಒಂದು ವೇಳೆ ಪ್ಯಾನ್ ಕಾರ್ಡ್ ಕಳೆದು ಹೋಗಿದ್ದರೆ ನೀವು ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಹೊಸ ಪ್ಯಾನ್ ಕಾರ್ಡ್ ಅಥವಾ ಪ್ಯಾನ್ ಮಾಹಿತಿಗಳಲ್ಲಿ ಬದಲಾವಣೆ ಅಥವಾ ಪರಿಷ್ಕರಣೆಗೆ ಮನವಿ ಸಲ್ಲಿಸಬಹುದು. ಈ ಅರ್ಜಿಯ ಜೊತೆಗೆ ಎಫ್ ಐಆರ್ ಪ್ರತಿಯನ್ನು ಕೂಡ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆ ಆನ್ ಲೈನ್ ಸೌಲಭ್ಯ ಬಳಸಿಕೊಂಡು ಇನ್ ಸ್ಟೆಂಟ್ ಇ-ಪ್ಯಾನ್ ಅಥವಾ ಡಿಜಿಟಲ್ ಪ್ಯಾನ್ ಕಾರ್ಡ್ ಗೆ ಕೂಡ ಅರ್ಜಿ ಸಲ್ಲಿಸಬಹುದು.
ಪ್ಯಾನ್ ಕಾರ್ಡ್ಗೆ ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಯಾವುದೋ ಕಾರಣದಿಂದ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ರೆ ಆಗ ನೀವು ಮರಳಿ ಪ್ಯಾನ್ ಕಾರ್ಡ್ ಪಡೆಯಲು ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸೋದು ಅಗತ್ಯ. ಪ್ಯಾನ್ ಕಾರ್ಡ್ ಕಳೆದು ಹೋದ ತಕ್ಷಣ ಸ್ಥಳೀಯ ಪೊಲೀಸ್ ಠಾಣಿಯಲ್ಲಿ ಎಫ್ ಐಆರ್ ಫೈಲ್ ಮಾಡೋದು ಅಗತ್ಯ. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ.
ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಆನ್ ಲೈನ್ ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದು ಹೇಗೆ?
ಹಂತ 1: ಅಧಿಕೃತ ವೆಬ್ ಸೈಟ್ tin-nsdl.com ಭೇಟಿ ನೀಡಿ.
ಹಂತ 2: ಹೋಮ್ ಪೇಜ್ ನಲ್ಲಿ 'Services'ಮೇಲೆ ಕ್ಲಿಕ್ ಮಾಡಿ ಹಾಗೂ 'PAN'ಆಯ್ಕೆ ಮಾಡಿ. ಆಗ ಹೊಸ ವೆಬ್ ಪೇಜ್ ತೆರೆದುಕೊಳ್ಳುತ್ತದೆ.
ಹತ 3: ಈ ಹೊಸ ಪುಟದಲ್ಲಿ ಕೆಳಕ್ಕೆ ತೆರಳಿ ಹಾಗೂ 'Reprint of PAN card'ಆಯ್ಕೆ ಮಾಡಿ ಅದರಲ್ಲಿ 'Apply'ಮೇಲೆ ಕ್ಲಿಕ್ ಮಾಡಿ.
ಹಂತ 4: 'Online PAN Application'ಎಂಬ ಹೊಸ ಪುಟ ಕಾಣಿಸುತ್ತದೆ.
ಹಂತ 5: 'Application type'ಅಡಿಯಲ್ಲಿ 'Changes or correction in existing PAN data/ Reprint of PAN card' ಆಯ್ಕೆ ಮಾಡಿ.
ಹಂತ 6: ವರ್ಗ ಆಯ್ಕೆ ಮಾಡಿ.
ಹಂತ 7: ಎಲ್ಲ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಅರ್ಜಿ ಸಲ್ಲಿಸಿ.
ಹಂತ 8: ಅರ್ಜಿ ಸಲ್ಲಿಕೆ ಬಳಿಕ ಟೋಕನ್ ಸಂಖ್ಯೆ ಜೊತೆಗೆ ನಿಮ್ಮ ಮನವಿಯನ್ನು ದೃಢೀಕರಿಸುವ ಸಂದೇಶ ಬರುತ್ತದೆ. ಈ ಸಂಖ್ಯೆಯನ್ನು ನಿಮ್ಮ ಭವಿಷ್ಯದ ರೆಫರೆನ್ಸ್ ಗೆ ಇಟ್ಟುಕೊಳ್ಳಿ ಹಾಗೂ 'Continue with the PAN Application Form' ಮೇಲೆ ಕ್ಲಿಕ್ ಮಾಡಿ.
ಹಂತ 9: ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಆ ಬಳಿಕ ಸಲ್ಲಿಕೆ ಮಾದರಿ (ಡಿಜಿಟಲ್, ಸ್ಕ್ಯಾನ್ಡ್ ಅಥವಾ ಭೌತಿಕ) ಆಯ್ಕೆ ಮಾಡಿ ಹಾಹೂ 'ವೈಯಕ್ತಿಕ ಮಾಹಿತಿಗಳು', 'ಸಂಪರ್ಕ ಹಾಗೂ ಇತ ಮಾಹಿತಿಗಳು' ಹಾಗೂ ದಾಖಲೆ ಮಾಹಿತಿಗಳನ್ನು ಪೂರ್ಣಗೊಳಿಸಿ. ಆ ಬಳಿಕ ಅರ್ಜಿ ಸಲ್ಲಿಕೆ ಮಾಡಿ.
1000 ಖಾತೆಗೆ ಒಂದೇ ಪಾನ್: ಪೇಟಿಎಂ ಬ್ಯಾಂಕ್ ಗೋಲ್ಮಾಲ್
ಈಗ ಪಾವತಿ ಪುಟ ತೆರೆದುಕೊಳ್ಳುತ್ತದೆ. ಒಮ್ಮೆ ಪಾವತಿ ಮಾಡಿದ ಬಳಿಕ ನಿಮ್ಮ ನಕಲಿ ಪ್ಯಾನ್ ಕಾರ್ಡ್ ಸ್ಟೇಟಸ್ ಅನ್ನು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಸೃಷ್ಟಿಯಾದ 15 ಅಂಕೆಗಳ ಸ್ವೀಕೃತಿ ಸಂಖ್ಯೆ ಬಳಸಿಕೊಂಡು ಪರಿಶೀಲಿಸಬಹುದು.