ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಪ್ಯಾನ್ ಕಾರ್ಡ್ ಇಂದು ಅತೀಪ್ರಮುಖ ದಾಖಲೆಗಳಲ್ಲೊಂದು. ಆದರೆ, ಪ್ಯಾನ್ ಕಾರ್ಡ್ ಅನ್ನು ಎಲ್ಲ ಕಡೆ ತೆಗೆದುಕೊಂಡು ಹೋಗೋದು ಕೆಲವರಿಗೆ ಕಷ್ಟದ ಕೆಲಸ. ಹೀಗಿರುವಾಗ ಮೊಬೈಲ್ ನಲ್ಲಿ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಟ್ಟುಕೊಂಡರೆ ಸಮಸ್ಯೆಯಿರೋದಿಲ್ಲ. ಆಧಾರ್ ಸಂಖ್ಯೆ ಇದ್ದರೆ ಸಾಕು, ಇ-ಪ್ಯಾನ್ ಕಾರ್ಡ್ ಪಡೆಯೋದು ಬಲು ಸುಲಭ. 

How To Apply For Instant PAN Card Through Aadhaar Number Check Step By Step Guide Here anu

Business Desk: ತೆರಿಗೆದಾರರಿಗೆ ಪ್ಯಾನ್ ಕಾರ್ಡ್ ಮಹತ್ವದ ಬಗ್ಗೆ ತಿಳಿದೇ ಇರುತ್ತದೆ. ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಸಂಖ್ಯೆ ಅಗತ್ಯ. ಹಾಗೆಯೇ ಬ್ಯಾಂಕ್ ಖಾತೆ ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಕೂಡ ಪ್ಯಾನ್ ಕಾರ್ಡ್ ಅಗತ್ಯ. ಹಾಗೆಯೇ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಜಮೆ ಮಾಡಲು ಹಾಗೂ ದುಬಾರಿ ಬೆಲೆಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಕೂಡ ಪ್ಯಾನ್ ಕಾರ್ಡ್ ಕೇಳೋದು ಸಾಮಾನ್ಯ. ಆದರೆ, ಪ್ಯಾನ್ ಕಾರ್ಡ್ ಅನ್ನು ಎಲ್ಲ ಕಡೆ ತೆಗೆದುಕೊಂಡು ಹೋಗೋದು ಕೆಲವರಿಗೆ ಕಷ್ಟದ ಕೆಲಸ. ಹೀಗಿರುವಾಗ ಮೊಬೈಲ್ ನಲ್ಲಿ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಟ್ಟುಕೊಂಡರೆ ಸಮಸ್ಯೆಯಿರೋದಿಲ್ಲ. ಆದಾಯ ತೆರಿಗೆ ವೆಬ್ ಸೈಟ್ ನಿಂದ ಇದನ್ನು ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳವಾಗಿದ್ದರೂ ನೀವು ಇದನ್ನು ವೆಬ್ ಸೈಟ್ ನಿಂದ ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಇದಕ್ಕೆ ನಿಮ್ಮ ಬಳಿ ಆಧಾರ್ ಸಂಖ್ಯೆ ಇದ್ದರೆ ಸಾಕು. ಹಾಗಾದ್ರೆ ಆಧಾರ್ ಸಂಖ್ಯೆ ಬಳಸಿಕೊಂಡು ಇ-ಪ್ಯಾನ್  ಕಾರ್ಡ್ ಡೌನ್ ಲೋಡ್ ಮಾಡೋದು ಹೇಗೆ? 

ಇ-ಪ್ಯಾನ್ ಸೌಲಭ್ಯ ಯಾರಿಗೆ ಸಿಗುತ್ತೆ?
ಆಧಾರ್ ಸಂಖ್ಯೆ ಹೊಂದಿರೋರಿಗೆ ತಕ್ಷಣವೇ ಪ್ಯಾನ್ ಕಾರ್ಡ್ ಅಥವಾ ಇ-ಪ್ಯಾನ್ ಕಾರ್ಡ್ ಪಡೆಯೋ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಇ-ಪ್ಯಾನ್ ಕಾರ್ಡ್ ಅನ್ನು ಪಿಡಿಎಫ್ ನಮೂನೆಯಲ್ಲಿ ಅರ್ಜಿದಾರರಿಗೆ ನೀಡಲಾಗುತ್ತದೆ. ಹಾಗೆಯೇ ಇದಕ್ಕೆ ಯಾವುದೇ ಶುಲ್ಕ ಕೂಡ ಪಾವತಿಸಬೇಕಾಗಿಲ್ಲ. ಇನ್ನು ಇ-ಪ್ಯಾನ್ ಡಿಜಿಟಲ್ ಸಹಿ ಹೊಂದಿರುವ ಪ್ಯಾನ್ ಕಾರ್ಡ್ ಆಗಿದ್ದು, ಆಧಾರ್ ಕಾರ್ಡ್ ಇ-ಕೆವೈಸಿ ಮಾಹಿತಿಗಳನ್ನು ಆಧರಿಸಿ ಇದನ್ನು ನೀಡಲಾಗುತ್ತದೆ. ಈ ಸೇವೆ ಎಲ್ಲ ವೈಯಕ್ತಿಕ ತೆರಿಗೆದಾರರಿಗೂ ಲಭ್ಯವಿದೆ. ಆಧಾರ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಸಾಕು, ನೀವು ಇ-ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಡೌನ್ ಲೋಡ್ ಮಾಡಬಹುದು.

Financial Deadlines: ಸೆ.30ರೊಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸದಿದ್ರೆ ತೊಂದ್ರೆ ಖಚಿತ!

ಆಧಾರ್ ಸಂಖ್ಯೆ ಬಳಸಿ ಇ-ಪ್ಯಾನ್ ಪಡೆಯೋದು ಹೇಗೆ?
*ಮೊದಲಿಗೆ ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ https://www.incometax.gov.in/iec/foportal/ ಭೇಟಿ ನೀಡಿ.
*ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಇನ್ಸ್ಟಂಟ್ ಇ-ಪ್ಯಾನ್ ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ ಇ-ಪ್ಯಾನ್ ಪುಟದಲ್ಲಿ Get New e-PAN ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ  ಹೊಸ e-PAN ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆ ನಮೂದಿಸಿ. 
*ಆ ಬಳಿಕ I confirm ಆಯ್ಕೆ ಮಾಡಿ.  Continue ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ OTP ದೃಢೀಕರಣ ಪುಟದಲ್ಲಿ I have read the consent terms ಮೇಲೆ ಕ್ಲಿಕ್ ಮಾಡಿ. ಆ ಬಳಿಕ Continue ಮೇಲೆ ಕ್ಲಿಕ್ ಮಾಡಿ.
*ನಂತರ OTP ದೃಢೀಕರಣ ಪುಟದಲ್ಲಿ ನಿಮ್ಮ ಮೊಬೈಲ್ ಗೆ ಬಂದಿರುವ  6 ಅಂಕೆಯ ಒಟಿಪಿ ನಮೂದಿಸಿ. 
*ಯುಐಡಿಎಐ ಜೊತೆಗೆ ಆಧಾರ್ ಮಾಹಿತಿಗಳನ್ನು ದೃಢೀಕರಿಸುವ ಬಾಕ್ಸ್  ಆಯ್ಕೆ ಮಾಡಿ. ಆ ಬಳಿಕ Continue ಮೇಲೆ ಕ್ಲಿಕ್ ಮಾಡಿ.
*ಎಲ್ಲ ಮಾಹಿತಿಗಳನ್ನು ಸಲ್ಲಿಕೆ ಮಾಡಿದ ಬಳಿಕ ಸ್ವೀಕೃತಿ ಸಂಖ್ಯೆಯೊಂದಿಗೆ ಯಶಸ್ವಿಯಾಗಿರುವ ಬಗ್ಗೆ ಸಂದೇಶ ಸ್ಕ್ರೀನ್ ಮೇಲೆ ಕಾಣಿಸುತ್ತದೆ. 

ನಿಮ್ಮ ಎಲ್ ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡ

ಇ-ಪ್ಯಾನ್ ಪ್ರಯೋಜನವೇನು?
*ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಟ್ಟುಕೊಂಡರೆ ಅಗತ್ಯವಿದ್ದಾಗ ಬಳಸಬಹುದು.
*ಎಲ್ಲ ಕಡೆ ಪ್ಯಾನ್ ಕಾರ್ಡ್ ಅನ್ನು ಜೇಬಿನಲ್ಲಿಟ್ಟುಕೊಂಡು ಹೋಗಬೇಕಾದ ಅಗತ್ಯವಿಲ್ಲ.

Latest Videos
Follow Us:
Download App:
  • android
  • ios