ಕೋಟಿ ಮೌಲ್ಯದ ಕಂಪನಿ ಸೇಲ್ ಮಾಡಿದ್ರೂ ಆದಾಯ ಇಲ್ಲ, ಈಗ ಇಂಟರ್ನ್‌ಶಿಪ್ ಹುಡುಕ್ತಿದ್ದಾರೆ ವಿನಯ್ ಹಿರೇಮಠ್

ಲೂಮ್ ಕಂಪನಿ ಸಹ ಸಂಸ್ಥಾಪಕರಾಗಿದ್ದ ವಿನಯ್ ಹಿರೇಮಠ್ ಸದ್ಯ ನಿರುದ್ಯೋಗಿ. ಸಂದರ್ಶನವೊಂದರಲ್ಲಿ ವಿನಯ್ ತಮ್ಮ ಈಗಿನ ಸ್ಥಿತಿಯನ್ನು ಎಲ್ಲರ ಮುಂದಿಟ್ಟಿದ್ದಾರೆ. 
 

Loom Co Founder Vinay Hiremath Reveals He Has No Income Seeking Internship Despite Earning

ವಿಡಿಯೋ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಲೂಮ್‌ (Video messaging platform Loom) ನ ಭಾರತೀಯ ಮೂಲದ ಸಹ-ಸಂಸ್ಥಾಪಕ ವಿನಯ್ ಹಿರೇಮಠ್ (Vinay Hiremath) ಸದ್ಯ ಯಾವುದೇ ಆದಾಯವನ್ನು ಹೊಂದಿಲ್ಲ. ದೊಡ್ಡ ಕಂಪನಿಯನ್ನು ಮಾರಾಟ ಮಾಡಿ, ಖಾಲಿ ಕೈನಲ್ಲಿರುವ ವಿನಯ್ ಹಿರೇಮಠ್ ಈಗ ಇಂಟರ್ನ್‌ಶಿಪ್‌ಗೆ ಹುಡುಕಾಟ ನಡೆಸುತ್ತಿದ್ದೇನೆ ಎಂದಿದ್ದಾರೆ.  2023 ರಲ್ಲಿ  ವಿನಯ್ ಹಿರೇಮಠ್ ತಮ್ಮ ಕಂಪನಿ ಲೂಮ್ ಅನ್ನು ಅಟ್ಲಾಸಿಯನ್ ಗೆ ಮಾರಾಟ ಮಾಡಿದ್ದರು. ಅಟ್ಲಾಸಿಯನ್, ಲೂಮ್ ಕಂಪನಿಯನ್ನು  975 ಮಿಲಿಯನ್ ಡಾಲರ್ ಗೆ ಖರೀದಿ ಮಾಡಿತ್ತು. ಅಂದ್ರೆ ಸರಿಸುಮಾರು 8350 ಕೋಟಿಗಳಿಗೆ ಖರೀದಿಸಿತ್ತು. ಈ ಟೈಂನಲ್ಲಿ ವಿನಯ್ ಹಿರೇಮಠ್  50 ರಿಂದ 70 ಮಿಲಿಯನ್ ಡಾಲರ್ ಲಾಭ ಪಡೆದಿದ್ದರು. 

ಮನಿವೈಸ್ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ವಿನಯ್ ಹಿರೇಮಠ್, ಸದ್ಯ ತಮ್ಮ ಪರಿಸ್ಥಿತಿ ಹಾಗೂ ಎದುರಿಸುತ್ತಿರುವ ಸವಾಲಿನ ಬಗ್ಗೆ ತಿಳಿಸಿದ್ದಾರೆ. ಅಟ್ಲಾಸಿಯನ್ ನೀಡಿದ್ದ 60 ಮಿಲಿಯನ್ ಡಾಲರ್ ಪ್ಯಾಕೇಜ್ ತ್ಯಜಿಸಿದ್ದೆ, ಇಂದು ನನಗೆ ಯಾವುದೇ ಆದಾಯವಿಲ್ಲ. ಇದೀಗ, ನಾನು ಇಂಟರ್ನ್‌ಶಿಪ್‌ಗಾಗಿ ಹುಡುಕುತ್ತಿದ್ದೇನೆ ಎಂದಿದ್ದಾರೆ.  

Latest Videos

ಲೂಮ್ ಮಾರಾಟ ಮಾಡಿದ ನಂತ್ರ ವಿನಯ್ ಹಿರೇಮಠ್ ಖಾಲಿ ಕುಳಿತಿದ್ದಾರೆ. ಪ್ರತಿದಿನ ಐದರಿಂದ ಎಂಟು ಗಂಟೆಗಳ ಕಾಲ ಭೌತಶಾಸ್ತ್ರವನ್ನು ಅಧ್ಯಯನ ಮಾಡ್ತಿದ್ದಾರೆ. ಜೊತೆಗೆ ಯುವಜನರೊಂದಿಗೆ ಆನ್‌ಲೈನ್‌ನಲ್ಲಿ ಚರ್ಚೆ ನಡೆಸ್ತಿರುತ್ತಾರೆ. ವಿನಯ್, ರೊಬೊಟಿಕ್ಸ್ ಕಂಪನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಇಂಟರ್ನ್‌ಶಿಪ್ ಮಾಡುವ ಆಸೆ ಹೊಂದಿದ್ದಾರೆ. ಭೌತಶಾಸ್ತ್ರದ ಬಗ್ಗೆ ಹೆಚ್ಚು ಅಭ್ಯಾಸ ಮಾಡ್ತಿದ್ದು, ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಇಂಟರ್ನ್‌ಶಿಪ್ ಮಾಡಲು ರೊಬೊಟಿಕ್ಸ್ ನ ಕೆಲವು ಸ್ಟಾರ್ಟ್‌ಅಪ್‌   ಕಂಪನಿಗಳಿಗೆ ಇಂಟರ್ವ್ಯೂ ನೀಡ್ತಿದ್ದೇನೆ ಎಂದು ವಿನಯ್ ಹಿರೇಮಠ್ ಹೇಳಿದ್ದಾರೆ. 

ಎಲಾನ್ ಮಸ್ಕ್ ಗೂಗ್ಲಿ, $ 12 ಬಿಲಿಯನ್ ನಷ್ಟದಲ್ಲಿ ಎಕ್ಸ್ (ಟ್ವಿಟರ್) ಮಾರಾಟ

ವಿನಯ್ ಹಿರೇಮಠ್, ಕೆಲಸ, ಯಶಸ್ಸು ಮತ್ತು ಹಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ವಿವಿಧ ಹಣಕಾಸು ವ್ಯವಸ್ಥೆಗಳಲ್ಲಿ ಮೌಲ್ಯ ಮತ್ತು ಡೇಟಾಬೇಸ್‌ಗಳನ್ನು ವಿನಿಮಯ ಮಾಡುವುದ್ರಲ್ಲಿ ಜೀವನ ಕಳೆಯಲು ನನಗೆ ಇಷ್ಟವಿಲ್ಲ. ನನ್ನ ಕಂಪನಿಯನ್ನು ಮಾರಾಟ ಮಾಡುವ ಮೊದಲು ದೊಡ್ಡ ಮಿಷನ್‌ಗಳಲ್ಲಿ ನಂಬಿಕೆ ಇಟ್ಟಿದ್ದೆ. ಆದರೆ ಕಾಲಾನಂತರದಲ್ಲಿ, ನಿಜವಾದ ಸಂತೋಷ ಎಲ್ಲಿದೆ ಎಂಬುದು ಗೊತ್ತಾಗಿದೆ. ಸುತ್ತಲಿನ ಜನರಿಗೆ ಉತ್ಸಾಹ ತುಂಬುವುದರಲ್ಲಿ ಸಂತೋಷವಿದೆ. ಜೀವನ ಅಂದ್ರೆ ಸೃಷ್ಟಿ ಮಾಡುವುದು ಎಂದು ವಿನಯ್ ಹಿರೇಮಠ್ ಹೇಳಿದ್ದಾರೆ. 

ಲೂಮ್‌  ಬಗ್ಗೆ ಮಾತನಾಡಿದ ವಿನಯ್ ಹಿರೇಮಠ್,  ಸ್ಟಾರ್ಟ್‌ಅಪ್‌ನ ಮೂಲ ಧ್ಯೇಯವನ್ನು ಅತಿಯಾಗಿ ವೈಭವೀಕರಿಸಲಾಗಿದೆ. ಇದು  ಕ್ಲೌಡ್‌ಗೆ ಸಂಪರ್ಕಗೊಂಡಿರುವ ಸರಳ ಸ್ಕ್ರೀನ್ ರೆಕಾರ್ಡರ್ ಆಗಿತ್ತು.  ಅಸಿಂಕ್ರೋನಸ್ ವೀಡಿಯೊ ಸಂದೇಶವನ್ನು ನಾವು ಲೂಮ್ ನಲ್ಲಿ ಕಳುಹಿಸುತ್ತಿರಲಿಲ್ಲ. ಅದು ನಮಗೆ ನಾವೇ ಹೇಳಿಕೊಂಡ ಅಸಂಬದ್ಧತೆ. ನಾವು ಕ್ಲೌಡ್‌ಗೆ ಸಂಪರ್ಕಗೊಂಡಿರುವ ಒಂದು ಸ್ಕ್ರೀನ್ ರೆಕಾರ್ಡರ್ ನಿರ್ಮಿಸಿದ್ದೆವು ಎಂದು ವಿನಯ್ ಹಿರೇಮಠ್ ಹೇಳಿದ್ದಾರೆ.  

PM Kisan Update: ಈ ರಾಜ್ಯದ ರೈತರಿಗೆ ಸಿಗಲಿದೆ ವರ್ಷಕ್ಕ 9 ಸಾವಿರ ಹಣ? ಯಾವಾಗ ಬರಲಿದೆ 20ನೇ ಕಂತು..

ನಾನು ಶ್ರೀಮಂತ ಮತ್ತು ನನ್ನ ಜೀವನದಲ್ಲಿ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ ಎಂಬ ಶೀರ್ಷಿಕೆಯಲ್ಲಿ ಜನವರಿಯಲ್ಲಿ ವಿನಯ್ ಹಿರೇಮಠ್ ಒಂದು ಬ್ಲಾಗ್ ಪೋಸ್ಟ್ ಮಾಡಿದ್ದರು. ಲೂಮ್ ಮಾರಾಟದ ನಂತ್ರ ಏನು ಮಾಡ್ಬೇಕು ಎಂಬುದು ವಿನಯ್ ಅವರಿಗೆ ತಿಳಿದಿರಲಿಲ್ಲ. ಆ ಸಮಯದಲ್ಲಿ ಅವರು ಎದುರಿಸಿದ ಹೋರಾಟವನ್ನು ವಿವರಿಸಿದ್ದಾರೆ. ಈಗ ನನಗೆ ಮತ್ತೊಮ್ಮೆ ಕೆಲಸ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ. ಆದ್ರೆ ಅದು ನಿರೀಕ್ಷಿಸಿದಷ್ಟು ತೃಪ್ತಿಕರವಾಗಿಲ್ಲ ಎಂದಿದ್ದಾರೆ. 33 ವರ್ಷದ ವಿನಯ್ ಹಿರೇಮಠ್, ಆರ್ಥಿಕ ಭದ್ರತೆಯ ಹೊರತಾಗಿಯೂ, ಜೀವನದಲ್ಲಿ ಒಂದು ದಿಕ್ಕನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

The co-founder of Loom sold his biz for ~$1B, made $50-70M personally, then walked away from an extra $60M

He has “no income right now” and is “looking for internships”... has a wild post-exit story. we talked about it on Moneywise:

-Turned down $60M in retention… pic.twitter.com/uTdS5blabz

— Sam Parr (@thesamparr)
vuukle one pixel image
click me!