ನೂಲಿನ ದರ ಹೆಚ್ಚಳ, ಈರೋಡ್‌ನ 30,000 ಕೈಮಗ್ಗಗಳು ಸ್ಥಗಿತ!

Published : Dec 22, 2020, 01:37 PM IST
ನೂಲಿನ ದರ ಹೆಚ್ಚಳ, ಈರೋಡ್‌ನ 30,000 ಕೈಮಗ್ಗಗಳು ಸ್ಥಗಿತ!

ಸಾರಾಂಶ

ನೂಲಿನ ದರ ಏರಿಕೆ| ರೆಯಾನ್‌ ಬಟ್ಟೆಗಳನ್ನು ತಯಾರಿಸುವ 30 ಸಾವಿರ ಕೈಮಗ್ಗಗಳು ಸ್ಥಗಿತ| ಈರೋಡ್‌ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿ

ಇರೋಡ್‌(ಡಿ.22): ನೂಲಿನ ದರ ಏರಿಕೆ ಆದ ಹಿನ್ನೆಲೆಯಲ್ಲಿ ರೆಯಾನ್‌ ಬಟ್ಟೆಗಳನ್ನು ತಯಾರಿಸುವ ಇಲ್ಲಿನ 30 ಸಾವಿರ ಕೈಮಗ್ಗಗಳು ಸೋಮವಾರದಿಂದ ಒಂದು ವಾರಗಳ ಕಾಲ ಸ್ಥಗಿತಗೊಳ್ಳಲಿವೆ.

ಈರೋಡ್‌ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿcಪಡೆದಿದ್ದು, ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ ಕಾಳಿಂಗರಾಯನಪಾಳ್ಯಂ, ವೀರಪ್ಪನ್‌ಛತ್ರಂ, ಅಶೋಕ್‌ಪುರಂ ಹಾಗೂ ಇತರ ಸ್ಥಳಗಳಲ್ಲಿ 30 ಸಾವಿರಕ್ಕೂ ಅಧಿಕ ಕೈಮಗ್ಗಗಳು ಇದ್ದು, ದಿನವೊಂದಕ್ಕೆ 24 ಸಾವಿರ ಮೀಟರ್‌ನಷ್ಟುರೆಯಾನ್‌ ಬಟ್ಟೆಯನ್ನು ಉತ್ಪಾದಿಸುತ್ತಿವೆ.

ಬಟ್ಟೆ ತಯಾರಿಕೆಗೆ ಬಳಸುವ ನೂಲಿನ ಉಂಡೆಗಳ ದರ 26 ರು.ನಷ್ಟು ಹೆಚ್ಚಳವಾಗಿದೆ. ಹೀಗಾಗಿ ಕೈಮಗ್ಗವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇರೋಡ್‌ ಜವಳಿ ಸಂಘಟನೆಯ ಅಧ್ಯಕ್ಷ ಸುರೇಶ್‌ ತಿಳಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!