
ನವದೆಹಲಿ(ಡಿ.22): 1996ರಲ್ಲಿ ಭಾರತಕ್ಕೆ ಬಂದ ಮೊದಲ ವಿದೇಶಿ ಕಾರು ತಯಾರಿಕಾ ಕಂಪನಿಗಳ ಪೈಕಿ ಒಂದೆನಿಸಿದ ಅಮೆರಿಕದ ಜನರಲ್ ಮೋಟರ್ಸ್ ಕ್ರಿಸ್‌ಮಸ್‌ಗೂ ಮುನ್ನ ಭಾರತದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.
2017ರಲ್ಲಿ ಸ್ಥಳೀಯ ಉತ್ಪಾದನಾ ಘಟಕಗಳನ್ನು ಜನರಲ್ ಮೋಟರ್ಸ್ ಸ್ಥಗಿತಗೊಳಿಸಿತ್ತು. ಇದೀಗ ಭಾರತದಲ್ಲಿ ಹೊಂದಿರುವ ಏಕೈಕ ಉತ್ಪಾದನಾ ಘಟಕವನ್ನು ಕೂಡ ಸ್ಥಗಿತಗೊಳಿಸಲಿದೆ. ಪುಣೆಯ ಸಮೀಪದ ತಲೇಗಾಂವ್‌ನನಲ್ಲಿರುವ ಉತ್ಪಾದನಾ ಘಟಕವನ್ನು ಕ್ರಿಸ್‌ಮಸ್‌ನ ಮುನ್ನಾದಿನ ಮುಚ್ಚುವುದಾಗಿ ಜನರಲ್ ಮೋಟರ್ಸ್ ಘೋಷಿಸಿದೆ. ಶವರ್ಲೆಟ್, ಬ್ಯೂಕ್ ಮುಂತಾದ ಕಾರುಗಳ ಮೂಲಕ ಜನರಲ್ ಮೋಟರ್ಸ್ ಭಾರತದಲ್ಲಿ ಪ್ರಸಿದ್ಧಿ ಪಡೆದಿತ್ತು.
ಗುಜರಾತಿನ ಹಲೊಲ್‌ನಲ್ಲಿರುವ ಘಟಕವನ್ನು ಜನರಲ್ ಮೋಟರ್ಸ್ 2017ರಲ್ಲಿ ಚೀನಾದ ಎಂಜಿ ಮೋಟರ್ಸ್ಗೆ ಮಾರಾಟ ಮಾಡಿದೆ. ತಲೇಗಾಂವ್‌ನಲ್ಲಿರುವ ಘಟಕದಲ್ಲಿ ಸದ್ಯ 1800 ಮಂದಿ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ 2021ರ ವರೆಗೆ ವೇತನ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.