ಕೊರೋನಾ ಎಫೆಕ್ಟ್: ಚಿನ್ನಕ್ಕೆ ಬೇಡಿಕೆಯೇ ಇಲ್ಲ!

By Kannadaprabha NewsFirst Published Apr 7, 2020, 8:48 AM IST
Highlights

ಕೊರೋನಾ ಎಫೆಕ್ಟ್: ಚಿನ್ನಕ್ಕೆ ಬೇಡಿಕೆ ಇಲ್ಲ, ಆಮದು 73% ಕುಸಿತ| ಆರೂವರೆ ವರ್ಷದಲ್ಲಿ ಅತ್ಯಂತ ಕೆಳಮಟ್ಟಕ್ಕೆ

ಮುಂಬೈ(ಏ.07): ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿರುವ ಪರಿಣಾಮ ಚಿನ್ನದ ಆಮದು ಮಾಚ್‌ರ್‍ನಲ್ಲಿ ಏಕಾಏಕಿ ಶೇ.73ರಷ್ಟುಕುಸಿತ ಕಂಡಿದೆ.

ಕಳೆದ ಆರೂವರೆ ವರ್ಷದಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂದು ಸೋಮವಾರ ಸರ್ಕಾರದ ಮೂಲಗಳು ತಿಳಿಸಿವೆ. ವರ್ಷದಿಂದ ವರ್ಷಕ್ಕೆ ಚಿನ್ನದ ಆಮದು ಮಾರುಕಟ್ಟೆಯಲ್ಲಿ ಗಣನೀಯ ಕುಸಿತ ಕಾಣುತ್ತಿದ್ದ ಬೆನ್ನಲ್ಲೇ ಈಗ ಮತ್ತೊಂದು ಹೊಡೆತ ಬಿದ್ದಿದೆ.

ಮುಕೇಶ್‌ ಅಂಬಾನಿಗೆ 1. 44 ಲಕ್ಷ ಕೋಟಿ ನಷ್ಟ!

ವರ್ಷದ ಹಿಂದೆ 93.24 ಟನ್‌ಗಳಷ್ಟುಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಮಾಚ್‌ರ್‍ನಲ್ಲಿ ಆಮದು ಆಗಿರುವ ಚಿನ್ನ ಕೇವಲ 25 ಟನ್‌. ಸರಿಸುಮಾರು 9400 ಕೋಟಿ ರು. ಮೌಲ್ಯದ ಚಿನ್ನದ ಆಮದು ಕುಸಿದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

click me!