ವಿನಾಯ್ತಿ ಮುಕ್ತಾಯ, ಮಂಗಳವಾರದದಿಂದ ಮತ್ತೆ ಇಎಂಐ ಆರಂಭ!

By Kannadaprabha NewsFirst Published Aug 30, 2020, 8:33 AM IST
Highlights

ನಾಡಿದ್ದಿನಿಂದ ಮತ್ತೆ ಇಎಂಐ ಆರಂಭ|  6 ತಿಂಗಳ ಮುಂದೂಡಿಕೆ ಅವಧಿ ನಾಳೆ ಅಂತ್ಯ

ಮುಂಬೈ(ಆ.30): ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬ್ಯಾಂಕ್‌ ಸಾಲದ ಮಾಸಿಕ ಕಂತು ಪಾವತಿ (ಇಎಂಐ)ಗೆ 6 ತಿಂಗಳ ತಾತ್ಕಾಲಿಕ ವಿನಾಯಿತಿ ಸೋಮವಾರ ಮುಕ್ತಾಯಗೊಳ್ಳಲಿದೆ. ಇಎಂಐ ಪಾವತಿ ಮುಂದೂಡಿಕೆಯನ್ನು ಆ.31ರ ಬಳಿಕವೂ ವಿಸ್ತರಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಇಎಂಐ, ಪಾವತಿ ಮುಂದೂಡಿದ ಸಾಲದ ಕಂತಿನ ಮೇಲೆ ಬಡ್ಡಿ?

ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟು ಇಲ್ಲದೇ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಸಾಲಗಾರಿಗೆ ಅನುಕೂಲ ಕಲ್ಪಿಸಲು 2020 ಮಾ.1ರಿಂದ ಅನ್ವಯವಾಗುವಂತೆ ಇಎಂಐ ಪಾವತಿಯನ್ನು ಆರ್‌ಬಿಐ ಮುಂದೂಡಿಕೆ ಮಾಡಿತ್ತು. ಇದು ಸಾಲದಾರರಿಗೆ ನೀಡಿದ ತಾತ್ಕಾಲಿಕ ನಿರಾಳತೆ ಅಷ್ಟೇ. ಒಂದು ವೇಳೆ 6 ತಿಂಗಳಿಗಿಂತ ಹೆಚ್ಚು ಅವಧಿಗೆ ಎಎಂಐ ಪಾವತಿ ಮುಂದೂಡಿದರೆ ಸಾಲಗಾರರ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೇ ಸಾಲದ ಮರುಪಾವತಿಯ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪರಿಪಾಠ ಪುನರಾವರ್ತನೆಗೊಳ್ಳುವ ಅಪಾಯವಿದೆ. ಜೊತೆಗೆ ಎಚ್‌ಡಿ.ಎಫ್‌ಸಿ, ಕೋಟಕ್‌ ಮಹಿಂದ್ರಾ ಸೇರಿದಂತೆ ಹಲವು ಬ್ಯಾಂಕುಗಳು ಇಎಂಐ ಮುಂದೂಡಿಕೆಗೆ ಸಹಮತ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕೊರೋನಾ ಆತಂಕದ ನಡುವೆ ಸಿಹಿ ಸುದ್ದಿ ನೀಡಿದ RBI, ಜೀವನಕ್ಕಿಲ್ಲ ಟೆನ್ಶನ್!

ಇಎಂಐ ಪಾವತಿಯನ್ನು ಮೊದಲು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದ್ದ ಕೇಂದ್ರ ಸರ್ಕಾರ, ಬಳಿಕ ಇನ್ನೂ 3 ತಿಂಗಳು ವಿಸ್ತರಿಸಿತ್ತು. ಇಎಂಐ ಪಾವತಿ ಮುಂದೂಡಿಕೆಯಾಗಿದ್ದರೂ, ಬಡ್ಡಿ, ಸುಸ್ತಿ ಬಡ್ಡಿಯನ್ನು ಗ್ರಾಹಕರು ಪಾವತಿಸಬೇಕಾಗಿದೆ. ಇದನ್ನು ಮನ್ನಾ ಮಾಡಬೇಕು ಎಂಬ ಅರ್ಜಿಯೊಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

click me!