ಸಿಎಂ ಯಡಿಯೂರಪ್ಪ 2020- 21ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಕೃಷಿಕರಿಗೆ, ಮೀನುಗಾರರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೂ ಒತ್ತು ನೀಡಲಾಗಿದ್ದು, ಇತರ ಜಿಲ್ಲೆಗಳ ವಿಕಾಸಕ್ಕೂ ಒತ್ತು ನೀಡಿದ್ದಾರೆ. ಕೊಟ್ಟ ಮಾತಿನಂತೆ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಮೀಸಲಿಟ್ಟಿದ್ದು, ತವರುನಾಡು ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಅನೇಕರಿಗೆ ಸಿಹಿ ನೀಡಿರುವ ಸಿಎಂ ಯಡಿಯೂರಪ್ಪ, ಮದ್ಯ ಪ್ರಿಯರಿಗೆ ಶಾಕ್ ನೀಡುವುದರೊಂದಿಗೆ, ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿಯನ್ನೂ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಹೊಸ ಯೋಜನೆ ಘೊಷಣೆ ಇಲ್ಲದೆ, ಹಳೆ ಭಾಗ್ಯಗಳ ಕಡಿತ ಮಾಡದೆ, ಆರ್ಥಿಕ ಸಂಕಷ್ಟದ ನಡುವೆಯೇ 2 ಲಕ್ಷ 7 ಸಾವಿರ 893 ಕೋಟಿ ಗಾತ್ರದ ಬಜೆಟ್ ಸಮಾಧಾನಕರ ಬಜೆಟ್ ಮಂಡಿಸಿದ್ದಾರೆ.

02:10 PM (IST) Mar 05
1 ಗಂಟೆ 40 ನಿಮಿಷದಲ್ಲಿ ರಾಜ್ಯದ ಆಯವ್ಯಯ ಮಂಡಿಸುವ ಮೂಲಕ ಯಡಿಯೂರಪ್ಪ ಅವರು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎನ್ನುವ ದಾಖಲೆ ಬರೆದರು. ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್‌ನಿಂದ ಯಾವುದು ಏರಿಕೆ? ಯಾವುದು ಇಳಿಕೆಯಾಗಿದೆ?
02:09 PM (IST) Mar 05
ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಡಕೆ ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ರೈತರು ಸಾಲದ ಮೇಲಿನ ಬಡ್ಡಿ ಮನ್ನಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
02:07 PM (IST) Mar 05
ಬಜೆಟ್ ಮಂಡನೆ ಬಳಿಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ 'ಇದು ಸ್ಪಷ್ಟತೆ ಇಲ್ಲದ ಬಜೆಟ್. ಜನರನ್ನ ಕತ್ತಲಲ್ಲಿ ಇಡುವ ಬಜೆಟ್ ಆಗಿದೆ. ಅನ್ನ ಭಾಗ್ಯದ ಯೋಜನೆ ಕೈಬಿಟ್ಟಿದ್ದಾರೆ. 10 ಕೆಜಿ ಅಥವಾ 7 ಕೆಜಿ ಅನ್ನೋದು ಸ್ಪಷ್ಟ ಪಡಿಸಿಲ್ಲ. ಇದು ಕಾಟಾಚಾರದ ಹಾಗು ಜನವಿರೋಧಿ ಬಜೆಟ್ ಆಗಿದೆ' ಎಂದಿದ್ದಾರೆ
02:05 PM (IST) Mar 05
-ಮೈಸೂರು, ಮಂಡ್ಯ ಸೇರಿ ಐದಾರು ಜಿಲ್ಲೆಗೆ ಹಾಕಲಿಲ್ಲ ಮಣೆ
- ಬಜೆಟ್ನಲ್ಲಿ ಯಾವುದೇ ನಿಗದಿತ ದೊಡ್ಡ ಸ್ಕೀಮ್ ಪ್ರಸ್ತಾಪ ಇಲ್ಲ
- ಚಾಮರಾಜನಗರ, ಕೊಡಗು, ತುಮಕೂರು, ಚಿತ್ರದುರ್ಗ
- ಹಾಸನ ಸೇರಿ ಹಲವು ಜಿಲ್ಲೆಗಳಿಗೆ ಬಿಗ್ ಸ್ಕೀಮ್ ಘೋಷಣೆ ಇಲ್ಲ
- ಮೈಸೂರು ಭಾಗದ ಜಿಲ್ಲೆಗಳಿಗೇ ಹೊಸ ಯೋಜನೆ ಇಲ್ಲ
- ಯಡಿಯೂರಪ್ಪ ಬಜೆಟ್ ನಲ್ಲಿ ಪ್ರಾಶಸ್ತ್ಯವನ್ನೇ ನೀಡಿಲ್ವಾ?
- ಮೈಸೂರು ಭಾಗಕ್ಕೆ ಹೇಳಿಕೊಳ್ಳುವ ಯೋಜನೆಗಳೇ ಇಲ್ಲ
01:43 PM (IST) Mar 05
ಆರ್ಥಿಕ ಅಭಿವೃದ್ಧಿಗೆ ಬಜೆಟ್‌ನಲ್ಲೇನು ಕೊಡುಗೆ?
01:40 PM (IST) Mar 05
ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವು ಯೋಜನೆಗಳನ್ನ ನೀಡಿದ್ದಾರೆ.
01:38 PM (IST) Mar 05
ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೀನುಗಾರರ ಸಮುದಾಯಕ್ಕೆ ಈ ಬಾರಿ ಹೆಚ್ಚಿನ ಕೊಡುಗೆಯನ್ನೇ ನೀಡಿದ್ದಾರೆ. ಹಾಗಾದ್ರೆ ಬಜೆಟ್ ನಲ್ಲಿ ಸಿಕ್ಕಿದ್ದೇನು..?
01:32 PM (IST) Mar 05
ಕರ್ನಾಟಕ ಬಜೆಟ್ 2020: ವಿಹಂಗಮ ನೋಟ
01:15 PM (IST) Mar 05
- ಅಡಿಕೆ ಬೆಳಗಾರರಿಗೆ ಬಡ್ಡಿ ಬಂಪರ್
- ಅಡಿಕೆ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ
- 2 ಲಕ್ಷದವರೆಗೆ ಸಾಲಕ್ಕೆ ಶೇ.5ರಷ್ಟು ಬಡ್ಡಿ ವಿನಾಯಿತಿ
01:14 PM (IST) Mar 05
2020-21 ನೇ ಸಾಲಿನ ಬಜೆಟ್ ಓದುವ ಮೂಲಕ ಹೊಸ ದಾಖಲೆ ಬರೆದ ಸಿಎಂ ಯಡಿಯೂರಪ್ಪ
* ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿ ಮುಗಿಸಿದ ಸಿಎಂ
* ರಾಜ್ಯದ ಆಯವ್ಯಯ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದುವ ಮೂಲಕ ಯಡಿಯೂರಪ್ಪ ದಾಖಲೆ
* 1 ಗಂಟೆ 40 ನಿಮಿಷ ಬಜೆಟ್ ಓದಿದ ಸಿಎಂ...
* 112 ಪುಟಗಳ ಬಜೆಟ್ ಪುಸ್ತಕ
01:11 PM (IST) Mar 05
* ‘ಚರ್ಮ ಶಿಲ್ಪ' ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆ
* 250 ಚರ್ಮ ಕುಶಲಕರ್ಮಿಗಳಿಗೆ 10 ಲಕ್ಷ ರೂ. ಸಹಾಯಧನ
* ಇದರಲ್ಲಿ 5 ಲಕ್ಷ ರೂ. ಸಬ್ಸಿಡಿ, ಒಟ್ಟು 12.50 ಕೋಟಿ ರೂ. ಮೀಸಲು
01:09 PM (IST) Mar 05
ಕರ್ನಾಟಕ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇನು?
01:08 PM (IST) Mar 05
ಕೃಷಿ ಸಾಲದ ಕತೆ ಏನು?
01:07 PM (IST) Mar 05
ಮೀನುಗಾರಿಕೆಗೆ ಬಿಎಸ್‌ವೈ ಕೊಡುಗೆ
01:06 PM (IST) Mar 05
ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ಸಿಕ್ಕಿದ್ದೇನು..?
01:05 PM (IST) Mar 05
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಐದು ನೂರು ಕೋಟಿ ಅನುದಾನ ಮೀಸಲಿಟ್ಟದಕ್ಕೆ ಹೋರಾಟಗಾರರಲ್ಲಿ ಸಂತಸ ತಂದಿದೆ ಎಂದು ರೈತ ಸೇನೆ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಹೇಳಿದ್ದಾರೆ.
01:05 PM (IST) Mar 05
ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ತವರು ಜಿಲ್ಲೆಗೆ ಬರಪೂರ ಕೊಡುಗೆ ನೀಡಿದ್ದಾರೆ.
01:03 PM (IST) Mar 05
* ವಿಶ್ವಕರ್ಮ ಅಭಿವೃದ್ಧಿ - 25 ಕೋಟಿ
* ಆರ್ಯ ವೈಶ್ಯ ಅಭಿವೃದ್ಧಿ - 15 ಕೋಟಿ
* ಕ್ರೈಸ್ತ ಸಮುದಾಯ - 200 ಕೋಟಿ
* ಗೊಲ್ಲ ಸಮುದಾಯ - 10 ಕೋಟಿ
* ಅಂಬಿಗರ ಚೌಡಯ್ಯ - 50 ಕೋಟಿ
* ಆರ್ಯವೈಶ್ಯ - 10 ಕೋಟಿ ರೂ.
* ಕುಂಬಾರ ಸಮುದಾಯ - 20 ಕೋಟಿ
* ಅನುಭವ ಮಂಟಪ - 500 ಕೋಟಿ
* ಲಂಬಾಣಿ ಅಕಾಡೆಮಿ - 50 ಲಕ್ಷ
* ಕೊಪ್ಪಳ ಅಂಜನಾದ್ರಿ ಬೆಟ್ಟ - 20 ಕೋಟಿ
12:53 PM (IST) Mar 05
* ಮಕ್ಕಳ ಬ್ಯಾಗ್ ಹೊರೆ ತಪ್ಪಿಸಲು ಕ್ರಮ
* ಪ್ರತಿ ತಿಂಗಳ 2 ಶನಿವಾರ ಬ್ಯಾಗ್ ರಹಿತ ದಿನ
* ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ
12:48 PM (IST) Mar 05
ರಾಜ್ಯ ರಾಜಧಾನಿಗೆ ಬಿಎಸ್‌ವೈ ಬಂಪರ್!
* ಸಬ್ಅರ್ಬನ್ ರೈಲು ಯೋಜನೆಗೆ 500 ಕೋಟಿ
* ಟ್ರಾಫಿಕ್ ಹೆಚ್ಚಿರುವ 12 ಏರಿಯಾ ಅಭಿವೃದ್ಧಿಗೆ 500 ಕೋಟಿ ಮೀಸಲು
* ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ ಅನುದಾನ
12:45 PM (IST) Mar 05
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಮನಗರದ ರೇಷ್ಮೆ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
12:43 PM (IST) Mar 05
ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನ ತಮ್ಮಲ್ಲಿಯೇ ಉಳಿಸಿಕೊಂಡಿರುವ ಯಡಿಯೂರಪ್ಪ ಅವರು ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
12:40 PM (IST) Mar 05
ಕೊಟ್ಟ ಮಾತು ಉಳಿಸಿಕೊಂಡ ಸಿಎಂ
ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ರೂ.
12:32 PM (IST) Mar 05
* ಶಿವಮೊಗ್ಗದಲ್ಲಿ ಟೂರಿಸಂ ಸರ್ಕ್ಯೂಟ್ ಅಭಿವೃದ್ಧಿಗೆ ಕ್ರಮ
* ಜೋಗ ಜಲಪಾತ ಅಭಿವೃದ್ಧಿಗೆ 500 ಕೋಟಿ ರೂಪಾಯಿ
* ಶಿವಮೊಗ್ಗದಲ್ಲಿ ಔಷಧ ತಯಾರಿಕಾ ಘಟಕ ಸ್ಥಾಪನೆ
* ಶಿವಮೊಗ್ಗದಲ್ಲಿ ಕೃಷಿ ವಿವಿಗೆ 700 ಎಕರೆ ಜಾಗ ಮಂಜೂರು
* ತ್ಯಾವರೆಕೊಪ್ಪ ಮೃಗಾಲಯಕ್ಕೆ 5 ಕೋಟಿ ಅನುದಾನ
* ಮಂಗಗಳ ಪುನರ್ವಸತಿಗಾಗಿ 1.25 ಕೋಟಿ ಮೀಸಲು
12:29 PM (IST) Mar 05
* ಮರವಂತೆ ಬಂದರು ಅಭಿವೃದ್ಧಿ.
* ಉಡುಪಿ ಜಿಲ್ಲೆ ಬೈಂದೂರಿನ ಮರವಂತೆ ಬಂದರು
* ಮರವಂತೆಯ ಹೊಸ ಬಂದರು ಅಭಿವೃದ್ಧಿಗೆ ಹಣ
* 2ನೇ ಹಂತದ ಕಾಮಗಾರಿಗಾಗಿ 5 ಕೋಟಿ ನೆರವು
* ಕೊಡೇರಿ ಮೀನುಗಾರಿಕೆ ಬಂದರು ವೃದ್ಧಿಗೆ 2 ಕೋಟಿ
12:28 PM (IST) Mar 05
ಏರ್ಪೋರ್ಟ್ ಬಳಿ 100 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ
ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ 66 ಕೋಟಿ ರೂ. ಅನುದಾನ
12:26 PM (IST) Mar 05
ಕೆಸಿ ಜನರಲ್ ಆಸ್ಪತ್ರೆ, ಸಿವಿ ರಾಮನ್ ಆಸ್ಪತ್ರೆಯಲ್ಲಿ ನೂತನ ಲ್ಯಾಬ್
ಹೃದ್ರೋಗ ಚಿಕಿತ್ಸೆಗೆ ನೂತನ ಲ್ಯಾಬ್ ನಿರ್ಮಾಣ
12:26 PM (IST) Mar 05
- ಗ್ರಾಮ-1 ಕೇಂದ್ರ ಸ್ಥಾಪನೆ
- ಬೆಂಗಳೂರು-1 ಮಾದರಿಯಲ್ಲಿ ಗ್ರಾಮ-1 ಕೇಂದ್ರ ಸ್ಥಾಪನೆ
- ಜನಸಾಮಾನ್ಯರಿಗೆ ಎಲ್ಲ ಆಡಳಿತ ಸೇವೆ ಒದಗಿಸುವ ಉದ್ದೇಶ
12:24 PM (IST) Mar 05
* ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಪಾಲಿನಲ್ಲಿ ಕಡಿತ
* ಕೇಂದ್ರದಿಂದ ರಾಜ್ಯದ ತೆರಿಗೆ ಕಡಿತ
* ಕೇಂದ್ರದ ಅನುದಾನ 8.883 ಕೋಟಿ ರೂ.ಕಡಿತ
* 11 ಸಾವಿರ ಕೋಟಿ ರೂ ಜಿಎಸ್‌ಟಿ ಕಡಿತ
* ಮುಂದಿನ ಸಾಲಿಗೂ 11 ಸಾವಿರ ಕೋಟಿ ರೂ ಜಿಎಸ್‌ಟಿ ಕಡಿತ
12:22 PM (IST) Mar 05
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಈ ಬಾರಿ ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾದ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ 500 ಕೋಟಿ ರು. ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮಹದಾಯಿ ಹೋರಾಟಗಾರರಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ.
12:12 PM (IST) Mar 05
- ರೇಷ್ಮೆ ಹುಳು ಸಂಸ್ಕರಣಾ ಘಟಕ
- ರಾಮನಗರ ರೇಷ್ಮೆ ಬೆಳೆಗಾರರಿಗೆ ಗುಡ್ ನ್ಯೂಸ್
- ರೇಷ್ಮೆ ಹುಳು ಸಂಸ್ಕರಣಾ ಘಟಕದ ನಿರ್ಮಾಣ
- ಕಣ್ವ ಫಾರ್ಮಲ್ಲಿ ಸಂಸ್ಕರಣಾ ಘಟಕದ ಸ್ಥಾಪನೆ
- ಮೌಲ್ಯವರ್ಧಿತ ಉಪಉತ್ಪನ್ನಗಳ ಉತ್ಪಾದನೆ
- ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಅನುಕೂಲ
12:11 PM (IST) Mar 05
* ಮೀನುಗಾರರಿಗೆ ಹೊಸ ಸ್ಕೀಮ್
* ಮತ್ಸ್ಯ ವಿಕಾಸ ಯೋಜನೆಗೆ 1.5 ಕೋಟಿ ರೂ
* ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಜಾರಿಗೆ
* ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆ ಸ್ಕೀಮ್
12:10 PM (IST) Mar 05
ಕರ್ನಾಟಕ ಬಜೆಟ್ 2020ನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
12:09 PM (IST) Mar 05
- 1000 ಮಹಿಳಾ ಮೀನುಗಾರರಿಗೆ ಬೈಕ್ ಸ್ಕೀಮ್
- ಮಹಿಳಾ ಮೀನುಗಾರರ ಸಬಲೀಕರಣ ಸ್ಕೀಮ್
- ಈ ಯೋಜನೆಯಲ್ಲಿ ದ್ವಿಚಕ್ರ ವಾಹನಗಳ ಹಂಚಿಕೆ
- ಮೀನು ಇಳಿದಾಣದಿಂದ ಮಾರುಕಟ್ಟೆಗೆ ಮೀನು
- ಮೀನು ಮಾರುವ ಮಹಿಳೆಯರಿಗೆ ಬೈಕ್ ವಿತರಣೆ
- ದ್ವಿಚಕ್ರ ವಾಹನಗಳ ವಿತರಣೆಗೆ 5 ಕೋಟಿ ಮೀಸಲು
12:07 PM (IST) Mar 05
* 2020ರ ನವೆಂಬರ್ನಲ್ಲಿ ಬೆಂಗಳೂರಲ್ಲಿ ಇನ್ವೆಸ್ಟ್ ಕರ್ನಾಟಕ-2020 ಸಮಾವೇಶ
* ರಾಜ್ಯದಲ್ಲಿ ಹೂಡಿಕೆ ಅವಕಾಶ ಪ್ರದರ್ಶಿಸಲು ಸಮಾವೇಶ ಆಯೋಜನೆ
* 9 ಜಿಲ್ಲೆಗಳಲ್ಲಿ ‘ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಅಭಿವೃದ್ಧಿ’ಜಾರಿ
* ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’, ಈ ಯೋಜನೆಗೆ 10 ಕೋಟಿ ರೂ ಅನುದಾನ
* ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಕೈಗಾರಿಕಾ ವಸಾಹತು
* ಬೆಂಗಳೂರಿನಲ್ಲಿ ಸೆಂಟರ್ ಫಾರ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ ಸ್ಥಾಪನೆ
* ತಿಪಟೂರಿನಲ್ಲಿ ‘ತೆಂಗು ಆಧಾರಿತ ಕೈಗಾರಿಕಾ ಪಾರ್ಕ್’ ಅಭಿವೃದ್ಧಿ
* ವಿದ್ಯುತ್ ಮಗ್ಗ ಸಾಂದ್ರತೆ ಇರುವ 2 ಕೇಂದ್ರಗಳಲ್ಲಿ ನೂಲಿನ ಘಟಕ
* ಶಿಗ್ಗಾಂವಿ ಹಾಗೂ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಸ್ಥಾಪನೆ
* ನೂತನ ಜವಳಿ ಪಾರ್ಕ್ ಸ್ಥಾಪನೆಯಿಂದ 3000 ಉದ್ಯೋಗ ಸೃಷ್ಟಿ
* ನೇಕಾರರ ಸಾಲಮನ್ನಾ ಯೋಜನೆಗೆ 79.57 ಕೋಟಿ ಅನುದಾನ
* ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ನೂತನ ಕೈಗಾರಿಕಾ ನೀತಿ ಜಾರಿ
* ಬೆಂಗಳೂರಿನ ಆನಂದ್ ರಾವ್ ಸರ್ಕಲ್ನಲ್ಲಿ 400 ಕೋಟಿ ವೆಚ್ಚದಲ್ಲಿ ಅವಳಿ ಗೋಪುರ ನಿರ್ಮಾ
* ಸರ್ಕಾರದ ಕಚೇರಿಗಳನ್ನು ಒಂದೇ ಕಟ್ಟದದಲ್ಲಿ ಕಾರ್ಯ ನಿರ್ವಹಣೆ
* ಕೃಷಿ ವಲಯ ಉತ್ತೇಜಿಸಲು ಕೃಷಿ ನಾವೀನ್ಯತಾ ಕೇಂದ್ರ ಸ್ಥಾಪನೆ
* 20 ಕೋಟಿ ರೂ. ವೆಚ್ಚದಲ್ಲಿ ಕೃಷಿ ನಾವೀನ್ಯತಾ ಕೇಂದ್ರ ಸ್ಥಾಪನೆ
* ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಕರ್ನಾಟಕ ತಂತ್ರಜ್ಞಾನ ಮಿಷನ್ ಸ್ಥಾಪನೆ
* 7 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ತಂತ್ರಜ್ಞಾನ ಮಿಷನ್ ಸ್ಥಾಪನೆ
* ಧಾರವಾಡ-ಬೆಳಗಾವಿ ನಡುವೆ ಕಿತ್ತೂರು ಮೂಲಕ ರೈಲು ಮಾರ್ಗ ನಿರ್ಮಾಣ
* ಪ್ರತಿಭಾವಂತ ವಿದ್ಯಾರ್ಥಿಗಳನ್ನ ಗುರುತಿಸಿ ವಿಜ್ಞಾನ ಪ್ರತಿಭಾ ಶೋಧನೆ ಕಾರ್ಯಕ್ರಮ
* ಕೌಶಲ್ಯ ಕರ್ನಾಟಕ ಯೋಜನೆಗೆ 20 ಕೋಟಿ ರೂ. ಅನುದಾನ
12:03 PM (IST) Mar 05
11:56 AM (IST) Mar 05
ನದಿ ಪಾತ್ರದ ಮಲೀನತೆ ತಡೆಗಟ್ಟಲು ಮಲ ತ್ಯಾಜ್ಯ ಸಂಸ್ಕರಣಾ ಘಟಕ
1690 ಕೋಟಿ ರೂ. ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ
11:51 AM (IST) Mar 05
ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೇನು ಕೊಡುಗೆ ನೀಡಲಾಗಿದೆ? ಸಿಂಪಲ್ ಆಗಿ ತಿಳ್ಕೊಳ್ಳಿ
11:49 AM (IST) Mar 05
* ನೀರಿನ ಸಮಸ್ಯೆ ಪರಿಹಾರಕ್ಕೆ ಜಲಧಾರೆ ಯೋಜನೆ
* ಈ ಯೋಜನೆಯಡಿ ವಿಜಯಪುರ, ಮಂಡ್ಯ ಜಿಲ್ಲೆಗೆ ನೀರು
* 700 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು
* ಮುಂದಿನ 4 ವರ್ಷದಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ
11:49 AM (IST) Mar 05
* ಗ್ರಾಮೀಣ ರಸ್ತೆಗಳ ಸುಧಾರಣೆಗೆ ‘ಗ್ರಾಮೀಣ ಸುಮಾರ್ಗ ಯೋಜನೆ’
* 20,000 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶ