ನೀವಿನ್ನೂ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ವ? ಹಾಗಾದ್ರೆ ಈ ಸರಳ ವಿಧಾನ ಅನುಸರಿಸಿ

By Suvarna NewsFirst Published Dec 31, 2022, 2:42 PM IST
Highlights

ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡೋದು ಅನೇಕ ಕಾರಣಗಳಿಂದ ಮಹತ್ವದಾಗಿದೆ. ಇದ್ರಿಂದ ನಿಮಗೆ ವಿವಿಧ ಆನ್ ಲೈನ್ ಸೇವೆಗಳಾದ ಇ-ಕೆವೈಸಿ, ಇ-ಸಹಿ ಹಾಗೂ ಇ-ಆಧಾರ್ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಇನ್ನೂ ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ವ? ಹಾಗಾದ್ರೆ ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಲಿಂಕ್ ಮಾಡಿ. 
 

Business Desk:ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖವಾದ ದಾಖಲೆ. ಇಂದು ಎಲ್ಲಿ, ಯಾವ ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಕೇಳುತ್ತಾರೆ. ಆಧಾರ್ ಕಾರ್ಡ್ ಅನ್ನು ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿ ಇಂದು ಎಲ್ಲ ಕಡೆ ಪರಿಗಣಿಸಲಾಗುತ್ತಿದೆ. ವೈಯಕ್ತಿಕ ಮಾಹಿತಿಗಳು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ  ಸೇರಿದಂತೆ ಎಲ್ಲ ಮುಖ್ಯವಾದ ಮಾಹಿತಿಗಳನ್ನು ಆಧಾರ್ ಕಾರ್ಡ್ ಒಳಗೊಂಡಿದೆ. ಇನ್ನು ಬ್ಯಾಂಕ್ ಖಾತೆ, ವಾಹನ ಚಾಲನ ಪರವಾನಗಿ, ವಿಮೆ, ಪ್ಯಾನ್ ಕಾರ್ಡ್ ಸೇರಿದಂತೆ ಪ್ರಮುಖವಾದ ಎಲ್ಲ ದಾಖಲೆಗಳಿಗೂ ಆಧಾರ್ ಕಾರ್ಡ್ ಜೋಡಣೆಯಾಗಿರುತ್ತದೆ. ಅಲ್ಲದೆ, ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಯಾಗುವ ತನಕ ಪ್ರಮುಖ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯ. ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ಸಂಖ್ಯೆ ಕೂಡ ಜೋಡಣೆಯಾಗಿರೋದು ಮುಖ್ಯ. ಇಪಿಎಫ್ ಸೇರಿದಂತೆ ಕೆಲವು ಯೋಜನೆಗಳಲ್ಲಿನ ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿದ್ದರೆ ಮಾತ್ರ ಮುಂದಿನ ಪ್ರಕ್ರಿಯೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಹಾಗಾದ್ರೆ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 

ಆನ್ ಲೈನ್ ವಿಧಾನ
ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ನಲ್ಲಿ ನೋಂದಣಿಯಾಗಿದ್ರೆ ಮಾತ್ರ ಆನ್ ಲೈನ್ ನಲ್ಲಿ ಲಿಂಕ್ ಮಾಡಲು ಸಾಧ್ಯ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ನಮೂದಾಗಿರದಿದ್ರೆ ನೀವು ಸಮೀಪದ ಸೇವಾ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು. 
1.ಮೊದಲಿಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ (UIDAI) ಅಧಿಕೃತ ವೆಬ್ ಸೈಟ್ https://uidai.gov.in ಗೆ ಭೇಟಿ ನೀಡಿ.
2.'Aadhaar Services'ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ 'Aadhaar Linking' ಆಯ್ಕೆ ಮಾಡಿ.
3.ಡ್ರಾಪ್ ಡೌನ್ ಮೆನುವಿನಿಂದ 'Mobile Number'ಆಯ್ಕೆ ಮಾಡಿ. ಆ ಬಳಿಕ 12 ಅಂಕೆಗಳ ಆಧಾರ್ ಸಂಖ್ಯೆ ನಮೂದಿಸಿ.
4.ಆ ಬಳಿಕ ನಿಮಗೆ ಸ್ಕ್ರೀನ್ ನಲ್ಲಿ ಕಾಣಿಸುವ ಭದ್ರತಾ ಕೋಡ್ ಅನ್ನು ನಮೂದಿಸಿ. ನಂತರ 'Send OTP'ಮೇಲೆ ಕ್ಲಿಕ್ ಮಾಡಿ.
5.ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುತ್ತಾರೆ.
6.ಒಟಿಪಿ ನಮೂದಿಸಿ 'Submit'ಆಯ್ಕೆ ಮೇಲೆ ಕ್ಲಿಕ್ ಮಾಡಿ.
7.ಈಗ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುತ್ತದೆ.

ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಈ 5 ಹಣಕಾಸಿನ ಉಡುಗೊರೆಗಳನ್ನು ನೀಡಿ

ಆಧಾರ್ ಸೇವಾ ಕೇಂದ್ರದಲ್ಲಿ
1.ನಿಮ್ಮ ಸಮೀಪದ ಆಧಾರ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
2. ನಿಮ್ಮ ಮೂಲ ಆಧಾರ್ ಕಾರ್ಡ್ ಹಾಗೂ ಅದರ ಪ್ರತಿಗಳನ್ನು ಕೂಡ ತೆಗೆದುಕೊಂಡು ಹೋಗಿರಿ.
3.'Aadhaar Linking Form'ಭರ್ತಿ ಮಾಡಿ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ನೀಡಿ.
4.ಸೇವಾ ಕೇಂದ್ರದ ಸಿಬ್ಬಂದಿ ನೀವು ನೀಡಿರುವ ಮಾಹಿತಿಗಳನ್ನು ಪರಿಶೀಲಿಸಿ, ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುತ್ತಾರೆ. 

ಹೆಚ್ಚು ಪಿಂಚಣಿ ಪಡೆಯಲು ಯಾರು ಅರ್ಹರು? ಇಲ್ಲಿದೆ ಇಪಿಎಫ್ ಒ ಮಾರ್ಗಸೂಚಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡೋದು ಅನೇಕ ಕಾರಣಗಳಿಂದ ಮಹತ್ವದಾಗಿದೆ. ಇದ್ರಿಂದ ನಿಮಗೆ ವಿವಿಧ ಆನ್ ಲೈನ್ ಸೇವೆಗಳಾದ ಇ-ಕೆವೈಸಿ, ಇ-ಸಹಿಹಾಗೂ ಇ-ಆಧಾರ್ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ. ಅಲ್ಲದೆ, ಎಸ್ ಎಂಎಸ್ ಮೂಲಕ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಅಪ್ಡೇಟ್ಸ್ ಹಾಗೂ ಅಲರ್ಟ್ ಗಳನ್ನು ಪಡೆಯಲು ನೆರವು ನೀಡುತ್ತದೆ. ಅಲ್ಲದೆ, ಸಬ್ಸಿಡಿ, ಬ್ಯಾಂಕ್ ಖಾತೆ ತೆರೆಯೋದು, ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಕೆ ಸೇರಿದಂತೆ ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಪಡೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ. 
 

click me!