ಪಿಂಚಣಿದಾರರು ಹೆಚ್ಚು ಪಿಂಚಣಿ ಪಡೆಯೋದಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ನಿಬಂಧನೆಗಳನ್ನು ಇಪಿಎಫ್ಒ ಬಿಡುಗಡೆಗೊಳಿಸಿದೆ. ಹಾಗಾದ್ರೆ ಹೆಚ್ಚು ಪಿಂಚಣಿ ಪಡೆಯಲು ಯಾರು ಅರ್ಹರು? ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಡಿ.31): ಅಧಿಕ ಪಿಂಚಣಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮುಂದಾಗಿದೆ. ಪಿಂಚಣಿದಾರರು ಹೆಚ್ಚು ಪಿಂಚಣಿ ಪಡೆಯೋದಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ನಿಬಂಧನೆಗಳನ್ನು ಇಪಿಎಫ್ಒ ಬಿಡುಗಡೆಗೊಳಿಸಿದೆ. 2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್ಒ ತಿಳಿಸಿದೆ. ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು. ಇಪಿಎಫ್ಒ ಹಿಂದಿನ ವೇತನ ಮಿತಿ 5,000 ರೂ. ಅಥವಾ 6,500ರೂ.ಗಿಂತ ಹೆಚ್ಚಿನ ಕೊಡುಗೆ ನೀಡಿರುವ ಇಪಿಎಸ್ ಸದಸ್ಯರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಹತೆ ಗಳಿಸಿದ್ದಾರೆ. ಇನ್ನು ಇಪಿಎಸ್ -95 ತಿದ್ದುಪಡಿಗೂ ಮುನ್ನ ಸದಸ್ಯರಾಗಿದ್ದವರು ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ (ಇಪಿಎಸ್) ಜಂಟಿ ಆಯ್ಕೆ ಹೊಂದಿರೋರು ಇಪಿಎಫ್ಒ ಚಂದಾದಾರಾಗಲು ಅರ್ಹತೆ ಹೊಂದಿದ್ದಾರೆ. ಅರ್ಹ ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಇಪಿಎಫ್ ಒ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕಿದೆ.
ಹೆಚ್ಚು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವಾಗ ಆಯುಕ್ತರು ಸೂಚಿಸಿದ ವಿಧಾನದಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಇಪಿಎಫ್ಒ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇನ್ನು ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಮರು ಹೊಂದಾಣಿಕೆ ಮಾಡಲು ಪಿಂಚಣಿದಾರರು ಅರ್ಜಿಯಲ್ಲಿ ಆತ/ಆಕೆಯ ಒಪ್ಪಿಗೆ ನೀಡೋದು ಅಗತ್ಯ. ಇನ್ನು ನಿಧಿ ಠೇವಣಿಗೆ ಸಂಬಂಧಿಸಿ ಸಂಬಂಧಪಟ್ಟ ಸುತ್ತೋಲೆಗಳಲ್ಲಿ ಸೂಚಿಸಿರುವ ವಿಧಾನವನ್ನು ಬಳಸಲಾಗುತ್ತದೆ.
ಅಂಚೆ ಕಚೇರಿ ಹೂಡಿಕೆದಾರರಿಗೆ ಹೊಸ ವರ್ಷದ ಗಿಫ್ಟ್; ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ
ಇಪಿಎಫ್ ನಿಯಮಗಳೇನು?
ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.ಹಾಗೆಯೇ ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ. ಕಂಪನಿಯ ಶೇ. 12%ರಷ್ಟು ಕೊಡುಗೆಯಲ್ಲಿ 3.67% EPF ಮತ್ತು 8.33% EPS ಅನ್ನು ಒಳಗೊಂಡಿದೆ. ಕಂಪನಿಯು ನೀಡಿದ ಒಟ್ಟು ಕೊಡುಗೆಯನ್ನು ನೌಕರರ ಪಿಂಚಣಿ ಯೋಜನೆಗೆ 8.33% ಮತ್ತು ನೌಕರರ ಭವಿಷ್ಯ ನಿಧಿಗೆ 3.67% ರಂತೆ ವಿತರಿಸಲಾಗಿದೆ. ಉದ್ಯೋಗಿ ನೀಡಿದ ಕೊಡುಗೆ ಸಂಪೂರ್ಣವಾಗಿ ಕಾರ್ಮಿಕರ ಭವಿಷ್ಯ ನಿಧಿಗೆ ಹೋಗುತ್ತದೆ. ಈ ಕೊಡುಗೆಯ ಜೊತೆಗೆ, EDLI ಗಾಗಿ ಹೆಚ್ಚುವರಿ 0.5% ಅನ್ನು ಕಂಪನಿಯು ಪಾವತಿಸಬೇಕು. EDLI ಮತ್ತು EPF ನ ಕೆಲವು ಆಡಳಿತಾತ್ಮಕ ವೆಚ್ಚಗಳನ್ನು ಕಂಪನಿಯು ಕ್ರಮವಾಗಿ 1.1% ಮತ್ತು 0.01% ದರದಲ್ಲಿ ಭರಿಸುತ್ತದೆ. ಇದರರ್ಥ ಕಂಪನಿಯು ಈ ಯೋಜನೆಗೆ ಒಟ್ಟು 13.61% ಸಂಬಳವನ್ನು ನೀಡಬೇಕಾಗುತ್ತದೆ. ಉದ್ಯೋಗಿಗೆ ಕೊಡುಗೆ ದರವನ್ನು ಸಾಮಾನ್ಯವಾಗಿ 12%ಕ್ಕೆ ನಿಗದಿಪಡಿಸಲಾಗುತ್ತದೆ.
ನಿಮ್ಮಎನ್ ಪಿಎಸ್ ಖಾತೆ ನಿಷ್ಕ್ರಿಯವಾಗಿದೆಯಾ? ಸಕ್ರಿಯಗೊಳಿಸಲು ಹೀಗೆ ಮಾಡಿ
ಎರಡು ಇಪಿಎಫ್ ಖಾತೆ ವಿಲೀನ
ಕೆಲವರು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸುವಾಗ ಅಥವಾ ಬೇರೆ ಯಾವುದೋ ಕಾರಣದಿಂದ ಎರಡು ಇಪಿಎಫ್ ಖಾತೆಗಳನ್ನು ಹೊಂದಿರುತ್ತಾರೆ. ಈ ರೀತಿ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳಿದ್ರೆ ಅವುಗಳನ್ನು ವಿಲೀನ ಮಾಡೋದು ಉತ್ತಮ. ಇದ್ರಿಂದ ನಿಮ್ಮ ಇಪಿಎಫ್ ಖಾತೆಯಲ್ಲಿ ಒಟ್ಟು ಎಷ್ಟು ಬ್ಯಾಲೆನ್ಸ್ ಇದೆ ಎಂದು ಪರಿಶೀಲಿಸಲು ಎರಡೆರಡು ಖಾತೆಗಳಿಗೆ ಲಾಗಿನ್ ಆಗೋದು ತಪ್ಪುತ್ತದೆ. ಗೊಂದಲವೂ ಇರೋದಿಲ್ಲ. ಈಗಂತೂ ಎರಡು ಇಪಿಎಫ್ ಖಾತೆಗಳನ್ನು ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲೇ ವಿಲೀನಗೊಳಿಸಬಹುದು. ಖಾತೆಗಳ ವಿಲೀನದಿಂದ (Merge) ಇಪಿಎಫ್ ನಲ್ಲಿ ನೀವು ಒಟ್ಟು ಎಷ್ಟು ಹೂಡಿಕೆ (Invest) ಮಾಡಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿಯಲು ಕೂಡ ಸಾಧ್ಯವಾಗುತ್ತದೆ.