ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಈ 5 ಹಣಕಾಸಿನ ಉಡುಗೊರೆಗಳನ್ನು ನೀಡಿ

By Suvarna News  |  First Published Dec 31, 2022, 1:29 PM IST

ಹೊಸ ವರ್ಷಕ್ಕೆ ಪ್ರೀತಿ ಪಾತ್ರರಿಗೆ ಏನಾದ್ರೂ ಗಿಫ್ಟ್ ನೀಡುವ ಯೋಜನೆಯನ್ನು ಬಹುತೇಕರು ಮಾಡಿರುತ್ತಾರೆ. ಆದರೆ, ಯಾವುದೋ ವಸ್ತುಗಳನ್ನು ಗಿಫ್ಟ್ ನೀಡುವ ಬದಲು ಹಣಕಾಸಿನ ಉಡುಗೊರೆಗಳನ್ನು ನೀಡಿದ್ರೆ ಭವಿಷ್ಯದಲ್ಲಿ ಅವರಿಗೆ ನೆರವಾಗುತ್ತದೆ. ಹಾಗಾದ್ರೆ ಹೊಸ ವರ್ಷಕ್ಕೆ ನೀವು ನೀಡಬಹುದಾದ ಹಣಕಾಸಿನ ಉಡುಗೊರೆಗಳು ಯಾವುವು? ಇಲ್ಲಿದೆ ಮಾಹಿತಿ. 


Business Desk:ಹೊಸ ವರ್ಷದ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ನೀಡಲು ಕೂಡ ಕೆಲವರು ಸಿದ್ಧತೆ ನಡೆಸಿರುತ್ತಾರೆ. ಹೊಸ ವರ್ಷದ ಆಗಮನಕ್ಕೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ಉಡುಗೊರೆ, ಪಾರ್ಟಿಗೆ ಸಿದ್ಧತೆ ನಡೆದಿರುತ್ತದೆ. ನೀವು ಕೂಡ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಬಯಸಿದ್ರೆ, ಯಾವುದೋ ವಸ್ತುಗಳನ್ನು ನೀಡುವ ಬದಲು ಮೌಲ್ಯಯುತವಾದ ಹೂಡಿಕೆಯ ಉಡುಗೊರೆ ನೀಡುವುದು ಸೂಕ್ತ. ಇದರಿಂದ ನೀವು ನೀಡಿದ ಉಡುಗೊರೆ ದೀರ್ಘಕಾಲ ಪ್ರಯೋಜನಕ್ಕೆ ಬರುತ್ತದೆ. ನೀವು ನೀಡಿದ ಉಡುಗೊರೆ ಪಡೆದವರಿಗೆ ಲಾಭದಾಯಕವಾಗಿರಬೇಕು. ಆ ಉಡುಗೊರೆ ಬರೀ ಒಂದು ಬಾರಿಗೆ ಪ್ರಯೋಜನಕ್ಕೆ ಬಂದರೆ ಸಾಲದು, ಬದಲಿಗೆ ಅವರಿಗೆ ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಅವರು ಎಂದಿಗೂ ಅದನ್ನು ನೆನಪಿಟ್ಟುಕೊಳ್ಳುವಂತಿರಬೇಕು. ಭವಿಷ್ಯದಲ್ಲಿ ಆ ಉಡುಗೊರೆಯಿಂದ ಅವರಿಗೆ ಲಾಭವೂ ಆಗಬೇಕು. ಹಾಗೆಯೇ ಕಷ್ಟಕಾಲದಲ್ಲಿ ಅವರಿಗೆ ಆ ಉಡುಗೊರೆಯಿಂದ ನೆರವು ಸಿಗಬೇಕು. ಅದರಲ್ಲೂ ಹೊಸ ವರ್ಷಕ್ಕೆ ಹೆತ್ತವರು ತಮ್ಮ ಮಕ್ಕಳಿಗೆ ಉಡುಗೊರೆ ನೀಡಲು ಬಯಸಿದ್ರೆ ಭವಿಷ್ಯದಲ್ಲಿ ಅವರಿಗೆ ಆರ್ಥಿಕ ನೆರವು ನೀಡುವಂತಹ ವಸ್ತುಗಳನ್ನು ನೀಡುವುದು ಸೂಕ್ತ. ಹಾಗಾದ್ರೆ ಹೊಸ ವರ್ಷಕ್ಕೆ ನೀವು ಆರ್ಥಿಕ ಲಾಭ ನೀಡುವ ಯಾವೆಲ್ಲ ಉಡುಗೊರೆಗಳನ್ನು ನೀಡಬಹುದು? ಅವುಗಳ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

1.ಆರೋಗ್ಯ ವಿಮೆ
ಹೊಸ ವರ್ಷದ ಸಂದರ್ಭದಲ್ಲಿ ನೀವು ಆರೋಗ್ಯ ವಿಮೆಯನ್ನು ಉಡುಗೊರೆಯಾಗಿ ನೀಡಬಹುದು. ಆ ಮೂಲಕ ನಿಮ್ಮ ಪ್ರೀತಿಪಾತ್ರರ ಜೀವನವನ್ನು ಸುರಕ್ಷಿತವಾಗಿರಿಸಬಹುದು. ಅಲ್ಲದೆ, ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯ್ತಿ ಕೂಡ ಇದೆ. ನಿಮ್ಮ ಪ್ರೀತಿಪಾತ್ರರು ಹಾಗೂ ಕುಟುಂಬದ ಸುರಕ್ಷತೆಗೆ ಆರೋಗ್ಯ ವಿಮೆ ಖರೀದಿಸುವುದು ಹೆಚ್ಚು ಸೂಕ್ತ. ಕೊರೋನಾ ಮಹಾಮಾರಿ ಬಳಿಕ ಜನರು ಆರೋಗ್ಯ ವಿಮೆ ಕುರಿತು ಹೆಚ್ಚು ಅರಿವು ಹೊಂದಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಆರೋಗ್ಯ ವಿಮೆ ಖರೀದಿಸಲು ಪ್ರಾರಂಭಿಸಿದ್ದಾರೆ. 

Tap to resize

Latest Videos

ಹೆಚ್ಚು ಪಿಂಚಣಿ ಪಡೆಯಲು ಯಾರು ಅರ್ಹರು? ಇಲ್ಲಿದೆ ಇಪಿಎಫ್ ಒ ಮಾರ್ಗಸೂಚಿ

2.ಸ್ಥಿರ ಠೇವಣಿ
ಬ್ಯಾಂಕ್ ಅಥವಾ ಅಂಚೆ ಕಚೇರಿ ಸ್ಥಿರ ಠೇವಣಿ ಅಥವಾ ಎಫ್ ಡಿ ಯನ್ನು ಕೂಡ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಇದನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ನೀವು ನೀಡಬಹುದಾದಂತಹ ಅತ್ಯಂತ ಉತ್ತಮವಾದ ಆರ್ಥಿಕ ಉಡುಗೊರೆ ಇದಾಗಿದೆ. ನಿಮ್ಮ ಮಗ ಅಥವಾ ಮಗಳು ಅಥವಾ ಪತ್ನಿ ಹೀಗೆ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಎಫ್ ಡಿ ತೆರೆದು ಅದರಲ್ಲಿ ಹೂಡಿಕೆ ಮಾಡುವ ಮೂಲಕ ಅವರಿಗೆ ಹೊಸ ವರ್ಷದ ಉಡುಗೊರೆ ನೀಡಬಹುದು. 

3.ಮ್ಯೂಚುವಲ್ ಫಂಡ್
ಮಕ್ಕಳ ಮದುವೆ ಹಾಗೂ ಉತ್ತಮ ಶಿಕ್ಷಣಕ್ಕೆ ಹಣದ ಅಗತ್ಯವಿದೆ. ಹೀಗಾಗಿ ಹೊಸ ವರ್ಷಕ್ಕೆ ನೀವು ಮ್ಯೂಚುವಲ್ ಫಂಡ್ ಅನ್ನೇ ಉಡುಗೊರೆಯಾಗಿ ನೀಡಬಹುದು. ಇದರಲ್ಲಿ ಪ್ರತಿ ತಿಂಗಳು ನೀವು ಹಣ ಹೂಡಿಕೆ ಮಾಡಬಹುದು. ಸಿಪ್ (SIP) ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ ಮೂಲಕ ನೀವು ಇದರಲ್ಲಿ ಹಣ ಹೂಡಿಕೆ ಮಾಡಬಹುದು. 

4.ಬಂಗಾರ
ಭಾರತದಲ್ಲಿ ಚಿನ್ನದ ಆಭರಣ, ನಾಣ್ಯ ಅಥವಾ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಹೆಚ್ಚಿದೆ. ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ನೀವು ಕೂಡ ನಿಮ್ಮ ಪ್ರೀತಿಪಾತ್ರರಿಗೆ ಚಿನ್ನದ ನಾಣ್ಯಗಳು, ಆಭರಣ, ಸಾವರಿನ್ ಚಿನ್ನದ ಬಾಂಡ್ ಗಳು, ಚಿನ್ನದ ಇಟಿಎಫ್ ಅಥವಾ ಚಿನ್ನ ಉಳಿತಾಯ ನಿಧಿಗಳನ್ನು ಉಡುಗೊರೆಯಾಗಿ ನೀಡಬಹುದು. 

ಅಂಚೆ ಕಚೇರಿ ಹೂಡಿಕೆದಾರರಿಗೆ ಹೊಸ ವರ್ಷದ ಗಿಫ್ಟ್; ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ

5.ಪ್ರಿಪೇಯ್ಡ್ ಗಿಫ್ಟ್ ಕಾರ್ಡ್
ಹೊಸ ವರ್ಷದ ಸಂದರ್ಭದಲ್ಲಿ ನೀವು ಪ್ರಿಪೇಯ್ಡ್ ಗಿಫ್ಟ್ ಕಾರ್ಡ್ ಗಳನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಇದನ್ನು ಅತ್ಯಂತ ಉತ್ತಮವಾದ ಆರ್ಥಿಕ ಉಡುಗೊರೆ ಎಂದು ಪರಿಗಣಿಸಲಾಗಿದೆ. ಈ ಗಿಫ್ಟ್ ಕಾರ್ಡ್ ಅನ್ನು ಯಾವುದೇ ವಸ್ತುಗಳನ್ನು ಖರೀದಿಸಲು ಬಳಸಬಹುದು. ಈ ಕಾರ್ಡ್ ಗಳನ್ನು ಅಂಗಡಿಗಳು ಹಾಗೂ ಆನ್ ಲೈನ್ ಶಾಪಿಂಗ್ ಕೇಂದ್ರಗಳಲ್ಲಿ ಬಳಸಬಹುದು. ಇದು ಡೆಬಿಟ್ ಕಾರ್ಡ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. 


 

click me!