
Business Desk:ವಿಮಾ ಪಾಲಿಸಿಗಳನ್ನು ಖರೀದಿಸುವ ಸಂದರ್ಭದಲ್ಲಿ ಭಾರತೀಯರ ಮೊದಲ ಆಯ್ಕೆ ಭಾರತೀಯ ಜೀವ ವಿಮಾ ಕಾರ್ಪೋರೇಷನ್ (LIC) ಆಗಿರುತ್ತದೆ. ಇನ್ನು ಎಲ್ಐಸಿ ಕೂಡ ಆಯಾ ವಯೋಮಾನದ ಜನರಿಗಾಗಿಯೇ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿರುತ್ತದೆ. ಕೇಂದ್ರ ಸರ್ಕಾರ ಬೆಂಬಲಿತ ಎಲ್ಐಸಿ, ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲ ವಯೋಮಾನ ಹಾಗೂ ವರ್ಗದ ಜನರಿಗೆ ಅನೇಕ ಹಲವಾರು ವಿಮಾ ಯೋಜನೆಗಳನ್ನು ಹೊಂದಿದೆ. ಎಲ್ಐಸಿ ಪರಿಚಯಿಸಿದ ಅಂಥ ಕೆಲವು ಪ್ರಯೋಜನಕಾರಿ ಯೋಜನೆಗಳಲ್ಲಿ ಜೀವನ್ ಶಿರೋಮಣಿ ಪಾಲಿಸಿ ಕೂಡ ಒಂದು.
ಏನಿದು ಎಲ್ ಐಸಿ ಜೀವನ್ ಶಿರೋಮಣಿ ಪಾಲಿಸಿ?
ಇದು ಸೀಮಿತ ಪ್ರೀಮಿಯಂ ಪಾವತಿಯ ಮನಿ ಬ್ಯಾಕ್ ಜೀವ ವಿಮಾ ಪ್ಲ್ಯಾನ್ ಆಗಿದೆ. ಈ ಯೋಜನೆಯಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೂಲ ವಿಮಾ ಮೊತ್ತ 1ಕೋಟಿ ರೂ. ಇದನ್ನು ಅಧಿಕ ಆದಾಯ ಹೊಂದಿರುವ ವರ್ಗದ ವ್ಯಕ್ತಿಗಳಿಗಾಗಿಯೇ ರೂಪಿಸಲಾಗಿದೆ.
ಖಾದ್ಯತೈಲ ಬೆಲೆ 10 ರು. ಇಳಿಸಿ: ಕಂಪನಿಗಳಿಗೆ ಸರ್ಕಾರ ಸೂಚನೆ
ಮೆಚ್ಯುರಿಟಿ ಅವಧಿ ಬಳಿಕ ಎಷ್ಟು ಹಣ ಸಿಗುತ್ತೆ?
ಈ ಪಾಲಿಸಿಯಲ್ಲಿ ಪಾಲಿಸಿದಾರರು ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ಸಾಕು ಒಂದು ಕೋಟಿ ರೂ. ಮೂಲ ಮೊತ್ತ ಸಿಗುತ್ತದೆ. ಎಲ್ ಐಸಿ ಜೀವನ್ ಶಿರೋಮಣಿ ಪಾಲಿಸಿ 14, 16, 18 ಹಾಗೂ 20 ವರ್ಷಗಳ ನಾಲ್ಕು ವಿವಿಧ ಅವಧಿಗಳಲ್ಲಿ ಮೆಚ್ಯುರ್ ಆಗುತ್ತದೆ. ಪಾಲಿಸಿದಾರರು ಪ್ರತಿ ತಿಂಗಳು ಸುಮಾರು 94,000ರೂ. ಮಾಸಿಕ ಪ್ರೀಮಿಯಂ ಪಾವತಿಸಿದ್ರೆ ಮಾತ್ರ ಎಲ್ಐಸಿ ಜೀವನ್ ಶಿರೋಮಣಿ ಪಾಲಿಸಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ.
ನಾಲ್ಕು ಅವಧಿಯಲ್ಲಿ ಸರ್ವೈವಲ್ ಪ್ರಯೋಜನ
ಜೀವಂತವಿರುವ ಪಾಲಿಸಿದಾರನಿಗೆ ಈ ಪಾಲಿಸಿ ಅಡಿಯಲ್ಲಿ ಮೂಲ ಮೊತ್ತದ ನಿಗದಿತ ಪ್ರಮಾಣದ ಹಣವನ್ನು ಪಾಲಿಸಿ ಅವಧಿಯ ಆಧಾರದಲ್ಲಿ ನಿರ್ದಿಷ್ಟ ಸಮಯಗಳಲ್ಲಿ ನೀಡಲಾಗುತ್ತದೆ.
1.14 ವರ್ಷಗಳ ಪಾಲಿಸಿ ಅವಧಿ: ಪಾಲಿಸಿಯ ಪ್ರತಿ 10ನೇ ಹಾಗೂ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೂಲ ಮೊತ್ತದ ಶೇ.30ರಷ್ಟನ್ನು ಪಾವತಿಸಲಾಗುತ್ತದೆ.
2.16 ವರ್ಷಗಳ ಪಾಲಿಸಿ ಅವಧಿ: ಪಾಲಿಸಿಯ ಪ್ರತಿ 12ನೇ ಹಾಗೂ 14ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೂಲ ಮೊತ್ತದ ಶೇ.35 ರಷ್ಟನ್ನು ಪಾವತಿಸಲಾಗುತ್ತದೆ.
3.18 ವರ್ಷಗಳ ಪಾಲಿಸಿ ಅವಧಿ: ಪಾಲಿಸಿಯ ಪ್ರತಿ 14ನೇ ಹಾಗೂ 16ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೂಲ ಮೊತ್ತದ ಶೇ.40 ರಷ್ಟನ್ನು ಪಾವತಿಸಲಾಗುತ್ತದೆ.
4.20 ವರ್ಷಗಳ ಪಾಲಿಸಿ ಅವಧಿ: ಪಾಲಿಸಿಯ ಪ್ರತಿ 16ನೇ ಹಾಗೂ18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೂಲ ಮೊತ್ತದ ಶೇ.45 ರಷ್ಟನ್ನು ಪಾವತಿಸಲಾಗುತ್ತದೆ.
ಎಲ್ ಐಸಿ ಜೀವನ್ ಶಿರೋಮಣಿ ಪಾಲಿಸಿ ಅಡಿಯಲ್ಲಿ ಸಾಲ ಸೌಲಭ್ಯ ಕೂಡ ಲಭ್ಯವಿದೆ. ಒಂದು ಇಡೀ ವರ್ಷದ ಪ್ರೀಮಿಯಂ ಪಾವತಿಸಿದ ಬಳಿಕ ಹಾಗೂ ಪಾಲಿಸಿ ಮಾಡಿ ಒಂದು ವರ್ಷ ಪೂರ್ಣಗೊಂಡ ಬಳಿಕ ನಿರ್ದಿಷ್ಟ ಷರತ್ತುಗಳ ಮೇಲೆ ಈ ಪಾಲಿಸಿ ಅಡಿಯಲ್ಲಿ ಸಾಲ ಪಡೆಯಬಹುದಾಗಿದೆ.
ITR e-Verification: ಆಧಾರ್ ಒಟಿಪಿ ಮೂಲಕ ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ಹೇಗೆ? ಇಲ್ಲಿದೆ ಮಾಹಿತಿ
ಅರ್ಹತೆಗಳೇನು?
ಎಲ್ ಐಸಿ ಜೀವನ್ ಶಿರೋಮಣಿ ಪಾಲಿಸಿ ಪಡೆಯಲು ಪಾಲಿಸಿದಾರನಿಗೆ ಕನಿಷ್ಠ 18 ವರ್ಷಗಳು ಆಗಿರಬೇಕು. 14 ವರ್ಷಗಳ ಅವಧಿಯ ಪಾಲಿಸಿ ಪಡೆಯಲು ಗರಿಷ್ಠ ವಯೋಮಿತಿ 55 ವರ್ಷ. ಇನ್ನು 16 ವರ್ಷಗಳ ಅವಧಿಗೆ ಗರಿಷ್ಠ ವಯೋಮಿತಿ 51 ವರ್ಷ. 18 ವರ್ಷಗಳ ಅವಧಿಯ ಪಾಲಿಸಿ ಪಡೆಯಲು ಗರಿಷ್ಠ ವಯೋಮಿತಿ 48 ವರ್ಷ ಹಾಗೂ 20 ವರ್ಷಗಳ ಅವಧಿಯ ಪಾಲಿಸಿಗೆ 45 ವರ್ಷ. ಹೀಗಾಗಿ ಪಾಲಿಸಿ ಮೆಚ್ಯುರ್ ಆಗುವ ಸಮಯದಲ್ಲಿ ಪಾಲಿಸಿದಾರನಿಗೆ 69 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿರಬಾರದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.