ಖಾದ್ಯತೈಲ ಬೆಲೆ 10 ರು. ಇಳಿಸಿ: ಕಂಪನಿಗಳಿಗೆ ಸರ್ಕಾರ ಸೂಚನೆ

By Kannadaprabha News  |  First Published Jul 7, 2022, 8:24 AM IST

ದೇಶಾದ್ಯಂತ ಒಂದು ಬ್ರಾಂಡ್‌ಗೆ ಒಂದೇ ಬೆಲೆ


ನವದೆಹಲಿ (ಜು.7): ಅಂತಾರಾಷ್ಟ್ರೀಯವಾಗಿ ಖಾದ್ಯ ತೈಲ ಬೆಲೆ ಕಡಿಮೆಯಾಗಿರುವುದರಿಂದ ಮುಂದಿನ ಒಂದು ವಾರದೊಳಗೆ ಖಾದ್ಯ ತೈಲ ಬೆಲೆಯನ್ನು ಲೀಟರ್‌ಗೆ 10 ರು.ನಷ್ಟುಕಡಿಮೆ ಮಾಡುವಂತೆ ತಯಾರಕ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಒಂದೇ ಬ್ರಾಂಡ್‌ನ ಎಣ್ಣೆಗೆ ದೇಶಾದ್ಯಂತ ಒಂದೇ ರೀತಿಯ ಮಾರಾಟ ದರ ವಿಧಿಸುವಂತೆ ಸೂಚಿಸಿದೆ.

ಪ್ರಸ್ತುತ ಭಾರತ ತನ್ನ ಅವಶ್ಯಕತೆಯ ಶೇ.60ರಷ್ಟುಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ ಈಗ ಅಂತಾರಾಷ್ಟ್ರೀಯವಾಗಿ ಬೆಲೆ ಕಡಿಮೆಯಾಗಿರುವುದರಿಂದ ದೇಶದಲ್ಲೂ ಬೆಲೆ ಕಡಿಮೆ ಮಾಡುವಂತೆ ಸರ್ಕಾರ ಸೂಚಿಸಿದೆ. ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಎಲ್ಲಾ ಖಾದ್ಯ ತೈಲ ಉತ್ಪಾದನಾ ಕಂಪನಿಗೊಂದಿಗೆ ಸಭೆ ನಡೆಸಿದ್ದಾರೆ.

Tap to resize

Latest Videos

ಆಮದಾಗುವ ಪಾಮ್‌, ಸೋಯಾಬೀನ್‌ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಪ್ರಮುಖ ಕಂಪನಿಗಳು ಒಪ್ಪಿಕೊಂಡಿವೆ. ಇವುಗಳ ಬೆಲೆ ಕಡಿಮೆಯಾದರೆ ಎಲ್ಲಾ ಬ್ರಾಂಡ್‌ನ ಎಣ್ಣಗಳ ಬೆಲೆ ಕಡಿಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.

PETROL - DIESEL PRICE TODAY: ಇಂದಿನ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ

ಅಲ್ಲದೆ, ದೊಡ್ಡ ಪ್ಯಾಕೆಟ್‌ನಲ್ಲಿ ಕಡಿಮೆ ತೂಕದ ಎಣ್ಣೆ ನೀಡುವ ವಿಷಯ ತನ್ನ ಗಮನಕ್ಕೆ ಬಂದಿದೆ. ಹೀಗಾಗಕೂಡದು ಎಂದು ಅದು ಕಂಪನಿಗಳಿಗೆ ನಿರ್ದೇಶಿಸಿದೆ.

ಖಾದ್ಯ ತೈಲ ತಯಾರಕರು ಕಳೆದ ತಿಂಗಳು ಪ್ರತಿ ಲೀಟರ್‌ಗೆ 10-15 ರೂಪಾಯಿಗಳವರೆಗೆ ಬೆಲೆಗಳನ್ನು ಕಡಿತಗೊಳಿಸಿದ್ದರು ಮತ್ತು ಅದಕ್ಕೂ ಮೊದಲು ಜಾಗತಿಕ ಮಾರುಕಟ್ಟೆಯಿಂದ ಸೂಚನೆಗಳನ್ನು ತೆಗೆದುಕೊಳ್ಳುವ MRP ಅನ್ನು ಕಡಿಮೆಗೊಳಿಸಿದ್ದರು.

LPG Cylinder Price Hike:ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಗೃಹ ಬಳಕೆ

ಜಾಗತಿಕ ಬೆಲೆಯಲ್ಲಿ ಮತ್ತಷ್ಟು ಕುಸಿತವನ್ನು ಗಮನಿಸಿ, ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಎಲ್ಲಾ ಖಾದ್ಯ ತೈಲ ಸಂಘಗಳು ಮತ್ತು ಪ್ರಮುಖ ತಯಾರಕರ ಸಭೆಯನ್ನು ಕರೆದರು   MRP ಅನ್ನು ಕಡಿಮೆ ಮಾಡುವ ಮೂಲಕ ಜಾಗತಿಕ ಬೆಲೆಗಳ ಕುಸಿತವನ್ನು  ಮನವರಿಕೆ ಮಾಡಿ ಕೊಟ್ಟರು.

ನಾವು ವಿವರವಾದ ಪ್ರಸ್ತುತಿಯನ್ನು ಮಾಡಿದ್ದೇವೆ ಮತ್ತು ಕಳೆದ ಒಂದು ವಾರದಲ್ಲಿ ಜಾಗತಿಕ ಬೆಲೆಗಳು ಶೇಕಡಾ 10 ರಷ್ಟು ಕಡಿಮೆಯಾಗಿದೆ ಎಂದು ಅವರಿಗೆ ತಿಳಿಸಿದ್ದೇವೆ. ಇದನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಎಂಆರ್‌ಪಿ ಕಡಿಮೆ ಮಾಡುವಂತೆ ನಾವು ಕೇಳಿಕೊಂಡಿದ್ದೇವೆ ಎಂದು ಸಭೆಯ ನಂತರ ಪಾಂಡೆ ಪಿಟಿಐಗೆ ತಿಳಿಸಿದರು.

click me!