ಇತ್ತೀಚೆಗೆ ಎಸ್ ಬಿಐ ಸೇರಿದಂತೆ ಅನೇಕ ಸಂಸ್ಥೆಗಳು ವಾಟ್ಸ್ಆ್ಯಪ್ ಸೇವೆಗಳನ್ನು ಪರಿಚಯಿಸಿವೆ. ಇದೀಗ ಎಲ್ಐಸಿ ಕೂಡ ವಾಟ್ಸ್ಆ್ಯಪ್ ಸೇವೆಗಳನ್ನು ಪ್ರಾರಂಭಿಸಿದೆ. ಹಾಗಾದ್ರೆ ವಾಟ್ಸ್ಆ್ಯಪ್ ಮೂಲಕ ಯಾವೆಲ್ಲ ಸೇವೆಗಳು ಲಭ್ಯ? ಇಲ್ಲಿದೆ ಮಾಹಿತಿ.
ನವದೆಹಲಿ (ಡಿ.2): ಇಂದು ವಾಟ್ಸ್ಆ್ಯಪ್ ಅತ್ಯಂತ ಜನಪ್ರಿಯ ಆ್ಯಪ್ ಗಳಲ್ಲಿ ಒಂದು. ಬಹುತೇಕ ಜನರು ವಾಟ್ಸ್ಆ್ಯಪ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ಬ್ಯಾಂಕುಗಳು ಹಾಗೂ ಸಂಸ್ಥೆಗಳು ವಾಟ್ಸ್ಆ್ಯಪ್ ಮೂಲಕ ಸೇವೆಗಳನ್ನು ಒದಗಿಸುತ್ತಿವೆ. ಈಗ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಕೂಡ ವಾಟ್ಸ್ಆ್ಯಪ್ ಮೂಲಕ ಸೇವೆಗಳನ್ನು ಒದಗಿಸಲು ಮುಂದಾಗಿದೆ. ಈ ಬಗ್ಗೆ ಎಲ್ಐಸಿ ಟ್ವಿಟ್ಟರ್ ಮೂಲಕ ಶುಕ್ರವಾರ ಮಾಹಿತಿ ನೀಡಿದೆ. ಪಾಲಿಸಿದಾರರು ವಾಟ್ಸ್ಆ್ಯಪ್ ನಲ್ಲಿ 'ಹಾಯ್' ಎಂದು 8976862090 ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಈ ಸೇವೆ ಪಡೆಯಬಹುದು. ಎಲ್ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸ್ಆ್ಯಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು. ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸ್ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಹೀಗಾಗಿ ನೀವು ಇನ್ನು ಮುಂದೆ ಇಂಥ ಸಣ್ಣ ಹಾಗೂ ದೊಡ್ಡ ಕೆಲಸಗಳಿಗೆ ಎಲ್ಐಸಿ ಕಚೇರಿಗೆ ಭೇಟಿ ನೀಡೋದು ಅಥವಾ ಎಲ್ಐಸಿ ಏಜೆಂಟ್ ರನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ. ವಾಟ್ಸ್ಆ್ಯಪ್ ಮೂಲಕವೇ ಸೇವೆಗಳನ್ನು ಪಡೆದುಕೊಳ್ಳಬಹುದು.
ಸೇವೆ ಪಡೆಯೋದು ಹೇಗೆ?
ನೀವು ಮೊಬೈಲ್ ಮುಖಾಂತರ ಎಲ್ಐಸಿ ವಾಟ್ಸ್ಆ್ಯಪ್ ಸೇವೆಗಳನ್ನು ಪಡೆಯಲು ಎಲ್ಐಸಿ ಪೋರ್ಟಲ್ ನಲ್ಲಿ ಎಲ್ ಐಸಿ ಪಾಲಿಸಿ ನೋಂದಣಿ ಮಾಡಿಸೋದು ಅಗತ್ಯ. ಆ ಬಳಿಕ ನೀವು ನಿಮ್ಮ ವಾಟ್ಸ್ಆ್ಯಪ್ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.
ರಿಟೇಲ್ ಮಾರುಕಟ್ಟೆ ಪ್ರವೇಶಿಸಿದ ಡಿಜಿಟಲ್ ರೂಪಾಯಿ; ಈಗಲೇ ಬಳಕೆಗೆ ಲಭ್ಯವಾ?
ಯಾವೆಲ್ಲ ಸೇವೆಗಳು ಲಭ್ಯ?
ವಾಟ್ಸ್ಆ್ಯಪ್ ಮೂಲಕ ಎಲ್ ಐಸಿಯಿಂದ ಈ ಎಲ್ಲ ಸೇವೆಗಳನ್ನು ಪಡೆಯಬಹುದು.
1.ಪ್ರೀಮಿಯಂ ಪಾವತಿ ಅಂತಿಮ ದಿನಾಂಕ
2.ಬೋನಸ್ ಮಾಹಿತಿ (Bonus information)
3.ಪಾಲಿಸಿ ಸ್ಟೇಟಸ್ (Policy status)
4.ಸಾಲ ಮರುಪಾವತಿ ಮಾಹಿತಿ (Loan repayment Quotation)
5. ಸಾಲದ ಅರ್ಹತಾ ಮಾಹಿತಿ (Loan eligibility quotation)
6.ಸಾಲದ ಬಡ್ಡಿದರ ಗಡುವು (Loan interest due)
7.ಪ್ರೀಮಿಯಂ ಪಾವತಿ ಪ್ರಮಾಣಪತ್ರ (Premium paid certificate)
8.ಯುಲಿಪ್ (ULIP)-ಸ್ಟೇಟ್ಮೆಂಟ್ ಆಫ್ ಯುನಿಟ್ಸ್
9.ಎಲ್ ಐಸಿ ಸರ್ವೀಸಸ್ ಲಿಂಕ್ಸ್
10.ಅಪ್ಟ್ ಇನ್ /ಅಪ್ಟ್ ಔಟ್ ಸರ್ವೀಸಸ್ (Opt in/Opt out Services)
11.End conversation
ಎಲ್ ಐಸಿ ಆನ್ ಲೈನ್ ಸೇವೆ ಪಡೆಯೋದು ಹೇಗೆ?
ಎಲ್ಐಸಿ ಪೋರ್ಟಲ್ ನಲ್ಲಿ ಆನ್ ಲೈನ್ ಸೇವೆಗಳಿಗೆ ನೋಂದಣಿ ಮಾಡಿಸಬಹುದು. ಹಾಗಾದ್ರೆ ನೋಂದಣಿ ಮಾಡೋದು ಹೇಗೆ?
*www.licindia.in ಭೇಟಿ ನೀಡಿ, ಆ ಬಳಿಕ “Customer Portal" ಆಯ್ಕೆ ಮಾಡಿ.
*'New user' ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಆಯ್ಕೆ ಮಾಡಿ. ಆ ಬಳಿಕ ಮುಂದಿನ ಸ್ಕ್ರೀನ್ ನಲ್ಲಿ ಸಲ್ಲಿಕೆ ಮಾಡಿ.
*ಹೊಸದಾಗಿ ಸೃಷ್ಟಿಯಾದ ಯೂಸರ್ ಐಡಿ ಬಳಸಿಕೊಂಡು ಲಾಗ್ ಇನ್ ಆಗಿ. ಆ ಬಳಿಕ "Basic Services" ಅಡಿಯಲ್ಲಿ "Add Policy" ಆಯ್ಕೆ ಮಾಡಿ.
*ಈಗ ನಿಮ್ಮ ಉಳಿದೆಲ್ಲ ಪಾಲಿಸಿಗಳನ್ನು ನೋಂದಣಿ ಮಾಡಿ.
*ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಸೇರಿದಂತೆ ಮೂಲ ಮಾಹಿತಿಗಳನ್ನು ಪೋರ್ಟಲ್ ನಲ್ಲಿ ಭರ್ತಿ ಮಾಡಿ.