LIC Jeevan Umang Policy: ತಿಂಗಳಿಗೆ ಕೇವಲ ರೂ. 1,302 ಕಟ್ಟಿ, ರೂ. 28 ಲಕ್ಷ ರಿಟರ್ನ್ ಗ್ಯಾರಂಟಿ!

Published : Apr 14, 2022, 03:59 PM ISTUpdated : Apr 16, 2022, 05:38 PM IST
LIC Jeevan Umang Policy: ತಿಂಗಳಿಗೆ ಕೇವಲ ರೂ. 1,302  ಕಟ್ಟಿ, ರೂ. 28 ಲಕ್ಷ ರಿಟರ್ನ್ ಗ್ಯಾರಂಟಿ!

ಸಾರಾಂಶ

*90 ದಿನಗಳ ಮಗುವಿನಿಂದ ಹಿಡಿದು 55 ವರ್ಷದ ಮಧ್ಯವಯಸ್ಕರು ಕೂಡ ಈ ಪಾಲಿಸಿ ಪಡೆಯಬಹುದು *ಜೀವನ್ ಉಮಾಂಗ್ ಪಾಲಿಸಿಗೆ ನಾಲ್ಕು ಪ್ರೀಮಿಯಂ ಅವಧಿ *ಈ ಪಾಲಿಸಿಯ ಮೆಚ್ಯುರಿಟಿ ಅವಧಿ 100 ವರ್ಷ

Business Desk:ಗ್ರಾಹಕರ ಅಗತ್ಯ ಹಾಗೂ ಬೇಡಿಕೆಗೆ ಅನುಗುಣವಾಗಿ ಭಾರತೀಯ ಜೀವ ವಿಮಾ ನಿಗಮ (LIC) ನಿರಂತರವಾಗಿ ವಿವಿಧ ವಿಮಾ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಎಲ್ ಐಸಿಯ ಪ್ರಮುಖ ಪಾಲಿಸಿಗಳಲ್ಲಿ ಜೀವನ್ ಉಮಾಂಗ್ ಕೂಡ ಒಂದು. ಇದು ಇಡೀ ಜೀವನಕ್ಕೆ ಅನ್ವಯಿಸೋ ವಿಮಾ ಯೋಜನೆ ಎಂದ್ರೆ ತಪ್ಪಿಲ್ಲ. ಇದು ಕೇವಲ ಪಾಲಿಸಿದಾರನಿಗೆ ಮಾತ್ರವಲ್ಲ, ಆತನನ್ನೇ ಅವಲಂಬಿಸಿರೋ ಕುಟುಂಬ ಸದಸ್ಯರಿಗೂ ಆರ್ಥಿಕ ಭದ್ರತೆ ಒದಗಿಸುತ್ತದೆ. ಹಾಗಾದ್ರೆ ಜೀವನ್ ಉಮಾಂಗ್ ವಿಮಾ ಯೋಜನೆ ವಿಶೇಷತೆಗಳೇನು? ತಿಳಿಯೋಣ ಬನ್ನಿ.

ವಯಸ್ಸಿನ ಮಿತಿ ಎಷ್ಟು?
ಎಲ್ಐಸಿ ಜೀವನ್ ಉಮಾಂಗ್ ಪಾಲಿಸಿಯನ್ನು 90 ದಿನಗಳ ಮಗುವಿನಿಂದ ಹಿಡಿದು 55 ವರ್ಷದ ಮಧ್ಯವಯಸ್ಕರು ಕೂಡ ಪಡೆಯಬುದು. ಆದ್ರೆ ಯೋಜನೆಯನ್ನು ಆಧರಿಸಿ ಇದರಲ್ಲಿ ಕೆಲವೊಂದು ವ್ಯತ್ಯಾಸಗಳನ್ನು ಕಾಣಬಹುದು. ಕೆಲವು ಪೋಷಕರು ಮೂರು ತಿಂಗಳು ತುಂಬಿರೋ  ಮಗುವಿನ ಹೆಸರಲ್ಲಿ ಈ ಪಾಲಿಸಿ ಮಾಡುತ್ತಾರೆ. ಇದ್ರಿಂದ ಆ ಮಗು ಬೆಳೆದು ದೊಡ್ಡವರಾಗುವಾಗ ಉತ್ತಮ ರಿಟರ್ನ್ಸ್ ಸಿಗುತ್ತದೆ. ಈ ಪಾಲಿಸಿಯಲ್ಲಿ  ಭರವಸೆ ನೀಡಿರೋ ಕನಿಷ್ಠ ಮೊತ್ತ 2ಲಕ್ಷ ರೂ. 

Save Money : ದುಬಾರಿ ಬೆಲೆಯ ಪುಸ್ತಕ ಖರೀದಿ ಹೀಗಿರಲಿ..

ಪ್ರೀಮಿಯಂ ಅವಧಿ
ಜೀವನ್ ಉಮಾಂಗ್ ಪಾಲಿಸಿಗೆ ನಾಲ್ಕು ಪ್ರೀಮಿಯಂ ಅವಧಿಯಿದೆ-15 ವರ್ಷ, 20 ವರ್ಷ, 25 ವರ್ಷ ಹಾಗೂ 30 ವರ್ಷ. ಹೀಗಾಗಿ ಪ್ರೀಮಿಯಂ ಅವಧಿಗೆ ಅನುಗುಣವಾಗಿ ಕನಿಷ್ಠ ಹಾಗೂ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿ 30 ವರ್ಷಗಳ ಪ್ರೀಮಿಯಂ ಅವಧಿಯ ಜೀವನ್ ಉಮಾಂಗ್ ಪಾಲಿಸಿ ಖರೀದಿಸಲು ಬಯಸಿದ್ರೆ ಆತನ  ವಯಸ್ಸು 40 ವರ್ಷಕ್ಕಿಂತ ಹೆಚ್ಚಾಗಿರಬಾರದು. ಏಕೆಂದ್ರೆ ಆಗ 70 ವರ್ಷಕ್ಕೆ ಆತನ ಪ್ರೀಮಿಯಂ ಪಾವತಿ ಅವಧಿ ಮುಕ್ತಾಯವಾಗುತ್ತದೆ. ಅದೇರೀತಿ 15 ವರ್ಷಗಳ ಪ್ರೀಮಿಯಂ ಅವಧಿ ತೆಗೆದುಕೊಳ್ಳುವ ಪಾಲಿಸಿದಾರ ವಯಸ್ಸು 55 ವರ್ಷಕ್ಕಿಂತ ಹೆಚ್ಚಾಗಿರಬಾರದು. ಪ್ರೀಮಿಯಂ ಪಾವತಿ ಅವಧಿ ಮುಕ್ತಾಯವಾಗೋ ಸಂದರ್ಭದಲ್ಲಿ ಪಾಲಿಸಿದಾರನ ವಯಸ್ಸು ಗರಿಷ್ಠ 70 ವರ್ಷ ಹಾಗೂ ಕನಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಹೀಗಾಗಿ ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ಜೀವನ್ ಉಮಾಂಗ್ ಪಾಲಿಸಿ ಮಾಡೋವಾಗ 30 ವರ್ಷಗಳ ಪ್ರೀಮಿಯಂ ಅವಧಿ ಆಯ್ಕೆ ಮಾಡೋದು ಉತ್ತಮ.

ಮೆಚ್ಯುರಿಟಿ ಹಾಗೂ ಪ್ರಯೋಜನಗಳು
ಎಲ್ ಐಸಿ ಜೀವನ್ ಉಮಾಂಗ್ ಪಾಲಿಸಿಯ ಮೆಚ್ಯುರಿಟಿ ಅವಧಿಯನ್ನು 100 ವರ್ಷಗಳಿಗೆ ನಿಗದಿಪಡಿಸಿದೆ. ಜೀವನ್ ಉಮಾಂಗ್ ಯೋಜನೆ ಅನ್ವಯ ಪ್ರೀಮಿಯಂ ಪಾವತಿ ಅವಧಿ ಮುಕ್ತಾಯವಾದ ನಂತರ ಮೆಚ್ಯುರಿಟಿ ಸಮಯದ ತನಕ ಎಲ್ಐಸಿ ಆಶ್ವಾಸನೆ ನೀಡಿರೋ ಮೊತ್ತದ ಶೇ.8ರಷ್ಟನ್ನು ವಾರ್ಷಿಕವಾಗಿ ಪಾಲಿಸಿದಾರನಾಗಿ ಪಾವತಿಸುತ್ತದೆ. ಹೀಗಾಗಿ ಪಾಲಿಸಿದಾರನಿಗೆ 70 ವರ್ಷ ತುಂಬಿದ ತಕ್ಷಣ ಆತನ ಪ್ರೀಮಿಯಂ ಪಾವತಿ ಅವಧಿ ಮುಗಿಯುತ್ತದೆ. ಆಗ ಆತ 100 ವರ್ಷವಾಗೋ ತನಕ ವಾರ್ಷಿಕ ಪ್ರಯೋಜನವನ್ನು ಪಡೆಯುತ್ತಾನೆ. ಒಂದು ವೇಳೆ ಪಾಲಿಸಿದಾರ 100 ವರ್ಷಕ್ಕೂ ಮುನ್ನ ಸಾವನ್ನಪ್ಪಿದರೆ ಆತನ ನಾಮಿನಿಗೆ ಪಾಲಿಸಿಯ ಒಟ್ಟು ಮೊತ್ತವನ್ನು ಒಮ್ಮೆಗೆ ಪಾವತಿಸಲಾಗುತ್ತದೆ. 

5 ವರ್ಷಕ್ಕಿಂತ ಮೊದಲೇ ಉದ್ಯೋಗ ಬಿಟ್ರೂ ಸಿಗುತ್ತೆ ಗ್ರ್ಯಾಚುಟಿ, ಹೇಗೆ? ಇಲ್ಲಿದೆ ವಿವರ

ಇನ್ನು ಜೀವನ್ ಉಮಾಂಗ್ ಲಿಂಕ್ಡ್ ವಿಮಾ ಪಾಲಿಸಿ ಅಲ್ಲದ ಕಾರಣ ಗ್ರಾಹಕರಿಗೆ ಭರವಸೆ ನೀಡಿರೋ ರಿಟರ್ನ್ಸ್ ಸಿಗೋದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದ್ರೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ಇಕ್ವಿಟಿ ಮಾರ್ಕೆಟ್ ನಲ್ಲಿ ತೊಡಗಿಸದ ಕಾರಣ ನಿರೀಕ್ಷಿತ ಮೊತ್ತ ಕೈಸೇರೋದು ಖಚಿತ. ಅಲ್ಲದೆ, ಎಲ್ಲ ಪ್ರೀಮಿಯಂಗಳನ್ನು ನೀವು ಸಮರ್ಪಕವಾಗಿ ಪಾವತಿಸಿದ್ರೆ ಮೆಚ್ಯುರಿಟಿ ಅವಧಿ ಬಳಿಕ ಪಾಲಿಸಿಯ ಒಟ್ಟು ಮೊತ್ತದ ಜೊತೆಗೆ ಬೋನಸ್ ಕೂಡ ನೀಡಲಾಗುತ್ತದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!