LIC IPO: ಈ ತಿಂಗಳ ಮೂರನೇ ವಾರ ಸೆಬಿಗೆ ಕರಡು ಪ್ರತಿ ಸಲ್ಲಿಕೆ ಸಾಧ್ಯತೆ; ಹಾಗಾದ್ರೆ ಎಲ್ಐಸಿ ಐಪಿಒ ಯಾವಾಗ?

By Suvarna NewsFirst Published Jan 5, 2022, 3:12 PM IST
Highlights

*ಎಲ್ ಐಸಿ ಐಪಿಒ ಮೂಲಕ ಒಂದು ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಸಂಗ್ರಹದ ಉದ್ದೇಶ.
*2021-22ನೇ ಆರ್ಥಿಕ ಸಾಲಿನ ಕೊನೆಯ ತ್ರೈಮಾಸಿಕದ ಅಂತ್ಯದೊಳಗೆ ಎಲ್ಐಸಿ ಐಪಿಒ ನಡೆಯೋ ಸಾಧ್ಯತೆ
*ದೇಶದ ಅತೀದೊಡ್ಡ ಐಪಿಒ ಆಗಿ ಮೂಡಿಬರೋ ನಿರೀಕ್ಷೆ

Business Desk: ಭಾರತೀಯ ಜೀವ ವಿಮಾ ನಿಗಮದ (LIC)) ಐಪಿಒ (IPO) ಈ ವರ್ಷದ ಬಹು ನಿರೀಕ್ಷಿತ ಐಪಿಒಗಳಲ್ಲೊಂದಾಗಿದೆ. ಎಲ್ ಐಸಿ ಐಪಿಒ ಭಾರತದ (India) ಅತಿದೊಡ್ಡ ಐಪಿಒ (IPO) ಆಗಿ ಮೂಡಿಬರೋ ನಿರೀಕ್ಷೆಯಿದೆ. ವರದಿಗಳ ಅನ್ವಯ ಜನವರಿ ಮೂರನೇ ವಾರದಲ್ಲಿ ಎಲ್ ಐಸಿ ಮಾರ್ಕೆಟ್ ನಿಯಂತ್ರಕ ಸೆಬಿಗೆ ಐಪಿಒ ಕುರಿತ ನಿರೀಕ್ಷೆಗಳ ಕರಡು ಪ್ರತಿಯನ್ನು ಸಲ್ಲಿಕೆ ಮಾಡೋ ಸಾಧ್ಯತೆಯಿದೆ. ಈ ಬಗ್ಗೆ ಎಲ್ಐಸಿ ಅಧಿಕಾರಿಗಳು ಜಾಗತಿಕ ಹೂಡಿಕೆದಾರರೊಂದಿಗೆ ಐಪಿಒ ಕುರಿತು ನಡೆಸಿದ ಸಮಾಲೋಚನೆಯಲ್ಲಿ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಎಲ್ಐಸಿ ಐಪಿಒ 2021-22ನೇ ಆರ್ಥಿಕ ವರ್ಷದ ಕೊನೆಯಲ್ಲಿ ( 2022ರ ಮಾರ್ಚ್ ಅಂತ್ಯದೊಳಗೆ) ನಡೆಯಲಿದೆ, ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿತ್ತು. ಅಲ್ಲದೆ, ಎಲ್ಐಸಿ ಐಪಿಒ ನಿಗದಿತ ಸಮಯಕ್ಕಿಂತ ತಡವಾಗಿ ನಡೆಯೋ ಸಾಧ್ಯತೆಯಿದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿತ್ತು.

ಎಲ್ಐಸಿ ಐಪಿಒ ಬಗ್ಗೆ ಈ ವಿಷಯಗಳು ತಿಳಿದಿರಲಿ
-ಎಲ್ಐಸಿ  ಐಪಿಒ ಭಾರತದ ಅತಿದೊಡ್ಡ ಐಪಿಒ ಆಗಿ ಮೂಡಿಬರೋ ನಿರೀಕ್ಷೆಯಿದೆ. ಈ ಐಪಿಒ ಮೂಲಕ ಸರ್ಕಾರ  ಒಂದು ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ ಸಂಗ್ರಹಿಸೋ ಉದ್ದೇಶ ಹೊಂದಿದೆ.
-ಎಲ್ಐಸಿ ಐಪಿಒ ಪೇಟಿಎಂಗಿಂತ (PTM)ದೊಡ್ಡ ಪ್ರಮಾಣದಲ್ಲಿರುತ್ತೆ ಎಂದು ಹೇಳಲಾಗಿದೆ.18,300 ಕೋಟಿ ರೂ. ಸಂಗ್ರಹ ಉದ್ದೇಶದೊಂದಿಗೆ ಪೇಟಿಎಂ ಸಂಸ್ಥೆ 2021ರ  ನವೆಂಬರ್ ನಲ್ಲಿ ನಡೆಸಿದ ಐಪಿಒ ದೇಶದ ಅತಿದೊಡ್ಡ ಐಪಿಒ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 

LIC IPO: ಊಹಪೋಹಗಳಿಗೆ ತೆರೆ, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಎಲ್ಐಸಿ ಐಪಿಒ ಪಕ್ಕಾ!

-ಎಲ್ಐಸಿ  ಐಪಿಒನಲ್ಲಿ ಶೇ.10ರಷ್ಟು ಪಾಲನ್ನು ಪಾಲಿಸಿದಾರರಿಗೆ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಸಿದಾರರು (Policyholders) ಎಲ್ಐಸಿ ಯಲ್ಲಿರೋ ತಮ್ಮ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್(PAN card) ಮಾಹಿತಿಯನ್ನು ಶೀಘ್ರವಾಗಿ ನವೀಕರಿಸೋ ಜೊತೆ ಡಿಮ್ಯಾಟ್ ಖಾತೆಗಳನ್ನು (demat accounts)ತೆರೆಯುವಂತೆ ಎಲ್ ಐಸಿ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ. ಕೆವೈಸಿ (KYC) ದಾಖಲೆಗೆ ಹಾಗೂ ಎಲ್ಐಸಿ ಐಪಿಒನಲ್ಲಿ ಭಾಗವಹಿಸಲು ಪ್ಯಾನ್ ಮಾಹಿತಿ ನೀಡೋದು ಅಗತ್ಯ ಎಂದು ಎಲ್ಐಸಿ ತಿಳಿಸಿದೆ. 

LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ

-ಎಲ್ಐಸಿ ಐಪಿಒಗೆ ಸರ್ಕಾರ ಈಗಾಗಲೇ ಪೂರ್ವಭಾವಿ ಸಿದ್ಧತೆ ನಡೆಸಿದೆ. ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ( Cyril Amarchand Mangaldas) ಅವರನ್ನು ಕಾನೂನು ಸಲಹೆಗಾರರನ್ನಾಗಿ (legal advisor) ಸರ್ಕಾರ ನೇಮಿಸಿದೆ. ಜೊತೆಗೆ ಎಲ್ ಐಸಿ ಐಪಿಒ ನಿರ್ವಹಣೆಗೆ 10 ಟಾಪ್ ಜಾಗತಿಕ ಹಾಗೂ ಭಾರತೀಯ ಮಾರ್ಚೆಂಟ್ ಬ್ಯಾಂಕುಗಳನ್ನು ನೇಮಿಸಿದೆ. ಕಾನ್ಸೆಪ್ಟ್ ಕಮ್ಯೂನಿಕೇಷನ್ಸ್ (Concept Communications) ಅನ್ನು ಜಾಹೀರಾತು ಏಜೆನ್ಸಿಯಾಗಿ ಹಾಗೂ ಕೆಫಿನ್ ಟೆಕ್ (Kfintech) ಅನ್ನು ರಿಜಿಸ್ಟ್ರಾರ್ ಹಾಗೂ ಷೇರ್ ವರ್ಗಾವಣೆ ಏಜೆಂಟ್ ಆಗಿ ನೇಮಕ ಮಾಡಲಾಗಿದೆ. ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ನೀಡಿರೋ ಮಾಹಿತಿ ಪ್ರಕಾರ ಗೋಲ್ಡ್ ಮನ್ ಸ್ಯಾಚಸ್ (Goldman Sachs),ಜೆಪಿ ಮೊರ್ಗನ್ (JP Morgan),ಸಿಟಿ ಗ್ರೂಪ್ (Citigroup),ನೊಮುರ(Nomura),ಬ್ಯಾಂಕ್  ಆಫ್ ಅಮೆರಿಕ ಸೆಕ್ಯುರಿಟೀಸ್ (Bank of America Securities),ಜೆಎಂ ಫೈನಾನ್ಷಿಯಲ್ (JM Financial),ಎಸ್ ಬಿಐ ಕ್ಯಾಪ್ಸ್ (SBI Caps),ಕೋಟಕ್ ಮಹೀಂದ್ರ ಕ್ಯಾಪಿಟಲ್ ( Kotak Mahindra Capital),ಐಸಿಐಸಿಐ ಸೆಕ್ಯುರಿಟೀಸ್ (ICICI Securities) ಹಾಗೂ ಎಕ್ಸಿಸ್ ಕ್ಯಾಪಿಟಲ್(Axis Capital) ಅನ್ನು ಐಪಿಒ ನಿರ್ವಹಣೆಗೆ ನೇಮಕ ಮಾಡಲಾಗಿದೆ.
-ಎಲ್ಐಸಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಈಗಾಗಲೇ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಸಲು ವಿವಿಧ ಸಮಾಲೋಚನಾ ಸಭೆಗಳನ್ನು ಕೂಡ ನಡೆಸುತ್ತಿದೆ. 


 

click me!