LIC Stake: ಇಂಡಸ್ ಇಂಡ್ ಬ್ಯಾಂಕಿನಲ್ಲಿ ಎಲ್ಐಸಿ ಷೇರು ಹೆಚ್ಚಳಕ್ಕೆ ಆರ್ ಬಿಐ ಅನುಮತಿ

By Suvarna News  |  First Published Dec 11, 2021, 1:53 PM IST

*ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕಿಂಗ್ ವಲಯದಲ್ಲಿ ಎಲ್ಐಸಿ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆ
*ಇಂಡಸ್ ಇಂಡ್ ಬ್ಯಾಂಕಿನಲ್ಲಿ ಪ್ರಸ್ತುತ ಶೇ.4.59 ಪಾಲು ಹೊಂದಿರೋ ಎಲ್ಐಸಿ
*ಇಂಡಸ್ ಇಂಡ್ ಬ್ಯಾಂಕಿನಲ್ಲಿ ಶೇ.9.99 ಷೇರುಗಳನ್ನು ಹೊಂದಲು ಎಲ್ಐಸಿಗೆ ಅನುಮತಿ


ಮುಂಬೈ (ಡಿ.11): ಖಾಸಗಿ ಬ್ಯಾಂಕುಗಳಲ್ಲಿ(Private bank) ಶೇ.9.99 ಷೇರುಗಳನ್ನು ಹೊಂದಲು ಭಾರತೀಯ ಜೀವ ವಿಮಾ ನಿಗಮಕ್ಕೆ (LIC) ಆರ್ ಬಿಐ RBI)ಅನುಮತಿ ನೀಡಿದೆ ಎಂದು ಇಂಡಸ್ ಇಂಡ್ ಬ್ಯಾಂಕ್ ( IndusInd Bank) ಮಾಹಿತಿ ನೀಡಿದೆ.  ಖಾಸಗಿ ಬ್ಯಾಂಕ್ ಗಳಲ್ಲಿ  ಷೇರು ಹೊಂದೋ ಬಗ್ಗೆ ಆರ್ ಬಿಐ(RBI) ಪ್ರಕಟಿಸಿರೋ ಹೊಸ ನಿಯಮಗಳ ಅನ್ವಯ ಈ ಅನುಮತಿ ಸಿಕ್ಕಿದೆ. ಉತ್ತೇಜಕರಲ್ಲದ ಷೇರುದಾರರು(Stakeholders) ಖಾಸಗಿ ಬ್ಯಾಂಕ್ ಗಳಲ್ಲಿ(Private banks) ಶೇ.10ರಷ್ಟು ಷೇರುಗಳನ್ನು(Stake) ಹೊಂದಲು ಅವಕಾಶ ನೀಡಲಾಗಿದೆ.

ಎಲ್ ಐಸಿ ಈಗಾಗಲೇ ಇಂಡಸ್ಇಂಡ್ ಬ್ಯಾಂಕಿನಲ್ಲಿ ಶೇ.4.59 ಪಾಲು ಹೊಂದಿದೆ. ಈ ಅನುಮತಿ ಒಂದು ವರ್ಷ ಅವಧಿಗೆ  ಅಂದ್ರೆ 2022ರ ಡಿಸೆಂಬರ್  8ಕ್ಕೆ ಸೀಮಿತವಾಗಿದೆ.  ಈ ಸುದ್ದಿ ಬೆನ್ನಲ್ಲೇ ಡಿ.10ರಂದು ಬಾಂಬೆ ಷೇರು ಮಾರುಕಟ್ಟೆಯಲ್ಲಿ(BSE) ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇ.1ರಷ್ಟು ಏರಿಕೆ ಕಂಡಿತ್ತು. ಷೇರಿನ ಬೆಲೆ 947 ರೂಪಾಯಿ ತಲುಪಿತ್ತು. 

Latest Videos

undefined

Rupee vs Dollar: 16 ತಿಂಗಳಲ್ಲೇ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ, ಇದಕ್ಕೇನು ಕಾರಣ?

ಖಾಸಗಿ ವಲಯದ ಬ್ಯಾಂಕುಗಳಲ್ಲಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಥವಾ ಅದ್ರಲ್ಲಿ ಮತದಾನದ ಹಕ್ಕುಗಳನ್ನು ಪಡೆಯಲು ಪೂರ್ವಾನುಮತಿ ಅಗತ್ಯ' ಎಂಬ ನವೆಂಬರ್ 19, 2015ರ ನಿರ್ದೇಶನ ಹಾಗೂ ಖಾಸಗಿ ವಲಯ ಬ್ಯಾಂಕುಗಳ ಮಾಲೀಕತ್ವಕ್ಕೆ ಸಂಬಂಧಿಸಿದ ಮೇ 12, 2016ರ ನಿರ್ದೇಶನಗಳು, ಭಾರತೀಯ ಸೆಕ್ಯರಿಟೀಸ್ ಹಾಗೂ ಎಕ್ಸ್ಚೇಂಜ್ ಬೋರ್ಡ್ ನಿಯಮಗಳು, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(Foreign exchange Maintainence Act) 1999ರ ಮಾರ್ಗಸೂಚಿಗಳು ಸೇರಿದಂತೆ ಇತರ ಕೆಲವು ನಿರ್ದೇಶನಗಳಿಗೆ ಈ ಅನುಮತಿ ಒಳಪಡುತ್ತದೆ ಎಂದು ಇಂಡಸ್ ಇಂಡ್ ಬ್ಯಾಂಕ್ ತಿಳಿಸಿದೆ.

ಆರ್ ಬಿಐ (RBI) ನಿಯಮಗಳ ಪ್ರಕಾರ ಪ್ರತಿ ವ್ಯಕ್ತಿ ಅಥವಾ ಸಂಸ್ಥೆ ಖಾಸಗಿ ಬ್ಯಾಂಕುಗಳಲ್ಲಿ ಶೇ.5ಕ್ಕಿಂತ ಹೆಚ್ಚು ಪಾಲು ಹೊಂದಲು ಕೇಂದ್ರ ಬ್ಯಾಂಕಿನಿಂದ ಪೂರ್ವಾನುಮತಿ ಪಡೆಯೋದು ಕಡ್ಡಾಯ. ಇಂಡಸ್ ಇಂಡ್ ಬ್ಯಾಂಕಿನಲ್ಲಿ ಎಲ್ಐಸಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳೋ ಪ್ರಕ್ರಿಯೆ 2015ರ ಆರ್ ಬಿಐ ಮಾರ್ಗಸೂಚಿಗಳಿಗೆ ಒಳಪಡುತ್ತದೆ ಹಾಗೂ ಸೆಬಿಯ ( SEBI) ಮಾರುಕಟ್ಟೆ ನಿಯಮಗಳಿಗೆ ಒಳಪಡುತ್ತದೆ. ಕಳೆದ ತಿಂಗಳು ಕೋಟಕ್ ಮಹೀಂದ್ರ ಬ್ಯಾಂಕಿನಲ್ಲಿ(Kotak Mahindra Bank) ಶೇ.9.99 ಪಾಲು ಹೊಂದಲು ಎಲ್ಐಸಿಗೆ  ಆರ್ ಬಿಐ ಅನುಮತಿ ನೀಡಿತ್ತು.  

ಎಲ್ಐಸಿ ಭಾರತದ ಬೃಹತ್ ಸಾಂಸ್ಥಿಕ ಹೂಡಿಕೆದಾರರಲ್ಲಿ(Institutionsl Investors) ಒಂದಾಗಿದ್ದು, ಅನೇಕ ಖಾಸಗಿ(Private) ಹಾಗೂ ಸಾರ್ವಜನಿಕ ಬ್ಯಾಂಕುಗಳಲ್ಲಿ (Public sector Banks) ಪಾಲು ಹೊಂದಿದೆ. ಇದು 24 ಷೆಡ್ಯುಲ್ಡ್ ವಾಣಿಜ್ಯ ಬ್ಯಾಂಕುಗಳಲ್ಲಿ ಷೇರು ಹೊಂದಿದೆ. ಐಡಿಬಿಐ ಬ್ಯಾಂಕಿನಲ್ಲಿ (IDBI Bank) ಎಲ್ಐಸಿ ಶೇ.49.24 ಪಾಲು ಹೊಂದಿದೆ. ಇದು ಎಲ್ಐಸಿ ಬ್ಯಾಂಕಿಂಗ್ ವಲಯದಲ್ಲಿ ಹೊಂದಿರೋ ಅತೀದೊಡ್ಡ ಪಾಲಾಗಿದೆ. ಇನ್ನು ಕೆನರಾ ಬ್ಯಾಂಕಿನಲ್ಲಿ ಶೇ.8.8, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ.8.3, ಎಕ್ಸಿಸ್ ಬ್ಯಾಂಕಿನಲ್ಲಿ ಶೇ.8.2 ಹಾಗೂ ಐಸಿಐಸಿಐ ಬ್ಯಾಂಕಿನಲ್ಲಿ ಶೇ.7.6 ಪಾಲು ಹೊಂದಿದೆ. 

Bank Holiday:ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ, ಯಾಕೆ ಗೊತ್ತಾ?

ಭಾರತೀಯ ಜೀವ ವಿಮಾ ನಿಗಮ (LIC) ಐಪಿಒಗೆ(IPO) ಸಿದ್ಧತೆ ನಡೆಸುತ್ತಿದ್ದು, ಶೇ.10 ಭಾಗವನ್ನು ಪಾಲಿಸಿದಾರರಿಗೆ ಮೀಸಲಿಟ್ಟಿದೆ. ಎಲ್ಐಸಿ ನಡೆಸಲು ಉದ್ದೇಶಿಸಿರೋ ಐಪಿಒ ಪೇಟಿಎಂಗಿಂತ ದೊಡ್ಡ ಪ್ರಮಾಣದಲ್ಲಿರುತ್ತೆ ಎಂದು ಹೇಳಲಾಗಿದೆ. ಕಾಯಂ ಖಾತಾ ಸಂಖ್ಯೆ (PAN) ಮಾಹಿತಿಯನ್ನು ನವೀಕರಿಸೋ (update) ಜೊತೆಗೆ ಡಿ ಮ್ಯಾಟ್ ಖಾತೆಗಳನ್ನು(demat accounts) ತೆರೆದು ಐಪಿಒನಲ್ಲಿ ಪಾಲ್ಗೊಳ್ಳುವಂತೆ ಪಾಲಿಸಿದಾರರಲ್ಲಿ ಎಲ್ ಐಸಿ ಈಗಾಗಲೇ ಮನವಿ ಕೂಡ ಮಾಡಿದೆ. 
 
 

click me!