
ಬೆಂಗಳೂರು (ಡಿ.11): ದೇಶದ ಪ್ರಮುಖ ನಗರಗಳಲ್ಲಿ ಕಳೆದ ಎರಡು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ( Gold)ದರದಲ್ಲಿ (Rate)ಇಂದು ಕೊಂಚ ಏರಿಕೆ ಕಂಡುಬಂದಿದೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ(ಡಿ.10) ಇಂದು (ಡಿ.11) 10ರೂ. ಏರಿಕೆ ಕಂಡುಬಂದಿದೆ. ಇನ್ನು ಬೆಳ್ಳಿ(Silver)ದರದಲ್ಲಿ(Rate) ಹಾವು-ಏಣಿ ಆಟ ಮುಂದುವರಿದಿದೆ. ನಿನ್ನೆ ಗಮನಾರ್ಹ ಇಳಿಕೆ ದಾಖಲಿಸೋ ಮೂಲಕ ಗ್ರಾಹಕರಿಗೆ (Customers) ಖುಷಿ ನೀಡಿದ್ದ ಬೆಳ್ಳಿ ದರ ಇಂದು ಮತ್ತೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರೋ ಒಮಿಕ್ರಾನ್(Omicron) ಭೀತಿ, ಡಾಲರ್(Dollar) ಎದುರು ರೂಪಾಯಿ(Rupee)ಮೌಲ್ಯ ಕುಸಿತ, ಷೇರುಮಾರುಟ್ಟೆಯಲ್ಲಿನ (Stock Market)ಅಸ್ಥಿರತೆ , ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ(Foreign exchange Reserve) ಇಳಿಕೆಯಾಗುತ್ತಿರೋದು ಮುಂತಾದ ಬೆಳವಣಿಗೆಗಳು ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರೋದು ಖಚಿತ. ಕೊರೋನಾ (Corona) ಕಾಣಿಸಿಕೊಂಡ ಪ್ರಾರಂಭದಲ್ಲೇ ಚಿನ್ನದ ದರದಲ್ಲಿ ಏರಿಕೆ ಕಾಣಿಸಿಕೊಳ್ಳಲಾರಂಭಿಸಿತ್ತು. ಒಂದು ಸಮಯದಲ್ಲಂತೂ ಚಿನ್ನ ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಆದ್ರೆ ಈ ವರ್ಷದ ಪ್ರಾರಂಭದಿಂದ ಚಿನ್ನದ ಬೆಲೆ ಇಳಿಕೆಯಾಯ್ತು. ನಂತರ ಚಿನ್ನದ ಬೆಲೆಯಲ್ಲಿ ಅಲ್ಪಸ್ವಲ್ಪ ಏರಿಳಿತ ಬಿಟ್ಟರೆ ಗಮನಾರ್ಹ ಬದಲಾವಣೆಗಳೇನೂ ಆಗಿರಲಿಲ್ಲ. ಆದ್ರೆ ಬೆಳ್ಳಿ ಬೆಲೆ ಮಾತ್ರ ಏರಿಕೆ ಕಾಣೋ ಜೊತೆ ಅಸ್ಥಿರತೆಯನ್ನೂ ಪ್ರದರ್ಶಿಸುತ್ತ ಬಂದಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ರೆ ಚಿನ್ನ ಹಾಗೂ ಬೆಳ್ಳಿ ಖರೀದಿಸಿರೋ ಸ್ವಲ್ಪ ದಿನ ಕಾದು ಮುಂದುವರಿಯೋದು ಉತ್ತಮ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.11) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ 10ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,960ರೂ. ಇದ್ದು,ಇಂದು 44,970ರೂ.ಗೆ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,030ರೂ. ಇದ್ದು,ಇಂದು 49,040ರೂ. ಆಗಿದೆ. ನಿನ್ನೆ ಇಳಿಕೆ ದಾಖಲಿಸಿದ್ದ ಬೆಳ್ಳಿ ಇಂದು 500ರೂ. ಏರಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 60,700ರೂ. ಇತ್ತು. ಆದ್ರೆ ಇಂದು 61,200ರೂ.ಗೆ ಏರಿಕೆಯಾಗಿದೆ.
Petrol Diesel Rate: 38 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡ ಇಂಧನ ದರ: ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ನಿನ್ನೆಗಿಂತ 10ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,110ರೂ. ಇತ್ತು. ಇಂದು 47,120ರೂ.ಗೆ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 51, 400ರೂ. ಇದ್ದ ಚಿನ್ನದ ದರ ಇಂದು 51,410 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರದಲ್ಲಿ ಇಂದು 500ರೂ. ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 60,700ರೂ. ಇತ್ತು.ಆದ್ರೆ ಇಂದು 61,200ರೂ. ಆಗಿದೆ.
ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರದಲ್ಲಿ10ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,850ರೂ.ಇದ್ದು,ಇಂದು 46,,860ರೂ.ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,850ರೂ.ಇತ್ತು, ಇಂದು 47,860ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 500ರೂ.ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 60,700ರೂ.ಇತ್ತು.ಆದ್ರೆ ಇಂದು 61,200ರೂ. ಆಗಿದೆ.
Rupee vs Dollar: 16 ತಿಂಗಳಲ್ಲೇ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ, ಇದಕ್ಕೇನು ಕಾರಣ?
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿಕೂಡ ಇಂದು ಚಿನ್ನದ ದರದಲ್ಲಿ 10ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,160ರೂ.ಇದೆ. ನಿನ್ನೆ 45,150ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 49,050ರೂ. ಇತ್ತು. ಆದ್ರೆ ಇಂದು 49, 060ರೂ. ಆಗಿದೆ. ಬೆಳ್ಳಿ ದರದಲ್ಲಿ 300ರೂ. ಇಳಿಕೆಯಾಗಿದೆ. ನಿನ್ನೆ 64,800 ರೂ.ಇತ್ತು, ಇಂದು 64,500ರೂ.ಇದೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.