Lata Mangeshkar Net Worth: ಗಾನ ಕೋಗಿಲೆ ಲತಾ ದೀದೀ ಒಟ್ಟು ಆಸ್ತಿ ಇಷ್ಟು!

Published : Feb 06, 2022, 11:33 AM ISTUpdated : Feb 06, 2022, 12:05 PM IST
Lata Mangeshkar Net Worth: ಗಾನ ಕೋಗಿಲೆ ಲತಾ ದೀದೀ ಒಟ್ಟು ಆಸ್ತಿ ಇಷ್ಟು!

ಸಾರಾಂಶ

* 92 ವರ್ಷದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ * ದಕ್ಷಿಣ ಮುಂಬೈನ ಪೆಡ್ಡರ್ ರಸ್ತೆಯಲ್ಲಿ ಪ್ರಭು ಕುಂಜ್ ಭವನ್‌ನಲ್ಲಿ ವಾಸಿಸುತ್ತಿದ್ದ ಲತಾ * ಗಾನ ಕೋಗಿಲೆ ಲತಾ ದೀದೀ ಒಟ್ಟು ಆಸ್ತಿ ಇಷ್ಟು!  

ಮುಂಬೈ(ಫೆ.06): 92 ವರ್ಷದ ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಅವರು ಕೊರೋನಾ ವೈರಸ್‌ ಜೊತೆ ಹೋರಾಡಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲತಾ ಮಂಗೇಶ್ಕರ್ ಅವರು ಕೊರೋನಾ ಸೋಂಕಿನಿಂದ ಮತ್ತು ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತ ರತ್ನ ಪ್ರಶಸ್ತಿ ವಿಜೇತೆ ಲತಾ ಮಂಗೇಶ್ಕರ್ ಅವರು 1942 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಮಹಲ್ ಚಿತ್ರದ ‘ಆಯೇಗಾ ಆನೇ ವಾಲಾ’ ಹಾಡಿನಿಂದಲೇ ಅವರು ಜನಪ್ರಿಯರಾಗಿದ್ದರು. ಲತಾ ಮಂಗೇಶ್ಕರ್ ಪ್ರಪಂಚದಾದ್ಯಂತ 36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಅನೇಕ ಹೊಸ ಮತ್ತು ಹಳೆಯ ಗಾಯಕರೊಂದಿಗೆ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.

Lata Mangeshkar: ಲತಾ ಮಂಗೇಶ್ಕರ್ ನಿಧನ, ಮೋದಿ ಸೇರಿ ಗಣ್ಯರ ಕಂಬನಿ!

ಲತಾ ಮಂಗೇಶ್ಕರ್ ಆಸ್ತಿ ಎಷ್ಟು?

ಲತಾ ಮಂಗೇಶ್ಕರ್ ಅವರ ಸಂಪತ್ತಿನ (Lata Mangeshkar Net Worth) ಬಗ್ಗೆ ಹೇಳುವುದಾದರೆ, ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು. Trustednetworth.com ವರದಿಯ ಪ್ರಕಾರ, ಲತಾ ಮಂಗೇಶ್ಕರ್ ಅವರ ನಿವ್ವಳ ಮೌಲ್ಯವು ಸುಮಾರು 50 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ, ಇದು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 368 ಕೋಟಿ ರೂ. ಲತಾ ಮಂಗೇಶ್ಕರ್ ಅವರ ಹೆಚ್ಚಿನ ಗಳಿಕೆಯು ಅವರ ಹಾಡುಗಳ ರಾಯಲ್ಟಿ ಮತ್ತು ಅವರ ಹೂಡಿಕೆಯಿಂದ ಬಂದಿದೆ.

ಲತಾ ಮಂಗೇಶ್ಕರ್ ಅವರು ದಕ್ಷಿಣ ಮುಂಬೈನ ಪೆಡ್ಡರ್ ರಸ್ತೆಯಲ್ಲಿ ಪ್ರಭು ಕುಂಜ್ ಭವನ್ ಎಂಬ ಹೆಸರಿನ ಮನೆಯನ್ನು ಹೊಂದಿದ್ದಾರೆ. ಇಲ್ಲೇ ಅವರು ವಾಸಿಸುತ್ತಿದ್ದರು. ವರದಿ ಪ್ರಕಾರ ಈ ಮನೆಯ ಬೆಲೆ ಕೋಟಿ ಮೌಲ್ಯ ಹೊಂದಿದೆ. pressreader.com ನಲ್ಲಿನ ವರದಿಯ ಪ್ರಕಾರ, ಲತಾ ಮಂಗೇಶ್ಕರ್ ಅವರು ಕಾರುಗಳನ್ನು ಬಹಳಷ್ಟು ಇಷ್ಟಪಡುತ್ತಿದ್ದರು ಅದರಲ್ಲೂ ಷೆವರ್ಲೆ, ಬ್ಯೂಕ್ ಮತ್ತು ಕ್ರಿಸ್ಲರ್ ಇವು ಅವರ ಅಚ್ಚುಮೆಚ್ಚಿನದ್ದಾಗಿದ್ದವು. 'ವೀರ್ ಝಾರಾ' ಹಾಡಿನ ಬಿಡುಗಡೆಯ ನಂತರ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರು ಲತಾ ಮಂಗೇಶ್ಕರ್ ಅವರಿಗೆ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Lata Mangeshkar: ಲತಾ ಮಂಗೇಶ್ಕರ್ ನಿಧನ, ಮೋದಿ ಸೇರಿ ಗಣ್ಯರ ಕಂಬನಿ!

13 ನೇ ವಯಸ್ಸಿನಲ್ಲಿ, ಅವರು 'ಪೆಹಲಿ ಮಂಗಳಗೋರ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಲತಾ ಮಂಗೇಶ್ಕರ್ ಅವರ ಮೊದಲ ಗಳಿಕೆ 25 ರೂ. ಅವರು 1942 ರಲ್ಲಿ ಮರಾಠಿ ಚಿತ್ರ 'ಕಿತಿ ಹಸಲ್' ಗಾಗಿ ಹಾಡಿದರು. 18 ನೇ ವಯಸ್ಸಿನಲ್ಲಿ, ಮಾಸ್ಟರ್ ಗುಲಾಮ್ ಹೈದರ್ ಅವರು ಮಜ್ಬೂರ್ ಚಿತ್ರದ 'ಇಂಗ್ಲಿಷ್ ಛೋರಾ ಚಲಾ ಗಯಾ' ಹಾಡಿನಲ್ಲಿ ಮುಖೇಶ್ ಅವರೊಂದಿಗೆ ಹಾಡುವ ಅವಕಾಶವನ್ನು ಪಡೆದರು. ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಗಾನ ಕೋಗಿಲೆ ಎಂಬ ಬಿರುದು ಪಡೆದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ