Low Interest Home Loan: SBI, HDFC ಬ್ಯಾಂಕ್‌ಗಿಂತ ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುತ್ತಿದೆ ಈ ಬ್ಯಾಂಕ್!

Suvarna News   | Asianet News
Published : Mar 01, 2022, 12:08 PM IST
Low Interest Home Loan: SBI, HDFC ಬ್ಯಾಂಕ್‌ಗಿಂತ ಕಡಿಮೆ ಬಡ್ಡಿಗೆ  ಗೃಹ ಸಾಲ ನೀಡುತ್ತಿದೆ ಈ ಬ್ಯಾಂಕ್!

ಸಾರಾಂಶ

ನಿಮ್ಮ ಸ್ವಂತ ಮನೆ ಕನಸು ಈಡೇರಿಸಿಕೊಳ್ಳುವ ಅವಕಾಶ ನಿಮಗೀಗ ಸಿಗ್ತಿದೆ. ಅನೇಕ ಬ್ಯಾಂಕ್ ಗಳು ಕಡಿಮೆ ಬಡ್ಡಿಗೆ ಸಾಲ ನೀಡ್ತಿವೆ. ಯಾವ ಬ್ಯಾಂಕ್ ಎಷ್ಟರ ದರದಲ್ಲಿ ಸಾಲ ನೀಡ್ತಿದೆ ಎಂಬ ವಿವರ ಇಲ್ಲಿದೆ.   

Business Desk: ಸ್ವಂತಕ್ಕೊಂದು ಸೂರಿ (Home)ರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಎಲ್ಲರ ಬಳಿ ಅಷ್ಟು ನಗದಿ (Cash)ರಲು ಸಾಧ್ಯವಿಲ್ಲ. ಮನೆ ಖರೀದಿ (Purchase)ಗಾಗಿ ಸಾಲ (Loans) ಮಾಡುವುದು ಅನಿವಾರ್ಯ. ಬ್ಯಾಂಕ್ ಗಳಲ್ಲಿ ಸುಲಭವಾಗಿ ಗೃಹ ಸಾಲ ಪಡೆಯಬಹುದು ನಿಜ. ಆದ್ರೆ ಪಡೆದ ಸಾಲಕ್ಕಿಂತ ಹೆಚ್ಚಿನ ಹಣ ಬಡ್ಡಿ ರೂಪದಲ್ಲಿ ಖರ್ಚಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಸಾಲ ಪಡೆಯಲು ಹಿಂದೇಟು ಹಾಕ್ತಾರೆ. ಸಾಲ ಪಡೆಯುವ ಮೊದಲು ಬ್ಯಾಂಕ್ ಗಳು ವಿಧಿಸುವ ಬಡ್ಡಿ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ನೀವೂ ಮನೆ ಖರೀದಿ ಪ್ಲಾನ್ ನಲ್ಲಿದ್ದರೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಇದು ಒಳ್ಳೆಯ ಸಮಯ. ಯಾಕೆಂದ್ರೆ ಈಗ ಗೃಹ ಸಾಲ ಕಡಿಮೆ ಬಡ್ಡಿಗೆ ಸಿಗ್ತಿದೆ.

ಅನೇಕ ಬ್ಯಾಂಕ್ ಗಳು ಶೇಕಡಾ 6.4ರಿಂದ 6.5ರ ಬಡ್ಡಿದರದಲ್ಲಿ ಗೃಹ ಸಾಲ ನೀಡ್ತಿವೆ. ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು, ಮನೆ ಕನಸು ನನಸು ಮಾಡಲು ಇದೊಂದು ಒಳ್ಳೆ ಅವಕಾಶ. ಗೃಹ ಸಾಲವನ್ನು ನಾವು ಒಂದೆರಡು ವರ್ಷಕ್ಕೆ ಪಡೆಯುವುದಿಲ್ಲ. 15-30 ವರ್ಷಗಳವರೆಗೆ ನಾವು ಬಡ್ಡಿ ಪಾವತಿ ಮಾಡಬೇಕು. ಆಗ ಶೇಕಡಾ 0.10ರಷ್ಟು ಬಡ್ಡಿ ಕಡಿಮೆಯಿದ್ರೂ ನಮಗೆ ಲಾಭವಾಗುತ್ತದೆ.

ಇದ್ರಿಂದ ಸಾಕಷ್ಟು ಹಣವನ್ನು ನಾವು ಉಳಿಸಬಹುದು. ಎಲ್ಲ ಬ್ಯಾಂಕ್ ಗಳು ಎಲ್ಲರಿಗೂ ಒಂದೇ ಬಡ್ಡಿಯಲ್ಲಿ ಗೃಹ ಸಾಲವನ್ನು ನೀಡುವುದಿಲ್ಲ. ಗೃಹ ಸಾಲ ನೀಡುವಾಗ ಅನೇಕ ವಿಷ್ಯಗಳನ್ನು ಬ್ಯಾಂಕ್ ಪರಿಗಣಿಸುತ್ತದೆ. ಹಾಗೆ ಎಲ್ಲ ಬ್ಯಾಂಕ್ ಗಳ ಬಡ್ಡಿ ಒಂದೇ ರೀತಿ ಇರುವುದಿಲ್ಲ. ಇಂದು ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ನೀಡುವ ಕೆಲ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡ್ತೇವೆ.

ಇದನ್ನೂ ಓದಿ: e-PAN Card Download:ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) : ಈ ಬ್ಯಾಂಕ್ ಶೇಕಡಾ 6.8ರ ರೆಪೋ ಲಿಂಕ್ಡ್ ಲೆಂಡಿಂಗ್ ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಬ್ಯಾಂಕ್ ಕನಿಷ್ಠ ಶೇಕಡಾ 6.4 ಮತ್ತು ಗರಿಷ್ಠ ಶೇಕಡಾ 7.25ರ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿದೆ. ಒಂದು ವೇಳೆ ನೀವು ಉತ್ತಮ ಕ್ರೆಡಿಟ್ ಹಿಸ್ಟ್ರಿ ಹೊಂದಿದ್ದರೆ, ನಿಮ್ಮ ಕನಸಿನ ಮನೆಯನ್ನು ನೀವು ಕಡಿಮೆ ಬಡ್ಡಿ ದರದಲ್ಲಿ ಖರೀದಿಸಬಹುದು. 

ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) : ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವುದ್ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಸಿದ್ಧಿ ಪಡೆದಿದೆ. ಈ ಬ್ಯಾಂಕ್  ಈ ಸಮಯದಲ್ಲಿ ಶೇಕಡಾ 6.50 ಆರ್ ಎಲ್ ಎಲ್ ಆರ್ (RLLR) ಗೆ ಹೋಮ್ ಲೋನ್‌ ನೀಡ್ತಿದೆ.  ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಹಿರಿಯ ಕೈಗಾರಿಕೋದ್ಯಮಿ ಉದಯ್ ಕೋಟಕ್ ಈ ಬ್ಯಾಂಕಿನ ಸಿಇಒ.

ಇದನ್ನೂ ಓದಿ: LPG CYLINDER PRICE HIKE: ಗ್ಯಾಸ್ ಸಿಲಿಂಡರ್ ದರ ಮತ್ತೆ 105 ರೂ. ಏರಿಕೆ, ಗ್ರಾಹಕರಿಗೆ ಶಾಕ್!

ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) :  ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇಕಡಾ 6.8ರ ಆರ್ ಎಲ್ ಎಲ್ ಆರ್ ದರದಲ್ಲಿ ಗೃಹ ಸಾಲವನ್ನು ನೀಡ್ತಿದೆ. ಬ್ಯಾಂಕ್ ಕನಿಷ್ಠ ಶೇಡಕಾ 6.4 ಹಾಗೂ ಗರಿಷ್ಠ ಶೇಕಡಾ 7.8ರ ಬಡ್ಡಿದರಲ್ಲಿ ಸಾಲವನ್ನು ನೀಡಲಿದೆ. ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಕನಿಷ್ಠ ಬಡ್ಡಿದರಲ್ಲಿಯೇ ನಿಮಗೆ ಮನೆ ಸಾಲ ಸಿಗಲಿದೆ.

ಬ್ಯಾಂಕ್ ಆಫ್ ಬರೋಡಾ (Bank of Baroda) : ಗೃಹ ಸಾಲವನ್ನು ನೀಡುವ ಮೊದಲು ಬ್ಯಾಂಕ್ ನಿಮ್ಮ ಸಂಪೂರ್ಣ ಕ್ರೆಡಿಟ್ ಇತಿಹಾಸವನ್ನು ಪರಿಶೀಲಿಸುತ್ತದೆ. ನಂತರ ಅರ್ಹ ಸಾಲಗಾರರಿಗೆ ಕಡಿಮೆ ದರದಲ್ಲಿ ಸಾಲವನ್ನು ನೀಡುತ್ತದೆ. ಈ ಬ್ಯಾಂಕ್ ಶೇಕಡಾ 6.5ರ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡ್ತಿದೆ. ಈ ಬ್ಯಾಂಕ್ ನ ಗರಿಷ್ಠ ಬಡ್ಡಿದರ ಶೇಕಡಾ 7.85 ಆಗಿದೆ.

ಬ್ಯಾಂಕ್ ಆಫ್ ಇಂಡಿಯಾ (Bank of India) : ಈ ಬ್ಯಾಂಕ್ ಶೇಕಡಾ 6.85ರ ಬಡ್ಡಿದರಲ್ಲಿ ಗೃಹ ಸಾಲವನ್ನು ನೀಡ್ತಿದೆ. ಗೃಹ ಸಾಲ ಪಡೆಯುವ ಆಲೋಚನೆಯಲ್ಲಿ ನೀವಿದ್ದರೆ ಆನ್ಲೈನ್ ಮೂಲಕ ಎಲ್ಲ ಬ್ಯಾಂಕ್ ಗಳ ಬಡ್ಡಿ ಪರಿಶೀಲನೆ ನಡೆಸಿ ನಂತ್ರ ಸಾಲ ಪಡೆಯಿರಿ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ