
ನವದೆಹಲಿ: ಉಪ್ಪು ಇಲ್ಲದೇ ಯಾವುದೇ ಅಡುಗೆಗೆ ರುಚಿ ಇರಲ್ಲ. ಸಾಂಪ್ರದಾಯಿಕ ಸಿಹಿಯಡುಗೆಯಲ್ಲಿಯೂ ಚಿಟಿಕೆ ಉಪ್ಪು ಬಳಕೆ ಮಾಡುತ್ತಾರೆ. ಇದು ಸಿಹಿ ಅಡುಗೆಯ ರುಚಿಯನ್ನು ಹೆಚ್ಚಿಸುತ್ತೆ ಎಂದು ಹೇಳುತ್ತಾರೆ. ಇಂದು 1 ಕೆಜಿ ಉಪ್ಪು ನಿಮಗೆ 20 ರಿಂದ 25 ರೂಪಾಯಿಗೆ ಸಿಗುತ್ತದೆ. ಬೇರೆ ಬೇರೆ ಬ್ರ್ಯಾಂಡ್ ಉಪ್ಪು ಬೆಲೆ ವ್ಯತ್ಯಾಸವಾಗಿರುತ್ತದೆ. ಅಡುಗೆಮನೆಯಲ್ಲಿರಬೇಕಾದ ಅತ್ಯಂತ ಪ್ರಮುಖ ವಸ್ತುಗಳಲ್ಲಿ ಉಪ್ಪು ಅಗ್ರ ಸ್ಥಾನದಲ್ಲಿರುತ್ತದೆ. ಆದ್ರೆ ಕೆಲವು ದೇಶಗಳಲ್ಲಿ ಉಪ್ಪಿನ ಬೆಲೆ ಅಧಿಕವಾಗಿದ್ರೆ, ಭಾರತದಂತಹ ದೇಶದಲ್ಲಿ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಆದ್ರೆ ಇಂದು ನಾವು ಹೇಳುತ್ತಿರುವ ಉಪ್ಪು ದುಬಾರಿಯಾಗಿದ್ದು, 250 ಗ್ರಾಂಗೆ 7,500 ರೂಪಾಯಿ ಪಾವತಿಸಬೇಕಾಗುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪು ಪ್ರಮುಖ ಸ್ಥಾನವಹಿಸಿತ್ತು. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹವೇ ನಡೆದಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಉಪ್ಪಿನ ಬೆಲೆ ದುಬಾರಿಯಾಗಿದ್ದರಿಂದ ಇದನ್ನು ಖಂಡಿಸಿ ಹೋರಾಟ ನಡೆಸಲಾಗಿತ್ತು. ಅಮೆರಿಕಾದಂತಹ ದೇಶದಲ್ಲ ಉಪ್ಪು ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಅಡುಗೆಗ ಮಾತ್ರವಲ್ಲ ವಿವಿಧಡೆ ಉಪ್ಪು ಅತ್ಯವಶ್ಯಕವಾಗಿ ಬಳಕೆಯಾಗುತ್ತದೆ.
ಇಂದು ನಾವು ಹೇಳುತ್ತಿರುವ ದುಬಾರಿ ಬೆಲೆಯ ಉಪ್ಪನ್ನು ಕೊರಿಯನ್ ದೇಶಗಳಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಉಪ್ಪನ್ನು ವಿಶೇಷ ರೀತಿಯಲ್ಲಿ ಮತ್ತು ವಿಶೇಷ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಕೊರಿಯನ್ ಬಿದಿರಿನಿಂದ ಸಿದ್ಧಪಡಿಸುವ ಉಪ್ಪನ್ನು ನೇರಳೆ ಬಿದಿರು ಉಪ್ಪು ಅಥವಾ ಜುಗ್ಯೋಮ್ ಎಂದೂ ಕರೆಯಲಾಗುತ್ತದೆ. ಈ ಉಪ್ಪನ್ನು ಅತ್ಯಂತ ಸಂಕೀರ್ಣತೆಯ ಪ್ರಕ್ರಿಯೆಯಿಂದ ತಯಾರಿಸಲಾಗುವ ಕಾರಣ ಇದರ ಬೆಲೆ ದುಬಾರಿ ಎಂದು ಹೇಳಲಾಗುತ್ತದೆ.
250 ಗ್ರಾಂ ಕೊರಿಯನ್ ಬಿದಿರಿನ ಉಪ್ಪಿನ ಬೆಲೆ 100 ಅಮೆರಿಕನ್ ಡಾಲರ್ (7,500 ರೂಪಾಯಿ) ಆಗಿದೆ. ಇಷ್ಟು ದುಬಾರಿ ಬೆಲೆ ಉಪ್ಪು ಖರೀದಿಸಿ ಏನು ಮಾಡ್ತಾರೆ ಎಂದು ನೀವು ಯೋಚಿಸುತ್ತಿರಬಹುದು. ಈ ಕೊರಿಯನ್ ಉಪ್ಪಿನ ಬೆಲೆ ಹೆಚ್ಚಾಗಲು ಹಲವು ಕಾರಣಗಳಿವೆ. ಕೊರಿಯನ್ ಜನರು ಪ್ರಾಚೀನ ಕಾಲದಿಂದಲೂ ಅಡುಗೆ ತಯಾರಿಸಲು ಮತ್ತು ಚಿಕಿತ್ಸೆಯಲ್ಲಿ ಬಿದಿರು ಉಪ್ಪು ಬಳಸುತ್ತಾರೆ. ಬಿದಿರಿನೊಳಗೆ ಸಾಮಾನ್ಯ ಸಮುದ್ರದ ಉಪ್ಪನ್ನು ಇರಿಸುತ್ತಾರೆ.ನಂತರ ಹೆಚ್ಚಿನ ತಾಪಮಾನದಲ್ಲಿ ಹುರಿಯುವ ಮೂಲಕ ಉಪ್ಪನ್ನು ತಯಾರಿಸಲಾಗುತ್ತದೆ. ಇದನ್ನು ಅಮೆಥಿಸ್ಟ್ ಬಿದಿರು ಎಂದು ಕರೆಯಲಾಗುತ್ತದೆ. ಈ ಉಪ್ಪು ಸಿದ್ಧಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ.
ಇದನ್ನೂ ಓದಿ: ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗುತ್ತಾ ಉಪ್ಪು: ಆತಂಕ ಸೃಷ್ಟಿಸಿದ ಹೊಸ ಅಧ್ಯಯನ ವರದಿ
ಇಷ್ಟೊಂದು ದುಬಾರಿ ಯಾಕೆ?
ಈ ಉಪ್ಪು ತಯಾರಾಗುವ ಸಂಪೂರ್ಣ ಪ್ರಕ್ರಿಯೆಯು ಅಧಿಕ ಶ್ರಮ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಕೊರಿಯನ್ ಉಪ್ಪಿನ ಬೆಲೆ ಹೆಚ್ಚಾಗುತ್ತದೆ. ಅಮೆರಿಕಾದಲ್ಲಿ ಈ ಉಪ್ಪಿನ 240 ಗ್ರಾಂ ಪ್ಯಾಕೆಟ್ ಬೆಲೆ 7000 ರೂ.ಗಿಂತ ಅಧಿಕವಾಗಿದೆ.
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಚಿಕನ್ ಬಿಕ್ಕಟ್ಟು; ಮಾಂಸದ ಕೊರತೆ ನೀಗಿಸಲು $4.5 ಶತಕೋಟಿ ಹೂಡಿಕೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.