ಕೋಟ್ಯಾಧಿಪತಿಯಾಗಿರುವವರ ಬಟ್ಟೆ ಸಿಂಪಲ್ ಆಗಿರುತ್ತೆ. ಅವರು ಕೆಲ ಬಣ್ಣದ ಬಟ್ಟೆಗಳನ್ನು ಧರಿಸೋದೇ ಇಲ್ಲ. ಅವರ ಬಟ್ಟೆಗಳೇ ಅವರ ಘನತೆ, ಗಾಂಭೀರ್ಯವನ್ನು ಹೇಳುತ್ತೆ. ನೀವೂ ಶ್ರೀಮಂತರತೆ ಕಾಣ್ಬೇಕಾದ್ರೆ ಈ ಬಟ್ಟೆಗಳಿಂದ ದೂರವಿರಿ.
ಬಣ್ಣಗಳಲ್ಲಿ ಅನೇಕ ವಿಧಗಳಿವೆ. ಕೆಲವು ಬಣ್ಣಗಳು ಮಂಗಲಕರ ಹಾಗೂ ಕೆಲವು ಬಣ್ಣಗಳು ಅಶುಭ ಎಂಬ ಭಾವನೆ ನಮ್ಮಲ್ಲಿ ಮೊದಲಿನಿಂದಲೂ ಇದೆ. ಸಾಮಾನ್ಯವಾಗಿ ಹಸಿರು, ಕೆಂಪು, ಹಳದಿ ಮುಂತಾದ ಬಣ್ಣಗಳನ್ನು ಶುಭ ಸಂದರ್ಭಗಳಲ್ಲಿ ಬಳಸುತ್ತಾರೆ. ಅದೇ ರೀತಿ ಕಪ್ಪು ಬಣ್ಣ ಅಶುಭ ಎಂಬ ನಂಬಿಕೆ ಇದೆ.
ಎಲ್ಲರೂ ಎಲ್ಲ ಬಣ್ಣ (Color) ದ ಉಡುಪುಗಳನ್ನು ಧರಿಸಲು ಇಷ್ಟಪಡೋದಿಲ್ಲ. ಕೆಲವರು ಶಾಸ್ತ್ರ ಪದ್ಧತಿಗಳನ್ನು ನಂಬಿದರೆ ಇನ್ಕೆಲವರು ತಮ್ಮ ಬ್ಯುಸಿನೆಸ್ (Business) ಗೆ ಒಪ್ಪುವಂತಹ ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳುತ್ತಾರೆ. ನಾವು ಧರಿಸುವ ಬಟ್ಟೆ ಹಾಗೂ ಅದರ ವಿನ್ಯಾಸದಿಂದಲೇ ಅನೇಕರು ನಮ್ಮ ಸ್ವಭಾವ ಹೇಗೆ ಎನ್ನುವುದನ್ನು ಗುರುತಿಸುತ್ತಾರೆ. ಸರಳವಾಗಿ, ಶುಭ್ರವಾಗಿ, ಶಿಸ್ತಿನಿಂದ ಇರುವ ಅನೇಕ ಸೆಲೆಬ್ರಿಟಿಗಳನ್ನು ನಾವು ನೋಡ್ತೇವೆ. ಅವರ ಧಿರಿಸುಗಳು ಸರಳವಾಗೇ ಇದ್ದರೂ ಅದರಲ್ಲಿ ಗಂಭೀರತೆ ಮತ್ತು ಸಭ್ಯತೆ ಎದ್ದು ಕಾಣುತ್ತದೆ. ಕೋಟ್ಯಾಧಿಪತಿಳಾದ ಸತ್ಯಾ ನಡೆಲ್ಲಾ, ಸುಂದರ್ ಪಿಚೈ, ಮುಕೇಶ್ ಅಂಬಾರಿ ಹಾಗೂ ರತನ್ ಟಾಟಾ ಮುಂತಾದವರೆಲ್ಲ ಯಾವಾಗಲೂ ಸಾಧಾರಣ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ. ಇಂತವರು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವುದೇ ಇಲ್ಲ. ಅಂತಹ ವ್ಯಾಪಾರಿಗಳು, ಉದ್ಯಮಿಗಳೆಲ್ಲ ಯಾವಾಗಲೂ ಸರಳವಾದ ಉಡುಗೆಯನ್ನೇ ಧರಿಸುತ್ತಾರೆ. ಕೆಲವೊಮ್ಮೆ ಅವರು ಕೇವಲ ಟೀ ಶರ್ಟ್ ಧರಿಸಿ ತಮ್ಮ ಕಚೇರಿಗೆ ಹೋಗುವುದೂ ಉಂಟು.
ONLINE BUSINESS : ಒಂದು ದಿನದಲ್ಲಿ ಒಂದು ಲಕ್ಷ ರೂಪಾಯಿ ಗಳಿಸೋದು ಹೇಗೆ?
ಬಣ್ಣಗಳು ಅನೇಕ ಅರ್ಥವನ್ನು ಹೇಳುತ್ತೆ : ಒಂದೊಂದು ಬಣ್ಣವೂ ಒಂದೊಂದು ಅರ್ಥ ಹೇಳುತ್ತದೆ. ಉದಾಹರಣೆಗೆ ಬಿಳಿ ಬಣ್ಣವು ಶ್ರೇಷ್ಠ ಬಣ್ಣವಾಗಿದ್ದು ಅದು ಶುಚಿತ್ವ, ಉತ್ಕೃಷ್ಠತೆ ಮತ್ತು ಶಾಂತಿಯ ಸಂಕೇತ. ಕಪ್ಪು ಬಣ್ಣವು ಶಕ್ತಿ, ರಹಸ್ಯ ಮತ್ತು ಎಲಿಗೆನ್ಸ್ ಲುಕ್ ನೀಡುತ್ತದೆ. ನೀಲು ಬಣ್ಣವು ಆತ್ಮವಿಶ್ವಾಸ ಮತ್ತು ಅಧಿಕಾರದ ಸಂಕೇತವಾಗಿದೆ. ಹಾಗಾಗಿಯೇ ಬ್ರಿಟೀಷ್ ರಾಜಮನೆತನದ ಜನರು ಹೆಚ್ಚಾಗಿ ರಾಯಲ್ ಬ್ಲೂ ಬಣ್ಣವನ್ನು ಧರಿಸುತ್ತಿದ್ದರು.
ಶ್ರೀಮಂತರಂತೆ ಕಾಣಲು ಈ ಬಣ್ಣದ ಬಟ್ಟೆ ಹಾಕಿ : ಸೌಂದರ್ಯ ಪಜ್ಞೆ ಎನ್ನುವುದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತೆ. ಎಲ್ಲರೂ ತಮಗೆ ಇಷ್ಟವಾಗುವ, ಸರಿಹೊಂದುವ ಅಥವಾ ಆರಾಮದಾಯಕ ಎನಿಸುವ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಎಲ್ಲರಿಗೂ ಎಲ್ಲ ಬಣ್ಣಗಳೂ ಸೂಟ್ ಆಗೋದಿಲ್ಲ. ಹಾಗೆಯೇ ಎಲ್ಲ ಕಡೆಯೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸಲು ಸಾಧ್ಯವಿಲ್ಲ. ಕೆಲವು ಬಟ್ಟೆ ಹಾಗೂ ಬಣ್ಣಗಳು ರಿಚ್ ಆಗಿದ್ದರೆ ಕೆಲವು ಡಲ್ ಎನಿಸಿಸುತ್ತವೆ. ಹಾಗಾಗಿ ನಾವು ಸಮಯಕ್ಕೆ ಸರಹೊಂದುವಂತಹ ಬಟ್ಟೆಗಳನ್ನು ಹಾಗೂ ಬಣ್ಣವನ್ನು ಆಯ್ಕೆಮಾಡಿಕೊಳ್ಳುವುದು ಅತೀ ಮುಖ್ಯ. ನೀವು ಕೂಡ ಶ್ರೀಮಂತರಂತೆ ಕಾಣಲು ಬಯಸಿದರೆ ಇಂತಹ ಕೆಲವು ಬಟ್ಟೆಗಳಿಂದ ದೂರವಿರಿ.
ದೃಷ್ಟಿ ಇಲ್ಲದಿದ್ರೂ ಸ್ವಾವಲಂಬಿ ಬದುಕು: ಸ್ಪರ್ಶದ ಮೂಲಕವೇ ಸುಲಭವಾಗಿ ಮಿಕ್ಸಿ, ಫ್ರಿಡ್ಜ್ ರಿಪೇರಿ!
• ನಿಯಾನ್ ಮತ್ತು ಫ್ಲೋರೋಸೆಂಟ್ ಶೇಡ್ಸ್ ಹೊಂದಿರುವ ಬಟ್ಟೆಗಳನ್ನು ಬಳಸಬೇಡಿ
• ಮಲ್ಟಿ ಕಲರ್ ಪ್ರಿಂಟ್ ಮತ್ತು ವಿನ್ಯಾಸದ ಡ್ರೆಸ್ ಗಳನ್ನು ಧರಿಸುವುದನ್ನು ಬಿಡಿ
• ಪೇಸ್ಟಲ್ ಕಲರ್ ಗಳಾದ ಬೇಬಿ ಪಿಂಕ್, ಮಿಂಟ್ ಗ್ರೀನ್ ಮುಂತಾದ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
• ಟಕ್ಸೇಡೋ, ಶೈನಿ ಮತ್ತು ಮೆಟಾಲಿಕ್ ಲುಕ್ ನೀಡುವ ಡ್ರೆಸ್ ಬೇಡ
• ಅಗತ್ಯಕ್ಕಿಂತ ಹೆಚ್ಚಾದ ಫೇಡ್ ಕಲರ್ ಡ್ರೆಸ್ ಕೂಡ ಬೇಡ
ನಾವು ಧರಿಸುವ ಬಟ್ಟೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡ್ರೆ ಶ್ರೀಮಂತರಂತೆ ಕಾಣಿಸಬಹುದು. ಹಾಗೆ ಕಾಣಿಸಲು ಮೀಡಿಯಮ್ ಡಾರ್ಕ್ ಡ್ರೆಸ್ ಹಾಗೂ ಪ್ಲೇನ್ ಡ್ರೆಸ್ ಅನ್ನು ಹಾಕಿಕೊಳ್ಳಬೇಕು. ಇಂತಹ ಡ್ರೆಸ್ ಗಳಿಂದ ನೀವು ಸಭ್ಯರಾಗಿ ಹಾಗೂ ಸರಳವಾಗಿ ಕಾಣುತ್ತೀರಿ.