ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ್ರೂ ಇಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಬಹಳಷ್ಟಿದೆ. ಯಾವ ನಗರದಲ್ಲಿ ಹೆಚ್ಚು ಶ್ರೀಮಂತರು ನೆಲೆಗೊಂಡಿದ್ದಾರೆ ಎಂಬ ಬಗ್ಗೆ ಡೇಟಾ ಸಿದ್ಧವಾಗಿದೆ. ಅದ್ರ ವಿವರ ಇಲ್ಲಿದೆ.
ಶ್ರೀಮಂತಿಕೆಯನ್ನು ಯಾರು ಬೇಡ ಎನ್ನುತ್ತಾರೆ. ಐಷಾರಾಮಿ ಜೀವನ ನಡೆಸಲು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಹೆಚ್ಚಿನ ಹಣ ಸಂಪಾದನೆಗೆ ಮುಂದಾಗ್ತಾರೆ. ಕೆಲವರಿಗೆ ಅದೃಷ್ಟ ಕೈ ಹಿಡಿದ್ರೆ ಮತ್ತೆ ಕೆಲವರಿಗೆ ಕೈಕೊಡುತ್ತದೆ. ಹಾಗಾಗಿ ಎಷ್ಟೇ ಶ್ರಮವಹಿಸಿದ್ರೂ ಶ್ರೀಮಂತಿಕೆ ಲಭಿಸೋದಿಲ್ಲ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಇಲ್ಲಿ ಬಡವರ ಸಂಖ್ಯೆ ಹೆಚ್ಚಿದೆ ಎಂದೆಲ್ಲ ನಾವು ಹೇಳ್ತೇವೆ ಆದ್ರೆ ಭಾರತದಲ್ಲೂ ಶ್ರೀಮಂತರ ಸಂಖ್ಯೆ ಕಡಿಮೆ ಏನಿಲ್ಲ. ಭಾರತದಲ್ಲಿ ಶ್ರೀಮಂತರ ಜೀವನಶೈಲಿ ಭಿನ್ನವಾಗಿದೆ. ಎಲ್ಲ ಹಣವಂತರು ಐಷಾರಾಮಿ ಜೀವನ ಸಾಗಿಸೋದಿಲ್ಲ. ಸಾಮಾನ್ಯರಂತೆ ಜೀವನ ನಡೆಸುತ್ತಿರುವ ಕೋಟ್ಯಾಧಿಪತಿಗಳನ್ನು ನೀವು ಭಾರತದಲ್ಲಿ ನೋಡ್ಬಹುದು. ಭಾರತದಲ್ಲಿ ಯಾವ ರಾಜ್ಯದ ಅಥವಾ ಯಾವ ಪ್ರದೇಶದ ಜನರು ಹೆಚ್ಚು ಶ್ರೀಮಂತರು ಎನ್ನುವ ಕುತೂಹಲ ನಮಗೆಲ್ಲ ಇದ್ದೇ ಇದೆ. ಈಗ ವರದಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಯಾವ ರಾಜ್ಯದ ಜನರು ಹೆಚ್ಚು ಶ್ರೀಮಂತರು ಎಂಬುದನ್ನು ಹೇಳಲಾಗಿದೆ.
ಶ್ರೀಮಂತ (Rich) ರ ಪಟ್ಟಿಯಲ್ಲಿ ಯಾವ ನಗರ ಮುಂದಿದೆ? : ಹರುನ್ ಬಿಡುಗಡೆ ಮಾಡಿದ ಶ್ರೀಮಂತ ನಿವಾಸಿಗಳ ಪಟ್ಟಿಯು ಶ್ರೀಮಂತ ಜನರು ವಾಸಿಸುವ ಭಾರತ (India) ದ ನಗರಗಳ ಬಗ್ಗೆ ಹೇಳುತ್ತದೆ. ಮುಂಬೈ ನಗರವನ್ನು ಭಾರತದ ರಾಜಧಾನಿ (Capital) ಎಂದೇ ಕರೆಯಲಾಗುತ್ತದೆ. ಹೆಸರಿಗೆ ತಕ್ಕಂತೆ ಮುಂಬೈನಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಿದೆ. ಪಟ್ಟಿಯಲ್ಲಿ ಮುಂಬೈ ಅಗ್ರ ಸ್ಥಾನವನ್ನು ಪಡೆದಿದೆ. ಮುಂಬೈನಲ್ಲಿ 328 ಶ್ರೀಮಂತ ಕುಟುಂಬಗಳು ವಾಸವಾಗಿವೆ. ಈ ಶ್ರೀಮಂತರಲ್ಲಿ ಭಾರತದ ಶ್ರೀಮಂತ ಅಂಬಾನಿ ಕುಟುಂಬದ ಹೆಸರೂ ಸೇರಿದೆ. 2019 ರಿಂದ 45 ಸಂಸ್ಥೆಗಳ ಆದಾಯ ನಿರಂತರವಾಗಿ ಹೆಚ್ಚಾಗ್ತಿದ್ದು, ಇವು ನಗರದ ಶ್ರೀಮಂತ ಸಂಪತ್ತನ್ನು ಪ್ರತಿಬಿಂಬಿಸುತ್ತವೆ.
ಇಲ್ಲಿ ಸಾಯೋದು ಅಪರಾಧ, ಕಳೆದ 70 ವರ್ಷಗಳಿಂದ ಯಾರೂ ಸತ್ತೇ ಇಲ್ಲ. ಹೇಗಪ್ಪಾ ಇದು?
ಮುಂಬೈ ನಂತರ ರಾಷ್ಟ್ರ ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ. ದೆಹಲಿ ಹಣವುಳ್ಳವರಿಗೆ ನೆಲೆ ನೀಡಿದೆ. ಪಟ್ಟಿ ಪ್ರಕಾರ, ದೆಹಲಿಯಲ್ಲಿ 199 ಶ್ರೀಮಂತ ಕುಟುಂಬಗಳು ಮತ್ತು ಸಂಸ್ಥೆಗಳು ನೆಲೆಸಿವೆ. ದೆಹಲಿಯಲ್ಲಿ ವಾಸಿಸುತ್ತಿರುವ ಕೋಟ್ಯಾಧಿಪತಿ ಶಿವ ನಾಡಾರ್ ಅವರ ಕುಟುಂಬವೂ ಇದ್ರಲ್ಲಿ ಸೇರಿದೆ.
ಟಾಪ್ 10 ಪಟ್ಟಿಯಲ್ಲಿವೆ ಈ ನಗರಗಳು : ಮುಂಬೈ, ದೆಹಲಿ ನಂತ್ರ ಉಳಿದ ಟಾಪ್ ೮ ನಗರಗಳ ಹೆಸರು ಕೂಡ ಪಟ್ಟಿಯಲ್ಲಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಕೂಡ ಹಿಂದೆ ಬಿದ್ದಿಲ್ಲ. ಇನ್ನೂ ಶ್ರೀಮಂತರ ಸಂಖ್ಯೆ ಸಾಕಷ್ಟಿದೆ.
• ಸಿಲಿಕಾನ್ ಸಿಟಿ (Sylicon City) ಬೆಂಗಳೂರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ 100 ಶ್ರೀಮಂತ ಕುಟುಂಬಗಳು (Rich Families) ಮತ್ತು ಸಂಸ್ಥೆ ನೆಲೆಗೊಂಡಿದೆ. ನಗರದ ಟೆಕ್ ಹಬ್ ಬೆಳೆಯುತ್ತಿರುವ ಸಂಪತ್ತಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.
• ನವಾಬರ ನಗರವಾದ ಹೈದರಾಬಾದ್ (Hyderabad) ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 87 ಶ್ರೀಮಂತ ಕುಟುಂಬಗಳು ಮತ್ತು ಸಂಸ್ಥೆಗಳಿವೆ.
ಕಿರು ಅವಧಿ VS ದೀರ್ಘಾವಧಿ ಹೂಡಿಕೆ: ಇವೆರಡರಲ್ಲಿ ಯಾವುದು ಉತ್ತಮ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
• ಐದನೇ ಸ್ಥಾನದಲ್ಲಿ ಚೆನ್ನೈ ಇದೆ. ಅಲ್ಲಿ ರಾಧಾ ವೆಂಬು ಎಂಬುವವರು ಕಳೆದ ಕೆಲವು ವರ್ಷಗಳಿಂದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 2019 ರಿಂದ 16 ಘಟಕಗಳಲ್ಲಿ ಏರಿಕೆ ಕಂಡುಬಂದಿದೆ.
• ಇನ್ನು ಆರನೇ ಸ್ಥಾನದಲ್ಲಿ ಗುಜರಾತ್ ರಾಜಧಾನಿ ಅಹಮದಾಬಾದ್ (Ahmedabad) ಬರುತ್ತದೆ. ಇಲ್ಲಿನ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ನೆಲೆಗೊಂಡಿದ್ದಾರೆ. ಅದಲ್ಲದೆ ಈ ನಗರವನ್ನು ಶ್ರೀಮಂತಗೊಳಿಸುವಲ್ಲಿ ಅನೇಕ ವಜ್ರದ ವ್ಯಾಪಾರಿಗಳು ಸಹ ಕೊಡುಗೆ ನೀಡಿದ್ದಾರೆ.
• ಹರುನ್ ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿ ಕೋಲ್ಕತ್ತಾದ ಹೆಸರು ಏಳನೇ ಸ್ಥಾನದಲ್ಲಿದೆ. ಬೇನು ಗೋಪಾಲ್ ಬಂಗೂರ್ ಮತ್ತು ಕುಟುಂಬ ಕೋಲ್ಕತ್ತಾದ ಸಂಪತ್ತಿನ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ. ನಗರದ ಆರ್ಥಿಕ ಸ್ಥಿತಿ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ.
• ಪುಣೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. 2019ರಿಂದ 5 ಸಂಸ್ಥೆಗಳಲ್ಲಿ ನಿರಂತರ ಏರಿಕೆ ಕಂಡು ಬಂದಿದೆ.
• ಸೂರತ್ (Surat) ಎಂಟನೆ ಸ್ಥಾನದಲ್ಲಿದ್ದು. ಇಲ್ಲಿ 27 ಶ್ರೀಮಂತರಿದ್ದಾರೆ.
• ಗುರ್ ಗ್ರಾಮ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದು, 18 ಶ್ರೀಮಂತ ಕುಟುಂಬಗಳು ಇಲ್ಲಿವೆ.
• ಸ್ಟೈಲಿಶ್ ಆಗಿರುವ ಗುರುಗ್ರಾಮ್ ಹೆಸರು ಒಂಬತ್ತನೇ ಸ್ಥಾನದಲ್ಲಿದೆ.