Asianet Suvarna News Asianet Suvarna News

ಕಿರು ಅವಧಿ Vs ದೀರ್ಘಾವಧಿ ಹೂಡಿಕೆ: ಇವೆರಡರಲ್ಲಿ ಯಾವುದು ಉತ್ತಮ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ

ಹೂಡಿಕೆ ಮಾಡುವ ಮುನ್ನ ಕೆಲವೊಂದು ವಿಚಾರಗಳನ್ನು ತಿಳಿದಿರೋದು ಅಗತ್ಯ.ಅದರಲ್ಲೂ ಹೂಡಿಕೆಯನ್ನು ಕಿರು ಅವಧಿಗೆ ಮಾಡ್ಬೇಕಾ ಅಥವಾ ದೀರ್ಘಾವಧಿಗೆ ಮಾಡ್ಬೇಕಾ ಎಂಬ ಬಗ್ಗೆ ಸ್ಪಷ್ಟತೆ ಹೊಂದಿರೋದು ಅಗತ್ಯ. 

Short Term Vs Long Term Investing Which Is Best For You anu
Author
First Published Oct 19, 2023, 11:22 AM IST

Business Desk: ಹೂಡಿಕೆ ಮಾಡುವಾಗ ದೀರ್ಘಾವಧಿಗೆ ಮಾಡಬೇಕಾ ಅಥವಾ ಕಿರು ಅವಧಿಗೆ ಮಾಡಬೇಕಾ ಎಂಬ ಬಗ್ಗೆ ಸ್ಪಷ್ಟತೆಯಿರೋದು ಅಗತ್ಯ. ಏಕೆಂದರೆ ಇವೆರಡರ ನಡುವೆ ಸಾಕಷ್ಟು ಭಿನ್ನತೆಯಿದೆ. ಎಲ್ಲ ಹೂಡಿಕೆಯೂ ಒಂದೇ ಎಂದು ನೀವು ತಿಳಿದರೆ ಖಂಡಿತಾ ತಪ್ಪಾಗುತ್ತದೆ. ಏಕೆಂದರೆ ನಿಮ್ಮ ಹೂಡಿಕೆ ಅವಧಿ ಹೆಚ್ಚಿದಷ್ಟೂ ಲಾಭ ಜಾಸ್ತಿ. ಹೀಗಾಗಿ ನಿಮ್ಮ ಗುರಿ ಅಥವಾ ಉದ್ದೇಶ ಆಧರಿಸಿ ದೀರ್ಘಾವಧಿಗೆ ಹೂಡಿಕೆ ಮಾಡಬೇಕಾ ಅಥವಾ ಕಿರು ಅವಧಿಗೇನಾ ಎಂಬ ಬಗ್ಗ ನಿರ್ಧಾರ ಕೈಗೊಳ್ಳಬೇಕು. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹುಡಿಕೆ ಮಾಡುತ್ತಿದ್ದರೆ ಈ ಬಗ್ಗೆ ಮಾಹಿತಿ ಹೊಂದಿರೋದು ಅತ್ಯ. ಒಂದು ವೇಳೆ ನೀವು ಮಕ್ಕಳ ಶಿಕ್ಷಣ, ನಿವೃತ್ತಿ ನಂತರದ ಬದುಕಿಗಾಗಿ ಹೂಡಿಕೆ ಮಾಡುತ್ತಿದ್ದರೆ ಆಗ ದೀರ್ಘಾವಧಿ ಹೂಡಿಕೆ ಆಯ್ಕೆ ಮಾಡೋದು ಉತ್ತಮ. ಅದೇ ಮನೆ ಅಥವಾ ಕಾರು ಖರೀದಿ ಮುಂತಾದ ಉದ್ದೇಶದಿಂದ ಹೂಡಿಕೆ ಮಾಡುತ್ತಿದ್ದರೆ ಆಗ ಕಿರು ಅವಧಿಯ ಹೂಡಿಕೆಗಳನ್ನು ಆಯ್ಕೆ ಮಾಡೋದು ಉತ್ತಮ. ಹಾಗಾದ್ರೆ ಈ ಎರಡು ಅವಧಿಯ ಹೂಡಿಕೆಗಳಲ್ಲಿ ಯಾವುದು ನಿಮಗೆ ಉತ್ತಮ? ಇವೆರಡರ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ.

ದೀರ್ಘಾವಧಿ ಷೇರು ಮಾರುಕಟ್ಟೆ ಹೂಡಿಕೆ: ದೀರ್ಘಾವಧಿ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಷೇರುಗಳನ್ನು ಹೆಚ್ಚಿನ ಅವಧಿಗೆ ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕಾಗುತ್ತದೆ. ಅನೆಕ ವರ್ಷಗಳ ಕಾಲ ಷೇರುಗಳು ನಿಮ್ಮ ಬಳಿಯೇ ಇರುತ್ತವೆ. ಈಕ್ವಿಟಿ ಹೂಡಿಕೆ, ಮ್ಯೂಚುವಲ್ ಫಂಡ್ಸ್,  ಪೋರ್ಟ್ ಪೊಲಿಯೋ ಡೈವರ್ಸಿಫಿಕೇಷನ್ ದೀರ್ಘಾವಧಿ ಹೂಡಿಕೆಗಳಾಗಿವೆ. 

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ ಕೇವಲ7ರೂ. ಹೂಡಿಕೆ ಮಾಡಿದ್ರೆ ತಿಂಗಳಿಗೆ 5000ರೂ. ಪಿಂಚಣಿ ಖಚಿತ

ದೀರ್ಘಾವಧಿ ಹೂಡಿಕೆ ಪ್ರಯೋಜನಗಳು:
*ಅಧಿಕ ಲಾಭ: ದೀರ್ಘಾವಧಿ ಹೂಡಿಕೆಗಳಿಂದ ಲಾಭದ ಪ್ರಮಾಣ ಹೆಚ್ಚಿರುತ್ತದೆ. ಸಮಯಾವಧಿ ಹೆಚ್ಚಿದಂತೆ ರಿಟರ್ನ್ ಕೂಡ ಹೆಚ್ಚಿರುತ್ತದೆ. ಇದರಿಂದ ಸಾಕಷ್ಟು ಸಂಪತ್ತು ಸಂಗ್ರಹವಾಗುತ್ತದೆ.
*ಒತ್ತಡ ಕಡಿಮೆ: ದೀರ್ಘಾವಧಿ ಹೂಡಿಕೆಯಲ್ಲಿ ಒತ್ತಡ ಕಡಿಮೆ. ನಿರಂತರವಾಗಿ ಟ್ರೇಡಿಂಗ್ ಮಾಡಬೇಕಾದ ಹಾಗೂ ಮಾರುಕಟ್ಟೆ ಏರಿಳಿತಗಳನ್ನು ಗಮನಿಸಬೇಕಾದ ಅಗತ್ಯವಿಲ್ಲ. 
*ತೆರಿಗೆ ಕಡಿಮೆ: ಇನ್ನು ದೀರ್ಘಾವಧಿ ಹೂಡಿಕೆಗಳ ಮೇಲಿನ ತೆರಿಗೆ ಕೂಡ ಕಡಿಮೆ. ಹೀಗಾಗಿ ಇಂಥ ಹೂಡಿಕೆಯಿಂದ ತೆರಿಗೆ ಉಳಿತಾಯ ಮಾಡಬಹುದು.

ರಿಸ್ಕ್ ಏನು?
*ರಿಟರ್ನ್ ಸಿಗುವಲ್ಲಿ ವಿಳಂಬ: ದೀರ್ಘಾವಧಿ ಹೂಡಿಕೆದಾರರು ಸಾಕಷ್ಟು ತಾಳ್ಮೆಯಿಂದ ರಿಟರ್ನ್ಸ್ ಗೆ ಕಾಯಬೇಕು. ಕಿರು ಅವಧಿ ಹೂಡಿಕೆಗಳಂತೆ ಇದರಲ್ಲಿ ತ್ವರಿತ ರಿಟರ್ನ್ಸ್ ಸಿಗೋದಿಲ್ಲ.
*ಲಿಕ್ವಿಡಿಟಿ ಕಡಿಮೆ: ರಿಯಲ್ ಎಸ್ಟೇಟ್ ಅಥವಾ ನಿವೃತ್ತಿ ಯೋಜನೆಗಳಲ್ಲಿನ ಹೂಡಿಕೆ ರಿಟರ್ನ್ಸ್ ಬೇಗ ಸಿಗೋದಿಲ್ಲ. ಇದಕ್ಕೆ ದೀರ್ಘ ಕಾಲ ಕಾಯಬೇಕಾಗುತ್ತದೆ.
*ಮಾರುಕಟ್ಟೆ ಅಪಾಯ: ದೀರ್ಘಾವಧಿ ಹೂಡಿಕೆಗಳು ಮಾರುಕಟ್ಟೆ ಏರಿಳಿತಗಳನ್ನು ಅನುಭವಿಸುತ್ತವೆ. ಹೀಗಾಗಿ ಮಾರುಕಟ್ಟೆ ಅಪಾಯಗಳನ್ನು ಅರಿಯೋದು ಅಗತ್ಯ.

ಕಿರು ಅವಧಿ ಹೂಡಿಕೆಗಳು: ಕಿರು ಅವಧಿ ಹೂಡಿಕೆಗಳು ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯದ್ದಾಗಿರುತ್ತವೆ. ಹೀಗಾಗಿ ಇವುಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರ ವಹಿಸೋದು ಅಗತ್ಯ.
ಪ್ರಯೋಜನಗಳು:
*ತ್ವರಿತ ರಿಟರ್ನ್ಸ್: ಕಿರು ಅವಧಿ ಹೂಡಿಕೆದಾರರು ತಿಂಗಳೊಳಗೆ ಅಥವಾ ಕೆಲವೆ ವಾರಗಳಲ್ಲಿ ಮಾರುಕಟ್ಟೆ ಏರಿಳಿತಗಳಿಂದ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿರುತ್ತಾರೆ. ಹೀಗಾಗಿ ಕಿರು ಅವಧಿ ಹೂಡಿಕೆಗಳಿಂದ ರಿಟರ್ನ್ಸ್ ಬೇಗ ಸಿಗುತ್ತದೆ.
*ಲಿಕ್ವಿಡಿಟಿ: ಕಿರು ಅವಧಿ ಹೂಡಿಕೆಗಳಲ್ಲಿ ಲಿಕ್ವಿಡಿಟಿ ಹೆಚ್ಚು. ಹೂಡಿಕೆದಾರರು ತ್ವರಿತವಾಗಿ ಹಣ ಪಡೆಯಲು ಸಾಧ್ಯವಾಗುತ್ತದೆ.
*ಹೊಂದಾಣಿಕೆ: ಕಿರು ಅವಧಿ ಹೂಡಿಕೆದಾರರು ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುವಾಗಿ ತಮ್ಮ ಹೂಡಿಕೆಗಳನ್ನು ಬದಲಾಯಿಸಿಕೊಳ್ಳಬಹುದು. ಆ ಮೂಲಕ ಲಾಭದಾಯಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. 

ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಉತ್ತಮ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್

ರಿಸ್ಕ್ ಗಳು:
*ಅಪಾಯ ಹೆಚ್ಚು: ದೀರ್ಘಾವಧಿ ಹೂಡಿಕೆಗೆ ಹೋಲಿಸಿದರೆ ಕಿರು ಅವಧಿ ಹೂಡಿಕೆಗಳಲ್ಲಿ ಅಪಾಯ ಹೆಚ್ಚು. ಅಲ್ಲದೆ, ಹೂಡಿಕೆದಾರರು ಹಣ ಕಳೆದುಕೊಳ್ಳುವ ಅಪಾಯ ಇದರಲ್ಲಿ ಹೆಚ್ಚು.
*ತೆರಿಗೆ ಹೊರೆ ಹೆಚ್ಚು: ಕಿರು ಅವಧಿ ಬಂಡವಾಳ ಗಳಿಕೆ ಹೂಡಿಕೆದಾರರ ಆದಾಯ ತೆರಿಗೆ ಸ್ಲ್ಯಾಬ್ ಗೆ ಅನುಗುಣವಾಗಿ ತೆರಿಗೆಗೊಳಪಡುತ್ತದೆ. ಹೀಗಾಗಿ ಕಿರು ಅವಧಿ ಹೂಡಿಕೆಗಳ ಮೇಲಿನ ತೆರಿಗೆ ಭಾರ ಹೆಚ್ಚಿರುತ್ತದೆ. ಹಾಗೆಯೇ ಒಟ್ಟು ರಿಟರ್ನ್ಸ್ ಕಡಿಮೆಯಿರುತ್ತದೆ.
*ವಹಿವಾಟಿನ ವೆಚ್ಚ: ನಿರಂತರ ಖರೀದಿ ಹಾಗೂ ಮಾರಾಟ ಹೆಚ್ಚಿನ ವಹಿವಾಟಿನ ವೆಚ್ಚಕ್ಕೆ ಕಾರಣವಾಗುತ್ತದೆ. ಬ್ರೋಕರೇಜ್ ಶುಲ್ಕ ಹಾಗೂ ತೆರಿಗೆಗಳನ್ನು ಇವು ಒಳಗೊಂಡಿದ್ದು, ನಿವ್ವಳ ರಿಟರ್ನ್ಸ್ ಕುಸಿಯಲು ಕಾರಣವಾಗುತ್ತವೆ. 

Follow Us:
Download App:
  • android
  • ios