
ಸ್ವಂತ ಬ್ಯುಸಿನೆಸ್ ಮಾಡ್ಬೇಕು ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಯಾವ ಬ್ಯುಸಿನೆಸ್ ಶುರು ಮಾಡ್ಬೇಕು, ಯಾವುದು ಲಾಭಕರ ಎಂಬುದು ಅನೇಕರಿಗೆ ತಿಳಿಯೋದಿಲ್ಲ. ಹೆಚ್ಚು ಪರಿಶ್ರಮವಿಲ್ಲದೆ ಕಡಿಮೆ ಬಂಡವಾಳದಲ್ಲಿಯೇ ವ್ಯಾಪಾರ ಶುರು ಮಾಡಿ ಹೆಚ್ಚು ಲಾಭಪಡೆಯಬಲ್ಲ ಬ್ಯುಸಿನೆಸ್ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ. ನೀವು ಅಲೋವೇರಾ ಬ್ಯುಸಿನೆಸ್ ಶುರು ಮಾಡುವ ಮೂಲಕ ಲಾಭ ಪಡೆಯಬಹುದು.
ಅಲೋವೇರಾ (AloeVera ) ಜೆಲ್‌ಗೆ ಹೆಚ್ಚಿನ ಬೇಡಿಕೆ ಇದೆ. ಅಲೋವೇರಾವನ್ನು ಅನೇಕ ಔಷಧಿ ( Medicine) ಹಾಗೂ ಸೌಂದರ್ಯ ವರ್ಧಕಕ್ಕೆ ಬಳಕೆ ಮಾಡಲಾಗುತ್ತದೆ. ಇದೇ ಕಾರಣಕ್ಕೆ ಅಲೋವೇರಾಗೆ ಹೆಚ್ಚಿನ ಬೇಡಿಕೆ ಇದೆ. ಬ್ಯುಸಿನೆಸ್ (Business) ಮಾಡಲು ಬಯಸಿದ್ರೆ ನೀವು ಅಲೋವೇರಾ ಜೆಲ್ ಸಂಸ್ಕರಣಾ ಕಾರ್ಖಾನೆ ಶುರು ಮಾಡಬಹುದು. ಅಲೋವೆರಾ ಜೆಲ್ ಅನ್ನು ಅಲೋವೆರಾ ಎಲೆಗಳಿಂದ ತಯಾರಿಸಲಾಗುತ್ತದೆ.
ಗೋದ್ರೇಜ್ ಆಹಾರ ಟ್ರೆಂಡ್ ವರದಿ ಬಿಡುಗಡೆ: ಪಾಕಪ್ರಿಯರನ್ನು ಆಕರ್ಷಿಸಿದ ಬ್ಯಾಡಗಿ ಮೆಣಸಿಕಾಯಿ ಸಾಸ್
ಅಲೋವೇರಾ ಜೆಲ್ ಕಾರ್ಖಾನೆ ಬ್ಯುಸಿನೆಸ್ : ಅಲೋವೆರಾ ಜೆಲ್ ತಯಾರಿಕಾ ಘಟಕ ಸ್ಥಾಪನೆಗೆ ಎಷ್ಟು ಖರ್ಚು – ವೆಚ್ಚವಾಗುತ್ತದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ವರದಿ ನೀಡಿದೆ. ಅದ್ರ ವರದಿ ಪ್ರಕಾರ, ಅಲೋವೆರಾ ಜೆಲ್ ತಯಾರಿಕಾ ಘಟಕ ಸ್ಥಾಪಿಸಲು 24.83 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ನೀವು 2.48 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು. ಉಳಿದ ಹಣವನ್ನು ನೀವು ಸಾಲದ ರೂಪದಲ್ಲಿ ಪಡೆಯಬಹುದು. ಮುದ್ರಾ ಯೋಜನೆಯಡಿ ನೀವು ಸಾಲ ಪಡೆದು ಘಟಕ ಶುರು ಮಾಡಿ ನಂತ್ರ ಸಂಪಾದನೆ ಶುರು ಮಾಡಬಹುದು.
ಅಲೋವೇರಾ ಜೆಲ್ ಘಟಕ ಶುರು ಮಾಡಲು GST ನೋಂದಣಿ ಅಗತ್ಯ. ನಿಮ್ಮ ಉತ್ಪನ್ನಕ್ಕೆ ಬ್ರಾಂಡ್ ಹೆಸರಿಡಬೇಕು. ಅಲ್ಲದೆ ಟ್ರೇಡ್‌ಮಾರ್ಕ್ ಕೂಡ ಪಡೆಯಬೇಕು. ಎಲ್ಲ ವ್ಯವಸ್ಥೆ ಆದ್ಮೇಲೆ ನೀವು ಅಲೋವೇರಾ ಜೆಲ್ ತಯಾರಿಸಲು ಶುರು ಮಾಡ್ಬಹುದು. ಅಲೋವೇರಾ ಜೆಲ್‌ಗೆ ಸಾಕಷ್ಟು ಬೇಡಿಕೆ ಇದೆ. ನೀವು ಶುದ್ಧ ಹಾಗೂ ಗುಣಮಟ್ಟದ ಜೆಲ್ ತಯಾರಿಸುವ ಜೊತೆಗೆ ಹೆಚ್ಚು ಪ್ರಚಾರ ಮಾಡಿದಲ್ಲಿ ಆರಂಭದಿಂದಲೇ ನಿಮ್ಮ ಗಳಿಕೆ ಶುರುವಾಗುತ್ತದೆ. ನೀವು ಶೀಘ್ರದಲ್ಲೇ ವಾರ್ಷಿಕವಾಗಿ 13 ಲಕ್ಷ ರೂಪಾಯಿವರೆಗೆ ಗಳಿಸಬಹುದು. ಮೊದಲ ವರ್ಷದಲ್ಲಿ ಸುಮಾರು 4 ಲಕ್ಷ ರೂಪಾಯಿ ಲಾಭ ನಿಮ್ಮದಾಗುತ್ತದೆ.
ಮನೆಯಲ್ಲೂ ಶುರು ಮಾಡ್ಬಹುದು ಬ್ಯುಸಿನೆಸ್ : ಅಲೋವೇರಾ ಜೆಲ್ ಕಾರ್ಖಾನೆಯನ್ನು ನೀವು ದೊಡ್ಡ ಪ್ರಮಾಣದಲ್ಲಿ ಮಾತ್ರವಲ್ಲ ಸಣ್ಣ ಪ್ರಮಾಣದಲ್ಲೂ ತಯಾರಿಸಬಹುದು. ನಿಮ್ಮ ಮನೆಯಲ್ಲೇ ನೀವು ಅಲೋವೇರಾ ಗಿಡವನ್ನು ಬೆಳೆಸುವ ಮೂಲಕ, ಬರೀ ಎಲೆ ಮಾರಿ, ಸಂಪಾದಿಸಬಹುದು. ಅಲ್ಲದೆ ಮನೆಯಲ್ಲೇ ಅಲೋವೇರಾ ಜೆಲ್ ತಯಾರಿಸಬಹುದು. ಅಲೋವೆರಾ ಜೆಲ್ ವಿಟಮಿನ್ ಎ, ಸಿ, ವಿಟಮಿನ್ ಬಿ 12, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಅಲೋವೇರಾದ ದೊಡ್ಡ ಎಲೆಗಳನ್ನು ನೀವು ಜೆಲ್‌ಗೆ ಬಳಸಬೇಕು.
ಯುಪಿಐ ಬಳಸಿ ಕ್ಯಾಶ್ ಡೆಫಾಸಿಟ್ ಸೌಲಭ್ಯ ಘೋಷಿಸಿದ ಆರ್ ಬಿಐ; ಇದರ ಬಳಕೆ ಹೇಗೆ? ಇಲ್ಲಿದೆ ಮಾಹಿತಿ
ಅಲೋವೇರಾ ಎಲೆಗಳನ್ನು ಚೆನ್ನಾಗಿ ತೊಳೆದು ಆಲೂಗಡ್ಡೆ ಸಿಪ್ಪೆ ತೆಗೆಯುವ ಚಾಕುವಿನಿಂದ ಸಿಪ್ಪೆ ತೆಗೆಯಿರಿ. ಎಲೆಗಳ ಸಿಪ್ಪೆ ಸುಲಿದ ನಂತ್ರ ಚಾಕು ಅಥವಾ ಚಮಚದ ಸಹಾಯದಿಂದ ಈ ತಿರುಳನ್ನು ಹೊರತೆಗೆದು ಬ್ಲೆಂಡರ್‌ನಲ್ಲಿ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಜೆಲ್ ಅನ್ನು ಗಾಳಿಯಾಡದ ಗಾಜಿನ ಜಾರಿನಲ್ಲಿ ತುಂಬಿ ಮಾರಬಹುದು. ನಿಮ್ಮ ಸ್ನೇಹಿತರು, ಆಪ್ತರಿಗೆ ಮೊದಲು ಮಾರುವ ಮೂಲಕ ನಿಧಾನವಾಗಿ ನಿಮ್ಮ ಬ್ಯುಸಿನೆಸ್ ವಿಸ್ತರಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.