ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಕೆಲವು ಸಂಸ್ಥೆಗಳು ಈಗಾಗಲೇ ಉದ್ಯೋಗಿಗಳಿಗೆ ಫಾರ್ಮ್ -16 ನೀಡಿ ಆಗಿದೆ. ಹಾಗಾದ್ರೆ ಈ ಫಾರ್ಮ್ -16ನಲ್ಲಿ ಏನಿರುತ್ತೆ? ಐಟಿಆರ್ ಸಲ್ಲಿಕೆ ಮಾಡೋವಾಗ ಇದ್ಯಾಕೆ ಮುಖ್ಯ? ಯಾವೆಲ್ಲ ಅಂಶಗಳನ್ನು ಫಾರ್ಮ್ -16ನಲ್ಲಿ ಪರಿಶೀಲಿಸಬೇಕು.ಇಲ್ಲಿದೆ ಮಾಹಿತಿ.
ನವದೆಹಲಿ (ಜೂ.27): ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಅಂತಿಮ ಗಡುವು ಸಮೀಪಿಸುತ್ತಿದೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕವಾಗಿದೆ. ಈ ನಡುವೆ ಕೆಲವು ಕಂಪನಿಗಳು ಉದ್ಯೋಗಿಗಳಿಗೆ ಕೂಡಲೇ ಐಟಿಆರ್ ಅರ್ಜಿ -16 (ITR Form 16) ಸಲ್ಲಿಸುವಂತೆ ತಿಳಿಸಿವೆ. ಈ ಅರ್ಜಿ ನಮೂನೆ ಸಹಾಯದಿಂದ ಉದ್ಯೋಗಿಗಳು (Employees) ಐಟಿಆರ್ (ITR) ಫೈಲ್ (File) ಮಾಡಬಹುದು. ಈಗಾಗಲೇ ಪ್ರತಿ ವರ್ಷ ಐಟಿಆರ್ (ITR) ಸಲ್ಲಿಕೆ ಮಾಡುತ್ತ ಬಂದಿರುವ ಉದ್ಯೋಗಿಗಳಿಗೆ ಇದರ ಸಂಪೂರ್ಣ ಪರಿಚಯವಿದೆ. ಆದರೆ , ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡವರು ಅಥವಾ ಇತ್ತೀಚೆಗಷ್ಟೇ ಆದಾಯ ತೆರಿಗೆ ವ್ಯಾಪ್ತಿಗೊಳಪಟ್ಟವರು ಫಾರ್ಮ್ -16 (ITR Form 16) ಬಗ್ಗೆ ಕೆಲವು ಅಂಶಗಳನ್ನು ತಿಳಿದಿರೋದು ಅತ್ಯಗತ್ಯ.
ಫಾರ್ಮ್ -16 ಅಂದ್ರೇನು?
ಪ್ರತಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಫಾರ್ಮ್ -16 (ITR Form 16) ಒದಗಿಸುತ್ತದೆ. ಇದರಲ್ಲಿ ಉದ್ಯೋಗಿಗಳ ವೇತನದಿಂದ (Salary) ಕಡಿತವಾದ (Deduction) ತೆರಿಗೆಗಳ (Taxes) ಸಂಪೂರ್ಣ ಮಾಹಿತಿಯಿರುತ್ತದೆ. ಉದ್ಯೋಗಿಗಳು ಎಚ್ ಆರ್ ಎ (HRA) ಅಥವಾ ಗೃಹಸಾಲ (Home loan) ಅಥವಾ ಇನ್ಯಾವುದೇ ತೆರಿಗೆ ಉಳಿತಾಯದ ವಿವರಗಳನ್ನು ನಮೂದಿಸಿದ್ರೆ ಅದರ ಮಾಹಿತಿ ಕೂಡ ಈ ಫಾರ್ಮ್ ನಲ್ಲಿರುತ್ತದೆ. ಸರಳವಾಗಿ ಹೇಳೋದಾದ್ರೆ ಯಾವುದೇ ಉದ್ಯೋಗಿಯ ವೇತನದ ಮೇಲೆ ವಿಧಿಸಲಾಗೋ ತೆರಿಗೆಯ ಪ್ರಮಾಣಪತ್ರವೇ ಫಾರ್ಮ್ -16. ಈ ಪ್ರಮಾಣಪತ್ರವನ್ನು ಕಂಪನಿಯ ಕಡೆಯಿಂದ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.
Rice Price Hike: ಆಮದು ಸುಂಕ ಕಡಿತಗೊಳಿಸಿದ ಬಾಂಗ್ಲಾದೇಶ; ಭಾರತದಲ್ಲಿ ಶೇ.10ರಷ್ಟು ಅಕ್ಕಿ ಬೆಲೆ ಏರಿಕೆ
ಫಾರ್ಮ್ -16 ಮೊದಲ ಭಾಗದಲ್ಲಿ ಏನಿದೆ?
ಫಾರ್ಮ್ -16 ಮೊದಲ ಭಾಗದಲ್ಲಿ ವೇತನದಿಂದ ಕಡಿತವಾದ ತೆರಿಗೆಗಳ (Taxes) ಮಾಹಿತಿಯಿರುತ್ತದೆ. ಇದನ್ನು ಉದ್ಯೋಗದಾತ ಸಂಸ್ಥೆಯ ಪರವಾಗಿ ಆದಾಯ ತೆರಿಗೆ ಪೋರ್ಟಲ್ ನಲ್ಲಿ ಸಿದ್ಧಪಡಿಸಿ ಆ ಬಳಿಕ ಡೌನ್ ಲೋಡ್ ಮಾಡಲಾಗುತ್ತದೆ. ಫಾರ್ಮ್ -16 ಮೊದಲ ಭಾಗದಲ್ಲಿ ಕಂಪನಿಯ ಹೆಸರು ಹಾಗೂ ವಿಳಾಸ, ಪ್ಯಾನ್(PAN)ಹಾಗೂ ಟ್ಯಾನ್ (TAN) ಮಾಹಿತಿ ಇರುತ್ತದೆ. ಉದ್ಯೋಗಿಯ ಪ್ಯಾನ್ ಸೇರಿದಂತೆ ಇನ್ನೂ ಕೆಲವು ಮಾಹಿತಿಗಳಿರುತ್ತವೆ. ಇದರ ಜೊತೆಗೆ ಪ್ರತಿ ತ್ರೈಮಾಸಿಕದಲ್ಲಿ ಉದ್ಯೋಗಿಯ ವೇತನದಿಂದ ಕಡಿತವಾದ ತೆರಿಗೆಯನ್ನು ಕಂಪನಿಯು ಸರ್ಕಾರಕ್ಕೆ ಜಮಾ ಮಾಡಿದ ಮಾಹಿತಿಯೂ ಇರುತ್ತದೆ.
ಫಾರ್ಮ್ -16 ಎರಡನೇ ಭಾಗದಲ್ಲಿ ಏನಿದೆ?
ಫಾರ್ಮ್ -16 ಎರಡನೇ ಭಾಗ ಉದ್ಯೋಗಿಗಳಿಗೆ (Employees) ಅತ್ಯಂತ ಮಹತ್ವದಾಗಿದೆ. ಇದರಲ್ಲಿ ತೆರಿಗೆಯಿಂದ (Taxes) ಹಿಡಿದು ಮುಖ್ಯ ಕಡಿತಗಳ (Deduction) ಸಂಪೂರ್ಣ ಮಾಹಿತಿ ಇರುತ್ತದೆ. ಈ ಭಾಗದಲ್ಲಿ ಉದ್ಯೋಗಿಯ ವೇತನದ ವಿಸ್ತೃತ ವಿವರಣೆ ಇರುತ್ತದೆ.
ತಾಮ್ರ ವ್ಯವಹಾರಕ್ಕೂ ಇಳಿದ ಅದಾನಿ, ಎಸ್‍ಬಿಐನಿಂದ 6071 ಕೋಟಿ ಸಾಲ!
ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ್ದರೆ?
ಒಂದು ವೇಳೆ ನೀವು ಒಂದು ಆರ್ಥಿಕ ಸಾಲಿನಲ್ಲಿ ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರೆ ಆಗ ಎರಡು ಫಾರ್ಮ್ - 16 ಅಗತ್ಯವಿರುತ್ತದೆ. ಐಟಿಆರ್ ಫೈಲ್ ಮಾಡುವ ಸಮಯದಲ್ಲಿ ಈ ಎರಡೂ ಫಾರ್ಮ್ - 16 ಫೈಲ್ ಮಾಡಬೇಕು.
ಐಟಿಆರ್ ಸಲ್ಲಿಕೆಗೂ ಮುನ್ನ ನಿಮ್ಮ ವೇತನ ಸ್ಲಿಪ್ ಹಾಗೂ ಫಾರ್ಮ್ - 16ನಲ್ಲಿರುವ ಮಾಹಿತಿಗಳನ್ನು ಪರಿಶೀಲಿಸೋದು ಅಗತ್ಯ. ಫಾರ್ಮ್ - 16ನಲ್ಲಿ ಏನಾದ್ರೂ ವ್ಯತ್ಯಾಸಗಳಿದ್ರೆ ತಕ್ಷಣ ನಿಮ್ಮ ಉದ್ಯೋಗದಾತ ಸಂಸ್ಥೆಯ ಗಮನಕ್ಕೆ ತಂದು ಪರಿಷ್ಕರಿಸಬೇಕು. ಅಲ್ಲದೆ, ಪರಿಷ್ಕೃತ ಫಾರ್ಮ್ - 16 ನೀಡುವಂತೆ ಮನವಿ ಮಾಡಬೇಕು. ಒಟ್ಟಾರೆ ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ ಫಾರ್ಮ್ - 16 ಭಾಗ-1 ಮತ್ತು ಭಾಗ-2 ಇರೋದು ಅಗತ್ಯ.