ಎಫ್‌ಬಿ ನಂತರ ಜಿಯೋಗೆ ಮತ್ತೊಬ್ಬ ಗೆಳೆಯ ಕೆಕೆಆರ್, ದೊಡ್ಡ ಹೂಡಿಕೆ

By Suvarna News  |  First Published May 23, 2020, 9:42 PM IST

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಲಿರುವ ಕೆಕೆಆರ್/  ಅಮೆರಿಕ ಮೂಲದ ಸಂಸ್ಥೆ ಕೆಕೆಆರ್/ ಫೇಸ್ ಬುಕ್ ಸಹ ಜಿಯೋ ಮಜತೆಗೆ ಫ್ರೆಂಡ್ ಶಿಪ್ ಮಾಡಿಕೊಂಡಿತ್ತು


ಬೆಂಗಳೂರು(ಮೇ 23) ಫೇಸ್ ಬುಕ್ ಮತ್ತು ಜಿಯೋ ಫ್ರೆಂಡ್ ಶಿಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಅಮೆರಿಕದ ಮತ್ತೊಂದು ಸಂಸ್ಥೆ ಜಿಯೋದ ಪಾಲುದಾರನಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಜಿಯೊ ಪ್ಲಾಟ್ ಫಾರಂನಡಿ ಷೇರುಗಳನ್ನು ಮತ್ತೆ ಮಾರಾಟ ಮಾಡಿದೆ. ಅಮೆರಿಕ ಮೂಲದ 'ಕೆಕೆಆರ್ 'ಖಾಸಗಿ ಷೇರು ಸಂಸ್ಥೆಯು ಜಿಯೋ ಡಿಜಿಟಲ್ ನಡಿ 11,367 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ

 ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ.

Tap to resize

Latest Videos

ಮನೆಯಲ್ಲೇ ಕುಳಿತು ಹಣ ಸಂಪಾದಿಸಲು ಜಿಯೋ ಅವಕಾಶ

ಈ ವಹಿವಾಟು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಇದು ಏಷ್ಯಾದಲ್ಲಿ ಕೆಕೆಆರ್‌ನ ಅತಿದೊಡ್ಡ ಹೂಡಿಕೆಯಾಗಿದ್ದು, ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ.  2.32 ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಕಳೆದ ಒಂದು ತಿಂಗಳಿನಲ್ಲಿ, ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್‌ನಂತಹ ಮುಂಚೂಣಿ ತಂತ್ರಜ್ಞಾನ ಹೂಡಿಕೆದಾರ ಸಂಸ್ಥೆಗಳು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 78,562 ಕೋಟಿ ರೂ.ಗಳ ಒಟ್ಟಾರೆ ಹೂಡಿಕೆಯನ್ನು ಘೋಷಿಸಿವೆ.  

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ.

ಜಿಯೋಗೆ ಜತೆಯಾದ ಮತ್ತೊಂದು ದೈತ್ಯ ಕಂಪನಿ

ಭಾರತದಲ್ಲಿ ಉನ್ನತ ಮಟ್ಟದ ಡಿಜಿಟಲ್ ಸಮಾಜವನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಉದ್ದೇಶವನ್ನು ಕೆಕೆಆರ್ ನಮ್ಮೊಡನೆ ಹಂಚಿಕೊಳ್ಳುತ್ತದೆ.  ಉದ್ಯಮದ ಪ್ರಮುಖ ಫ್ರಾಂಚೈಸ್‌ಗಳಿಗೆ ಅಮೂಲ್ಯವಾದ ಪಾಲುದಾರನೆಂಬ ಪ್ರಮಾಣೀಕೃತ ದಾಖಲೆ ಕೆಕೆಆರ್‌ನದಾಗಿದ್ದು, ಅದು ಹಲವು ವರ್ಷಗಳಿಂದ ಭಾರತಕ್ಕೆ ಬದ್ಧವಾಗಿದೆ. ಜಿಯೋವನ್ನು ಇನ್ನಷ್ಟು ಬೆಳೆಸಲು ಕೆಕೆಆರ್‌ನ ಜಾಗತಿಕ ವೇದಿಕೆ, ಉದ್ಯಮದ ಜ್ಞಾನ ಮತ್ತು ಕಾರ್ಯಾಚರಣೆಯ ಪರಿಣತಿಯ ನೆರವು ಪಡೆದುಕೊಳ್ಳುವುದನ್ನು ನಾವು ಎದುರುನೋಡುತ್ತೇವೆ  ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ನಾವು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರಭಾವಶಾಲಿ ಆವೇಗ, ವಿಶ್ವದರ್ಜೆಯ ನಾವೀನ್ಯತೆ ಮತ್ತು ಸದೃಢ ನಾಯಕತ್ವ ತಂಡದ ಹಿಂದೆ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಈ ಚಾರಿತ್ರಿಕ ಹೂಡಿಕೆಯನ್ನು ಭಾರತ ಮತ್ತು ಏಷ್ಯಾ ಪೆಸಿಫಿಕ್‌ನ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಬೆಂಬಲ ನೀಡುವ ಕೆಕೆಆರ್ ಬದ್ಧವಾಗಿದ್ದೇವೆ ಎಂದು ಕೆಕೆಆರ್‌ನ ಸಹಸಂಸ್ಥಾಪಕ ಹಾಗೂ ಜಂಟಿ ಸಿಇಓ ಹೆನ್ರಿ ಕ್ರಾವಿಸ್ ಹೇಳಿದ್ದಾರೆ.

click me!