HDFC Life Systematic Retirement Plan:ನಿವೃತ್ತಿ ನಂತರವೂ ಆದಾಯ ಗಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

By Suvarna News  |  First Published Dec 28, 2021, 7:46 PM IST

ನಿವೃತ್ತಿ ನಂತರದ ಬದುಕಿಗೆ ಮೊದಲೇ ಒಂದಿಷ್ಟು ಕೂಡಿಡಲು ಪ್ರಾರಂಭಿಸಬೇಕು. ಅದಕ್ಕಾಗಿ ಇಂದು ಅನೇಕ ಉಳಿತಾಯ ಯೋಜನೆಗಳು, ಪಾಲಿಸಿಗಳು ಲಭ್ಯವಿವೆ. ಎಚ್ ಡಿಎಫ್ ಸಿ ಲೈಫ್  ಕೂಡ ಇತ್ತೀಚೆಗೆ ಲೈಫ್ ಸಿಸ್ಟಮೆಟಿಕ್ ರಿಟೈರ್ಮೆಂಟ್ ಪ್ಲ್ಯಾನ್ ಪರಿಚಯಿಸಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. 


Business Desk: ನಿವೃತ್ತಿ(Retirement) ಬಳಿಕ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯನ್ನು ಉದ್ಯೋಗ(Job) ಸಿಕ್ಕಿದ ದಿನವೇ ಕೇಳಿಕೊಳ್ಳಬೇಕು. ಇತ್ತೀಚೆಗೆ ಕೆಲವು ವರ್ಷಗಳಿಂದ ಸರ್ಕಾರಿ ನೌಕರರಿಗೆ(Government employees)ಸೇರ್ಪಡೆಗೊಂಡವರಿಗೆ  ನಿವೃತ್ತಿ ಬಳಿಕ ಪಿಂಚಣಿ ಪಡೆಯೋ ಅವಕಾಶವಿಲ್ಲ. ಇನ್ನು ಖಾಸಗಿ (Private) ಉದ್ಯೋಗದಲ್ಲಿರೋರ ಪಾಡು ಎಲ್ಲರಿಗೂ ಗೊತ್ತಿರುವಂತದ್ದೆ. ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಜಿಗಿಯುತ್ತ ನಿವೃತ್ತಿ ಅಂಚಿಗೆ ಬಂದು ತಲುಪಿದ್ದೇ ತಿಳಿಯೋದಿಲ್ಲ. ನಿವೃತ್ತಿಯಾದ ಬಳಿಕ ಮುಂದೇನು ಎಂದು ಯೋಚಿಸೋ ಬದಲು ಮೊದಲೇ ಈ ಬಗ್ಗೆ ಯೋಜನೆ ರೂಪಿಸೋದು ಅಗತ್ಯ ಮಾತ್ರವಲ್ಲ ಅನಿವಾರ್ಯ ಕೂಡ. ತಿಂಗಳ ಆದಾಯದಲ್ಲಿ(Income) ಒಂದಿಷ್ಟನ್ನು ಉಳಿಸಿ ಭವಿಷ್ಯದ ದೃಷ್ಟಿಯಿಂದ ಉತ್ತಮ ಯೋಜನೆಯೊಂದರಲ್ಲಿ ಹೂಡಿಕೆ (Invest) ಮಾಡಿದ್ರೆ ನಿವೃತ್ತಿ ಬಳಿಕ ನೆಮ್ಮದಿಯ ಜೀವನ ಸಾಗಿಸಬಹುದು. ಹೂಡಿಕೆ ಮಾಡೋವಾಗ ಉತ್ತಮ ರಿಟರ್ನ್ಸ್(Returns) ಮತ್ತು ಆ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕೂಡ ಪರಿಶೀಲಿಸೋದು ಅಗತ್ಯ. ಇತ್ತೀಚೆಗಂತೂ ಅನೇಕ ಸಂಸ್ಥೆಗಳು ನಿವೃತ್ತಿ ನಂತರದ ಜೀವನಕ್ಕೆಂದೇ ಒಂದಿಷ್ಟು ಹೊಸ ಯೋಜನೆಗಳನ್ನು ಪರಿಚಯಿಸುತ್ತಲಿವೆ. ಅಂಥ ಯೋಜನೆಗಳಲ್ಲಿ ಇತ್ತೀಚೆಗೆ ಎಚ್ ಡಿಎಫ್ ಸಿ (HDFC) ಲೈಫ್ ಬಿಡುಗಡೆಗೊಳಿಸಿರೋ ಲೈಫ್ ಸಿಸ್ಟಮೆಟಿಕ್ ರಿಟೈರ್ಮೆಂಟ್ ಪ್ಲ್ಯಾನ್ ( Life Systematic Retirement Plan) ಕೂಡ ಒಂದು.

ಒಂದೇ ಯೋಜನೆಯಲ್ಲಿ ಎರಡು ಆಯ್ಕೆ
ಎಚ್ ಡಿಎಫ್ ಸಿ  ಲೈಫ್ ಸಿಸ್ಟಮೆಟಿಕ್ ರಿಟೈರ್ಮೆಂಟ್ ಪ್ಲ್ಯಾನ್ ಆಯ್ಕೆ ಮಾಡಿದ ತಕ್ಷಣವೇ ನಿಮಗೆ ವಾರ್ಷಿಕ ಬಡ್ಡಿದರ ನಿಗದಿಪಡಿಸೋ ಅವಕಾಶ ನೀಡಲಾಗುತ್ತದೆ. ಈ ದರವನ್ನು ನೀವು ಲಾಕ್ ಮಾಡಬೇಕು. ಈ ಪಾಲಿಸಿ ನಿರ್ದಿಷ್ಟ ಅವಧಿ ತನಕ ನಿವೃತ್ತಿ ಬದುಕಿಗೆ ವ್ಯವಸ್ಥಿತವಾಗಿ ಕೂಡಿಡಲು ಅವಕಾಶ ಕಲ್ಪಿಸುತ್ತದೆ. ಆ ಬಳಿಕ ಇದ್ರಿಂದ ಗಳಿಸೋ ಆದಾಯದಿಂದ ಆ ವ್ಯಕ್ತಿ ನಿವೃತ್ತಿ ಬದುಕನ್ನು ನೆಮ್ಮದಿಯಿಂದ ಕಳೆಯಬಹುದಾಗಿದೆ. ಈ ಪ್ಲ್ಯಾನ ನಲ್ಲಿ ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಅವುಗಳೆಂದ್ರೆ ಜೀವನ ವರ್ಷಾಸನ(Life Annuity) ಹಾಗೂ ಪ್ರೀಮಿಯಂ ರಿಟರ್ನ್ ಜೊತೆಗೆ ಜೀವನ ವರ್ಷಾಸನ (Life Annuity with Return of Premiums). 

Tap to resize

Latest Videos

Income Tax Return: ಇ-ಫೈಲಿಂಗ್ ಫೋರ್ಟಲ್ ತಾಂತ್ರಿಕ ಸಮಸ್ಯೆಗಳ ವಿರುದ್ಧ ತೆರಿಗೆದಾರರ ದೂರು; ಗಡುವು ವಿಸ್ತರಣೆಗೆ ಒತ್ತಾಯ

ಯೋಜನೆ ವಿಶೇಷತೆಗಳು
-ಈ ಪ್ಲ್ಯಾನ್ ಖರೀದಿಸಿದ ವ್ಯಕ್ತಿಗೆ ಪ್ರೀಮಿಯಂ ಪಾವತಿ ಅವಧಿಯನ್ನು ಆಯ್ಕೆ ಮಾಡಲು ಅವಕಾಶವಿದೆ.  5ರಿಂದ  15 ವರ್ಷಗಳ ನಡುವಿನ ಯಾವುದೇ  ಅವಧಿಯನ್ನು ಗ್ರಾಹಕ  ಆಯ್ಕೆ ಮಾಡಬಹುದು. 
- ಈ ಪ್ಲ್ಯಾನ್ ಪಾಲಿಸಿದಾರ ವಿಮಾ ಕಂತನ್ನು ಪಾವತಿಸಲು ಅನುಕೂಲವಾಗುವಂತೆ 5-15 ವರ್ಷಗಳ ಪೇಮೆಂಟ್ ಟರ್ಮ್ ಒದಗಿಸುತ್ತದೆ ಹಾಗೂ ಗ್ರಾಹಕ 15 ವರ್ಷಗಳವರೆಗೂ ಮುಂದೂಡುವ ಅವಕಾಶ ಕಲ್ಪಿಸಲಾಗಿದೆ.
-ಯಾವುದೇ ವೈದ್ಯಕೀಯ ಅಥವಾ ಲಿಖಿತ ದಾಖಲೆಗಳ ಅಗತ್ಯವಿಲ್ಲದೆ ಅರ್ಜಿ ಸಲ್ಲಿಸಿದ 24ಗಂಟೆಗಳಲ್ಲಿ ನಿಮಗೆ ಈ ಪಾಲಿಸಿ ನೀಡಲಾಗುತ್ತದೆ. ಚಾಟ್ ಮೂಲಕವೇ ನೀವು ಎಲ್ಲ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ವಿನಿಮಯ ಮಾಡಬಹುದು. ನಿಗದಿತ ಅವಧಿಗೆ ಪ್ರೀಮಿಯಂ ಪಾವತಿಸೋ ಮೂಲಕ ನಿಗದಿತ ಮೊತ್ತವನ್ನು ಪಡೆಯಲು ಈ ಯೋಜನೆ ಅವಕಾಶ ನೀಡುತ್ತದೆ.
-ವಾರ್ಷಿಕ ಬಡ್ಡಿದರವನ್ನು ಆಗಲೇ ತಿಳಿಸಿದಂತೆ ಪ್ರಾರಂಭದಲ್ಲೇ ಆಯ್ಕೆ ಮಾಡಿ ಅದನ್ನೇ ಪಾಲಿಸಿಯ ಅವಧಿಯುದ್ದಕ್ಕೂ ನಿಗದಿಪಡಿಸೋ ಅವಕಾಶ ಗ್ರಾಹಕನಿಗಿದೆ,.
-ಇನ್ನು ಈ ಯೋಜನೆಯಲ್ಲಿ ಖಾತ್ರಿಪಡಿಸಿದ ಮೊತ್ತವು ಪ್ರೀಮಿಯಂ ಪಾವತಿ ಮೇಲೆ ಆಧರಿತವಾಗಿರುತ್ತದೆ ಹಾಗೂ ಕೆಲವೊಂದು ಷರತ್ತುಗಳಿಗೆ ಒಳಪಟ್ಟಿರುತ್ತದೆ.
-“Save the Date" ವಿಶೇಷ ಆಯ್ಕೆಯನ್ನು ನೀಡಲಾಗಿದ್ದು, ಇದರ ಮೂಲಕ ವಾರ್ಷಿಕ ಪ್ರೀಮಿಯಂ ಪಾವತಿ ಆಯ್ಕೆ ದಿನಾಂಕವನ್ನು ಗ್ರಾಹಕನನೇ ಆಯ್ಕೆ ಮಾಡಬಹುದು.
-ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದಿದ್ರೆ ಆತ ಒಟ್ಟು ಪಾವತಿಸಿದ ಪ್ರೀಮಿಯಂ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ನೀಡಲಾಗುತ್ತದೆ. ಮರಣ ಹೊಂದಿದ ದಿನಾಂಕದ ತನಕದ ಪ್ರೀಮಿಯಂ ಹಣದ ಮೇಲೆ ವಾರ್ಷಿಕ ಶೇ.6ರಷ್ಟು ಕಂಪೌಂಡ್ ಬಡ್ಡಿದರ ನೀಡಲಾಗುತ್ತದೆ ಅಥವಾ ಮರಣ ಹೊಂದಿದ ದಿನಾಂಕದ ತನಕ ಪಾವತಿಸಿದ ಒಟ್ಟು ಪ್ರೀಮಿಯಂ ಮೊತ್ತದ ಶೇ.105ರಷ್ಟು ನೀಡಲಾಗುತ್ತದೆ.

UAE Lifted Ban On Poultry Products:ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಆಮದಿನ ಮೇಲಿನ ನಿರ್ಬಂಧ ತೆರವುಗೊಳಿಸಿದ ಯುಎಇ

ಅರ್ಹತೆಗಳೇನು?
-45-75 ವಯಸ್ಸಿನೊಳಗಿನವರು ಈ ಪಾಲಿಸಿ ಪಡೆಯಲು ಅರ್ಹತೆ ಹೊಂದಿರುತ್ತಾರೆ.
 

click me!